Wednesday, January 11, 2012ಚಿ.ನಾ.ಹಳ್ಳಿ ತಾಲೂಕಿನಲ್ಲಿ ಏಡ್ಸ್ ಭಾದಿತರು 550 ಜನರಿದ್ದಾರೆ.
ಚಿಕ್ಕನಾಯಕನಹಳ್ಳಿ,ಜ.09 : ತಾಲ್ಲೂಕಿನಲ್ಲಿ ಹೆಚ್.ಐ.ವಿ ಏಡ್ಸ್ ಪೀಡಿತರು 550 ಜನರಿದ್ದಾರೆ, ಜಿಲ್ಲೆಗೆ ಗುಬ್ಬಿ ತಾಲ್ಲೂಕು ಮೊದಲಾದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು 4ನೇ ಸ್ಥಾನ ಹೊಂದಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸ್ಪೂತರ್ಿ ನೆಟ್ವಕ್ಸರ್್ ಫಾರ್ ಪೀಪಲ್ ಸಫರಿಂಗ್ ವತಿಯಿಂದ ನಡೆದ 'ನಾವು ನಿಮ್ಮೊಂದಿಗೆ ನೀವು ನಮ್ಮೊಂದಿಗೆ' ಹೆಚ್.ಐ.ವಿ/ಏಡ್ಸ್ ಹಾಗೂ  ಟಿ.ಬಿ ಒಂದು ಹೆಜ್ಜೆ, ಅರಿವು ಮೂಡಿಸಲು  ಜಾಗೃತಿ ಮತ್ತು ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಹೆಚ್.ಐ.ವಿ ಸೋಂಕಿತರು ತಾಲ್ಲೂಕಿನ ಹುಳಿಯಾರು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ, ಈಗಾಗಲೇ ಇರುವ ಹೆಚ್.ಐ.ವಿ ಪೀಡಿತರಲ್ಲಿ 35ರಷ್ಟು ಗಭರ್ಿಣಿ ಸ್ತ್ರೀಯರು ಈ ಸೋಂಕಿಗೆ ಒಳಗಾಗಿದ್ದಾರೆ ಇದಕ್ಕೆ ಕಾರಣ ಜಾಗೃತಿ ಇಲ್ಲದ ಹಾಗೂ ಈ ರೋಗದ ಬಗ್ಗೆ ಅರಿವಿನ ಸಮಸ್ಯೆಯೇ ಆಗಿದೆ ಎಂದ ಅವರು ಈ ಹೆಚ್.ಐ.ವಿ ಜಾಗೃತಿ ಬಗ್ಗೆ ಕಾಲೇಜು ಮಟ್ಟದಲ್ಲಿ, ಪಂಚಾಯಿತಿ ಮಟ್ಟಗಳಲ್ಲಿ ಜಾಗೃತಿ ಶಿಬಿರ ನಡೆಯಬೇಕು ಅದಕ್ಕಾಗಿ ನಮ್ಮ ಬೆಂಬಲವಿರುತ್ತದೆ ಹಾಗೂ ತಾಲ್ಲೂಕಿನಲ್ಲಿ ಈಗಿರುವ ಸೊಂಕಿತರಿಗೆ ಅಂತ್ಯೋದಯ ಕಾಡರ್್, ಮಾಶಾಸನ ನೀಡುವುದಾಗಿ ಭರವಸೆ ನೀಡಿದ ಅವರು ಹೆಚ್.ಐ.ವಿ ಸೋಂಕಿರುವವರು ದೃತಿಗೆಡದೆ ಆತ್ಮವಿಶ್ವಾಸ ಹೊಂದಲು ತಿಳಿಸಿದರು.
ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ಸೊಂಕಿತರು ಜೀವನದಲ್ಲಿ ಜಿಗುಪ್ಸೆಯಾಗದೆ,  ಔಷದಿಗಳ  ಜೊತೆಗೆ ಆತ್ಮಸ್ಥೈರ್ಯ ಹೊಂದಬೇಕು ಅದಕ್ಕಾಗಿ ಧ್ಯಾನ, ಯೋಗದ ಕಡೆಯೂ ಮುಂದಾಗಬೇಕು ಆ ಮೂಲಕ ದೇಹಕ್ಕೆ ವಿರಾಮ ನೀಡಿದಾಗ ಒಂದು ರೀತಿಯಲ್ಲಿ ಆತ್ಮಸ್ಥೈರ್ಯದೊಂದಿಗೆ ಕಾಯಿಲೆ ಗುಣಮುಖವಾಗಲಿದೆ ಎಂದ ಅವರು,  ಸೊಂಕು ಹರಡುವುದು ಕೇವಲ ಹೆಣ್ಣು, ಗಂಡು ಸೇರಿದರೆ ಮಾತ್ರವಲ್ಲ ಅದು ಬೇರೆಯವರ ರಕ್ತ ಇನ್ನೊಬ್ಬರ ರಕ್ತದೊಂದಿಗೆ ಸೇರಿದಾಗಲೂ  ಹರಡುತ್ತದೆ, ರೋಗಿಗಳಿಗಾಗಿ  ಬಳಸುವ ಸಿರಿಂಜನ್ ಬದಲಿಸದೆ ಅದೇ ಸಿರಿಂಜನ್ನು ಬಳಸಿ,  ಶೇವಿಂಗ್ ಮಾಡುವಾಗ ಮತ್ತೊಬ್ಬರಿಗೆ  ಬಳಸಿದ ಬ್ಲೇಡ್ ಅನ್ನೇ ಬಳಸಿ  ಎಂದು ತಾಕೀತು ಮಾಡಬಾರದು,  ಈ   ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಇದಕ್ಕಾಗಿ ಕೇವಲ, ಇಂತಹ ಸಂದರ್ಭಗಳಲ್ಲಿ ಹೊಸ ಸಾಧನಗಳನ್ನು ಬಳಸಿ ತಮ್ಮ ಜೀವ ರಕ್ಷಿಸಿಕೊಳ್ಳಿ ಸಾರ್ವಜನಿಕರಿಗೆ ಸಲಹೆ ನೀಡಿದ ಅವರು ಸ್ಪೂತರ್ಿ ನೆಟ್ವರ್ಕ ಏರ್ಪಡಿಸಿರುವ ಈ ಜಾಗೃತಿ ಕಾರ್ಯಕ್ರಮಗಳು ಗ್ರಾಮ, ಹಳ್ಳಿಗಳಲ್ಲೂ ನಡೆಯಬೇಕು ಅಲ್ಲಿನ ಜನರಿಗೆ ಈ ಕಾರ್ಯಕ್ರಮದ ಪ್ರಯೋಜನ ಅರಿವಾಗಬೇಕು ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ವೈದ್ಯಾಧಿಕಾರಿ ಶಿವಕುಮಾರ್, ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ತಿಪಟೂರಿನ ಲಿಂಗರಾಜು, ಕುಣಿಗಲ್ನ ಪುನೀತ್ಶೆಟ್ಟಿ, ರವಿ, ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಅಸ್ಲಂಪಾಷ ಉಪಸ್ಥಿತರಿದ್ದರು.

ಗ್ರಾಮೀಣ ಪರಿಸರದಲ್ಲಿರುವ  ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ

ಚಿಕ್ಕನಾಯಕನಹಳ್ಳಿ,ಜ.11: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದು ವಿಷಾಧಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ  ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ,  ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯದಲ್ಲೂ ವಿದೇಶಿಗರೂ ಹೆಚ್ಚಿನದಾಗಿ ಪ್ರವಾಸ ಮಾಡುತ್ತಾರೆ ಎಂದ ಅವರು ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚನದಾಗಿ ಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ  ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ,   ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.
ಚಿರನಿದ್ರೆಗೆ ಜಾರಿದ ಸಾಹಿತ್ಯ ಲೋಕದ ಉತ್ಸಾಹಿ ಆರ್.ಬಸವರಾಜ್
ಚಿಕ್ಕನಾಯಕನಹಳ್ಳಿ,ಜ.06:  ಕನ್ನಡ ಸರಸ್ವತಾ ಲೋಕದ ಹಿರಿಯ, ನಿವೃತ್ತ ಉಪನ್ಯಾಸಕ, ನೂರು ಕೃತಿಗಳ ಕತೃ, ಉತ್ಸಾಹಿ,  ಆರ್.ಬಸವರಾಜು(82) ಇಹಲೋಕ ತ್ಯಜಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉತ್ಸಾಹಿಯಾಗಿದ್ದ ಆರ್. ಬಸವರಾಜು ರವರನ್ನು ಅವರ ಶಿಷ್ಯ ವೃಂದ ಹಾಗೂ ಸಾಹಿತ್ಯ ಪ್ರೇಮಿಗಳು ಆರ್.ಬಿ.ಎಂದೇ ಕರೆಯುತ್ತಿದ್ದರು. ಸಾಹಿತ್ಯ ರಚನೆಯಲ್ಲಿನ ಇವರ ಉತ್ಸಾಹವನ್ನು ಕಂಡ ಇವರ ಶಿಷ್ಯವೃಂದ 'ಉತ್ಸಾಹಿ' ಎಂಬ ಅಭಿನಂದನಾ  ಗ್ರಂಥವನ್ನು  ಅವರ 75ನೇ ವರ್ಷ ತುಂಬಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಪರ್ಿಸಿದ್ದರು. ಕಿರಿಯರಿಗೆ ಸಾಹಿತ್ಯ ಚರಿತ್ರೆ, ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗ ಕಲಾವಿದರು ಎಂಬ ಕೃತಿಯೂ ಸೇರಿದಂತೆ ಒಂದು ನೂರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅಪರ್ಿಸಿದ್ದರು.
ಚಿಕ್ಕನಾಯಕನಹಳ್ಳಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಸನ್ಮಾನಿತರಾಗಿದ್ದ ಆರ್.ಬಿ.ಯವರು  ಆರಂಭದಲ್ಲಿ ಶೃಂಗಾರ ಪ್ರಕಾಶನ ಇವರ ಕೃತಿಗಳನ್ನು ಹೊರತರುತ್ತಿತ್ತು, ನಂತರದಲ್ಲಿ ತಮ್ಮದೇ ಆದ ಬಸವೇಶ್ವರ ಪ್ರಕಾಶನವೆಂಬ ಸಂಸ್ಥೆಯನ್ನು ಕಟ್ಟಿ ಆ ಮೂಲಕ ಅವರ ಕೃತಿಗಳನ್ನು ನಾಡಿಗೆ ಅಪರ್ಿಸಿದ್ದರು. ಸಾಹಿತ್ಯ ಕ್ಷೇತ್ರದ ಸದಾ ವಿದ್ಯಾಥರ್ಿಯಾಗಿದ್ದ ಇವರು, ಮಕ್ಕಳಿಗೆ ಸಣ್ಣಕಥೆಗಾರರಿಗಿದ್ದರಲ್ಲದೆ, ಕಾದಂಬರಿಕಾರ, ವಿಡಂಬನಾಕಾರ, ಪ್ರಬಂಧಕಾರ, ಹಾಸ್ಯ ಸಾಹಿತಿ ಹಾಗೂ ರಂಗಾಸಕ್ತರಾಗಿದ್ದರಲ್ಲದೆ, ಪಟ್ಟಣದ ದಿವ್ಯಪ್ರಭಾ ಶಾಲೆಯ ಅಧ್ಯಕ್ಷರಾಗಿದ್ದರು.
ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಮೇಲೆ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾಗಿದ್ದರು, ಕಳೆದ ಎರಡು ವಾರಗಳಿಂದೆ ತೀವ್ರತರದ ಡಯಾಬಿಟಿಕ್ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಇವರು ಪತ್ಯಿ, ಮೂರು ಜನ ಮಕ್ಕಳು,ಮೊಮ್ಮಕ್ಕಳು, ಶಿಷ್ಯರು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಾಸಕ್ತರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಬೆಂಗಳೂರಿನಲ್ಲಿ ಅಸುನೀಗದ ಇವರ ಅಂತ್ಯಕ್ರಿಯೆಯನ್ನು ಶನಿವಾರ 11.30ಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ಕಛೇರಿ ಮುಂಭಾಗದಲ್ಲಿರುವ ಆರ್.ಬಿ.ಯವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರ್.ಬಿ.ಯವರಿಗೆ ಶ್ರದ್ದಾಂಜಲಿ:  ಆರ್.ಬಿ.ಯವರ ನಿಧನ ಸುದ್ದಿ  ಕೇಳಿ  ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಶ್ರೀಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ,   ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ,  ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್,  ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್, ದಿವ್ಯಪ್ರಭ ಶಾಲೆಯ ಕಾರ್ಯದಶರ್ಿ ಸಿ.ಟಿ.ಸುರೇಶ್ಕುಮಾರ್, ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಸೇರಿದಂತೆ ಹಲವರು ಶ್ರದ್ದಾಂಜಲಿ ಅಪರ್ಿಸಿದ್ದಾರೆ.
ಆರ್.ಬಿ.ನಡೆದು ಬಂದ ಹಾದಿ: ಆರ್,ಬಸವರಾಜುರವರು ಮೂಲತಹ ತಿಪಟೂರಿನವರು ಆದರೂ ತಾಲ್ಲೂಕಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಇವರು ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಹುಟ್ಟಿ ಬಹಳ ಕಷ್ಟಪಟ್ಟು ಎಂ.ಎ. ಬಿ.ಎಡ್, ಶಿಕ್ಷಣವನ್ನು ಪಡೆದವರು. ಮಾಧ್ಯಮಿಕ ಶಾಲೆ, ಪ್ರೌಡಶಾಲೆಗಳಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ, ಸ್ಕೂಲ್ ಇನ್ಸ್ಪೆಕ್ಟರ್, ಪದವಿಪೂರ್ವ ಕಾಲೇಜಿನ ಅಧ್ಯಾಪಕರಾಗಿ, ಕಾರ್ಯ ನಿರ್ವಹಿಸಿ ತಮ್ಮ ಸಾವಿರಾರು ವಿದ್ಯಾಥರ್ಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದವರು, 
ಬಸವರಾಜುರವರು 1930 ಜುಲೈ 4ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ  ಈಡೇನಹಳ್ಳಿ ಗ್ರಾಮದಲ್ಲಿ ಜನಿಸಿದವರು, ಇವರ ತಂದೆ ರಂಗೇಗೌಡ, ತಾಯಿ ಮರುಳಮ್ಮ,     ಇವರು ಬೆನ್ನನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತಿಪಟೂರಿನಲ್ಲಿ ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಣ ಮುಗಿಸಿದರು, ನಂತರ ತುಮಕೂರಿನ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮರಿಮಲ್ಲಪ್ಪ ಬಿ.ಎಡ್.ಕಾಲೇಜಿನಲ್ಲಿ ಬಿ.ಇಡಿ, ಧಾರವಾಡದ ಕನರ್ಾಟಕ ವಿಶ್ವವಿದ್ಯಾನಿಲಯದಲ್ಲಿ      ಎಂ.ಎ(ಕನ್ನಡ) ಮುಗಿಸಿ ರಂಗಭೂಮಿ ಹಾಗೂ ಸಾಹಿತ್ಯದ ಕಡೆ ಆಸಕ್ತ ವಹಿಸಿದರು.
ನಂತರ ತಿಪಟೂರಿನ ಸ.ಮಾ.ಶಾಲೆ 1955ರಲ್ಲಿ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿ, ಶಿವಮೊಗ್ಗ, ಶೃಂಗೇರಿ, ಸಕಲೇಶಪುರ, ಹೊಸನಗರ ಚಿಕ್ಕನಾಯಕನಹಳ್ಳಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಮಾಚರ್್ 31 1989ರಲ್ಲಿ ನಿವೃತ್ತಿ ಹೊಂದಿದ್ದರು.                                                                                                                                                                                                                                                         ಆರ್.ಬಿರವರ ಕೃತಿಗಳು :
ಕಥಾ ಸಂಗ್ರಹ: ಅನುರಾಗದ ಸುಳಿಯಲ್ಲಿ, ಸೂತ್ರದ ಬೊಂಬೆಯಲ್ಲ, ಕುರಿಗಳು ಸಾಕಿದ ತೋಳ, ನಿಮ್ಮ ಪ್ರೀತಿಯೊಂದೇ ಸಾಕು, ಮುಖವಾಡಗಳು.
ಕಾದಂಬರಿಗಳು : ಈಸೂರಿನ ಚಿರಂಜೀವಿಗಳು, ಆತ್ಮಾಹುತಿ, ತಿರುಮಂತ್ರ, ಪಥಬ್ರಾಂತರು, ಹೊಸಹಳ್ಳಿಯ ಬೆಳಕು, ಹುಚ್ಚಣ್ಣನ ನಗೆಲೋಕ, ಹುಚ್ಚಣ್ಣನ ನಗೆಲೋಕ-2, ಜೀವನ ಚರಿತ್ರೆ, ಮೋಳಿಗೆ ಮಾರಯ್ಯ,  ಅಗ್ರಪೂಜೆ, 
ಮಕ್ಕಳ ಸಾಹಿತ್ಯ : ರುದ್ರಾಕ್ಷಿಸರದ ಬೆಕ್ಕು ಮತ್ತಿತರ ಕಥೆಗಳು, ಪರಮಾನಂದಯ್ಯನ ಬೆತ್ತ ಮತ್ತಿತರ ಕಥೆಗಳು, ಅತ್ತೆಯನ್ನು ಸ್ವರ್ಗಕ್ಕೆ ಕಳಿಸಿದ ಸೊಸೆ ಮತ್ತಿತರ ಕಥೆಗಳು, ಜಿಪುಣಾಗ್ರೇಸರ ಕೊಣವೇಗೌಡ ಮತ್ತಿತರ ಕಥೆಗಳು, ಸುಣ್ಣದ ಚೀಲದಲ್ಲಿ ರಾಕ್ಷಸ ಮತ್ತಿತರ ಕಥೆಗಳು, ಪುಟಾಣಿಗಳಿಗೆ ಪುಟ್ಟ ಕಥೆಗಳು, ಈಸೂರಿನ ಸ್ವಾತಂತ್ಯ್ಯ ಹೋರಾಟ, ತಿಪಟೂರು ತಾಲ್ಲೂಕು ದರ್ಶನ , ಸರಳ ಹೊಸಗನ್ನಡ ವ್ಯಾಕರಣ, ಪ್ರಬಂಧ ಮತ್ತು ಪತ್ರ ಲೇಖನ ಸಂಚಯ, ತುಮಕೂರು ಜಿಲ್ಲೆಯ ರಂಗಕಲಾವಿದರು, ಒಂದು ಕಪ್ಪು ಕುದುರೆಯ ಆತ್ಮಕಥೆ, ಅಪಹೃತ ಬಾಲಕನ ಸಾಹಸಗಳು, ರಾಬಿನ್ ಸನ್ ಕ್ರೂಸೋ ಸಾಹಸಗಳು, ಹಕ್ಲ್ ಬರಿಫಿನ್, ರಾಬಿನ್ವುಡ್ ಸಾಹಸಗಳು, ಅರೇಬಿಯನ್ ನೈಟ್ಸ್ ಕಥೆಗಳು, ಡೇವಿಡ್ ಕಾಪರ್ ಪೀಲ್ಡ್, ಮೂವರು ಬಂದೂಕುಧಾರಿಗಳು, ಬೆನ್ಹರ್, ರಾಜಕುಮಾರ ಮತ್ತು ಭಿಕ್ಷುಕ, ಕಿಶೋರರಿಗೆ ಕರಿಗತೆಗಳು(ಮಕ್ಕಳ ಸಾಹಿತ್ಯ), ಕುವೆಂಪು(ಜೀವನ ಕೃತಿ ಪರಿಚಯ), ದ.ರಾ.ಬೇಂದ್ರೆ(ಜೀವನ ಕೃತಿ ಪರಿಚಯ), ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಾ.ಕೆ.ಶಿವರಾಮ ಕಾರಂತ, ಯು.ಆರ್.ಅನಂತಮೂತರ್ಿ, ವಿ.ಕೃ.ಗೋಕಾಕ್, ಜೆ.ಪಿ.ರಾಜರತ್ನಂ, ಡಿ.ವಿ.ಗುಂಡಪ್ಪ, ಪು.ತಿ.ನರಸಿಂಹಾಚಾರ್, ಕೆ.ಎಸ್.ನರಸಿಂಹಸ್ವಾಮಿ.
ಕಿರಿಯರಿಗೆ ಕನ್ನಡ ಸಾಹಿತ್ಯ ಚರಿತ್ರೆ : ಪಂಪನ ಕಾಲದ ಸಾಹಿತ್ಯ, ಶಿವಶರಣದ ಜೀವನ ವಚನಗಳು, ಶಿವಶರಣೆಯರ ಜೀವನ ವಚನಗಳು, ಹರಿಹರನ ಕಾಲದ ಸಾಹಿತ್ಯ, ದಾಸ ಸಾಹಿತ್ಯ, ಒಡೆಯರ ಕಾಲದ ಸಾಹಿತ್ಯ, ಆಧುನಿಕ ಯುಗದ ಸಣ್ಣಕತೆ ಕಾದಂಬರಿ, ಆಧುನಿಕ ಯುಗದ ಸಣ್ಣಕಥೆ ಕಾದಂಬರಿ, ಆಧುನಿಕ ಕಾವ್ಯ ಮತ್ತು ನಾಟಕ, ಪ್ರಬಂಧ, ವಿಮಷರ್ೆ, ಮಕ್ಕಳ ಸಾಹಿತ್ಯ ಇತ್ಯಾದಿ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ವಿಜೇತ ದಿಗ್ಗಜರು, ವಿಲಿಯಂ ಫ್ರೀಸ್ ಗ್ರೀನ್(ವಿಜ್ಞಾನ), ಪುರಂದರ ದಾಸರು, ಕುಮಾರವ್ಯಾಸ, ಲವಕುಶ ನಾಟಕ(ಮಕ್ಕಳಿಗಾಗಿ) , ಮಾಂಗಲ್ಯ ಭಾಗ್ಯ(ನಾಟಕ), ಹೀಗೊಬ್ಬ ಕಲಾ ಸಾಮ್ರಾಟ, ದೇಜಗೌ ಮತ್ತು ಇತರ ವ್ಯಕ್ತಿ ಚಿತ್ರಗಳು, ಬಸವಣ್ಣ ಮತ್ತು ಇತರ ವ್ಯಕ್ತಿ ಚಿತ್ರಗಳು, ಅಲ್ಲಾರಿ, ಕೆಂಪು ಫೈಲಲ್ಲವಾ ಅದು?, ಬಿಂದುವಿನಿಂದ ಸಿಂಧು, ಪ್ರಸ್ತುತ ಶಿಕ್ಷಣ ಒಂದು ಅವಲೋಕನ. 
ಸನ್ಮಾನ ಮತ್ತು ಪ್ರಶಸ್ತಿ : ಚಿ.ನಾ.ಹಳ್ಳಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಧುಗಿರಿಯಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕೈಂಕರ್ಯಕ್ಕಾಗಿ ಸನ್ಮಾನ, ಶಿಕಾರಿಪುರ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಚಿ.ನಾ.ಹಳ್ಳಿಯ ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘದಿಂದ ಸನ್ಮಾನ, ತುಮಕೂರಿನ ನಗೆಮಲ್ಲಿಗೆ ಬಳಗದಿಂದ ಹಾಸ್ಯ ಸಾಹಿತ್ಯ ರಚನೆಗಾಗಿ ಸನ್ಮಾನ, ಆಯ್ದ ಕಥೆಗಳು ಕಥಾ ಸಂಗ್ರಹ ಕನರ್ಾಟಕ ವಿಶ್ವ ವಿದ್ಯಾನಿಲಯದ ದ್ವಿತೀಯ ಬಿ.ಎ ತರಗತಿಗೆ ಪಠ್ಯ ಪುಸ್ತಕ ಆಯ್ಕೆ, ಸಾಶಿಮ ಬದುಕ ಬರಹ ಪುಸ್ತಕ ರಚನೆಗಾಗಿ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಚಿ.ನಾ.ಹಳ್ಳಿಯಲ್ಲಿ ಸನ್ಮಾನ.