Tuesday, July 15, 2014

ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ
ಚಿಕ್ಕನಾಯಕನಹಳ್ಳಿ,ಜು.15 : ನಮ್ಮ ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ ಅವರಿಗೆ ಕೃಷಿ ಬಗ್ಗೆ ಒಲವು ಬರುವಂತೆ ಮಾಡಬೇಕು ಎಂದು ಸಾವಯವ ಕೃಷಿ ಪರಿವಾರದ ಜಿಲ್ಲಾ ಅಧ್ಯಕ್ಷ ಸದಾಶಿವಯ್ಯ ಹೇಳಿದರು.
ತಾಲ್ಲೂಕಿನ ಹಂದನಕೆರೆ ವಲಯದ ದೊಡ್ಡಎಣ್ಣೆಗೆರೆಯ ಗವಿರಂಗನಾಥ ವಿದ್ಯಾಪೀಠ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಆಧುನಿಕ ದಾಳಿಂಬೆ ಕೃಷಿ ವಿಧಾನಗಳು ಮತ್ತು ಮಹತ್ವದ ಕುರಿತು ಮಾತನಾಡಿದ ಅವರು, ರೈತರು ದಾಳಿಂಬೆ ಕೃಷಿಯನ್ನು ಮಾಡುವ ಪೂರ್ವದಲ್ಲಿ ತಳಿಗಳ ಆಯ್ಕೆ ಮಾಡುವುದರ ಮೇಲೆ ಕೃಷಿ ಅವಲಂಬಿತವಾಗಿರುತ್ತದೆ ಆದ್ದರಿಂದ ಟೀಷುಕಲ್ಚರ್ ದಾಳಿಂಬೆ ಕೃಷಿ ಆಯ್ಕೆ ಮಾಡಿದರೆ ಸೂಕ್ತ ಅದರಲ್ಲಿ ರೋಗ ನಿರೋಧಕ ಶಕ್ತಿ ತುಂಬಿರುತ್ತದೆ ಎಂದರಲ್ಲದೆ ರೈತರು ಸಾವಯವ ಕೃಷಿಗೆ ಉತ್ತೇಜನ ನೀಡಿದರೆ ಕಡಿಮೆ ಖಚರ್ಾಗುತ್ತದೆ, ಇಲ್ಲವಾದರೆ ರಸಾಯನಿಕ ಗೊಬ್ಬರ ಹಾಕುವುದರಿಂದ ಖಚರ್ು ಹೆಚ್ಚಾಗುತ್ತದೆ ಇದರಿಂದ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.
ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ತಜ್ಞ ನವೀನ್ಕುಮಾರ್,  ರೈತರು ರಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವಗೊಬ್ಬರಕ್ಕೆ ಒತ್ತು ನೀಡಬೇಕು, ಇದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಇಲ್ಲವಾದರೆ ಮಣ್ಣು ಸತ್ತು ಹೋಗುತ್ತದೆ ಇದರಿಂದ ಕೃಷಿಯಲ್ಲಿ ಲಾಭ ಇಲ್ಲ ಎಂದು ರೈತರು ವಲಸೆ ಹೋಗುತ್ತಿದ್ದಾರೆ ಆದ್ದರಿಂದ ತೋಟಗಾರಿಕೆ ಬೆಳೆಯಾದ, ತೆಂಗು ಕೃಷಿ ಮಧ್ಯಭಾಗದಲ್ಲಿ ದಾಳಿಂಬೆ ಕೃಷಿ ಮಾಡಬಹುದು ಎಂದರಲ್ಲದೆ ಬಯಲು ಸೀಮೆ ಪ್ರದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ದಾಳಿಂಬೆ ಕೃಷಿ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಕೃಷಿಗೆ ಬೆಲೆ ಏರಿಕೆಯಿಂದ ರೈತರು ದಾಳಿಂಬೆ ಕೃಷಿಗೆ ಒಲವು ತೋರುತ್ತಿದ್ದಾರೆ ಎಂದರು.
ಪ್ರಗತಿಪರ ಕೃಷಿಕ ಯೋಗಿಶ್ ಮಾತನಾಡಿ ದಾಳಿಂಬೆ ಕೃಷಿಗೆ ಹನಿನೀರಾವರಿ ಅಳವಡಿಸುವುದು ಸೂಕ್ತ ಇದರಿಂದ ಜಲ ಸಂರಕ್ಷಣೆ ಮಾಡಬಹುದು, ಈಗಿನ ನೀರಿನ ಅಭಾವದಲ್ಲಿ ಹನಿ ನೀರಾವರಿ ಮಾಡಿದರೆ ತೋಟಗಾರಿಕೆ ಇಲಾಖೆಯಿಂದ ಶೇ.85 ರಷ್ಟು ಸಹಾಯಧನ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಇಂದ್ರಮ್ಮ, ಯೋಜನಾಧಿಕಾರಿಗಳಾದ ರೋಹಿತಾಕ್ಷ, ಶಾಲಾ ಶಿಕ್ಷಕರಾದ ಹೇಮಾವತಿ, ಮಂಜುನಾಥ , ತಾಲೂಕು ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗಪ್ಪ.ಎಚ್.ಎಸ್ ನಿರೂಪಿಸಿದರು. ಕೃಷಿ ಅಧಿಕಾರಿಗಳಾದ ಹರೀಶ್, ಸ್ವಾಗತಿದ್ದರು. ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಪರೀಕ್ಷೆಯಲ್ಲಿ ಫೇಲಾಗಿದ್ದೇನೆಂದು ನೇಣಿಗೆ ಶರಣಾದ ಯುವಕ
ಚಿಕ್ಕನಾಯಕನಹಳ್ಳಿ,ಜು.15 : ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದರಿಂದ ಮನನೊಂದು ಅಕ್ಷಯ್ ಎಂಬ ವಿದ್ಯಾಥರ್ಿ ಮನೆಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಅಕ್ಷಯ್ ಬಿಎಸ್ಸಿ ಪದವಿಯನ್ನು ಮುಗಿಸಿದ್ದನಾದರೂ  ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡರೂ ಪರೀಕ್ಷೆಯಲ್ಲಿ ಅನುತ್ತೀರ್ಣನಾದ್ದರಿಂದ ಮನೆಯಲ್ಲಿನ ರೂಮಿನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಕೊಡಿಸಿದ ತಪ್ಪಿಗೆ ಮಾವನಿಂದಲೇ ಹೆಣವಾದ ರವಿಕುಮಾರ್
ಚಿಕ್ಕನಾಯಕನಹಳ್ಳಿ,ಜು.15 : ಕೊಡಿಸಿದ್ದ ಸಾಲವನ್ನು  ವಾಪಸ್ ಕೇಳಿದ್ದಕ್ಕೆ ಅಳಿಯನನ್ನೇ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದರಿಂದ  ಭೈರಲಿಂಗನಹಳ್ಳಿಯ ರವಿಕುಮಾರ್ ಸಾವನ್ನಪ್ಪಿದ್ದಾನೆ ಎಂದು ಚಿ.ನಾ.ಹಳ್ಳಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮೃತ ರವಿಕುಮಾರ್ ತನ್ನ ಹೆಂಡತಿಯ ಚಿಕ್ಕಪ್ಪನ ಮಗಳಾದ ಮಂಜುಳಾ ಎಂಬವವರಿಗೆ ಮನೆ ಕಟ್ಟಲು  15 ಸಾವಿರ ರೂಗಳನ್ನು ಸಾಲವಾಗಿ ಕೊಡಿಸಿದ್ದನ್ನು, ಈ ಸಾಲವನ್ನು ವಾಪಸ್ ಮಾಡುವಂತೆ ಕೇಳಿದ್ದಕ್ಕೆ ಮಂಜುಳಾರವರ ತಂದೆ ತಮ್ಮಯ್ಯ(ಆರೋಪಿ) ರವಿಕುಮಾರ್ ಮೇಲೆ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ. ಹೊಡೆತದ ಸ್ವರೂಪ ಬಲವಾಗಿದ್ದರಿಂದ ಎದೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು ರವಿಕುಮಾರ್ ಆಸ್ಪತ್ರೆಗೆಂದು ಬಂದ ಸಂದರ್ಭದಲ್ಲಿ ತನ್ನ ಬಂಧುಗಳ ಮನೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ದೂರು ನೀಡಿರುವ ಮೃತನ ಹೆಂಡತಿ ಬಿ.ಸಿ.ಗಂಗಮ್ಮ ತನ್ನ ಗಂಡನ ಸಾವಿಗೆ ತನ್ನ ಚಿಕ್ಕಪ್ಪ ತಮ್ಮಯ್ಯನೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.   ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ತನಿಖೆ ಕೈಗೊಂಡಿದ್ದಾರೆ.