Friday, February 22, 2013


ಕಾವೇರಿಗಾಗಿ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ                   ರಾಜೀನಾಮೆ ನೀಡಬೇಕು
ಚಿಕ್ಕನಾಯಕನಹಳ್ಳಿ,ಫೆ.22 : ಕಾವೇರಿ ಐತೀಪರ್ು ಹಿನ್ನೆಲೆಯಲ್ಲಿ ರಾಜ್ಯದ ಹಿತದೃಷಿಯಿಂದ ನಾಡಿನ ಎಲ್ಲಾ ಸಂಸದರು ಒಗ್ಗಟ್ಟಾಗಿ ಪ್ರಧಾನಿಗೆ ರಾಜೀನಾಮೆ ನೀಡುವ ಮೂಲಕ ತಮ್ಮ ನಿಲುವನ್ನು ಕೇಂದ್ರಕ್ಕೆ ಸ್ಪಷ್ಟ ಪಡಿಸಬೇಕಿತ್ತು  ಆದರೆ ರಾಜ್ಯ ಸಕರ್ಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ತಾಲೂಕಿನ ಸುಂಟರೆಮೆಳೆ ಶ್ರಿ ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ಜೀಣರ್ೋದ್ದಾರ, ಪುನರ್ ಪ್ರಾಣ ಪ್ರತಿಷ್ಟಾಪನೆ ಹಾಗೂ ನೂತನ ಶಿಖರ  ಕಳಶಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧಾಮರ್ಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಸಕರ್ಾರದ ಅಧಿಸೂಚನೆ ತಮಿಳುನಾಡಿನ ಮುಖ್ಯಮಂತ್ರಿಗೆ ಹುಟ್ಟು ಹಬ್ಬದ ಕೊಡುಗೆಯಾಗಿದ್ದರೆ, ರಾಜ್ಯದ ಪಾಲಿಗೆ ಕರಾಳ ದಿನವಾಗಿದೆ ಎಂದ ಅವರು, ಈ ಅಧಿಸೂಚನೆಯಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಲಿದ್ದು, ರಾಜ್ಯದಲ್ಲಿ ಮಳೆ ಬರಲಿ ಬಿಡಲಿ ಇನ್ನು ಮುಂದೆ ತಮಿಳುನಾಡಿಗೆ ನೀರು ಬಿಡಲೇಬೇಕಾದ ಪರಿಸ್ಥಿತಿ ಒದಗಿದೆ ಎಂದರು.
    ಕೆ.ಜೆ.ಪಿ. ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸುವುದಲ್ಲದೆ, ಈ ಭಾಗದ 9 ಜಿಲ್ಲೆಗಳಿಗೆ ನೀರು ಹರಿಸಲು 25 ಸಾವಿರ ಕೋಟಿ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು.
    ರಾಜ್ಯದ ಬಜೆಟ್ನ ಗಾತ್ರ  ಕೇವಲ 40 ಸಾವಿರ ಕೋಟಿಗೆ ಸೀಮಿತವಾಗಿದ್ದನ್ನು ನಾನು ಸಿ.ಎಂ.ಆಗಿದ್ದಾಗ ರಾಜ್ಯದ ಜನತೆಯ ಮೇಲೆ ಯಾವೊಂದು ಹೊಸ ತೆರಿಗೆಯನ್ನು ಹಾಕದೆ  ಬಜೆಟ್ನ ಗಾತ್ರವನ್ನು  ಒಂದು ಲಕ್ಷ ಕೋಟಿ ರೂಗಳಿಗೆ ಏರಿಸುವ ಮೂಲಕ, ನಾಡಿನ  ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟಿರುವುದಾಗಿ ತಿಳಿಸಿದರಲ್ಲದೆ, ರೈತರ ಪರವಾಗಿ ಬಜೆಟ್ ಮಂಡಿಸಿ ಅವರ ಕಷ್ಟಕ್ಕೆ ಸ್ಪಂದಿಸಿದ್ದೇನೆ, ವಾಷರ್ಿಕ ಶೇ. 14 ರೂ ದರದಲ್ಲಿ ಬಡ್ಡಿ ಕಟ್ಟುತ್ತಿದ್ದ ರೈತರಿಗೆ ಅವರ ಬವಣೆ ತಪ್ಪಿಸಲು ಅದನ್ನು ಶೇ.1ಕ್ಕೆ ಇಳಿಸಿ ಸುಲಭವಾಗಿ ಸಾಲ ಸಿಗುವಂತೆ ಮಾಡಿದ್ದೇನೆ ಎಂದರು.
    ನಮ್ಮ ಪಕ್ಷ  ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ 200 ಸಣ್ಣ ಪುಟ್ಟ ಮಠಗಳನ್ನು ಗುತರ್ಿಸಿ ಅವುಗಳ ಅಭಿವೃದ್ದಿಗೆ ತಲಾ ಒಂದು ಕೋಟಿಯಂತೆ ಬಜೆಟ್ನಲ್ಲಿ 200 ಕೋಟಿ ರೂಗಳನ್ನು ಮೀಸಲಿಡುವುದಾಗಿ ತಿಳಿಸಿದರು.
 ಮಾಜಿ ಶಾಸಕ  ಜೆ.ಸಿ. ಮಾಧುಸ್ವಾಮಿ ಹಾಗೂ ಸಂಸದ ಜಿ .ಎಸ್ ಬಸವರಾಜು ನಮ್ಮ ಜೊತೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸುವಂತೆ ಹೇಳಿದರು.
 ಬಿ.ಎಸ್ ಯೂಡಿಯೂರಪ್ಪನವರು  ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರಿಗೆ  ಹೂವಿನ ಹಾರ ಹಾಕುವ ಮೂಲಕ  ಕೆ.ಜೆ.ಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
    ಸಂಸದ ಜಿ.ಎಸ್.ಬಸವರಾಜು ನೇತ್ರಾವತಿ ತಿರುವು ಯೋಜನೆ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನಾಲಾ ಯೋಜನೆಗಳಿಂದ 9ಜಿಲ್ಲೆಗಳ 10,200 ಕೆರೆಗಳಿಗೆ ಶಾಶ್ವತ ನೀರನ್ನು ಹರಿಸುವುದಕ್ಕೆ ಸಾಧ್ಯವೆಂಬದನ್ನು ನೀರಾವತಿ ತಜ್ಞ ಪರಮಶಿವಯ್ಯನವರ ವರದಿಯಲ್ಲಿ ತಿಳಿಸಿದೆ, ಈ ವರದಿ ಅನುಷ್ಠಾನಗೊಳ್ಳುವುದಕ್ಕೆ 25 ಸಾವಿರ ಕೋಟಿ ರೂಗಳ ಅನುದಾನ ಅವಶ್ಯಕ, ಇದು  ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರೆ ಸಾಧ್ಯವಾಗುವುದು ಎಂದರು.
    ತಾಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸಲು ಯಡಿಯೂರಪ್ಪ 120 ಕೋಟಿ ರೂಗಳ ಯೋಜನೆ ಜಾರಿಗೆ ತಂದು, ಈ ಕಾರ್ಯಕ್ಕೆ 40 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ ಶೀಘ್ರವೇ ಈ ಯೋಜನೆ ಕಾಯರ್ಾರಂಭಗೊಳ್ಳುವುದು ಎಂದರು.
    ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜೆ.ಎಚ್ ಪಟೇಲ್ರವರು ಮುಖ್ಯಮಂತ್ರಿಯಾಗಿದ್ದಾಗ ನನಗೆ ಮಂತ್ರಿಯಾಗುವ ಅವಕಾಶವಿತ್ತು, ಆದರೆ ನಾನು ಅವರನ್ನು ನಮ್ಮ ತಾಲೂಕಿಗೆ ನೀರು ಕೊಡಿ ಎಂದು ಕೇಳಿದೆನೇ ಹೊರತು, ಮಂತ್ರಿಗಿರಿ ಬೇಡವೆಂದೆ ಆದ್ದರಿಂದ್ದಲ್ಲೇ ಆಗ ನಮಗೆ ನೀರಿನ ಅಲೋಕೇಷನ್ ಸಿಕ್ಕಿದ್ದು, ನಾನು ಕಾನೂನಿಗೆ ಬೆಲೆ ಕೊಡುವವನು ಆದರಿಂದಾಗಿ ಕೃಷ್ಣ ಬೇಸಿನ್ಗೆ ನೀರು ಸಿಗುವುದು ಕಷ್ಟವೆಂದು ಹೇಳಿದ್ದೆ ಎಂದರು.
     ವಿಧಾನ ಸಭೆಯಿಂದ ಪುರಸಭೆವರೆಗೆ ಎಲ್ಲರೂ ಬಂಡವಾಳ ಶಾಹಿಗಳು ಸ್ಪಂಧರ್ಿಸುತ್ತಿದ್ದು, ಸೇವೆ ಮಾಡವ ಬದಲು ಲಾಭ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದುಗೆ ಮಠ ಡಾ. ಯತೀಶ್ವರ ಶಿವಾಚಾರ್ಯಸ್ವಾಮಿ, ಗೋಡೆಕೆರೆ ಸಂಸ್ಥಾನದ ಮಠದ ಪೀಠಾಧ್ಯಕ್ಷರುಗಳಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಸಿದ್ದರಾಮದೇಶಿ ಕೇಂದ್ರ ಸ್ವಾಮಿ ಆಶರ್ೀವಚನ ನೀಡಿದರು.
    ತಾ.ಪಂ.ಸದಸ್ಯ ಎಚ್.ಆರ್.ಶಶಿಧರ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಎನ್.ಶಿವರಾಜ್, ತಾ.ಪಂ. ಮಾಜಿ ಅಧ್ಯಕ್ಷರಾದ ಎಚ್.ಎಂ.ಸುರೇಂದ್ರಯ್ಯ, ಸಿದ್ದರಾಮಣ್ಣ, ಸಾಹಿತಿ ಸಿ.ಎಚ್.ಮರಿದೇವರು ಗ್ರಾ.ಪಂ.ಅಧ್ಯಕ್ಷ ಬಸವೇಗೌಡ ಸೇರಿದಂತೆ ಹಲವರಿದ್ದರು.
    ಈ ಸಂದರ್ಭದಲ್ಲಿ ದೇವಾಲಯ ನಿಮರ್ಾತೃ ಹಾಗೂ ದಾನಿ ಎಸ್.ಎಲ್.ಶಾಂತಕುಮಾರ್ರವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.
    ದೇವಾಲಯದ ಟ್ರಸ್ಟಿ ಎಸ್.ರಾಜಶೇಖರ್ ಸ್ವಾಗತಿಸಿದರು,
              36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಫೆ.22 : ಪಟ್ಟಣದ ಪುರಸಭೆಯ 23 ವಾಡರ್್ಗಳಲ್ಲಿ ಜೆಡಿಎಸ್ನಿಂದ 22, ಬಿಜೆಪಿಯಿಂದ 9, ಕಾಂಗ್ರೆಸ್ನಿಂದ ಇಬ್ಬರು, ಕೆಜೆಪಿಯಿಂದ ಒಬ್ಬರು ಹಾಗೂ ಪಕ್ಷೇತರರಾಗಿ ಇಬ್ಬರು ಸೇರಿ ಒಟ್ಟು  36 ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ.
    1ನೇವಾಡರ್್: ಎಚ್.ಸಿ.ಶ್ಯಾಮಲ(ಬಿಜೆಪಿ), ದಾಕ್ಷಾಯಣಮ್ಮ(ಜೆಡಿಎಸ್, 2ನೇ ವಾಡರ್್ : ಇಂದ್ರಮ್ಮ(ಜೆಡಿಎಸ್), 3ನೇ ವಾಡರ್್ ಸಿ.ಡಿ.ಚಂದ್ರಶೇಖರ್(ಜೆಡಿಎಸ್), 4ನೇ ವಾಡರ್್ ಎಂ.ಡಿ.ನೇತ್ರಾವತಿ(ಕೆಜೆಪಿ), ಕೆ.ಶೈಲಜ(ಜೆಡಿಎಸ್), 5ನೇ ವಾಡರ್್ ಚೇತನ್ಪ್ರಸಾದ್(ಬಿಜೆಪಿ), ರವಿಚಂದ್ರ ಎಂ.ಕೆ(ಜೆಡಿಎಸ್), 6ನೇ ವಾಡರ್್ ಶಾಹೇದ ಕೆ.ಎಸ್(ಜೆಡಿಎಸ್), 7ನೇ ವಾಡರ್್ ಸಿ.ಎಮ್.ರಾಜಶೇಖರ್(ಜೆಡಿಎಸ್), 8ನೇ ವಾಡರ್್ ಮಲ್ಲಿಕಾಜರ್ುನಯ್ಯ(ಜೆಡಿಎಸ್), 9ನೇವಾಡರ್್ ಸರಸ್ವತಿ(ಬಿಜೆಪಿ), ಕಮಲಮ್ಮ(ಜೆಡಿಎಸ್), 10ನೇವಾಡರ್್ ಸಿ.ಎಸ್.ರಮೇಶ್(ಜೆಡಿಎಸ್),  11ನೇವಾಡರ್್ ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್), ಈಶ್ವರಯ್ಯ(ಬಿಜೆಪಿ), 12ನೇವಾಡರ್್ ಧನಪಾಲ್(ಬಿಜೆಪಿ), ಸಿ.ಆರ್.ತಿಮ್ಮಪ್ಪ(ಜೆಡಿಎಸ್, 13ನೇವಾಡರ್್ ಯಶೋಧಮ್ಮ(ಪಕ್ಷೇತರ), ಸಿ.ಎಮ್.ರಂಗಸ್ವಾಮಯ್ಯ(ಜೆ.ಡಿ.ಎಸ್), 14ನೇ ವಾಡರ್್ ಎಚ್.ಬಿ.ಪ್ರಕಾಶ್(ಜೆಡಿಎಸ್), 15ನೇ ವಾಡರ್್ ಮಲ್ಲೇಶಯ್ಯ(ಜೆಡಿಎಸ್), 16ನೇ ವಾಡರ್್ ಮಹಮದ್ಖಲಂದರ್ (ಜೆಡಿಎಸ್), 17ನೇ ವಾಡರ್್ ಸಿ.ಪಿ.ಮಹೇಶ್(ಕಾಂಗ್ರೆಸ್), ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್), ಸಿ.ಎಂ.ಗಂಗಾಧರಯ್ಯ(ಬಿಜೆಪಿ), 18ನೇವಾಡರ್್ ಎಲ್.ಪ್ರೇಮ(ಜೆಡಿಎಸ್), ಸಿ.ಎಲ್.ಶಾಂತಮ್ಮ(ಕಾಂಗ್ರೆಸ್), 19ನೇವಾಡರ್್ ಸಿ.ಟಿ.ದಯಾನಂದ(ಜೆಡಿಎಸ್), ಲೋಕೇಶ(ಪಕ್ಷೇತರ), 20ನೇವಾಡರ್್ ಶಕುಂತಲಮ್ಮ(ಬಿಜೆಪಿ), ಗೀತ ರಮೇಶ್ (ಜೆಡಿಎಸ್), 22ನೇ ವಾಡರ್್ ಮಾಲ(ಬಿಜೆಪಿ), ರೇಣುಕಾ(ಜೆಡಿಎಸ್), 23ನೇ ವಾಡರ್್ ಅಶೋಕ(ಜೆಡಿಎಸ್), ಗಂಗಾಧರಯ್ಯ(ಬಿಜೆಪಿ) ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ. 21ನೇ ವಾಡರ್್ನಲ್ಲಿ ಇದುವರೆಗೂ ಯಾವ ಅಭ್ಯಥರ್ಿಯು ಇನ್ನೂ ನಾಮ ಪತ್ರ ಸಲ್ಲಿಸಿಲ್ಲ.