Saturday, February 16, 2013


                        ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ    ಯೋಜನೆಗಳನ್ನು ಜಾರಿಗೆ: ಹೆಚ್.ಡಿ.ಕೆ

ಚಿಕ್ಕನಾಯಕನಹಳ್ಳಿ,ಪೆ.16 : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
    ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಯೋಗ ಮೇಳ, ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬುರವರ 43ನೇ ವರ್ಷದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿ ವಿಧವೆಯರಿಗೆ, ವಿಕಲಚೇತನರಿಗೆ ಹಾಗೂ  ಮದುವೆಯಾಗದೆ ಇರುವ ಹೆಣ್ಣುಮಕ್ಕಳಿಗೆ ಒಂದುವರೆ ಸಾವಿರ ರೂಪಾಯಿ ಮಾಸಶಾಸನ, ಗಭರ್ಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರಕ್ಕಾಗಿ ಒಂದು ವರ್ಷಗಳ ಕಾಲ ತಿಂಗಳ 5ಸಾವಿರ ರೂನಂತೆ ಭತ್ಯೆ ನೀಡುವುದಾಗಿ ತಿಳಿಸಿದರಲದಲ್ಲದೆ,  ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ಪಶುಆಹಾರ ನೀಡಲಾಗುದು ಎಂದರು.
 ತಮ್ಮ ಅಧಿಕಾರಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸಕರ್ಾರ ವಿವಿಧ ಸವಲತ್ತುಗಳ 9ಲಕ್ಷಕ್ಕೂ ಹೆಚ್ಚು ಮಾಸಾಶಸನಗಳನ್ನ ನಿಲ್ಲಿಸಿದೆ ನಮ್ಮ ಸಕರ್ಾರ ಅಧಿಕಾರಕ್ಕೆ ಬಂದರೆ ಪುನಃ ಆ ಎಲ್ಲಾ ಯೋಜನೆಗಳನ್ನು  ಜಾರಿಗೆ ತರುವುದಾಗಿ ತಿಳಿಸಿದರು.
    ಕೇಂದ್ರ ಸಕರ್ಾರದ ತಪ್ಪು ಆಥರ್ಿಕ ನೀತಿಯ ಕಾರಣ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಜೀವನ ನಡೆಸಲು ತತ್ತರಿಸುತ್ತಿದ್ದಾರೆ, ಖಾಸಗಿಕರಣ, ಉದಾರೀಕರಣದ ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಠಿಸುವುದು ಅಷ್ಟೋಂದು ಕಷ್ಟದ ಕೆಲಸವಲ್ಲ, ಖಾಸಗಿ ಕಂಪನಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಎಂಟು ಸಾವಿರದಿಂದ ಹತ್ತು ಸಾವಿರ ಸಂಬಳ ದೊರೆಯುತ್ತದೆ ಎಂದರಲ್ಲದೆ, ನಗರಗಳಲ್ಲಿನ ಸಿದ್ದ ಉಡುಪು ಕಾಖರ್ಾನೆಗಳಿಗೆ ಗುಳೆ ಹೋಗದಂತೆ ತಡೆಯಲು ಹೆಣ್ಣು ಮಕ್ಕಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಕಾಖರ್ಾನೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದರು.
    ಮಾಜಿ ಸಚಿವ ಬಂಡೆಪ್ಪಕಾಶೆಂಪೂರ್ ಮಾತನಾಡಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೂ ಜೆಡಿಎಸ್ ಪಕ್ಷಕ್ಕೆ ಜನಬೆಂಬಲ ದೊರೆತಿದ್ದು ಮುಂದಿನ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಶಾಸಕರು ಆಯ್ಕೆಯಾಗಿ ಸಕರ್ಾರ ರಚಿಸುವುದಾಗಿ ತಿಳಿಸಿದರು.
    ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿದ್ದು ರಾಜ್ಯದಲ್ಲಿಯೇ ಪ್ರಥಮ. ರಾಜ್ಯ ಹಾಗೂ ಕೇಂದ್ರ ಸಕರ್ಾರಗಳ ದುರಾಡಳಿತದಿಂದ ಅಕ್ಕಿ ಬೆಲೆ ಗಗನಕ್ಕೇರಿದೆ, ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಸಂಧ್ಯಾ ಸುರಕ್ಷಾ, ವಿಕಲಚೇತನರಿಗೆ ವಿಧಾನಸೌದದಲ್ಲಿ ಕೆಲಸ ನೀಡಿ ಅಭಿವೃದ್ದಿ ಕಾರ್ಯಗಳಿಗೆ ಗಮನ ಹರಿಸಿದರು ಎಂದರು.
    ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸ್ಥಳೀಯ ಪುರಸಭಾ ಚುನಾವಣೆಯನ್ನು ಸಕರ್ಾರ ಘೋಷಿಸಿದರ ಹಿನ್ನಲೆಯಲ್ಲಿ ಪಟ್ಟಣದಲ್ಲಿ ನಡೆಯಬೇಕಿದ್ದ ಉದ್ಯೋಗಮೇಳ, ಆರೋಗ್ಯತಪಾಸಣಾ ಶಿಬಿರವನ್ನು ಗೋಡೆಕೆಗೆ ಸ್ಥಳಾಂತರಿಸಲಾಯಿತು. ಇದರಿಂದ ರೋಗಿಗಳಿಗೆ ಹಾಗೂ ನಿರುದ್ಯೋಗಿ ಯುವರಿಕಗೆ ತೊಂದರೆಯಾಗಿರುವುದಕ್ಕೆ  ವಿಷಾದಿಸುತ್ತೇನೆ ಎಂದರು.   
    ಕಾರ್ಯಕ್ರಮದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷೆಪ್ರೇಮಮಹಾಲಿಂಗಯ್ಯ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಮಾಜಿ ಜಿ.ಪಂ.ಅಧ್ಯಕ್ಷ ಆನಂದರವಿ, ಜೆಡಿಎಸ್ ಮುಖಂಡರಾದ ಮೈಲಾರಪ್ಪ, ಲಿಂಗರಾಜು, ಮಹದೇವಪ್ಪ, ಚೌಡಾರೆಡ್ಡಿ, ಶಿರಾ ತಾ.ಪಂ.ಅಧ್ಯಕ್ಷೆ ಗಂಗಮ್ಮ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕೋ ಆಪರೆಟೀವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್, ತಾ.ಪಂ.ಸದಸ್ಯರಾದ ಹೇಮಾವತಿ, ಲತಾವಿಶ್ವೇಶ್ವರಯ್ಯ, ಚೇತನಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    ಕಣ್ಣಯ್ಯ ನಿರೂಪಿಸಿದರು, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ರಘುನಾಥ್ ಸ್ವಾಗತಿಸಿದರು. 

ಚಿಕ್ಕನಾಯಕನಹಳ್ಳಿ,ಫೆ.16 : ರಾಜ್ಯದಲ್ಲಿ ಸ್ಥಳೀಯ ಪುರಸಭೆ ನಗರಸಭೆ ಅಧಿಸೂಚನೆ ಸಕಾರ ಹೊರಡಿಸಿದ ಹಿನ್ನಲೆಯಲ್ಲಿ ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆಯಬೇಕಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ ಹಾಗೂ ಸಿ.ಬಿ.ಸುರೇಶ್ಬಾಬುರವರ ಹುಟ್ಟುಹಬ್ಬವನ್ನು ಗ್ರಾಮೀಣ ಪ್ರದೇಶವಾದ ಗೋಡೆಕೆರೆಗೆ ಸ್ಥಳಾಂತರಿಸಲಾಯಿತು.
    ಇದರಿಂದ ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾವಿರಾರು ರೋಗಿಗಳಿಗೆ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸುವರಿಗೆ ತೊಂದರೆಯಾಗಬಾರದು ಎಂದು ಮಿನಿ ವಾಹನಗಳು, ಬಸ್ಸುಗಳು ಹಾಗೂ ಲಾರಿಗಳಲ್ಲಿ ಗೋಡೆಕೆರೆಗೆ ಕರೆದೊಯ್ದು ಚಿಕಿತ್ಸೆ ಹಾಗೂ ಉದ್ಯೊಗ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು.