Saturday, February 4, 2012

  ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ
ಚಿಕ್ಕನಾಯಕನಹಳ್ಳಿ,ಫೆ.04 : ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ತಿಳಿಸಿದರು.
  ಪಟ್ಟಣದ   ಬಾಲ ವಿಕಾಸ ಅಕಾಡೆಮಿ  ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಓದುತ್ತಿರುವ ಮಕ್ಕಳಿಗೆ ಪರಿಕ್ಷೇಗೆ ಸಿದ್ದಾರಾಗಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು  ವಿದ್ಯಾಥರ್ಿ ಜೀವನವೇ ಪರಿಕ್ಷೇಗಳ ಸವಾಲು, ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ರೂಪಿಸಿಕೊಳ್ಳಲು ಎಸ್.ಎಸ್.ಎಲ್.ಸಿಯಲ್ಲಿನ ಅಂಕಗಳು ಸ್ಪೂತರ್ಿದಾಯಕ ಹಾಗಾಗಿ ಪರಿಕ್ಷೇ ಎದುರಿಸುವ ಬಗ್ಗೆ ವಿದ್ಯಾಥರ್ಿಗಳಿಗೆ ಅತ್ಮವಿಶ್ವಾಸ ಮೂಡಿಸಲೂ ಇಂತ ಕಾರ್ಯಕ್ರಮಗಳೂ ಸಹಕಾರಿ ಎಂದು ಹೇಳಿದರು.
    ಕ್ಷೇತ್ರ ಸಿಕ್ಷಣದಿಕಾರಿಗಳಾದ ಸಾ.ಚಿ. ನಾಗೇಶ್ ಮಾತನಾಡಿ ಈಗಾಗಲೇ ಸಾಕಷ್ಟು  ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸರಣಿ ಪರಿಕ್ಷೇಗಳನ್ನು ಹಾಗು ಪೂರ್ವ ಸಿದ್ದತ ಪರಿಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಬಾಲ ವಿಕಾಸ ಆಕಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ, ಶಿಶು ಅಭೀವೃದ್ದಿ ಯೋಜನೆಗಳ ಮೂಲಕ ಎಸ್.ಎಸ್.ಎಲ್.ಸಿ. ಪರಿಕ್ಷೇಗಳ ಬಗ್ಗೆ ಅರಿವು ಮೂಡಿಸಿ ಧ್ಯೆರ್ಯದಿಂದ ಪರಿಕ್ಷೇಯನ್ನ ಎದುರಿಸಿ ಉತ್ತಮ ಪಲಿತಾಂಶ ಪಡೆಯಲು ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ. ಈ ಸೌಲಬ್ಯವನ್ನು ಮಕ್ಕಳು ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸದುಪಯೋಗಪಡಿಸಿ ಕೋಳ್ಳುವಂತೆ ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಂಜನಪ್ಪ, ವೀರಣ್ಣ, ಮಂಜುನಾಥಾಚಾರ್, ಕೆ.ಬಿ.ಕೃಷ್ಣಮೂತರ್ಿ, ವೇಣುಗೋಪಾಲ್ ಹಾಜರಿದ್ದರು. ಗಾಯಿತ್ರಿ ಪ್ರಾಥರ್ಿಸಿದರು. ಪುಷ್ಪ ಪಿ.ಸಾಳಸ್ಕರ್ ಸ್ವಾಗತಿಸಿದರೆ, ಪರಮೇಶ್ವರ ನಿರೂಪಿಸಿದರು, ಮೇಲ್ವಿಚಾರಕಿ ನಂದಾ ನವಲಗುಂದ ವಂದಿಸಿದರು.

ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ
ಚಿಕ್ಕನಾಯಕನಹಳ್ಳಿ,ಫೆ.04 : ಶ್ರೀ ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವವನ್ನು ಇದೇ 5ರಿಂದ 11ರ ವರೆಗೆ ಏರ್ಪಡಿಸಲಾಗಿದೆ.
5ರ ಭಾನುವಾರದಂದು ಮಹಾಗಣಪತಿ ಪೂಜೆ, ಅಂಕುರಾರ್ಪಣಾ, 6ರಂದು ಗಿರಿಜಾಕಲ್ಯಾಣೋತ್ಸವ, 7ರಂದು ಬ್ರಹ್ಮರಥೋತ್ಸವ, 8ರಂದು ಶಯನೋತ್ಸವ, 9ರಂದು ಪೂಣರ್ಾಹುತಿ ಹೋಮ, 10ರಂದು ಅನ್ನಸಂತರ್ಪಣೆ, 11ರಂದು ಊರಿನ ಪ್ರಮುಖ ಬೀದಿಗಳಲ್ಲಿ ಭೂ ಕಲ್ಯಾಣೋತ್ಸವ ನಡೆಯಲಿದೆ.
ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ
ಚಿಕ್ಕನಾಯಕನಹಳ್ಳಿ,ಫೆ.04 : ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ ಬಾಳುವ ಮೂಲಕ ತಮ್ಮ ಗುರುಗಳಿಗೆ ಕಾಣಿಕೆ ನೀಡಿ  ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಮೆರಿಟ್ಗಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು, ಈಗಿನ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಇನ್ನಿತರ ಉನ್ನತ ಹುದ್ದೆಗಳ ಉದ್ಯೋಗಕ್ಕೆ ಮೆರಿಟ್ ಅಭ್ಯಥರ್ಿಗಳನ್ನೇ ಆಯ್ಕೆ ಮಾಡಲಿದ್ದು ಅದಕ್ಕಾಗಿ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಗಮನವನ್ನು ವಿದ್ಯಾರ್ಜನೆ ಕಡೆಗೆ ಹರಿಸಿದರೆ ಉತ್ತಮ ಅಂಕ ಪಡೆಯುತ್ತೀರ, ವಿದ್ಯಾಥರ್ಿಗಳು ತಮ್ಮ ಓದನ್ನು ಹೆಚ್ಚು ಹೆಚ್ಚು  ಓದಿದಷ್ಟು ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದ ಅವರು ಈ ಬಾರಿ ಪಿಯುಸಿಯಲ್ಲಿ ಓದುತ್ತಿರುವ ಡಿಸ್ಟಿಂಕ್ಷನ್ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ಬೆಳ್ಳೆ ಪದಕ ನೀಡಿ ಗೌರವಿಸಲು ತೀಮರ್ಾನಿಸಿದ್ದು ಈ ಮೂಲಕ ಬೇರೆ ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ಬಂದ ವಿದ್ಯಾಥರ್ಿಗಳನ್ನು ಗೌರವಿಸುವುದನ್ನು ನೋಡಿ ಅವರಿಗೂ ನಾನು ಆ ಗೌರವಕ್ಕೆ ಪಾತ್ರವಾಗಬೇಕು ಎನ್ನುವ ಬಯಕೆ ಬಂದು ಉತ್ತಮ ಅಂಕಗಳಿಸಲಿ ಎನ್ನುವುದು ಎಂದ ಅವರು ಈ ಕಾಲೇಜಿನ ಮೇಲಂತಸ್ಥಿನ ಕಟ್ಟಡ ನಿಮರ್ಾಣಕ್ಕೆ ಹಲವು ಬಾರಿ ಸಕರ್ಾರದ ಮೇಲೆ ಒತ್ತಡ ಹೇರಿದ್ದರೂ ಅದು ನೆರವೇರಿಲ್ಲ ಈ ಬಾರಿ ಸದನದಲ್ಲಿ ಮಾತನಾಡಿ  ಕಾಲೇಜಿನ ಕಟ್ಟಡ ಕಟ್ಟಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ,  ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ದೊಡ್ಡಯ್ಯ, ರವಿ(ಮೈನ್ಸ್), ವರದರಾಜು, ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವಾಸು ಸ್ವಾಗತಿಸಿದರು.