Saturday, March 29, 2014





ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ತೋಟಕ್ಕೆ ಹರಡಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಮರಗಿಡಗಳಿಗೆ ಹಾನಿ

ಚಿಕ್ಕನಾಯಕನಹಳ್ಳಿ,ಮಾ.28: ತಾಲೂಕಿನ ಹನುಮಂತನಹಳ್ಳಿಯ ಬಳಿ ಸುಮಾರು ಏಳುವರೆ ಎಕರೆ ತೆಂಗು ಮತ್ತು ಅಡಿಕೆಯ ತೋಟ ಬೆಂಕಿಗಾಹುತಿಯಾಗಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ಭರಿತ ಮರಗಳಿಗೆ ಹಾನಿಯಾಗಿದೆ.
ಕಂದಿಕೆರೆ ಹೋಬಳಿ ಹನುಮಂತನಹಳ್ಳಿಯ ಗುಡ್ಡದ ಸಾಲಿಗೆ  ಕಿಡಿಗೇಡಿಗಳು ಇಟ್ಟಿ ಬೆಂಕಿಯಿಂದಾಗಿ  ಸುತ್ತಲಿದ್ದ ಒಣಗಿದ ಹುಲ್ಲು ಪೊದೆಯಲ್ಲಿ ಕಾಣಿಸಿಕೊಂಡ ಬೆಂಕಿ, ಗಾಳಿ ಬೀಸಿದ್ದರಿಂದ ಶರವೇಗದಲ್ಲಿ ತೋಟದ ಸುತ್ತಾ ಆವರಿಸಿಕೊಂಡಿದೆ, ಅಷ್ಟರಲ್ಲಿ ತೋಟದ ಮಾಲೀಕರುಗಳಾದ  ಚಂದ್ರಶೇಖರ್, ನಾಗರಾಜಯ್ಯ ಎಂಬ ಸಹೋದರರು ಬೆಂಕಿ ತೋಟಕ್ಕೆ ತಾಗದಂತೆ ತಡೆಯಲು ಪ್ರಯತ್ನಿಸಿದರಾದರೂ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ,   ಏಳುವರೆ ಎಕರೆ ಪ್ರದೇಶದಲ್ಲಿದ್ದ ಸುಮಾರು ಒಂದು ನೂರು ಪ್ರಯಾದ ತೆಂಗಿನ ಮರಗಳು, ಎಂಟು ನೂರು ಫಲಭರಿತ ಅಡಿಕೆ ಮರಗಳು, ಒಂದು ನೂರಕ್ಕೂ ಅಧಿಕ ಗೊನೆ ಭರಿತ ಬಾಳೆ, ಎಂಟು  ಮಾವಿನ ಮರಗಳು, ನಲವತ್ತಕ್ಕೂ ಅಧಿಕ ತ್ಯಾಗದ ಮರಗಳು, ಸುಮಾರು ಇನ್ನೂರು ತೆಂಗಿನ ಒಟ್ಲು, ಎರಡು ಸಾವಿರಕ್ಕು ಅಧಿಕ ಅಡಿಕೆ ಒಟ್ಲು, ಆರು ಲಾರಿ ಲೋಡು ರಾಗಿ ಹುಲ್ಲಿನ ಬಣವೆ, ಎರಡು ಸ್ಟಾಟ್ರು, ಪೈಪು, ಕೇಬಲ್, ಡ್ರಿಪ್ ವೈರು ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ಥಿಗೆ ನಷ್ಟವಾಗಿದೆ.
ಮಧ್ಯಾಹ್ನ ಒಂದು ಗಂಟೆಗೆ ಕಾಣಿಸಿಕೊಂಡ ಬೆಂಕಿ  ಬೃಹದಾಕಾರವಾಗಿ ಹರಡಿದೆ,  ಬೆಂಕಿಯ ಕೆನ್ನಾಲಿಗೆ ಸಂಜೆ ಐದರವರೆಗೂ ಒಂದೆ ಸಮನೆ ತನ್ನ ಪ್ರತಾಪವನ್ನು ತೋರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಹರ ಸಾಹಸ ಪಟ್ಟಿದ್ದಾರೆ.
ಸ್ಥಳಕ್ಕೆ ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ್, ಗ್ರಾಮಲೆಖ್ಖಿಗ ಇ.ದೀಪಕ್, ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಭೇಟಿ ನೀಡಿದ್ದರು.


ಕ್ಷೇತ್ರದ ಹೊರಗಿನವರಿಗೆ, ಕಣ್ಮರೆಯಾದವರಿಗೆ  ನಾನು ಉತ್ತರ ಕೊಡಬೇಕಿಲ್ಲ: ಜಿ.ಎಸ್.ಬಿ.

ಚಿಕ್ಕನಾಯಕನಹಳ್ಳಿ,ಮಾ.29 : ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನನ್ನ ಅವಧಿಯಲ್ಲಿ ಕೇಂದ್ರ ಸಕರ್ಾರದಿಂದ ಹೆಚ್ಚು ಯೋಜನೆಗಳನ್ನು ತಂದಿದ್ದು, ಈ ಬಗ್ಗೆ ಜ್ಞಾನವಿಲ್ಲದವರು, ಐದು ತಿಂಗಳ ಕಾಲ ಯಾರ ಕೈಗೂ ಸಿಗದೆ ಕಣ್ಮರೆಯಾದವರು, ಈ ಕ್ಷೇತ್ರಕ್ಕೆ ಹೊರಗಿನಿಂದ ಬಂದು ಇಲ್ಲಿಯ ಸ್ಥಿತಿಗತಿ ತಿಳಿಯದೇ ಮಾತನಾಡುವ ಎದುರಾಳಿಗಳಿಗೆ ನಾನು ಉತ್ತರ ಕೊಡಬೇಕಾಗಿಲ್ಲ ಎಂದು ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಕಿಡಿಕಾರಿದರು.
ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಸಿದ ನಂತರ ಪ್ರಚಾರಕ್ಕೆಂದು ಹೊರಟವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಏನು ನನ್ನ ಕೆಲಸದ ವೈಖರಿಯ ಬಗ್ಗೆ ಈ ಕ್ಷೇತ್ರದ ಜನರಿಗೆ ಅರಿವಿದೆ, ಅವರು ನನ್ನ ಕೈ ಹಿಡಿದು ಇಲ್ಲಿಯವರೆಗೆ ನಡೆಸಿದ್ದಾರೆ ಆದ್ದರಿಂದಲೇ ಗುಬ್ಬಿ ತಾಲೂಕಿಗೆ ಹೆಲಿಕ್ಯಾಪ್ಟರ್ ಉತ್ಪಾದನಾ ಕಾಖರ್ಾನೆಯನ್ನು ತರುವಲ್ಲಿ ನಾನು ಶ್ರಮಸಿದ್ದು,  ಜಿಲ್ಲೆಗೆ ರೈಲ್ವೇ ಯೋಜನೆಯನ್ನು ಜಾರಿಗೆ ತರುವಲ್ಲಿ ನನ್ನ ಪಾತ್ರ ಏನು ಎಂಬುದು ತಿಳಿದಿದೆ,  ಬೆಂಗಳೂರು-ಹೊನ್ನಾವರ ರಸ್ತೆ (ಬಿ.ಎಚ್.ರಸ್ತೆ)ಯನ್ನು ಚತುಷ್ಪಥ ರಸ್ತೆಯ ಯೋಜನೆಯಲ್ಲಿನ ಹೋರಾಟ, ಬೀದರ್-ಚಾಮರಾಜನಗರ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವತರ್ಿಸಲು ವಹಿಸಿದ ಕಾಳಜಿ, ಎತ್ತಿನಹೊಳೆ ಶಂಕುಸ್ಥಾಪನೆಯಲ್ಲಿನ ಶ್ರಮ ಇವೆಲ್ಲವೂ ಕಣ್ಣಮುಂದೆ ಇದೇ,  ಇಷ್ಟೆಲ್ಲಾ ಈ ಕ್ಷೇತ್ರದಲ್ಲಿದ್ದವರಿಗೆ, ಇಲ್ಲಿ ಸದಾ ಓಡಾಡುವರಿಗೆ ಕಾಣುತ್ತದೆ ಎಲ್ಲಿಂದಲೋ ಬಂದವರಿಗೆ ಈ ಬಗ್ಗೆ ತಿಳಿಯಲು ಹೇಗೆ ಸಾಧ್ಯವೆಂದು ವ್ಯಂಗವಾಡಿದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಪಕ್ಕದ ಕ್ಷೇತ್ರ ಶಾಸಕರೊಬ್ಬರು ಬಾಯಿಗೆ ಬಂದರೀತಿಯಲ್ಲಿ ಮಾತನಾಡಿದ್ದಾರೆ, ಅವರಿಗೆ ಅವರಾಡಿರುವ ಮಾತಿನಲ್ಲಿ ವಿಶ್ವಾಸವಿದ್ದರೆ, ಬಹಿರಂಗ ಚಚರ್ೆಗೆ ಬರಲಿ,  ನನ್ನ ಸಾಧನೆ ಏನು ಎಂದು ದಾಖಲೆ ಸಮೇತ ತೋರಿಸುತ್ತೇನೆ, ಆಗುವ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದ ಅವರಿಂದ ನಾನು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಹೇಳಿಸಿಕೊಳ್ಳಬೇಕಿಲ್ಲ. ಮನೆಯಲ್ಲಿ ಕುಳಿತು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮಾಡುತ್ತಾ, ಸ್ಥಳೀಯ ಜನರಿಗೆ ಭೂಮಿ ಕೊಡಬೇಡಿ ಎಂದು ಹೇಳಿಕೊಡುವ ಆ ವ್ಯಕ್ತಿಗೆ ಹೆಲಿಕ್ಯಾಪ್ಟರ್ ಉತ್ಪಾದನಾ ಕಾಖರ್ಾನೆಯ ಬಗ್ಗೆ ಏನು ಗೊತ್ತು, ಅಲ್ಲಿಯ ಅಧಿಕಾರ ವರ್ಗದವರ ಹೆಸರೂ ಗೊತ್ತಿಲ್ಲದ ಅವರು ಮೊದಲು ಈ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಳ್ಳಲಿ ಆನಂತರ ಚಚರ್ೆಗೆ ಬರಲಿ ಎಂದರು. 
ಸಂಸದನಾಗಿ ಕೇಂದ್ರ ಸಕರ್ಾರದಿಂದ ರಾಜ್ಯದಲ್ಲಿ ಅತಿ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ, ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗಾಗಿ (ಓಒಚ) ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯ  ಎಂಬ ಯೋಜನೆಯಲ್ಲಿ ತುಮಕೂರಿಗೆ ಒಂದು ಲಕ್ಷ ಕೋಟಿ ಹಣವನ್ನು ತರಲಾಗಿದ್ದು ಅದರಲ್ಲಿ ಚಿ.ನಾ.ಹಳ್ಳಿ, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ ತಾಲ್ಲೂಕುಗಳೂ ಸೇರಿವೆ ಎಂದರು.
ತಾಲ್ಲೂಕಿನಲ್ಲಿ ಭೀಕರ ಜಲಕ್ಷಾಮ ಉಂಟಾಗಿದ್ದು ಹೇಮಾವತಿ ನೀರಿನ ಯೋಜನೆಯ ಕಾಮಗಾರಿ ಡಿಸಂಬರ್ ವೇಳೆಗೆ ಮುಗಿಸಲು ನಿದರ್ೇಶನವಿದೆ ಎಂದರು.  ಅಲ್ಲದೆ ಹಿರಿಯೂರು, ಹುಳಿಯಾರು, ಚಿ.ನಾ.ಹಳ್ಳಿ ಕಿಬ್ಬನಹಳ್ಳಿ, ತುರುವೇಕೆರೆ, ಮರಳೂರು ಮೂಲಕ ರೈಲ್ವೆ ಯೋಜನೆಯೂ ಬಜೆಟ್ನಲ್ಲಿ ಜಾರಿಯಾಗಿದೆ ಹಾಗೂ ಚಿ.ನಾ.ಹಳ್ಳಿ ಹಾಸನದವರೆಗೆ ಶೆಟ್ಟಿಕೆರೆ ಮಾರ್ಗವಾಗಿ ಉತ್ತಮ ರಸ್ತೆ ನಿಮರ್ಾಣಕ್ಕೆ ಯೋಜನೆ ರೂಪಿಸಿದ್ದು ತಾಂತ್ರಿಕ ಕಾರಣದಿಂದ ಆ ಯೋಜನೆಗೆ ಹಿನ್ನಡೆಯಾಗಿದೆ ಎಂದರು.  
ಗೋಷ್ಠಿಯಲ್ಲಿ ಎಚ್.ರಾಮಾಂಜನೇಯ, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಉಪಸ್ಥಿತರಿದ್ದರು.

Tuesday, March 18, 2014

ಪಕ್ಷದೊಳಗಿನ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಮಾಧ್ಯಮದ ಮುಂದೆ ಹೋಗದಂತೆ ಮುಖಂಡರಿಗೆ ಸಲಹೆ

ಚಿಕ್ಕನಾಯಕನಹಳ್ಳಿ,ಮಾ.18 : ಬ್ಲಾಕ್ ಕಾಂಗ್ರೆಸ್ಸಿನಲ್ಲಿರುವ ಭಿನ್ನಮತವನ್ನು ಶಮನಗೊಳಿಸಲು ಮಂಗಳವಾರ ತಾಲ್ಲೂಕಿಗೆ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಮುಖಂಡರುಗಳ ಮನೆಗೆ ಭೇಟಿ ನೀಡಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ 26ರ ನಂತರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು, ನಮ್ಮಲ್ಲಿ ಏನೇ ಭಿನ್ನಮತವಿದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮಾಧ್ಯಮಗಳಿಗೆ ಹೋಗಬಾರದು, ಇದರಿಂದ ಪಕ್ಷದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಆದ್ದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. 
 ಮಾಜಿ ಶಾಸಕ ಬಿ.ಲಕ್ಕಪ್ಪ, ಸೀಮೆಎಣ್ಣೆ ಕೃಷ್ಣಯ್ಯ, ಹೆಚ್.ಬಿ.ಎಸ್.ನಾರಾಯಣಗೌಡರ ಹಾಗೂ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ರೇಣುಕಾಗುರುಮುತರ್ಿ, ಹುಳಿಯಾರಿನ ಧನುಷ್ ರಂಗನಾಥ್ ಮನೆಗೆ ಭೇಟಿ ನೀಡಿ ಪಕ್ಷದ ಗೆಲುವಿಗೆ ಶ್ರಮಿಸಲು ಕೋರಿರುವುದಾಗಿ ತಿಳಿಸಿದರು.. 
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಇದುವರೆಗೂ ತಾಲ್ಲೂಕಿನಲ್ಲಿ ಇದ್ದ ಭಿನ್ನಮತ ಶಮನವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ವಿವಿಧ ಪಕ್ಷಗಳಿಂದ ಕಾರ್ಯಕರ್ತರು ಬರಲು ಉತ್ಸಾಹಕರಾಗಿದ್ದು ಶೀಘ್ರದಲ್ಲಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ತೀರ್ಥಪುರದ ವಾಸು, ರಾಮಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಘನ್ನಿಸಾಬ್, ಕಿಬ್ಬನಹಳ್ಳಿ ಮಹಾಲಿಂಗಪ್ಪ, ಶಿವಣ್ಣ, ಚಿಕ್ಕಸ್ವಾಮಿ, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.