Wednesday, February 6, 2013



ಗಾಯಗೊಂಡ ಚಿರತೆ: ಸುರಕ್ಷಿತವಾಗಿ ಬೆಂಗಳೂರಿನ ವನ್ಯಪ್ರಾಣಿ ಆಸ್ಪತ್ರೆಗೆ.
ಚಿಕ್ಕನಾಯಕನಹಳ್ಳಿ,ಫೆ.05: ಮೂರು ದಿನಗಳ ಕಾಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡುವ ಮೂಲಕ ಬೋನಿನಲ್ಲಿ ಹಿಡಿದು ಸುರಕ್ಷಿತವಾಗಿ ಬೆಂಗಳೂರಿನಲ್ಲಿರುವ ವನ್ಯಪ್ರಾಣಿಗಳ ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ   ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಶೆಟ್ಟಿಕೆರೆ ಬಳಿಯ ಮಾಕುವಳ್ಳಿ ಬಳಿಯಲ್ಲಿನ ಹಾಳುಬಾವಿಯೊಂದಕ್ಕೆ ಭಾನುವಾರ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಬೋನಿನಲ್ಲಿ ಹಿಡಿದು ಬೆಂಗಳೂರಿನ ಹೆಬ್ಬಾಳದ ವನ್ಯಪ್ರಾಣಿಗಳ ಆಸ್ಪತ್ರೆಗೆ ಸೇರಿಸಿದ್ದಾರೆ. 
ಸುಮಾರು ಎರಡು ವರೆ ವರ್ಷದ ಚಿರತೆಯು ಆಹಾರಕ್ಕಾಗಿ ಬೆಕ್ಕನ್ನು ಹಿಡಿಯುವ ರಭಸದಲ್ಲಿ ಮಾಕುವಳ್ಳಿ ಸಮೀಪದ ಹಾಳುಬಾವಿಯೊಂದಕ್ಕೆ ಬಿದ್ದ ಪರಿಣಾಮ ಚಿರತೆಯ ಕಾಲಿಗೆ ಗಾಯವಾಗಿತ್ತು, ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗುಣ ಪಡಿಸಿದ ನಂತರ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದಿದ್ದಾರೆ. 
ಈ ಕಾಯರ್ಾಚರಣೆಯಲ್ಲಿ ತಿಪಟೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರಪ್ರಸಾದ್, ಬೆಂಗಳೂರಿನ ಪಶುವೈದ್ಯಾಧಿಕಾರಿ ಡಾ.ಅರುಣ್, ಶೂಟರ್ ರಮೇಶ್, ವಲಯ ಅರಣ್ಯಾಧಿಕಾರಿ ಪಿ.ಹೆಚ್.ಮಾರುತಿ, ವಲಪಾಲಕರುಗಳು ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಹೆಚ್ಚುತ್ತಿರುವ ಕರಡಿ,ಚಿರತೆ ದಾಳಿ: ತಾಲೂಕಿನ ಹಂದನಕೆರೆ, ಹುಳಿಯಾರು ಹೋಬಳಿಗಳ ಗಡಿ ಭಾಗದಲ್ಲಿ ಕರಡಿಗಳು ಗ್ರಾಮಸ್ಥರ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ, ಕಂದಿಕೆರೆ ಹೋಬಳಿಯ ಮದಲಿಂಗನ ಕಣಿವೆ ಭಾಗ ಹಾಗೂ ಶೆಟ್ಟೀಕೆರೆ ಹೋಬಳಿಯ ಭಾಗಗಳಲ್ಲಿ ಚಿರತೆಗಳ ಹಾವಳಿ ಹೆಚ್ಚುತ್ತಿದೆ, ಇದರಿಂದ ಸಾಕಷ್ಟು ಜನರಿಗೆ ಸಾವು-ನೋವುಗಳು ಸಂಭವಿಸಿದರೆ ಸಂತ್ರಸ್ಥರಿಗೆ ಜನಪ್ರತಿನಿಧಿಗಳು ಅಥವಾ ಆ ಭಾಗದ ರಾಜಕಾರಣಿಗಳು ತಮ್ಮ ಕೈಲಿದ್ದಷ್ಟು ಹಣಕೊಟ್ಟು ಪೋಟೊ ತೆಗೆಸಿಕೊಂಡು ಅದನ್ನು ಮಾಧ್ಯಮದವರಿಗೆ ಕೊಟ್ಟು ತಮ್ಮ ಪ್ರಚಾರ ಪ್ರಿಯತೆಯನ್ನು ಮೆರೆಯುತ್ತಾರೆ ಹೊರತು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ. ಇದೇ ರೀತಿ ಕಾಡು ಪ್ರಾಣಿಗಳು ನಾಡಿನೊಳಕ್ಕೆ ಬರುವುದು ಹೆಚ್ಚಾದರೆ ಹಳ್ಳಿಯಲ್ಲಿನ ಜನ,ಜಾನುವಾರುಗಳ ಪ್ರಾಣಕ್ಕೆ ಸಂಕಷ್ಟ ತಪ್ಪಿದಲ್ಲ. 

ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು
ಚಿಕ್ಕನಾಯಕನಹಳ್ಳಿಫೆ.05 : ಯುಪಿಎ ಸಕರ್ಾರದ ಜನವಿರೋಧಿ ನಿಲುವುಗಳು ಹಾಗೂ ರಾಜ್ಯ ಬಿಜೆಪಿಯ ಜನಪರ ಕಾರ್ಯಕ್ರಮಗಳು ಜನರಿಗೆ ಅರ್ಥವಾಗಿದೆ, ನಮ್ಮ ಪ್ರಣಾಳಿಕೆಯಲ್ಲಿನ ಶೇ.85ರಷ್ಟು ಆಶ್ವಾಸನೆಗಳನ್ನ ಸಕರ್ಾರ ಈಡೇರಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಹೇಳಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ನೋವು ತರುತ್ತಿವೆ ಈ ಗೊಂದಲಗಳನ್ನು ಆಂತರಿಕವಾಗಿ ಪರಿಹಾರ ಮಾಡಿಕೊಂಡಿದ್ದರೆ ಅಭಿವೃದ್ದಿ ಹೆಚ್ಚುತ್ತಿತ್ತು, 35 ರಿಂದ 40 ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ಚುನಾವಣಾ ತಂತ್ರವಾಗಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ,  ಆಧಾರ್ ಅರಿವಿನ ಪಾದಯಾತ್ರೆಗಳನ್ನು ಮಾಡುತ್ತಿವೆ, ಜ್ವಲಂತ ಸಮಸ್ಯೆಗಳು ಇವರಿಗೆ ನೆನಪಾಗಲಿಲ್ಲ,  ಇವು ಜನರನ್ನು ದಿಕ್ಕುತಪ್ಪಿಸುವ ಕಾರ್ಯಕ್ರಮಗಳು, ನಿರಂತರವಾಗಿ ಡಿಸೆಲ್,ಪೆಟ್ರೋಲ್ ಬೆಲೆಗಳನ್ನು ಏರಿಸುತ್ತಿದ್ದು, ತಪ್ಪು ಆಥರ್ಿಕ ನೀತಿಗಳನ್ನು ಕೈಗೊಳ್ಳುತ್ತಿರುವುರಿಂದ  ಕೇಂದ್ರ ಸಕರ್ಾರವು ಜನರ ಆಕ್ರೋಶಕ್ಕೆ ತುತ್ತಾಗಿದೆ ಎಂದರು.
ಫೆಬ್ರವರಿ 28ರೊಳಗಾಗಿ  ಮತಗಟ್ಟೆಯ ಅಭಿಯಾನ ಮತ್ತು ಮಾಚರ್್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಬೃಹತ್ ಸಮಾವೇಶ ನಡೆಸಿ ಬಿಜೆಪಿ ಸಕರ್ಾರದ ಸಾಧನೆಗಳನ್ನು ಮತ್ತು ಕೇಂದ್ರ ಸಕರ್ಾರದ ವೈಪಲ್ಯಗಳನ್ನು ಮತದಾರರಿಗೆ ಅರ್ಥ ಮಾಡಿಸುತ್ತೇವೆ ಎಂದು ನುಡಿದರು. 
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಂಕರಪ್ಪ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಕವಿತಾಕಿರಣ್ಕುಮಾರ್, ಗಂಗಾಧರ್, ರಾಮಣ್ಣ, ಮುಂತಾದವರು ಉಪಸ್ಥಿತರಿದ್ದರು.
ಗುಡಿಸಲುಗಳು ಭಸ್ಮ
ಚಿಕ್ಕನಾಯಕನಹಳ್ಳಿ,ಫೆ.05 : ಪಟ್ಟಣದ ಹುಳಿಯಾರು ಗೇಟಿನ ಬಳಿ ದೊಂಬದಾಸರು ವಾಸವಾಗಿರುವ 15ಗುಡಿಸುಲುಗಳ ಪೈಕಿ 3ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಸುಮಾರು ಎರಡು ಲಕ್ಷರೂಗಳ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.
ವಾಡರ್್ ನಂ.23 ಮಾರುತಿ ನಗರದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಭಾಗ್ಯಮ್ಮ, ಜಯಮ್ಮ ಮತ್ತು ಶಿವಣ್ಣ ಎಂಬುವರ ಮನೆಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಬಹುತೇಕವಾಗಿ ಕುಟುಂಬಗಳು ಊರೂರು ಅಲೆಯುತ್ತ ಏರುಪಿನ್ನ, ಬಾಚಣಿಗೆ, ಮಾರುವ ಕಾಯಕದಲ್ಲಿ ತೊಡಗಿರುವುದರಿಂದ ಘಟನೆ ಸಂಭವಿಸಿದಾಗ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಮತ್ತು ಅಗ್ನಿಶಾಮಕ ಠಾಣೆ ಹತ್ತಿರದಲ್ಲೇ ಇದ್ದುದರಿಂದ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿ ಆಗಬಹುದಾಗಿದ್ದ ಹೆಚ್ಚು ಅನಾಹುತವನ್ನು ತಪ್ಪಿಸಿಸಿದರು ಎಂದು ತಾಲ್ಲೂಕು  ಅಲೆಮಾರಿ ಜನಾಂಗ ಸಂಘದ  ಅಧ್ಯಕ್ಷ ರಾಜಣ್ಣ ತಿಳಿಸಿದರು.  
ಘಟನೆ ನಡೆದ ಸ್ಥಳಕ್ಕೆ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಹಶೀಲ್ದಾರ್ ಗೀತ, ನಿರೀಕ್ಷಕ ರವಿಕುಮಾರ್, ಶಿವಣ್ಣ, ಶಿವಶಂಕರ್ ಮುಂತಾದವರು ಭೇಟಿ ನೀಡಿದ್ದರು. 
ಹಿಂದಿನ ಇ.ಓ.ದಯಾನಂದ್ರವರು ಸಭೆಗೆ ಕರೆಸದಿದ್ದರೆ ತಾ.ಪಂ.ಕಛೇರಿ ಮುಂದೆ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರ ಪ್ರತಿಭಟನೆಯ ಬೆದರಿಕೆ  
ಚಿಕ್ಕನಾಯಕನಹಳ್ಳಿ,ಫೆ.06 : ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ನಡೆಯಲಾಗಿದೆ ಎನ್ನಲಾದ ಏಕಪಕ್ಷೀಯ ವರ್ತನೆ ಬಗ್ಗೆ ಹಿಂದಿನ ಇ.ಓ ದಯಾನಂದ್ರವರಿಗೆ ನೋಟಿಸ್ ಜಾರಿ ಮಾಡಿರುವುದು ಕಾನೂನು ರೀತಿಯಲ್ಲಿ ಸಮರ್ಪಕವಾಗಿಲ್ಲವಾದ್ದರಿಂದ  ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಇ.ಓ ದಯಾನಂದ್ರವರನ್ನು ಸಭೆಗೆ ಕರೆಸಬೇಕು ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಕಾಯರ್ಾಲಯದ ಮುಂದೆ ತಾ.ಪಂ.ಸದಸ್ಯರು ಹಾಗೂ ಜಿ.ಪಂ.ಸದಸ್ಯರೊಡನೆ ಪ್ರತಿಭಟನೆ ಕೂರುವುದಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ತಿಳಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಯ ಎರಡನೇ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು. 
ಕಳೆದ ಬಾರಿ ಜಾಗೃತಿ ಸಮಿತಿ ಸಭೆಗೆ ಹಿಂದಿನ ಇ.ಓದಯಾನಂದ್ರವರನ್ನು ಕರೆಸಿ ಸಭೆ ನಡೆಸುವಂತೆ ತಿಳಿಸಿದರೂ ಈಗ ನಡೆಯುತ್ತಿರುವ ಸಭೆಗೆ ಅವರು ಬಂದಿರದ ಬಗ್ಗೆ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಲೋಹಿತಬಾಯಿ, ತಾ.ಪಂ.ಸದಸ್ಯ ಶಶಿಧರ್ ಆಕ್ಷೇಪಿಸಿದರು. 
ಕಳೆದ ಬಾರಿ ತಿಳಿಸಿದ್ದರೂ ಇ.ಓ.ದಯಾನಂದ್ರವರು ಆಗಮಿಸಿದ ಬಗ್ಗೆ ಈಗಿನ ಇ.ಓ ತಿಮ್ಮಯ್ಯರವರಿಗೆ ತರಾಟೆಗೆ ತೆಗೆದುಕೊಂಡ ಸದಸ್ಯರು ನಮ್ಮ ಕಣ್ಣೊರೆಸಲು ಇ.ಓ ರವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದರು ಆದರೆ  ಹಿಂದಿನ ಇ.ಓರೊಡನೆ ನೀವೂ ಶಾಮೀಲಾಗಿರುವುದರಿಂದ ನೋಟಿಸ್ ನೀಡುವ ವಿಷಯದಲ್ಲಿ ಸರಿಯಾಗಿ ನೀಡಿಲ್ಲ ಎಂದು ದೂರಿದರು.
ಹಿಂದಿನ ಬಾರಿ ನಡೆದ ಸಭೆಯಲ್ಲಿ ಸಭೆ ಮುಗಿದಿದ್ದರೂ ಅದರ ಜೊತೆಗೆ ಇನ್ನಿತರ ವಿಷಯಗಳನ್ನು ಸೇರಿಸಿ ಇ.ಓ, ಶಾಸಕರೊಂದಿಗೆ ಸಹಿ ಹಾಕಿರುವ ಬಗ್ಗೆ ವಿವರಣೆ ಕೇಳಿ, ನಂತರ ಈ ಬಗ್ಗೆ ಕೂಲಂಕುಶವಾಗಿ ವಿವರಣೆ ಬರಬೇಕು ಎಂದು ಸದಸ್ಯರು ಪಟ್ಟು ಹಿಡಿದಾಗ ದೂರವಾಣಿಯ ಮೂಲಕ ಶಾಸಕರನ್ನು ಇ.ಓ ಭೇಟಿ ಮಾಡಿ ಮುಂದಿನ ಸಭೆ ನಡೆಯುವ ದಿನಾಂಕವನ್ನು ಕೇಳಿ ತಿಳಿಸುತ್ತೇನೆ ಎಂದು ಸದಸ್ಯರಿಗೆ ತಿಳಿಸಿದರು.
ಸದಸ್ಯರು ದೂರುತ್ತಿರುವ ಬಗ್ಗೆ ಪತ್ರಕರ್ತರು ಇ.ಓ ತಿಮ್ಮಯ್ಯರವರನ್ನು ಸಂಪಕರ್ಿಸಿದಾಗ, ಹಿಂದಿನ ಅಜೆಂಡಾದಲ್ಲಿ ಏನು ನಡೆದಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ, ಹಿಂದಿನ ಸಭೆಯಲ್ಲಿ ನಡೆದ ಅಜೆಂಡದಲ್ಲಿ ಸದಸ್ಯರೆಲ್ಲಾ ತೀಮರ್ಾನ ಮಾಡಿ ನೀಡಿದ ವಿಷಯವನ್ನೇ ನಾನು ಹಿಂದಿನ ಇ.ಓರವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.  
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಮಂಜುಳ, ನಿಂಗಮ್ಮ ತಾ.ಪಂ.ಸದಸ್ಯರಾದ, ಶಶಿಧರ್, ನವೀನ್, ಬಿ.ಬಿ.ಪಾತೀಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಮತ್ತಿತರರು ಉಪಸ್ಥಿತರಿದ್ದರು. 

ಚಿ.ನಾ.ಹಳ್ಳಿಯಲ್ಲಿ ಶ್ರೀ.ಕ್ಷೇ.ಧರ್ಮಸ್ಥಳ ಸಂಸ್ಥೆವತಿಯಿಂದ  ಫೆ.10,11 ಅರ್ಥಗಭರ್ಿತ ಕೃಷಿ ಉತ್ಸವ
ಚಿಕ್ಕನಾಯಕನಹಳ್ಳಿ,ಫೆ.06 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಇದೇ ಫೆಬ್ರವರಿ 10 ಮತ್ತು  11ರ ಎರಡು ದಿನಗಳ ಕಾಲ ಕೃಷಿ ಉತ್ಸವ ನಡೆಯಲಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು. 
ಎರಡು ದಿನಗಳ ಕಾಲ ನಡೆಯುವ ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳುವ ರೈತರಿಗೆ, ಸಾರ್ವಜನಿಕರಿಗೆ ಸಮಗ್ರ ಕೃಷಿ ಪದ್ದತಿ, ಕುರಿ ಸಾಕಾಣಿಕೆ ಸವಾಲು ಸಾಧ್ಯತೆ , ಮೌಲ್ಯವಧರ್ಿತ ಸಾವಯುವ ಗೊಬ್ಬರ, ವಾಣಿಜ್ಯ ಮತ್ತು ಅಲ್ಪಾವಧಿ ಬೆಳೆಗಳ ಅವಕಾಶ, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ ಹಾಗೂ  ಮಹಿಳೆಯರು ಸುಖಿಸಂಸಾರ, ಸ್ವಾಸ್ಥ್ಯಸಮಾಜ ನಿಮರ್ಾಣದಲ್ಲಿ ಅವರ ಪಾತ್ರಗಳ ಬಗ್ಗೆ ವಿಶೇಷವಾಗಿ ತಿಳಿಯಬಹುದು ಎಂದರಲ್ಲದೆ ಈ ಸಂದರ್ಭದಲ್ಲಿ ಜಾನುವಾರು, ಶ್ವಾನ, ಮತ್ತು ಕುಕ್ಕಟ ಪ್ರದರ್ಶನ, ಪರಿಣಿತರಿಂದ ವಿಚಾರಗೋಷ್ಠಿ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು 10ರ ಸೋಮವಾರ ಬೆಳಗ್ಗೆ 10ಕ್ಕೆ ಏರ್ಪಡಿಸಿದ್ದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಟ್ರಸ್ಟಿ ಡಿ.ಸುರೇಂದ್ರಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ನಾರಾಯಣಗೌಡ ಕರಕುಶಲ ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ಬಿ.ಎಸ್.ಆರ್.ಪಕ್ಷದ ಜಿಲ್ಲಾಧ್ಯಕ್ಷ ಜಿ.ರಾಮಾಂಜನೇಯ ವಸ್ತುಪ್ರದರ್ಶನ
ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೆ.ಎಂ.ಎಲ್ ಎಸ್.ಎಲ್.ಶಾಂತಕುಮಾರ್ ಉಪಸ್ಥಿತರಿರುವರು.
ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಮೊದಲ ಗೋಷ್ಠಿಯಲ್ಲಿ 'ನಮ್ಮ ಕೃಷಿ ಬದುಕಿನಲ್ಲಿರುವ ಅವಕಾಶಗಳು, ಸಮಗ್ರ ಕೃಷಿ ಪದ್ದತಿ ಹಾಗೂ ಸಾವಯವ ಕೃಷಿ ವಿಷಯವಾಗಿ ನಡೆಯುವ ಗೋಷ್ಠಿಯಲ್ಲಿ   ಪ್ರಾ.ಸ.ಕೃ.ಬ್ಯಾಂಕ್ನ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು ಕೃಷಿ ರಂಗ ವಿಭಾಗದ ಪ್ರಸಾರ ನಿವರ್ಾಹಕ ಡಾ.ವಿಜಯ್ಅಂಗಡಿ ಸಂಪನ್ಮೂಲ ವ್ಯಕ್ತಿಗಳು.  2ರಿಂದ 3.30ರವರೆಗೆ ವಿಚಾರಗೋಷ್ಠಿ2 ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಸಂಪನ್ಮೂಲ ವ್ಯಕ್ತಿ ಪ್ರಿಸ್ಟೈನ್ ಆಗ್ಯರ್ಾನಿಕ್ ವ್ಯವಸ್ಥಾಪಕ ನಿದರ್ೇಶಕ ಕೆ.ಸಿ.ರಘು, , 3.30ರಿಂದ 4.30ರವರೆಗೆ ವಿಚಾರಗೋಷ್ಠಿ3 ಹಸಿರು ಸೇನೆಯ ಪ್ರಧಾನ ಕಾರ್ಯದಶರ್ಿ ಸತೀಶ್ಕೆಂಕೆರೆ ಅಧ್ಯಕ್ಷತೆ ವಹಿಸಲಿದ್ದು ಕೆ.ವಿ.ಕೆ ಸಂಯೋಜಕ ಡಾ.ಜಿ.ಎಂ.ಸುಜಿತ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. 
11ರ ಸೋಮವಾರ ಬೆಳಗ್ಗೆ 10ಕ್ಕೆ ಜಾನುವಾರು ಶ್ವಾನ ಮತ್ತು ಕುಕ್ಕಟ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನಡೆಸಲಿದ್ದು ಜಿ.ಹಾ.ಒಕ್ಕೂದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 11ರಿಂದ1ವಿಚಾರಗೋಷ್ಠಿ 12.30ರಿಂದ 2ನೇ ವಿಚಾರಗೋಷ್ಠಿ , 2ರಿಂದ 3ನೇ ವಿಚಾರಗೋಷ್ಠಿ ನಡೆಯಲಿದ್ದು  ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. 
ಈ ಸಂದರ್ಭದಲ್ಲಿ ಕೃಷಿ ಉತ್ಸವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ.ಬಿ.ನಾಗರಾಜು, ಉಪಾಧ್ಯಕ್ಷರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಎಸ್.ನಟರಾಜು, ಯಳನಡು ಗುರುಪ್ರಸಾದ್, ಪ್ರಕಾಶ್ ಉಪಸ್ಥಿತರಿದ್ದರು.