Friday, May 6, 2016


ನೀರಿನ ಕೊಳಾಯಿಗಳಿಗೆ ಸೆಂಟರ್ ಲಾಕ್ ಅಳವಡಿಕೆ : ಮುಖ್ಯಾಧಿಕಾರಿ
ಚಿಕ್ಕನಾಯಕನಹಳ್ಳಿ : ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ 178 ಸಾರ್ವಜನಿಕ ನೀರಿನ ಕೊಳಾಯಿಗಳಿಗೆ ಸೆಂಟರ್ ಲಾಕ್ ಅಳವಡಿಸುವ ಮೂಲಕ ವ್ಯಯವಾಗುತ್ತಿದ್ದ 3ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡಿ ಸಾರ್ವಜನಿಕರಿಗೆ ನೀಡಲಿದ್ದೇವೆ ಎಂದು ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ತಿಳಿಸಿದರು.
ಕಳೆದ ವಾರ ಜಿಲ್ಲಾಧಿಕಾರಿ ಪಿ.ಮೋಹನ್ರಾಜ್ ಬರಗಾಲದ ಹಿನ್ನಲೆಯಲ್ಲಿ ಪುರಸಭೆಯಲ್ಲಿ ಸಭೆ ನಡೆಸಿ ಪಟ್ಟಣದ ಕೊಳಾಯಿಗಳಲ್ಲಿರುವ ರೈಸಿಂಗ್ ಕೊಳಾಯಿಗಳನ್ನು ತೆರವುಗೊಳಿಸಿದರೆ ನೀರು ಉಳಿತಾಯ ಮಾಡಬಹುದು ಎಂದು ನೀಡಿದ ಸೂಚನೆ ಮೇರೆಗೆ ಕೊಳಾಯಿಗಳಿಗೆ ಸೆಂಟರ್ ಲಾಕ್ನ್ನು ಪಟ್ಟಣದ 23 ವಾಡರ್್ಗಳಲ್ಲಿರುವ ಸಾರ್ವಜನಿಕ ಕೊಳಾಯಿಗಳಿಗೆ ಅಳವಡಿಸಿ ನೀರನ್ನು ಉಳಿತಾಯ ಮಾಡುತ್ತಿದ್ದೇವೆ ಎಂದರಲ್ಲದೆ ಕೊಳಾಯಿಗಳಿಗೆ ಅಳವಡಿಸಿರುವ ಸೆಂಟರ್ ಲಾಕ್ನ್ನು ಕಳ್ಳತನವಾಗದಿರುವಂತೆ ಆಯಾ ಸ್ಥಳೀಯ ನಾಗರೀಕರು ಗಮನ ಹರಿಸಬೇಕು ಹಾಗೂ ಪುರಸಭೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರು ವಿತರಕ ರಾಮದಾಸು, ನಯಾಜ್ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಸಂಸ್ಥಾಪನಾ ದಿನಾಚಾರಣಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಮೇ.05 : ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಲಾಗುವ ಮುಖ್ಯ ನಿರ್ಣಯಗಳನ್ನು  ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಸಾಹಿತಿಗಳು ಬಹುಜನರ ಆಶೋತ್ತರಗಳನ್ನು ಜಾರಿಗೆ ತರುವ ಸಾಂಸ್ಕೃತಿಕ ರಾಜಕಾರಣಕ್ಕೆ ಕೈ ಹಾಕದೇ ಇರುವುದೇ ಇದಕ್ಕೆ ಕಾರಣ, ಇಂದಿನ ಯುವಕರು ಇಂತಹ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಪ್ರತಿಪಾದಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮವನ್ನು ಕವನ ವಾಚಿಸುವ ಮೂಲಕ ಉದ್ಘಾಟಿಸಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ದೊಡ್ಡ ನಿಧರ್ಾರಗಳನ್ನು ತೆಗೆದುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದೆ ಎಂದರು.
ಗಾಂಧೀಜಿ ಹೇಳಿದಂತೆ ಸ್ವಾತಂತ್ರ್ಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಸರ್ಜನೆಯಾಗಿದ್ದರೆ ದೇಶದ ರಾಜಕಾರಣಕ್ಕೆ ಮರುಹುಟ್ಟು ಸಿಗುತ್ತಿತ್ತು, ನೂರು ವರ್ಷ ಹಳೆಯದಾಗಿರುವ ಕನ್ನಡ ಸಾಹಿತ್ಯ ಪರಿಷತ್ಗೂ ಮರುಹುಟ್ಟು ನೀಡುವ ಅವಶ್ಯಕತೆ ಇದೆ. ಹಳೆ ತಲೆಮಾರು ಮುಗಿದಂತೆ ಪ್ರತಿಭೆಗಳು ಕಳೆದು ಹೋಯಿತು ಎಂದು ಭಾವಿಸುವುದಕ್ಕಿಂತ ಹೊಸ, ಹೊಸ ಪ್ರತಿಭೆಗಳನ್ನು ಹುಡುಕಿ ಹೊರ ತೆಗೆಯುವುದು ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದರು.  
ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಲ್ಲೇ ದೋಷವಿದೆ, ನದಿಗಳ ಆಧಾರದಲ್ಲಿ ರಾಜ್ಯಗಳ ವಿಂಗಡಣೆ ಕಲ್ಪನೆ ಸರಿಯಾಗಿತ್ತು ಎಂದ ಅವರು ನಾಲ್ವಡಿ ಕೃಷ್ಣರಾಜರು ಬಂಗಾಳದ ಪ್ರವಾಸವಿದ್ದಾಗ ಅಲ್ಲಿನ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ನ್ನು ಸ್ಥಾಪಿಸಿದರು ಎಂದರು.
  ಕಸಾಪ ತಾಲ್ಲೂಕು ಘಟಕದ ಅಧ್ಯತಕ್ಷೆ ಎನ್.ಇಂದಿರಮ್ಮ ಮಾತನಾಡಿ,ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ತೀನಂಶ್ರೀ ಭವನ ಪೂರ್ಣಗೊಳಿಸುವುದು, ಕನ್ನಡ ಶಾಲೆ ಉಳಿಸಲು ಆಂದೋಲನ ರೂಪಿಸಿರುವುದು, ತಾಲ್ಲೂಕಿನ ಪರಿಸರ, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವುದು, ಮಹಿಳಾ ಸಮಾನತೆ, ಮಕ್ಕಳ ಸಾಹಿತ್ಯ ಹಾಗೂ ಯುವಜನತೆಯನ್ನು ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
  ಕಸಾಪ ಪದಾಧಿಕಾರಿಗಳ ಆಯ್ಕೆ : ಇದೇ ಸಂದರ್ಭದಲ್ಲಿ ತಾಲ್ಲೂಕು ಕಸಾಪ ಘಟಕಕ್ಕೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷೆ ಎನ್.ಇಂದಿರಮ್ಮ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕಾರ್ಯದಶರ್ಿಗಳಾಗಿ ನಾಗಕುಮಾರ್ ಚೌಕಿಮಠ್ ಮತ್ತು ಕಂಟಲಗೆರೆ ಗುರುಪ್ರಸಾದ್, ಖಜಾಂಚಿ ರಾಮಕೃಷ್ಣಪ್ಪ. ಸಂಘ ಸಂಸ್ಥೆಗಳ ಪ್ರತಿನಿಧಿ ಸಿ.ಬಿ.ರೇಣುಕಸ್ವಾಮಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪ್ರತಿನಿಧಿ ಕೆ.ಜಿ.ಶಂಕರಪ್ಪ, ಮಹಿಳಾ ಪ್ರತಿನಿಧಿ ಎಲ್.ಜಯಮ್ಮ, ಸದಸ್ಯರು ಸಿ.ಡಿ.ಚಂದ್ರಶೇಖರ್, ಬಿ.ಎಸ್.ರಾಧಾಕೃಷ್ಣ, ಸುಪ್ರೀಂ ಸುಬ್ರಮಣ್ಯ, ಕಲಾವಿದ ಗೌಸ್ ಹಾಗೂ ಎಂ.ಜಯಮ್ಮರವರನ್ನು ಆಯ್ಕೆ ಮಾಡಲಾಯಿತು.

                                      ಜನಜಾಗೃತಿ ಧರ್ಮ ಸಮಾರಂಭ
ಚಿಕ್ಕನಾಯಕನಹಳ್ಳಿ,ಮೇ.5:  ದ್ರಾವಿಡರ ಭಕ್ತಿ, ಮುಸ್ಲಿಂ ನಿಷ್ಠೆ, ಬೌದ್ಧರ ಸಮತೆ, ಜೈನರ ಅಹಿಂಸೆ, ಕ್ರೈಸ್ತರ ಕರುಣೆ ಸಂಗಮವಾದರೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿ ವಾಣಿಗೆ ಅರ್ಥ ಬರುತ್ತದೆ ಎಂದು ರಂಭಾಪುರಿ ಪ್ರಸನ್ನ ರೇಣುಕ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕು ಹಂದನಕೆರೆ ಹೋಬಳಿ ಬಂದ್ರೆಹಳ್ಳಿಯಲ್ಲಿ ಗುರುವಾರ ನಡೆದ ಜನಜಾಗೃತಿ ಧರ್ಮಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ,  ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಹ್ಣತೆ, ರಾಷ್ಟ್ರಭಕ್ತಿ ಹಾಗೂ ಕ್ರಿಯಾಶೀಲ ಬದುಕು ಸಾಮರಸ್ಯ ಮತ್ತು ಸೌಹಾರ್ದಯುತ ವಾತಾವರಣ ಸೃಷ್ಠಿಸಬಲ್ಲದು, ಮನುಷ್ಯ ಭೌತಿಕವಾಗಿ ಆಧುನಿಕನಾಗುತ್ತಿದ್ದರೂ, ಆಧ್ಯಾತ್ಮಿಕವಾಗಿ ಹಿಂದಕ್ಕೆ ಚಲಿಸುತ್ತಿದ್ದಾನೆ. ಧರ್ಮ,ಜಾತಿ ಹಾಗೂ ವರ್ಗಗಳ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿದೆ. ಮನಸ್ಸುಗಳು ನಡುವೆ ಕಂದರ ಏರ್ಪಡುತ್ತಿದೆ. ರಾಜಕಾರಣಿಗಳು ಓಟಿನ ರಾಜಕಾರಣಕ್ಕಾಗಿ ಕಂದರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದರು.
   ಧರ್ಮದ ನಿಜ ಕಾರ್ಯ ಸಾಮರಸ್ಯದ ಬದುಕನ್ನು ಕಲಿಸುವುದೇ ಆಗಿದೆ.ಶಾಂತಿ ಹಾಗೂ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ.ವೀರಶೈವ ಧರ್ಮ ಕಾಯಕ ನಿಷ್ಠೆ ಹಾಗೂ ದಾಸೋಹ ತತ್ವಕ್ಕೆ ಒತ್ತು ನೀಡಿದೆ ಎಂದರಲ್ಲದೆ,    ಸಂಸ್ಕಾರ, ಸಚ್ಚಾರಿತ್ರ್ಯ ಮಾಡುವುದೇ ಗುರುಪೀಠಗಳ ಧ್ಯೇಯ.ಉತ್ತಮ ಮಳೆ ಬಂದು ರೈತರ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.
  ಹೊನ್ನವಳ್ಳಿ ಶಿವಪೀಠದ ಅಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಬದುಕಿಗೆ ಧರ್ಮ ದಿಕ್ಸೂಚಿ.ಸಂಸ್ಕೃತಿ,ಧರ್ಮ ಉಳಿದು ಬೆಳೆಯಲು ಎಲ್ಲರೂ ಶ್ರಮಿಸಬೇಕು ಎಂದರು.
  ದೊಡ್ಡಗುಣಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಪರಧರ್ಮ ಸಹಿಷ್ಣತೆ,ದೇಶಪ್ರೇಮ, ಬೆಳೆಸುವುದು ಪೀಠಾಧಿಪತಿಗಳ ಕರ್ತವ್ಯ ಎಂದರು.
ಸಮಾರಂಭಕ್ಕೂ ಮುನ್ನ  ಬಾಳೆಹೊನ್ನೂರು ಮಠದ ರಂಭಾಪುರಿ ಮಠದ ಪೀಠಾಧ್ಯಕ್ಷ ಪ್ರಸನ್ನ ರೇಣುಕ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಜಿಪಂ ಸದಸ್ಯ ರಾಮಚಂದ್ರಯ್ಯ ಭಾಗವಹಿಸಿದ್ದರು.