Wednesday, April 1, 2015


ದಬ್ಬೆಘಟ್ಟ ಹಾಗೂ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ       ವಿಜೃಂಭಣೆಯಾಗಿ ನೆರವೇರಿದ  ಜಾತ್ರಾಮಹೋತ್ಸವ,       ಅಗ್ನಿಕುಂಡ ಉತ್ಸವ.           
ಚಿಕ್ಕನಾಯಕನಹಳ್ಳಿ : ಪಟ್ಟಣದ ವಾಡರ್್4ರ  ದಬ್ಬೆಘಟ್ಟ ಗ್ರಾಮದ ಮರುಳಸಿದ್ದಸ್ವಾಮಿ ದೇವಾಲಯ ಹಾಗೂ ಪಟ್ಟಣದ ಹೊರವಲಯದ ನಿವರ್ಾಣಸ್ವಾಮಿ ಗದ್ದಿಗೆ ಬಳಿ ಜಾತ್ರಾಮಹೋತ್ಸವದ ಅಂಗವಾಗಿ ದೇವರ ಉತ್ಸವ  ಹಾಗೂ ಅಗ್ನಿಕುಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಪಟ್ಟಣದ ದಬ್ಬೆಘಟ್ಟದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾಮಹೋತ್ಸವ ನಡೆಯಿತು. ಸಾವಿರಾರು ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಮರುಳಸಿದ್ದಸ್ವಾಮಿಗೆ ಹಣ್ಣು, ಕಾಯಿಯನ್ನು ತಂದು ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು ಹಾಗೂ ಪಟ್ಟಣದ ದಿಬ್ಬದಹಳ್ಳಿ, ಬಾವನಹಳ್ಳಿ ಸಮೀಪದ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿಯೂ ಸಹ ಪ್ರತಿ ವರ್ಷದಂತೆ ದೇವರ ಪೂಜೆ ಹಾಗೂ ಅಗ್ನಿಕುಂಡ ಮಹೋತ್ಸವ ನೆರವೇರಿತು.
ನಂತರ ದೇವಾಲಯದ ಬಳಿ ಹಾಕಿದ್ದ ಅಗ್ನಿಕುಂಡಕ್ಕೆ ಉತ್ಸವ ಮೂತರ್ಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾದು ಹೊರಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಅಗ್ನಿಕೆಂಡದ ಮೇಲೆ ನಡೆದಾಡುವ ದೃಶ್ಯ ಭಕ್ತಾಧಿಗಳಲ್ಲಿ ಮೈನವರೀಳಿಸುವಂತಿತ್ತು, ಬೆಂಗಳೂರು , ತುಮಕೂರು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವರ ಅಗ್ನಿಕುಂಡದ ನಂತರ ದಾಸೋಹ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಮಾತನಾಡಿದ, ದಬ್ಬೆಘಟ್ಟದ ಗ್ರಾಮದ ಮುಖಂಡ ಶಿವಕುಮಾರ್, ಶ್ರೀ ಮರುಳಸಿದ್ದರು ಗ್ರಾಮಕ್ಕೆ ಬಂದು ನೆಲಸಿದ್ದರು ಎಂದು ಪ್ರತೀತಿ ಇದೆ, ಈ ಸಂದರ್ಭದಲ್ಲಿ ಕೆಂಪಮ್ಮ ಮಾರಿ ಬಂದು ಮಾನವರ ಹಾಗೂ ಪ್ರಾಣಿಗಳ ಆಹಾರ ಬೇಕೆಂದಾಗ ಮರುಳಸಿದ್ದರು ಕೊಡಲು ಸಾಧ್ಯವಿಲ್ಲ ಎಂದಾಗ, ಮಾರಿ ಕೆಂಡದ ಉಂಡೆಗಳನ್ನು ಸುರಿದಾಗ ಮರುಳಸಿದ್ದರು ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಮಾರಿಯಿಂದ ಕಾಪಾಡಿದರೆಂಬ ಪ್ರತೀತಿ ಇದೆ ಆದ್ದರಿಂದ ಪ್ರತಿ ವರ್ಷದ ಮರುಳಸಿದ್ದರಿಗೆ ಕೆಂಡದ ಸೇವೆಯನ್ನು ಸಲ್ಲಿಸಲಾಗುವುದು ಎಂದರು.
ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ ಉತ್ಸವ ಮೂತರ್ಿಯೊಂದಿಗೆ ಗ್ರಾಮ ದೇವತೆಗಳಾದ ಮಾವೂರದ ಯಲ್ಲಮ್ಮ, ದುರ್ಗಮ್ಮ, ಬ್ಯಾಲಕೆರೆಯಮ್ಮ, ಸೋಮದೇವರೊಂದಿಗೆ ಬಸವಣ್ಣ ಸೇರಿದಂತೆ ನಂಧಿಧ್ವಜ ಹೊತ್ತವರು ಅಗ್ನಿಕೊಂಡ ಹಾಯುವ ಮೂಲಕ ಜಾತ್ರಾಮಹೋತ್ಸವದಲ್ಲಿ ಭಕ್ತಿಯನ್ನು ಸಮಪರ್ಿಸುವ ಮೂಲಕ ವಿಜೃಂಭಣೆಯ ಮೆರಗು ತಂದರು. ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹಾಜರಿದ್ದು ಮುಖಡರುಗಳಾದ ಸಿ.ಬಸವರಾಜು ವಿವಿಧ ಜನಪ್ರತಿನಿಧಿಗಳು  ಗ್ರಾಮದ ಹಿರಿಯರಾದ ಗೋಪಾಲಯ್ಯ, ನಾಗಣ್ಣ ಹಾಗೂ ಭಕ್ತಾಧಿಗಳು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ರವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ :  ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಅವರಲ್ಲಿನ ಆದರ್ಶಗಳನ್ನು ಅರಿವು ಮೂಡಿಸಬೇಕಾದ ಅಧಿಕಾರಿಗಳಲ್ಲಿರುವ ನಿರಾಸಕ್ತಿಯಿಂದಾಗಿ ದಲಿತ ಮನಸ್ಸುಗಳನ್ನು ಕದಡಿದಂತೆ ಮಾಡುತ್ತಿದೆ ಎಂದು ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಪ್ಪ ಆಕ್ರೋಶ ವ್ಯಕ್ತಪಡಿಸಿದರು. 
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಡಾ||ಬಾಬು ಜಗಜೀವನರಾಂ ರವರ 108 ಹಾಗೂ ಡಾ||ಅಂಬೇಡ್ಕರ್ರವರ 124 ನೇ ಜಯಂತಿ ಆಚರಣೆಯನ್ನು ಒಟ್ಟಿಗೆ ಆಚರಿಸುವ ಸಲುವಾಗಿ ಕರೆದಿದ್ದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು,  ಭಾರತದ ಮಹಾನ್ ವ್ಯಕ್ತಿಗಳಾದ ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಇವರು ಈ ದೇಶದ ಅತ್ಯಮೂಲ್ಯ ಆಸ್ತಿಯಾಗಿದ್ದು ಇವರ ಜನ್ಮ ಆಚರಣೆಯನ್ನು ಸಕರ್ಾರ ಆಚರಿಸುವಂತೆ ಆದೇಶ ನೀಡಿದ್ದರೂ ಇಲ್ಲಿನ ಆಡಳಿತ ನಿರಾಸಕ್ತಿ ತೋರುತ್ತ ಬೇಜವಬ್ದಾರಿ ಎದ್ದು ಕಾಣುತ್ತಿದೆ. ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಿದ್ದರೂ ಅಧಿಕಾರಿಗಳೂ ಭಾಗವಹಿಸಿಲ್ಲ. ಅಧಿಕಾರಿಗಳು ಈ ಬಗ್ಗೆ  ಉದಾಸೀನದ ಮನೋಭಾವ ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳ ಪ್ರತಿ ನಾಗರೀಕರಿಗೂ ತಿಳಿಯುವಂತೆ ಮಾಡುವ ಆಚರಣೆಗೆ ಎಲ್ಲರ ಸಹಕಾರ ಬೇಕು. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗದ ಜನರಿಗೆ ಇಲಾಖೆಗಳಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ಪಡೆಯುವಂತೆ ಮಾಹಿತಿ ಅಗತ್ಯವಾಗಿದೆ. ಇಂತಹ ಜನ್ಮ ಆಚರಣೆಯ ಸಂದರ್ಭದಲ್ಲಿ ಶೋಷಿತ ವರ್ಗದವರನ್ನು ಒಂದು ಕಡೆ ಕಲೆಹಾಕಿ ಆ ಜನರಿಗೆ ಇವರ ಆದರ್ಶಗಳ ಬಗ್ಗೆ ತಿಳಿಸುವ ಕಾರ್ಯಕ್ರಮವಾಗಬೇಕು ಎಂದರು. 
   ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ ಮಹಾನ್ ವ್ಯಕ್ತಿಗಳ ಜನ್ಮ ಆಚರಣೆಗಳು ಸರ್ವಸಮಾಜಕ್ಕೂ ಆಗತ್ಯವಾದ ಆಚರಣೆಯನ್ನು ನಮ್ಮನ್ನಾಳುವ ಸಕರ್ಾರಗಳು ಕೇವಲ ಒಂದೊಂದು ಸಮಾಜಕ್ಕೆ ಅವರನ್ನು ಸೀಮಿತಗೊಳಿಸಿ ಆಚರಿಸುತ್ತಿರುವುದು ಖಂಡನಾರ್ಹ ವಿಷಯ, ಇವರುಗಳೇ ಸಮಾಜಗಳನ್ನು ಒಡೆದು ಅಳುವ ನೀತಿಗೆ ಹೋಗಿರುವುದರಿಂದ ನಮ್ಮ ನಾಯಕರ ಆಚರಣೆಯನ್ನು ಸಹ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘಟನೆಗೆ ಸಿಮಿತಗೊಳಿಸಿಬೇಡಿ ಎಂದು ಮನದಾಳದ ಆಕ್ರೋಶವನ್ನು ಬಿಚ್ಚಿಟ್ಟರು. 
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಕ್ಷಮ್ಮ ಮಾತನಾಡಿ ಒಂದು ಸಮಾಜಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲಾ ಆಚರಣೆಯ ಸಂದರ್ಭದಲ್ಲಿ ಭಾಗವಹಿಸಿದರೆ ಯಾರ ಅಡ್ಡಿಯೂ  ಇರುವುದಿಲ್ಲ ಎಲ್ಲರೂ ಒಟ್ಟಾಗಿ ಆಚರಿಸುವ ಆಚರಣೆಯಾಗಬೇಕು ಇದಕ್ಕೆ ಎಲ್ಲರ ಸಹಕಾರವೂ ಇದ್ದು ಅಧಿಕಾರಿಗಳ ಸಹಕಾರವು ನಮಗೆ ಸಿಗುತ್ತಿದೆ ಜೊತೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
 ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲತಾಕೇಶವಮೂತರ್ಿ ಪುರಸಭಾಧ್ಯಕ್ಷೆ ರೇಣುಕಮ್ಮ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ನಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ಶೆಟ್ಟಿ, ಬಿ.ಇ.ಓ ಕೃಷ್ನಮೂತರ್ಿ ಬೆಸ್ಕಾಂ ಎ.ಇ.ಇ.ರಾಜಶೇಖರ್, ಕೃಷಿ ಸಹಾಯಕ ನಿದರ್ೇಶಕ ಹೊನ್ನೆದಾಸೆಗೌಡ, ಕೃಷ್ಣನಾಯಕ್ ತಾಲ್ಲುಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಉಪಸ್ಥಿತರಿದ್ದರು.


ಹೆಚ್ಚುವರಿ ಶಿಕ್ಷಣರ ತಾತ್ಕಾಲಿಕ ಪಟ್ಟಿ ಪ್ರಕಟ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮಾ.31: 2014-15ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಥರ್ಿ, ಶಿಕ್ಷಕರ ಅನುಪಾತದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ತಾತ್ಕಾಲಿಕ ಪಟ್ಟಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ. ಕೃಷ್ಣಮೂತರ್ಿ ತಿಳಿಸಿದ್ದಾರೆ.
ಈ ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಮಥರ್ಿಸ ಬಲ್ಲಂತಹ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4ರ ಒಳಗೆ ಕಛೇರಿಯ ನೋಡಲ್ ಅಧಿಕಾರಿಗಳಿಗೆ ಮುದ್ದಾಂ ಸಲ್ಲಿಸುವುದು, ತಡವಾಗಿ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು.
ಬಿ.ಆರ್.ಪಿ ಮತ್ತು ಸಿ.ಆರ್.ಪಿ.ಹುದ್ದೆಗಳಿಗೆ ಪರೀಕ್ಷೆ: 2015-16ನೇ ಸಾಲಿನ ಸಿ.ಆರ್.ಪಿ. ಮತ್ತು ಬಿ.ಆರ್.ಪಿ. ಖಾಲಿ ಹುದ್ದೆಗಳನ್ನು ಭತರ್ಿ ಮಾಡುವ ಸಂಬಂಧ ಅರ್ಹ ಶಿಕ್ಷಕರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ. 
ಅಜರ್ಿ ಸಲ್ಲಿಸಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ 31.5.2015ಕ್ಕೆ 10 ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರಬೇಕು, ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಹುದ್ದಗಳಿಗೆ ಅಜರ್ಿ ಸಲ್ಲಿಸುವ ಶಿಕ್ಷಕರು ದಿ. 31.05.2015ಕ್ಕೆ ಐದು ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವುದು ಕಡ್ಡಾಯವಾಗಿರುತ್ತದೆ.
ದಿನಾಂಕ 31.05.215ಕ್ಕೆ ಗರಿಷ್ಟ ವಯೋಮಿತಿ 50 ವರ್ಷ ಮೀರಿರಬಾರದು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಹೆಚ್ಚಿನ ಮಾಹಿತಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಅಜರ್ಿ ಸಲ್ಲಿಸಲು ಕೊನೆ ದಿನಾಂಕ 16.04.2015, ಲಿಖಿತ ಪರೀಕ್ಷೆ 26.04.2015 ಅಜರ್ಿ ಸಲ್ಲಿಸುವ ಸ್ಥಳ ಕ್ಷೇತ್ರ ಸಮನ್ಯಯಾಧಿಕಾರಿಗಳು ಬಿ.ಆರ್.ಸಿ. ಕಛೇರಿ ಚಿ.ನಾ.ಹಳ್ಳಿ ಇಲ್ಲಿ ಸಂಪಕರ್ಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀನಂಶ್ರೀ ಭವನ ಶೀಘ್ರ ಪೂರ್ಣಗೊಳಿಸಲು ವಿಪ್ರ ಹಿತರಕ್ಷಣಾ ವೇದಿಕೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಏ.01 : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಕುಂಟುತ್ತಾ ಸಾಗುತ್ತಿರುವ ತೀ.ನಂ.ಶ್ರೀಕಂಠಯ್ಯ ಭವನ ಕಾಮಗಾರಿಯನ್ನು ತ್ವರಿತವಾಗಿ ಪೂರೈಸುವಂತೆ ಹಾಗೂ ತೀ.ನಂ.ಶ್ರೀ  ಭವನವನ್ನು ವಿಪ್ರ ಹಿತರಕ್ಷಣ ವೇದಿಕೆಗೆ ಹಸ್ತಾಂತರಿಸುವಂತೆ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ ಸಕರ್ಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ವಿಪ್ರ ಹಿತರಕ್ಷಣಾ ವೇದಿಕೆ ಮಾಸಿಕ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಶೆಟ್ಟಿಕೆರೆ ವಿಶ್ವನಾಥ್, ತಾಲ್ಲೂಕಿನ ತೀರ್ಥಪುರದ ಹೆಸರಾಂತ ಸಾಹಿತಿ  ತೀ.ನಂ.ಶ್ರೀಯವರ  ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ತೀ.ನಂ.ಶ್ರೀ ಭವನದಲ್ಲಿ ಸುಸ್ಸಜಿತ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು  ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಭವನ ನಿಮರ್ಿಸಬೇಕು, ಪ್ರತಿ ಸೋಮವಾರದಂದು ಇಲ್ಲಿ ನಡೆಯುತ್ತಿರುವ ಸಂತೆಯನ್ನು ಬೇರೆಡೆಗ ಸ್ಥಳಾಂತರಿಸಬೇಕು ಎಂದರು.
ತಾಲ್ಲೂಕಿವ ವಿಪ್ರ ಸಮುದಾಯದವರ ಶ್ರೇಯೋಭಿವೃದ್ದಿಗಾಗಿ ವಿಪ್ರ ಹಿತರಕ್ಷಣಾ ವೇದಿಕೆಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕಿನ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆಯಬೇಕೆಂದು ಸಧ್ಯ ನಡೆಯುವ ಜಾತಿಗಣತಿಯಲ್ಲಿ ಒಳಪಂಗಡಗಳನ್ನು ನಮೂದಿಸದೆ ಜಾತಿ ಸೂಚಕದಲ್ಲಿ ಬ್ರಾಹ್ಮಣ ಎಂದೆ ನಮೂದಿಸಿ ಎಂದು ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗುತ್ತಿದ್ದು ಆಥರ್ಿಕವಾಗಿ ಹಿಂದುಳಿದ ವಿಪ್ರ ಸಮಾಜದ ಅಭಿವೃದ್ಧಿಗಾಗಿ ಸ್ಥಾಪಿಸಲಿದ್ದು, ತಾಲ್ಲೂಕಿನಾದ್ಯಂತ ವಿಪ್ರ ಸಂಘ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿದ್ದು ಗಾಯಿತ್ರಿ ಪತ್ತಿನ ಸಹಕಾರ ಸಂಘಕ್ಕೆ  ಮುಖ್ಯ ಪ್ರವರ್ತಕರನ್ನಾಗಿ ಹುಳಿಯಾರಿನ ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ, ನೋಂದಣಿ ಕಾರ್ಯ ಪೂರ್ಣಗೊಂಡ ನಂತರ ತಾಲ್ಲೂಕಿನಾದ್ಯಂತ ಸಂಚರಿಸಿ ಷೇರು ಹಣವನ್ನು ಸಂಗ್ರಹಿಸಲಾಗುವುದು ಎಂದರು. 
 ಪಟ್ಟಣದ ಕೆರೆ ಬಳಿಯಲ್ಲಿ ಇರುವ ದಹನ ಕಾರ್ಯಕ್ಕೆ ನೆರವಾಗಲು ಸುಸಜ್ಜಿತ ಮುಕ್ತಿಧಾಮ ನಿಮರ್ಿಸಲು ತೀಮರ್ಾನಿಸಿದ್ದು ಮುಕ್ತಿಧಾಮ ಅಭಿವೃದ್ದಿ ಸಮಿತಿಯನ್ನು ರಚಿಸಲಾಗಿದ್ದು ಸ್ಮಶಾನ ಭೂಮಿಯ ಹಸ್ತಾಂತರಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ಈ ಮುಕ್ತಿಧಾಮಕ್ಕೆ 10ಲಕ್ಷ ರೂಪಾಯಿ ತಗಲುವ ಅಂದಾಜಿದ್ದು ದಾನಿಗಳ ನೆರವಿನಿಂದ ಕಾಮಗಾರಿ ನಡೆಸಲು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಿಪ್ರಹಿತರಕ್ಷಣಾ ವೇದಿಕೆ ಅಧ್ಯಕ್ಷ ನರೇಂದ್ರಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್, ಕಾರ್ಯದಶರ್ಿ ಮಧುಸೂದನ್ ರಾವ್, ಪದಾಧಿಕಾರಿಗಳಾದ ಸಿ.ಡಿ.ರವಿ, ತೀರ್ಥಪುರ ಶ್ರೀಕಂಠಪ್ರಸಾದ್, ಶ್ರೀನಿವಾಸ್,ರಂಗನಾಥಪ್ರಸಾದ್, ರಾಜೀವಲೋಚನ, ಸೂರ್ಯನಾರಾಯಣ, ಗಣೇಶ್,ಮೋಹನ್, ಲಕ್ಷ್ಮಿನಾರಾಯಣ, ಭಾಸ್ಕರ್, ರವಿಕುಮಾರ್ ,ರಂಗನಾಥ ಉಡುಪ ಮತ್ತಿತರರಿದ್ದರು.