Monday, August 30, 2010

ತಾಲೂಕಿನ 48 ಶಾಲೆಗಳು ಮುಚ್ಚುವ ಅಂಚಿನಲ್ಲಿವೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಆ.30: ಉಳ್ಳವರು ಎಲ್ಲೊ ಹೋಗಿ ಓದುತ್ತಾರೆ ಬಡವರಿಗಾಗಿ ಇರುವ ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆ ಮಾಡಿ, ಕಾನ್ವೆಂಟ್ ಮಕ್ಕಳಿಗಿಂತ ಪ್ರಬುದ್ದರನ್ನಾಗಿ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ರೇವಣಪ್ಪನ ಮಠ ಸಕರ್ಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶಾಲೆಗೆ ಸ್ಥಳದಾನ ಮಾಡಿದ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತಗೆ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತರಲು ಶ್ರಮಿಸಬೇಕು ಎಂದ ರಲ್ಲದೆ, ತಾಲೂಕಿನ 48 ಸಕರ್ಾರಿ ಶಾಲೆಗಳು ಮುಚ್ಚುವ ಅಂಚಿನಲ್ಲಿದ್ದು ಶಿಕ್ಷಕರು ಮಕ್ಕಳ ಹಾಜರಾತಿಯ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು. ಸಕರ್ಾರಿ ಶಾಲೆಗಳಿಗೆ ವಿದ್ಯಾಥರ್ಿಗಳನ್ನು ಕರೆತರಲು ಸಕರ್ಾರ ಹೆಚ್ಚು ಉತ್ತೇಜನ ನೀಡುತ್ತಿದೆ, ಅದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ವಿದ್ಯಾಥರ್ಿಗಳನ್ನು ಶಾಲೆಗೆ ನಿರಂತರವಾಗಿ ಬರುವಂತೆ ಪ್ರೇರೆಪಿಸುತ್ತಿದೆ, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಕ್ಷಕರು ಜವಬ್ದಾರ ಹೊರಬೇಕೆಂದರು.
ವಾತರ್ಾ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಶಾಲೆಗಳಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಗುರು ಪ್ರಾರಂಭದಿಂದ ಅಂತ್ಯದವರೆವಿಗೂ ಅಡಿಪಾಯ ಹಾಕುವ ಒಬ್ಬ ಶಿಲ್ಪಿಯಂತೆ ಎಂದರಲ್ಲದೆ, ವಿದ್ಯಾಥರ್ಿಯ ಮನಸ್ಸನ್ನು ಅರಿತು ವಿದ್ಯೆ ಬೋದಿಸಿದಾಗ ಅವನ ಮನಸ್ಸಿನಲ್ಲಿ ಶಾಂತಿ ನೆಲಸಿ ವಿದ್ಯೆ ಕಲಿಯಲು ಮುಂದಾಗುತ್ತಾನೆ ಎಂದರು, ವಿದ್ಯಾಥರ್ಿಗಳನ್ನ ಪರಿಪೂರ್ಣತೆಗೆ ಕೊಂಡೊಯ್ಯುವಾಗ ಗುರುವು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕೆಂದರು.
ತುಮಕೂರು ಡಿ.ಡಿ.ಪಿ.ಐ.ಕಛೇರಿಯ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 12ಕ್ಕಿಂತ ಕಡಿಮೆ ವಿದ್ಯಾಥರ್ಿಗಳಿರುವ ಸಕರ್ಾರಿ ಶಾಲೆಗಳು 412 ಇದ್ದು, ಇವುಗಳ ಸ್ಥಿತಿ ಸಂಕಷ್ಟದಲ್ಲಿದೆ ಅಲ್ಲಿನ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರು ದಾಖಲಾತಿ ಮತ್ತು ಹಾಜರಾತಿಗಳ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದರಲ್ಲದೆ, ನಗರೀಕರಣ ಮತ್ತು ಇಂಗ್ಲೀಷೀಕರಣದಿಂದಾಗಿ ಸಕರ್ಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಶಿಕ್ಷಕರು ತಮಗೆ ನೀಡುತ್ತಿರುವ ಸಾಮಥ್ರ್ಯ ಆಧಾರಿತ ತರಬೇತಿಗಳನ್ನು ಶಾಲೆಗಳಲ್ಲಿ ಬಳಸಿಕೊಂಡು ಬೋಧಿಸಿದರೆ ವಿದ್ಯಾಥರ್ಿಗಳ ಕಲಿಕೆ ಉತ್ತಮಗೊಂಡು ಸಕರ್ಾರಿ ಶಾಲೆಗಳ ಕಡೆ ಪೋಷಕರು ಮುಖಮಾಡತ್ತಾರೆ ಎಂದರು. ಶಿಕ್ಷಣ ಹಕ್ಕು ಕಾಯಿದೆ ಪ್ರಖರವಾಗಿದ್ದು ವಿದ್ಯಾಥರ್ಿಗಳು ತಮ್ಮ ವಿದ್ಯಾರ್ಜನೆಯ ನ್ಯೂನತೆಗಳನ್ನು ನ್ಯಾಯಾಲಯಗಳಲ್ಲೂ ಪ್ರಶ್ನಿಸಬಹುದಾದಂತಹ ದಿನಗಳು ದೂರವಿಲ್ಲವೆಂದರು.
ಕಾರ್ಯಕ್ರಮದಲ್ಲಿ ಸ್ಥಳದಾನಿಗಳದ ಚೌಡಿಕೆ ಕರಿಯಪ್ಪ ಹಾಗೂ ಸಣ್ಣಮುದ್ದಮ್ಮನವರ ಭಾವಚಿತ್ರಗಳನ್ನು ಇ.ಎನ್.ಟಿ.ತಜ್ಞ ಡಾ.ಸಿ.ಗುರುಮೂತರ್ಿ ಹಾಗೂ ಸಿ.ಎಚ್.ಹನುಮಂತಯ್ಯ ಅನಾವರಣಗೊಳಿಸಿದರು. ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಸಿ.ಕೆ.ಪರಶುರಾಮಯ್ಯ, ಸಿ.ಆರ್.ನಾಗರತ್ನ ದಂಪತಿಗಳನ್ನು ಶಾಸಕರು ಸನ್ಮಾನಿಸದರು.
ಸಮಾರಂಭದಲ್ಲಿ ಸ್ವಾತಂತ್ರ ಹೋರಾಟಗಾರ ಮುರುಡಯ್ಯ, ಪುರಸಬಾಧ್ಯಕ್ಷ ರಾಜಣ್ಣ, ಬಿ.ಇ.ಓ ಸಾ.ಚಿ.ನಾಗೇಶ್, ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾ ಸದಸ್ಯರಾದ ಸುಮಿತ್ರಾ ಕಣ್ಣಯ್ಯ, ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಬಸವರಾಜು, ಸಿ.ಎಂ.ರಂಗಸ್ವಾಮಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಜಿ.ರೇವಣ್ಣ, ಮಾಜಿ ಪುರಸಭಾ ಅಧ್ಯಕ್ಷ ಕೆ.ರಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಶೀಲ ರಾಮಸ್ವಾಮಿ ಪ್ರಾಥರ್ಿಸಿದರೆ, ಮುಖ್ಯ ಶಿಕ್ಷಕಿ ತಿಲೋತ್ತಮೆ ಸ್ವಾಗತಿಸಿ, ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು, ಶಿಕ್ಷಕ ಬಸವರಾಜು ವಂದಿಸಿದರು.