Thursday, February 7, 2013


ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ

                  ಚಿಕ್ಕನಾಯಕನಹಳ್ಳಿ,ಫೆ.07 : ಮಹಿಳೆಯರು ಅಬಲೆಯರು ಎಂದು ಕೊರಗುತ್ತಾ ಮನೆಯಲ್ಲಿ ಕೂರುವ ಪರಿಸ್ಥಿತಿ ಇಂದು ನಿವಾರಣೆಯಾಗಿದೆ, ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಮರ್ಥರಿದ್ದಾರೆ ಆದರೂ, ಮಹಿಳೆಯರ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರದ ವರ್ತನೆ ಸರಿಯಲ್ಲ, ಮಹಿಳೆಯರು ಅರಿತು ನಡೆದರೆ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಜಿ.ಪಂ.ಸದಸ್ಯೆ ಲೋಹಿತಬಾಯಿರಂಗಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಶ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಸುತ್ತುನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ನಾರಿ ಪ್ರಪಂಚದಲ್ಲಿಯೇ ಸಂಸ್ಕೃತಿಯ ಪ್ರತೀಕ, ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ  ಎಂದರಲ್ಲದೆ ಆಕೆ ತನಗೆ ಎಷ್ಟೇ ನೋವಾದರು ಪರರಿಗೆ ಕೇಡನ್ನು ಬಯಸುವುದಿಲ್ಲ, ಹುಟ್ಟಿದ ಮತ್ತು ಕೊಟ್ಟ ಮನೆಗೆ ಒಳಿತನ್ನು ಬಯಸುತ್ತಾಳೆ, ಆದರೆ ಗಂಡನ ಮನೆಯಲ್ಲಿ ಅತ್ತೆ ಮತ್ತು ನಾದಿನಿಯರು ಹೆಣ್ಣಾಗಿದ್ದರೂ ಹೊರಗಿನಿಂದ ಬಂದ ಹೆಣ್ಣಿಗೆ ತೊಂದರೆ ಕೊಡುವ ಪ್ರವೃತ್ತಿ ಇನ್ನು ಸಮಾಜದಲ್ಲಿ ಮುಂದುವರೆದಿದೆ ಎಂದರು.  ಸಕರ್ಾರ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ನೀಡುವ ಸುತ್ತುನಿಧಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ಬಡ್ಡಿ ವ್ಯವಹಾರಕ್ಕಲ್ಲ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಮಹಿಳೆಯರು ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘಗಳಲ್ಲಿ ಪಡೆಯುವ ಸಾಲವನ್ನು ದುಡಿಮೆಯ ಬಂಡವಾಳವನ್ನಾಗಿ ತೊಡಗಿಸಿದರೆ ಸಾಲ ಮರುಪಾವತಿ ಕಷ್ಟಕರವಲ್ಲ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕಿ ಸುಜಾತ ಮಾತನಾಡಿ ಮಹಿಳೆಯರು ಆಥರ್ಿಕವಾಗಿ ಅಭಿವೃದ್ದಿ ಹೊಂದಲು ಸುತ್ತುನಿದಿ ವಿತರಣೆ ಮಾಡುತ್ತಿದ್ದು ಈ ಮೂಲಕ ಅವರ ಆಥರ್ಿಕ ಮಟ್ಟ ಸುಧಾರಣೆಗೊಳ್ಳಲಿದೆ, ಹಾಗೂ ಮಹಿಳೆಯರು ಒಂದು ಸಂಘದಲ್ಲಿ ಇದ್ದು ಬೇರೆ ಬೇರೆ ಸಂಘಕ್ಕೆ ಹೋಗುವುದನ್ನು ಬಿಡಬೇಕು, ಸಂಘದ ಪ್ರತಿನಿಧಿಗಳೆಲ್ಲ ಸೇರಿ ಸಂಘದ ಏಳಿಗೆಗಾಗಿ ಒಗ್ಗೂಡಿ ಚಚರ್ಿಸಿ ಸಂಘ ಅಭಿವೃದ್ದಿ ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಸಿಡಿಪಿಓ ಅನೀಸ್ಖೈಸರ್,  ಜಿ.ಪಂ.ಸದಸ್ಯರಾದ ಮಂಜುಳ, ನಿಂಗಮ್ಮ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ.ತಿಮ್ಮಯ್ಯ, ತಾ.ಪಂ.ಸದಸ್ಯರಾದ ಶಿಶಿಧರ್, ಕೆಂಕೆರೆ ನವೀನ್, ವಸಂತ್ಕುಮಾರ್, ಎಸಿಡಿಪಿಓ ಪರ್ವತಯ್ಯ, ಪರಮೇಶ್ವರಪ್ಪ, ದಯಾನಂದ್ ಉಪಸ್ಥಿತರಿದ್ದರು.


ಚಿ.ನಾ ಹಳ್ಳಿಗೆ ಇಂಜಿನಿಯರಿಂಗ್ ಕಾಲೇಜ್ಗೆ ಭರವಸೇ, ಬೇಗ ಅನುಷ್ಠನವಾಗಲಿ; ಚೇತನ್ ಪ್ರಸಾದ್
ಚಿಕ್ಕನಾಯಕನಹಳ್ಳಿ,ಪೆ.07 : ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಕರ್ಾರಿ ಪಾಲಿಟೆಕ್ನಿಕ್/ಇಂಜನಿಯರಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ಪರಿಶೀಲನೆ ಮಾಡಿ ಕಾಲೇಜು ಮಂಜೂರು ಮಾಡಿಸುವುದಾಗಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಯವರು ನೀಡಿರುವ ಭರವಸೆಗೆ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಆಭಿನಂದನೆ ಸಲ್ಲಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಪ್ರಶ್ನೆಗೆ ಉತ್ತಿರಿಸಿ ರಾಜ್ಯದ ಪ್ರಸ್ತುತ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಬಗ್ಗೆ ವಿವರಿಸಿ ನೀಡಿರುವ ಭರವಸೆಯನ್ನು ಸಚಿವರು ಬೇಗ ಅನುಷ್ಠಾನಗೊಳಿಸಲಿ ಎಂದು ಚೇತನ್ಪ್ರಸಾದ್ ಮನವಿ ಮಾಡಿದ್ದಾರೆ. 
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಳೆದ ವರ್ಷಗಳಿಂದ ತಾಲ್ಲೂಕಿನಲ್ಲಿ ಇಂಜಿನಿಯರಿಂಗ್ ಹಾಗೂ ಡಿಪ್ಲೋಮ ಕಾಲೇಜು ಸ್ಥಾಪಿಸಬೇಕು ಎಂದೂ  ಅನೇಕ ಹೋರಾಟಗಳನ್ನು ನೆಡೆಸಿದ್ದು, ಮುಖ್ಯಮಂತ್ರಿ ಜಗಧೀಶ್ಶೆಟ್ಟರ್ರವರು ತಾಲ್ಲೂಕಿಗೆ ಆಗಮಿಸಿದ ಸನ್ನಿವೇಶದಲ್ಲಿ ಅ.ಭಾ.ವಿ.ಪ ಕಾರ್ಯಕರ್ತರು ಮನವಿ ಮಾಡಿದ್ದರು,  ತಾಲ್ಲೂಕಿನ ಶಾಸಕ ಸಿ.ಬಿ ಸುರೇಶ್ಬಾಬುರವರು ಬಜೆಟ್ ಅಧಿವೇಶನದಲ್ಲಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜು ಮಂಜುರೂ ಮಾಡಬೇಕು ಎಂದು ಮನವಿ ಮಾಡಿದ್ದು ನಮ್ಮ ಹೋರಾಟಕ್ಕೆ ಶಕ್ತಿ ಬಂದತ್ತಾಗಿದೆ, ತಾಲ್ಲೂಕಿಗೆ ಇಂಜಿನಿಯರಿಂಗ್ ಕಾಲೇಜು ಮಂಜುರು ಮಾಡುವುದಾಗಿ ಭರವಸೆ ನೀಡಿರುವ ಸರಕಾರಕ್ಕೆ ಹಾಗೂ ತಾಲ್ಲೂಕಿನ ಶಾಸಕರಿಗೆ ತಾಲ್ಲೂಕು ಅ.ಭಾ.ವಿ.ಪ ಆಭಿನಂದನೆಯನ್ನು ಸಲ್ಲಿಸುತ್ತದೆ. ಈ ಭರವಸೇ ಭರವಸೇಯಾಗಿ ಉಳಿಯದೆ ಅನುಷ್ಠಾನಗೋಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ರೈತ ಸಂಪರ್ಕ ಕೇಂದ್ರದ ಉದ್ಘಾಟನಾ
ಚಿಕ್ಕನಾಯಕನಹಳ್ಳಿ,ಫೆ.07 : ಕಂದಿಕೆರೆ ರೈತ ಸಂಪರ್ಕ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಇದೇ 11ರ ಸೋಮವಾರ ಬೆಳಗ್ಗೆ 11ಕ್ಕೆ ಕಂದಿಕೆರೆಯ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಗ್ರಾ.ಪಂ.ಅಧ್ಯಕ್ಷ ಸಿ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಕೃಷಿ ಯಂತ್ರೋಪಕರಣ ವಿತರಣೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಲೋಹಿತಾಬಾಯಿರಂಗಸ್ವಾಮಿ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸದಸ್ಯರಾದ ನಿರಂಜನಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿರುವರು.