Wednesday, May 4, 2011ನಾಟಕೋತ್ಸವದಲ್ಲಿ ವೃತ್ತಿ ರಂಗಭೂಮಿ, ಕಲಾ ಪ್ರಕಾರಗಳ ಬಗ್ಗೆ ವಿಚಾರಗೋಷ್ಠಿ ಚಿಕ್ಕನಾಯಕನಹಗ್ಳ,ಮೇ.04: ನಾಟಕೋತ್ಸವದ ಸಂದರ್ಭದಲ್ಲಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ಮೇ 7ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 2.45ರಿಂದ 5ಗಂಟೆಯವರೆಗೆ ಎರಡು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.ಬೆಳಗ್ಗೆ 11.30ಕ್ಕೆ ಸಾಹಿತಿ ಆರ್.ಬಸವರಾಜುರವರ ಅಧ್ಯಕ್ಷತೆಯಲ್ಲಿ ವೃತ್ತಿ ರಂಗಭೂಮಿ ಮತ್ತು ಗುಬ್ಬಿ ವೀರಣ್ಣನವರ ಬಗ್ಗೆ ಪ್ರೊ.ಟಿ.ಎಸ್.ನಾಗರಾಜಶೆಟ್ಟಿ, ರಂಗಭೂಮಿ ಅಂದು-ಇಂದು ಎಂಬುವುದರ ಬಗ್ಗೆ ಡಾ.ಅಬ್ದುಲ್ ಹಮೀದ್, ಸಿ.ಬಿ.ಮಲ್ಲಪ್ಪ-ನನ್ನ ಪ್ರೀತಿಯ ತಾತ ಎಂಬುವುದರ ಬಗ್ಗೆ ಸಿ.ಎಂ.ಲಿಂಗದೇವರು ಮಾತನಾಡಲಿದ್ದಾರೆ.ಮಧ್ಯಾಹ್ನ 2.45ಕ್ಕೆ ಸಾಹಿತಿ ಎಂ.ವಿ.ನಾಗರಾಜ್ರಾವ್ರವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ ಕಲಾ ಪ್ರಕಾರಗಳು ವಿಷಯದ ಬಗ್ಗೆ ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ಜಿಲ್ಲೆ ನಾಟಕ ಪರಂಪರೆಯ ಬಗ್ಗೆ ಕೆ.ಎಸ್.ಸತೀಶ್ ಗುಬ್ಬಿ, ಚಿ.ನಾ.ಹಳ್ಳಿ ತಾಲೂಕು ಕಲಾತಂಡಗಳ ಬಗ್ಗೆ ಸಿ.ಎ.ಕುಮಾರಸ್ವಾಮಿ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಶಿವಲಿಂಗಮೂತರ್ಿ ನಿರೂಪಿಸಲಿದ್ದಾರೆ.
ನೂತನ ದೇವಾಲಯ ಪ್ರಾರಂಭೋತ್ಸವಚಿಕ್ಕನಾಯಕನಹಳ್ಳಿ

,ಮೇ.04 : ಶ್ರೀ ನರಸಿಂಹಸ್ವಾಮಿ ದೇವರ ನೂತನ ದೇವಾಲಯದ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 15ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಜೆ.ಸಿ.ಪುರ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಜಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಸುತ್ತೂರು ಕ್ಷೇತ್ರದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರಸ್ವಾಮಿ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದು ಬಳ್ಳೆಕಟ್ಟೆ ಸಂಸ್ಥಾನದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮಿ, ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃಂತ್ಯುಂಜಯ ದೇಶಿಕೇಂದ್ರ ಸ್ವಾಮಿ, ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಯತೀಶ್ವರ ಶಿವಚಾರ್ಯಸ್ವಾಮಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರಸ್ವಾಮಿ, ಅಂತರರಾಷ್ಟ್ರೀಯ ಇಸ್ಕಾನ್ ಕೇಂದ್ರದ ನಿದರ್ೇಶಕ ದಯಾರಾಮ್ದಾಸ್ ಉಪಸ್ಥಿತರಿರುವರು.


ಜನಸ್ಪಂದನ ಸಭೆಚಿಕ್ಕನಾಯಕನಹಳ್ಳಿ,ಮೇ.05:

ಹುಳಿಯಾರು ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಇದೇ 7ರ ಶನಿವಾರ ಬೆಳಗ್ಗೆ 11ಗಂಟೆಗೆ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉಚಿತ ಸಾಮೂಹಿಕ ಉಪನಯನ ಮತ್ತು ರಾಮಾನುಜಾಚಾರ್ಯ ಜಯಂತಿಚಿಕ್ಕನಾಯಕನಹಳ್ಳಿ,ಮೇ.05:

ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಮತ್ತು ಶ್ರೀ ರಾಮಾನುಜಾಚಾರ್ಯ ಜಯಂತಿ ಮಹೋತ್ಸವವನ್ನು ಇದೇ 11ರ ಬುಧವಾರದಂದು ಏರ್ಪಡಿಸಲಾಗಿದೆ ಎಂದು ಸಾಲ್ಕಟ್ಟೆ ಶ್ರೀನಿವಾಸ್ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ತಾಲೂಕು ವೈಷ್ಣವ ಸಂಘದ ವತಿಯಿಂದ ತಾಲೂಕಿನ ಸಾದರಹಳ್ಳಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ಭಾಗವಹಿಸುವ ವಟುಗಳಿಗೆ ಪರಿಕರಗಳನ್ನು ಸಂಘವೇ ಒದಗಿಸಲಿದ್ದು ಉಪನಯನ ಮಾಡಿಸುವ ವಟು ಮತ್ತು ತಂದೆ ತಾಯಿ ಇದೇ ತಿಂಗಳ 10ರ ಸಂಜೆ 5 ಗಂಟೆಗೆ ಸಾದರಹಳ್ಳಿ ಗ್ರಾಮಕ್ಕೆ ಆಗಮಿಸಬೇಕಾಗಿ ಮತ್ತು ಉಪನಯನ ಮಾಡಿಸುವವರು ತಾಲ್ಲೂಕು ಶ್ರೀವೈಷ್ಣವ ಸಂಘ ಮತ್ತು , ಹೆಚ್ಚಿನ ವಿವರಗಳಿಗಾಗಿ 9448748206, 9164030784 ಮೊ.ನಂ.ಗೆ ಸಂಪರ್ಿಸಲು ಕೋರಿದ್ದಾರೆ.
ನಾಟಕ ಸ್ಫಧರ್ೆಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರಚಿಕ್ಕನಾಯಕನಹಳ್ಳಿ,ಮೇ.05: ಸಿ.ಬಿ.ಮಲ್ಲಪ್ಪನವರ 125ನೇ ಜನ್ಮವಷರ್ಾಚರಣೆಗಾಗಿ ಏರ್ಪಡಿಸಿರುವ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಗೆಲುವು ಪಡೆದ ತಂಡಗಳಿಗೆ ಪ್ರಥಮ ಬಹುಮಾನವಾಗಿ 15ಸಾವಿರ. ದ್ವಿತೀಯ ಬಹುಮಾನ 10ಸಾವಿರ, ಹಾಗೂ ತೃತೀಯ ಬಹುಮಾನ 7500ರೂ ಸಾವಿರ ರೂಗಳು ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 5ರಂದು ಸಿ.ಬಿ.ಮಲ್ಲಪ್ಪನವರ ಭಾವಚಿತ್ರವನ್ನು ಹೊತ್ತ ವಾಹನದಲ್ಲಿ ಪ್ರವಾಸಿ ಮಂದಿರದಿಂದ ಕನ್ನಡ ಸಂಘದ ವೇದಿಕೆಯವರೆಗೆ ಮೆರವಣಿಗೆಯ ಮೂಲಕ ಆಗಮಿಸಿ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ತಿಳಿಸಿದ ಅವರು ತಾಲ್ಲೂಕಿನಲ್ಲಿರುವ ಹತ್ತು ಕಲಾವಿದರಾದ ಕುಪ್ಪೂರು ಕೃಷ್ಣಮೂತರ್ಿ, ದೇವರಮನೆ ಆಂಜಿನಪ್ಪ, ಷರಾಪ್ ಶಿವಣ್ಣ, ಅನಂತರಾಮು ಹೊಸಳ್ಳಿ, ಹಂದನಕೆರೆ ಕರಿಯಣ್ಣಶೆಟ್ಟರು, ದೇವಿನಾಟಕದ ಕೆಂಪಣ್ಣ, ಹುಳಿಯಾರಿನ ಮಂಜುಳಮ್ಮ, ಕಂದಿಕೆರೆ ಶಂಕರಲಿಂಗಪ್ಪ, ಎಲ್ಲೇನಹಳ್ಳಿ ಮೂರ್ತಣ್ಣ, ಚಿ.ನಾ.ಹಳ್ಳಿ ಕೃಷ್ಣಾಚಾರ್ರವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ, ಸದಸ್ಯರಾದ ಸಿದ್ದು ಜಿ.ಕೆರೆ, ಜಯಣ್ಣ, ಶ್ರೀನಿವಾಸ್, ಅನಂತರಾಮು, ಗಂಗಾದರ್, ಸಿದ್ದರಾಮಯ್ಯ, ನಾಗರಾಜು ಉಪಸ್ಥಿತರಿದ್ದರು.