ಆಟೋರಿಕ್ಷಾ ಚಾಲಕನ ಮಗ ಎಸ್.ಎಸ್.ಎಲ್.ಸಿ.ಯಲ್ಲಿ
ಚಿಕ್ಕನಾಯಕನಹಳ್ಳಿ,ಮೇ.7; ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿಗೆ ಇಲ್ಲೊಂದು ಸಾಧನೆಯ ಸುದ್ದಿ ಇದೆ, ಟ್ಯೂಶನ್ಗೆ ಹೋಗದೆ, ಆಟೋರಿಕ್ಷಾ ಚಾಲಕನ ಮಗನಾಗಿ ಅತ್ಯಲ್ಪ ಸೌಲತ್ತುಗಳಲ್ಲೇ, ಸಕರ್ಾರಿ ಪ್ರೌಢಶಾಲೆಯಲ್ಲಿ ಓದಿರುವ ಆರ್. ಮಧುಸೂಧನ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 590 (ಶೇ.94.40)ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮನೆನಿಸಿಕೊಂಡಿದ್ದಾನೆ.
ಸ್ವಾಮಿ ವಿವೇಕನಂದರೇ ನನ್ನ ಗುರುಗಳು, ಅವರೇ ನನಗೆ ಸ್ಪೂತರ್ಿ, ತಂದೆ-ತಾಯಿಗಳ ಪೋಷಣೆ, ಗುರುಗಳ ಮಾರ್ಗದರ್ಶನದಿಂದಾಗಿ ನಾನು ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುವ ಮಧುಸೂಧನನ ಕಣ್ಣಲ್ಲಿ ಐ.ಎ.ಎಸ್.ಮಾಡುವ ಕನಸಿದೆ.
ಶಾಲೆಯಲ್ಲಿ ಏಕಾಗ್ರಚಿತ್ತದಿಂದ ಕೇಳುವ, ಅಂದಿನ ಪಾಠವನ್ನು ಅಂದೇ ಓದುವ ಪ್ರವೃತ್ತಿನನಗೆ ಸಹಾಯವೆನಿಸುತು ಎನ್ನುವ ಮಧು, ಸಕರ್ಾರಿ ಶಾಲೆಯಲ್ಲಿ ಉತ್ತಮ ಕೌಶಲ್ಯವಿರುವ ಶಿಕ್ಷಕರಿದ್ದಾರೆ ಅವರ ಮಾರ್ಗದರ್ಶನ ಯಶಸ್ಸಿಗೆ ರಾಜಮಾರ್ಗವಾಯಿತು ಎನ್ನುವ ಹೊತ್ತಿನಲ್ಲೇ, ಗ್ರಾಮೀಣ ಹಾಗೂ ಬಡ ಮಕ್ಕಳಿರುವ ಇಂತಹ ಸಕರ್ಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿ ಮುಂದಿನ ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ ಎಂಬುದಷ್ಟೇ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ನನ್ನ ವಿನಮ್ರ ಮನವಿ ಎನ್ನುತ್ತಾನೆ ಮಧು.
ತನ್ನ ಮಗನ ಸಾಧನೆಯಿಂದ ಉಲ್ಲಾಸಿತರಾಗಿರುವ ಆಟೋರಿಕ್ಷಾ ಚಾಲಕ ಸಿ.ಎನ್.ರವಿಕುಮಾರ್, ನನಗೆ ಎಷ್ಟೇ ಕಷ್ಟವಾಗಲಿ ಅವನು ಅಂದುಕೊಂಡಿದ್ದನ್ನು ಓದುಸುತ್ತೇನೆ ಎಂದು ಹೇಳುವಷ್ಟರಲ್ಲಿ ಗದ್ಗಿತರಾಗುವ ಅವರು, ಅವನು ಒಳ್ಳೆಯ ಸ್ಥಾನಕ್ಕೆ ಮುಟ್ಟಿದ ಮೇಲೆ ಅವನಿಂದ ಹೆಚ್ಚಿನದೇನು ಬಯಸುವುದಿಲ್ಲ, ಒಂದು ಬ್ಯಾಕ್ ಇಂಜಿನ್ ಆಟೋ ಕೊಡಿಸಿದರೆ ಸಾಕು, ಅದನ್ನು ಓಡಿಸಿಕೊಂಡು ಆನಂದವಾಗಿರುತ್ತೇನೆ ಎನ್ನುವಷ್ಟರಲ್ಲಿ ರವಿಯವರ ಕಣ್ಣಲ್ಲಿದ್ದ ನೀರು ಜಳ ಜಳನೆ ಕೆನ್ನೆ ಮೇಲೆ ಬಂದೇ ಬಿಟ್ಟವು.
ಪಡೆದ ಅಂಕಗಳು: ಕನ್ನಡ-119, ಇಂಗ್ಲೀಷ್ 96, ಹಿಂದಿ-95, ಗಣಿತ-90, ವಿಜ್ಞಾನ-93, ಸಮಾಜವಿಜ್ಞಾನ-97 ಅಂಕಗಳು ಒಟ್ಟು 590(ಶೇ.94.4) ತಾಲೋಕಿಗೆ ಪ್ರಥಮ
ಚಿ.ನಾ.ಹಳ್ಳಿ: ಎಸ್.ಎಸ್.ಎಲ್.ಸಿ.ಯಲ್ಲಿ ಶೇ.75.63 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.7: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.75.63ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು ಮೂರು ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ, 44 ವಿದ್ಯಾಥರ್ಿಗಳು ಅತ್ಯುನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿ.ಇ.ಓ, ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 59 ಶಾಲೆಗಳಿದ್ದು, ಒಟ್ಟು 2577 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 1949ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 1072ಹೆಣ್ಣುಮಕ್ಕಳು ಹಾಗೂ 877ಗಂಡುಮಕ್ಕಳು ತೇರ್ಗಡೆಯಾಗಿದ್ದಾರೆ, ತಾಲೂಕಿನಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳೆಂದರೆ, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 44 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ತಿಮ್ಮನಹಳ್ಳಿ ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆಯಲ್ಲಿ 30 ವಿದ್ಯಾಥರ್ಿಗಳು, ಚಿ.ನಾ.ಹಳ್ಳಿ ನವೋದಯ ಪ್ರೌಡಶಾಲೆ(ಆಂಗ್ಲ) ಶಾಲೆಯಲ್ಲಿ 16 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ಈ ಮೂರು ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳು.


ತಾಲ್ಲೂಕಿನ ಸಕರ್ಾರಿ ಶಾಲೆಗಳ ಶೇಕಡಾವಾರು ಫಲಿತಾಂಶದ ವಿವರ :ಸ.ಪ.ಪೂ.ಕಾಲೇಜು ಗೋಡೆಕೆರೆ ಶೇ.73.58, ಸ.ಪ.ಪೂ.ಕಾಲೇಜು ಹುಳಿಯಾರು ಕೆಂಕೆರೆ80.56, ಸ.ಪ.ಪೂ.ಕಾಲೇಜು ಬೋನಕಣಿವೆ 69.23, ಸಕರ್ಾರಿ ಪ್ರಡಶಾಲೆ ಯಳನಡು 76.92, ಸಕರ್ಾರಿ ಪ್ರೌಢಶಾಲೆ ದಸೂಡಿ 91.18, ಸಕರ್ಾರಿ ಪ್ರೌಢಶಾಲೆ ಸಾಸಲು 94.59, ಸಕರ್ಾರಿ ಪೌಢಶಾಲೆ ಚಿಕ್ಕನಾಯಕನಹಳ್ಳಿ 82.35, ಸಕರ್ಾರಿ ಪ್ರೌಡಶಾಲೆ ಉದರ್ು ಹುಳಿಯಾರು 83.33, ಸಕರ್ಾರಿ ಪ್ರೌಡಶಾಲೆ ಬರಗೂರು 92.11, ಸಕರ್ಾರಿ ಪ್ರೌಡಶಾಲೆ ಬರಶಿಡ್ಲಹಳ್ಳಿ 87.50, ಸಕರ್ಾರಿ ಪ್ರೌಡಶಾಲೆ ದಬ್ಬಗುಂಟೆ 90.00, ಸಕರ್ಾರಿ ಪ್ರೌಡಶಾಲೆ ಜೆ.ಸಿ.ಪುರ 86.96, ಸಕರ್ಾರಿ ಪ್ರೌಡಶಾಲೆ ಕಾಮಲಾಪುರ 60.00, ಸಕರ್ಾರಿ ಪ್ರೌಡಶಾಲೆ ಬಡಕೆಗುಡ್ಲು 86.96, ಸಕರ್ಾರಿ ಪ್ರೌಡಶಾಲೆ ಕೆಂಕೆರೆ 61.11, ಸಕರ್ಾರಿ ಪ್ರೌಡಶಾಲೆ ಗೂಬೆಹಳ್ಳಿ-ನಂದಿಹಳ್ಳಿ 93.75, ಸಕರ್ಾರಿ ಪ್ರೌಡಶಾಲೆ ಹೆಚ್.ತಮ್ಮಡಿಹಳ್ಳಿ 88.00, ಸಕರ್ಾರಿ ಪ್ರೌಡಶಾಲೆ ತೀರ್ಥಪುರ 85.71, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 100.00, ಯು.ಪಿ.ಆರ್.ಎಮ್.ಎಸ್.ಸಿ ಜಿಎಚ್ಎಸ್ಬೆಳ್ಳಾರ 68.42,

