Friday, May 31, 2013


ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಮೇ.31 : ಸಕರ್ಾರದ ಯಾವುದೇ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿದ್ದಷ್ಟೂ ಕಾಮಗಾರಿಯ ಕಾರ್ಯದಕ್ಷತೆ ಹಚ್ಚಲಿದೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ನವಿಲೆ ಗ್ರಾಮದ ಹೆಬ್ಬಾಗಿಲಿನಿಂದ ಕೋಟೆಯವರೆಗೂ ಕಾಂಕ್ರೀಟ್ ರಸ್ತೆ ನಿಮರ್ಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಕರ್ಾರ ಗ್ರಾಮಾಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡುತ್ತಿದೆ ಆದರೆ ಕಾಮಗಾರಿ ಗುಣಮಟ್ಟದ ದೋಶದಿಂದ ಕಾ


ಮಗಾರಿಗಳ ಕಾರ್ಯಕ್ಷಮತೆ ಕುಂಟಿತಗೊಳ್ಳುತ್ತಿವೆ. ಸಕರ್ಾರಿ ಅನುದಾನಗಳ ಸದ್ಭಳಕೆಯಾಗುವಂತೆ ಮಾಡುವುದು ಆಯಾವ್ಯಾಪ್ತಿಯ ಜನರ ಮೇಲಿನ ಜವಾಬ್ದಾರಿಯಾಗಿದೆ ಎಂದರು.
 ಗ್ರಾಮದ ಯಾವುದೇ ಕಾಮಗಾರಿಗಳ ಬಗ್ಗೆ ಆಯಾ ಗ್ರಾಮದ ಸ್ಥಳೀಯರು ನಮ್ಮ ಸ್ವಂತ ಕೆಲಸವೆಂಬಂತೆ ಗುಣಮಟ್ಟ ವೀಕ್ಷಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಲೋಪಕಂಡು ಬಂದರೆ ಸಂಬಂಧಿಸಿದ ಕಂಟ್ರಾಕ್ಟರ್ ಹಾಗೂ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಸರಿಯಾಗುವವರೆಗೂ ಧೃಡತೆಯಿಂದ ನಿಲ್ಲಬೇಕೆಂದರು. ಇದರ ಜೊತೆಗೆ ಸಿಮೆಂಟ್ ಕಾಮಗಾರಿಗಳಲ್ಲಿ ಕ್ಯೂರಿಂಗ್ ಮಾಡುವಲ್ಲಿ ಮತ್ತು ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡುವ ಸಂದರ್ಭದಲ್ಲಿ ಒತ್ತುವರಿಗಳು ಮತ್ತು ಇನ್ನಿತರ ಅಡಚಣೆಗಳನ್ನು ನಿವಾರಿಸುವಲ್ಲಿ ಸಹಕರಿಸಬೇಕೆಂದರು. 
ಈ ಸಂದರ್ಭದಲ್ಲಿ ಇಂಜಿನಿಯರ್ ಪುರುಷೋತಮ್, ಮುಖಂಡರಾದ ಚನ್ನಿಗಪ್ಪ, ಮಧುಸೂಧನ್, ಲೋಕೇಶ್ ಮುಂತಾದವರಿದ್ದರು.