Saturday, May 7, 2016


ಮೇ 16ರಿಂದ 23ರವರಗೆ ಗೋಡೆಕೆರೆ ದೊಡ್ಡ ಜಾತ್ರೆ
ಚಿಕ್ಕನಾಯಕನಹಳ್ಳಿ,: ಗೋಡೆಕೆರೆಯ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಮಹಾರಥೋತ್ಸವ ದೊಡ್ಡಜಾತ್ರೆಯು ಹದಿನೇಳು ವರ್ಷಗಳ ನಂತರ ನಡೆಯುತ್ತಿದ್ದು,  ಇದೇ ಮೇ 16ರಿಂದ 23ರವರೆಗೆ ನಡೆಯಲಿದ್ದು ವಿಶೇಷ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೋಡೆಕೆರೆ ಮಠದ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇ .16ರ ಸೋಮವಾರ ಗಣಪತಿ ಪೂಜೆ, ಗಂಗಾಪೂಜೆ, ವೃಷಭಧ್ವಜ ಸ್ಥಾಪನೆ, ಪ್ರಥಮೋತ್ಸವ, ತೆಪ್ಪೋತ್ಸವ, ಉಯ್ಯಾಲೋತ್ಸವ, ಸೂರ್ಯಮಂಡಲೋತ್ಸವ ನಡೆಯಲಿದೆ. 17ರಂದು ಶ್ರೀ ವೃಷಭ ವಾಹನೋತ್ಸವ, 18ರಂದು ಅಶ್ವವಾಹನೋತ್ಸವ ನಡೆಯಲಿದ್ದು ಅಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಾತ್ರೆಗೆ ಆಗಮಿಸಲಿದ್ದಾರೆ.
19ರಂದು ಶಶಾಂಕ ಮಂಡಲೋತ್ಸವ, 20ರಂದು ಮಹಾರಥೋತ್ಸವ, ಕಂತೆಸೇವೆ ನಡೆಯಲಿದ್ದು ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ರೆಗೆ ಆಗಮಿಸಲಿದ್ದಾರೆ.
21ರಂದು ಬಿಲ್ವವೃಕ್ಷ ವಾಹನೋತ್ಸವ, 22ರಂದು ಗಜವಾಹನೋತ್ಸವ, 23ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ, ತೀಥೋತ್ಸವ ನಡೆಯಲಿದೆ. ಜಾತ್ರೆಯ ನಡೆಯುವ ಪ್ರತಿದಿನ ವಿಶೇಷ ದೀಪಾಲಂಕಾರ, ಮದ್ದಿನ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಸಮಯದಲ್ಲಿ ಆಗಮಿಸುವ ಭಕ್ತರಿಗೆ ಪ್ರತಿನಿತ್ಯ ದಾಸೋಹ ವ್ಯವಸ್ಥೆ ನಡೆಯಲಿದೆ.
ಜಾತ್ರೆಗೆ ಲಕ್ಷಾಂತರ ಜನರು ಸೇರುವುದರಿಂದ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಬೇಕು, ಅಗ್ನಿಶಾಮಕ ಸಿಬ್ಬಂದಿ ಜಾತ್ರೆ ಮುಗಿಯುವವರೆಗೆ ಹಾಜರಿರಬೇಕು, ಭಕ್ತರು ಬಂದುಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಮಾಡಬೇಕು ಹಾಗೂ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕು ಈ ಭಾಗದಲ್ಲಿ  ವಿದ್ಯುತ್ ವ್ಯತ್ಯಾಯವಾಗದಂತೆ ನೋಡಿಕೊಳ್ಳಬೇಕು, ಗೋಡೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ವೈದ್ಯಾಧಿಕಾರುಗಳು ಇಲ್ಲದೆ ಈ ಭಾಗದ ನೂರಾರು ಜನರಿಗೆ ತೊಂದರೆಯಾಗಿದೆ ಈಗಲಾದರೂ ಇಲ್ಲಿಗೆ ಖಾಯಂ ವೈದ್ಯರನ್ನು ನೇಮಿಸಬೇಕೆಂದು ಸ್ವಾಮಿಜಿಗಳು ಒತ್ತಾಯಿಸಿದರು.
ಶ್ರೀಮಠದ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿಯವರು ಹಾಗೂ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮಿಯವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬು ಜಾತ್ರೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆಯ ಮುಖಂಡರಾದ ಸಿದ್ದರಾಮಣ್ಣ, ಗೋ.ನಿ.ವಸಂತ್ಕುಮಾರ್, ಎಂ.ಎಂ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಮುಕ್ತಾಯವಾದ ಬೆಂಗಳೂರು ಕೃಷಿ ವಿ.ವಿ.ಯ ಎನ್.ಎಸ್.ಎಸ್. ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.07 : ಎನ್.ಎಸ್.ಎಸ್ ಶಿಬಿರಗಳಿಂದ ವಿದ್ಯಾಥರ್ಿಗಳಲ್ಲಿ ಗೆಳೆತನ, ಪರಸ್ಪರ ಗೌರವದ ಮನೋಭಾವ ಬೆಳೆಯುತ್ತದೆ ಎಂದು ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಡಾ.ಹೆಚ್.ಖಾದರ್ಖಾನ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಏರ್ಪಡಿಸಿದ್ದ ಎನ್.ಎಸ್.ಎಸ್ ವಾಷರ್ಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶ್ರಮದಾನ ಮಾಡುವುದರಿಂದ ಸೇವಾ ಮನೋಭಾವ ಹೆಚ್ಚಲಿದೆ, ವಿದ್ಯಾಥರ್ಿಗಳು ಜೀವನದಲ್ಲಿ ಮುಂದೆ ಬರಬೇಕಾದರೆ ಶಿಸ್ತನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ತಹಶೀಲ್ದಾರ್ ಗಂಗೇಶ್ ಮಾತನಾಡಿ, ಏಳು ದಿನಗಳ ಕಾಲ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ತಾಲ್ಲೂಕು ಆಡಳಿತದ ಪರವಾಗಿ ಎಲ್ಲಾ ನೆರವು ನೀಡಲಾಯಿತು, ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಕೃಷಿ ವಿಶ್ವವಿದ್ಯಾನಿಲಯ ಮುಂದೆಯೂ ಹಮ್ಮಿಕೊಂಡರೆ ಸಹಕರಿಸುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಲೋಕೇಶ್ಮೂತರ್ಿ ಮಾತನಾಡಿ, ಬದುಕನ್ನು ಅರಿಯಲು ಇಂತಹ ಶಿಬಿರಗಳು ಸಹಕಾರಿ, ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿದ್ದ ಮುನ್ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳು ಒಟ್ಟಿಗೆ ಕಲೆತು ಶ್ರಮದಾನ ಮಾಡಿದ್ದಾರೆ ಇದು ಅವರ ಮುಂದಿನ ಬದುಕಿನಲ್ಲಿ ಅವಿಸ್ಮರಣೀಯ ಸಂದರ್ಭ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಹೊನ್ನದಾಸೆಗೌಡ, ಡಾ.ಗೋಪಿನಾಥ್, ಪ್ರೊ.ಬಿ.ಕೃಷ್ಣಮೂತರ್ಿ, ಡಾ.ವಸಂತಕುಮಾರಿ, ಡಾ.ಎಂ.ಎಸ್.ಗಣಪತಿ, ಡಾ.ಉಷಾರವೀಂದ್ರ, ಡಾ.ಆರ್.ಮುತ್ತುರಾಜ್, ಬಾಬು.ಆರ್.ಎಂ.ರಾಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಶಾಲೆ ಬಳಿ ಮನೆಯೊಂದರಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ,ಮೇ.07 : ಪಟ್ಟಣದ ರೋಟರಿ ಶಾಲೆ ಮುಂಭಾಗದ ಒಂಟಿ ಮನೆಯಲ್ಲಿ ಶನಿವಾರ ಹಾಡಹಗಲೇ ಕಳ್ಳರು ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಡವೆಗಳನ್ನು ಕದ್ದೊಯ್ದಿದ್ದಾರೆ.
ರಿದಂ ಮ್ಯೂಸಿಕ್ ಮಾಲೀಕ ರೂಪೇಶ್ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಧ್ಯಾಹ್ನ 4ರ ಸುಮಾರಿನಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಎರಡು ಬೀರುಗಳನ್ನು ಮುರಿದಿರುವ ಕಳ್ಳರು ಬೀರುವಿನಲ್ಲಿದ್ದ 1.52ಲಕ್ಷ ಮೌಲ್ಯದ 52ಗ್ರಾಂ ಚಿನ್ನದ ನೆಕ್ಲೆಸ್ ಹಾಗೂ 25ಗ್ರಾಂ ಚಿನ್ನದ ಬಳೆಯನ್ನು ಕದ್ದಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೆ ಪಟ್ಟಣದ ಜನನಿಬಿಡ ಪ್ರದೇಶವಾದ ಖಾಸಗಿ ಬಸ್ನಿಲ್ದಾಣದ ಬಳಿಯ ಮಧ್ಯಾಹ್ನದ ಸಮಯದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು ಸುಮಾರು 12ಲಕ್ಷ ಮೌಲದ ನಗನಾಣ್ಯ ದೋಚಿದ್ದರು ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ನಡೆದಿರುವುದು ನಾಗರೀಕರನ್ನು ಆತಂಕಕ್ಕೀಡು ಮಾಡಿದೆ.
ಸ್ಥಳಕ್ಕೆ ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜೋಗಿಹಳ್ಳಿ ಆಂಜನೇಯಸ್ವಾಮಿಗೆ ನೂರೆಂದೆಡೆ ಸೇವೆ 
ಚಿಕ್ಕನಾಯಕನಹಳ್ಳಿ,ಮೇ.07 : ಪಟ್ಟಣದ ಜೋಗಿಹಳ್ಳಿಯ ಶ್ರೀ ಆದಿ ಆಂಜನೇಯಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯವರಿಗೆ ನೂರೊಂದೆಡೆಸೇವೆ ಹಾಗೂ ಆರತಿಬಾನ ಸೇವಾಕಾರ್ಯ ಜರುಗಿದವು.
ಆದಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ ನಡೆಯಿತು. ಗ್ರಾಮದೇವತೆ ದಬ್ಬೆಘಟ್ಟದ ಕೆಂಪಮ್ಮದೇವಿ ಹಾಗೂ ಲಕ್ಷ್ಮೀದೇವರ ಆಗಮನದೊಂದಿಗೆ ಗಂಗಾಸ್ನಾನ ನೆರವೇರಿದ ನಂತರ ನಡೆಮುಡಿಯೊಂದಿಗೆ ದೇವಾಲಯಕ್ಕೆ ದೇವರುಗಳು ಆಗಮಿಸಿದವು.
  ಜೋಗಿಹಳ್ಳಿ ಗ್ರಾಮಸ್ಥರು ಹಾಗೂ ಮಹಿಳೆಯರು ದೇವರ ಮೆರವಣಿಗೆ ಜೋತೆಯಲ್ಲಿ ಆರತಿ ಹೊತ್ತು ತಂದ ಪರಿ ಚಿತ್ತಾಕರ್ಷಕವಾಗಿತ್ತು. ಸ್ವಾಮಿಯವರ ವಿಶೇಷ ಸೇವೆಯಾದ ನೂರೊಂದೆಡೆ ಸೇವೆಯನ್ನು ದಾಸಪ್ಪ, ಗೋವಿಂದಪ್ಪನವರ ನೇತೃತ್ವದಲ್ಲಿ ಇತರ ದಾಸಪ್ಪಗಳು ನೂರೊಂದೆಡೆ ಸೇವಾ ಪೂಜೆಯನ್ನು ನೆರವೇರಿಸಿದರು. ಸಾವಿರಾರು ಭಕ್ತರು ಆದಿ ಆಂಜನೇಯಸ್ವಾಮಿಯವರ ದರ್ಶನ ಪಡೆದರು. ಬಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
   ಈ ಸಂದರ್ಭದಲ್ಲಿ ಆದಿ ಆಂಜನೇಯಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕಳಸೇಗೌಡ, ಕಾರ್ಯದಶರ್ಿ ಲಕ್ಷ್ಮೀಪತಿ, ಗುಡಿಗೌಡ ರಂಗನಾಥ್, ದೇವಾಲಯದ ಅರ್ಚಕ ದೇವರಾಜು, ಸದಸ್ಯರುಗಳಾದ ಶಿವಣ್ಣ, ನಿಂಗದಾಳಯ್ಯ, ನಾಗರಾಜು, ರಮೇಶ್, ಬೀರಲಿಂಗಯ್ಯ, ಶಿವಪ್ರಸಾದ್, ರವಿಕುಮಾರ್, ಮಂಜುನಾಥ್, ಲಕ್ಕಣ್ಣ ಸೇರಿದಂತೆ ಭಕ್ತಾಧಿಗಳು ಭಾಗವಹಿಸಿದ್ದರು.