Sunday, December 4, 2011


ಅಂಗವಿಕಲರು ಮುಂದೆ ಬರಲು ರಾಜಕೀಯ ಕ್ಷೇತ್ರ ಮುಖ್ಯ
ಚಿಕ್ಕನಾಯಕನಹಳ್ಳಿ,ನ.03 : ರಾಜಕೀಯ ಕ್ಷೇತ್ರದಲ್ಲಿ  ಅಂಗವಿಕಲರಿಗೆ ಸ್ಥಾನ ನೀಡಿದರೆ  ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಬಂದು ಅಂಗವಿಕಲರು ಅಭಿವೃದ್ದಿ ಹೊಂದುತ್ತಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆಯ ಸಿ.ಗಂಗರಾಜು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ವಿಶ್ವ ವಿಕಲ ಚೇತನರ(ಅಂಗವಿಕಲರ) ದಿನಾಚಾರಣೆ ಹಾಗೂ ತಾಲ್ಲೂಕು ವಿಕಲಚೇತನರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಕಲಚೇತನರ ಜೀವನ ಬಹಳ ದುಸ್ಥಿತಿಯಲ್ಲಿದೆ, ಅಂಗವಿಕಲತೆ ಎನ್ನುವುದು ಶಾಪವಲ್ಲ, ಅದೊಂದು ವರ ವಿಕಲಾಂಗರಿಗೆ ಯಾವುದೇ ಅನುಕಂಪ ಬೇಡ ಅವರಿಗೆ ಅವಕಾಶ ಬೇಕಾಗಿದೆ  ಮುಖ್ಯವಾಗಿ ಎಂದ ಅವರು ಅವರಿಗೆ ನೀಡುತ್ತಿರುವ ಮಾಸಾಶನವನ್ನು ಸಾವಿರ ರೂಗಳಿಗೆ ಹೆಚ್ಚಿಸಬೇಕು ಮತ್ತು ಅವರಿಗಾಗಿ ಜನಸ್ಪಂದನ ಸಭೆಗಳನ್ನು ಮಾಡಬೇಕು ಎಂದ ಅವರು ದಲಿತ ಸಮುದಾಯಗಳ ಸಮಸ್ಯೆಗಳಿಗಿಂತ  ಅಂಗವಿಕಲರ ಸಮಸ್ಯೆಗಳು ವಿಭಿನ್ನವಾಗಿದೆ, ದಲಿತರು ಅನುಭವಿಸಿರುವಂತಹ ಸಾಮಾಜಿಕ ನೋವುಗಳಿಗಿಂತ ಅಂಗವಿಕಲರ ಆಥರ್ಿಕ ಹಿಂಸೆ ದೊಡ್ಡದಾಗಿದೆ ಇದು ಬದಲಾಗಬೇಕಾದರೆ ಅಂಗವಿಕಲರ ಸಂಘಟನೆ ಬಲವಾಗಬೇಕಿದೆ ಎಂದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾನು ಯಾವುದೇ ಸಂದರ್ಭದಲ್ಲಿದ್ದರೂ ಅಂಗವಿಕಲರಿಗೆ ಮೊದಲ ಆಧ್ಯತೆ ನಂತರ ವೃದ್ದರಿಗೆ, ಆನಂತರ ಇತರರಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಅಂಗವಿಕಲ ವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಪಂಚಾಯ್ತಿಗಳಿಂದ ಸಹಾಯ ನೀಡಲಿದ್ದು ಅಂಗವಿಕಲರ ಜೀವನ ನಿರ್ವಹಣೆಗಾಗಿ  ವಿಶೇಷ ಮಾನ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಅಂಗವಿಕಲ ಹೋರಾಟ ಸಮಿತಿಯ ಬೆನಕನಕಟ್ಟೆ ರಮೇಶ್ ಮಾತನಾಡಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿಗಳಲ್ಲಿ ಅಂಗವಿಕಲರನ್ನು ಸದಸ್ಯರಾಗಿ ನೇಮಿಸಬೇಕು, ಅಂಗವಿಕಲರಿಗೆ ದೃಡೀಕರಣ ಪತ್ರ ಕಡ್ಡಾಯವಾಗಿ ತೆಗೆದುಹಾಕಬೇಕು,  ತಾಲ್ಲೂಕಿನಲ್ಲಿ ಅಂಗವಿಕಲರ ಭವನ ನಿಮರ್ಾಣ ಮಾಡಬೇಕು, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಗಳ ಕಂಪ್ಯೂಟರ್ ಕೇಂದ್ರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೊದಲ ಆಧ್ಯತೆ ನೀಡಬೇಕು, ಅಂಗವಿಕಲರ ಅನುದಾನ ಶೇಕಡ 3ರಷ್ಟು ಸಮರ್ಪಕವಾಗಿ ಖಚರ್ು ಮಾಡಬೇಕು, ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡಬೇಕು,  ಎನ್ನುವ ಇನ್ನಿತರ ಅಂಗವಿಕಲರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಿಕಲಚೇತನ ಚಂದ್ರಯ್ಯ ಮಾತನಾಡಿ ವಿಕಲಚೇತನರು ಸಕರ್ಾರದ ಹಣ ಬರುವುದನ್ನೇ ಕಾಯಬಾರದು ನಮ್ಮ  ಜೀವನವನ್ನು ಸುಧಾರಿಸುವಂತಹ ಕಾರ್ಯದಿಂದ ಜೀವನ ಸಾಗಿಸಬೇಕು ಹಾಗೂ ಇರುವವರು ಇಲ್ಲದವರಿಗೆ ಆಥರ್ಿಕವಾಗಿ ಸಹಕರಿಸಬೇಕು ಎಂದ ಅವರು ಅಂಗವಿಕಲರ ಕಲ್ಯಾಣ ನಿಧಿ ಸ್ಥಾಪನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸದಸ್ಯ ಸಿ.ಡಿ.ಚಂದ್ರಶೇಖರ್ ಇ.ಓ ಎನ್.ಎಂ.ದಯಾನಂದ್, ಸಿಡಿಪಿಓ ಅನೀಸ್ಖೈಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.