Thursday, June 13, 2013


ತರಬೇನಹಳ್ಳಿ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,: ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕಿನ ತರಬೇನಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಸುಮಾರು 120 ಮನೆಗಳಿರುವ ತರಬೇನಹಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ,  ನೀರಿಗಾಗಿ ಜನತೆ ಕಿಲೋಮೀಟರ್ಗಟ್ಟಲೆವರೆಗೂ ಸಂಚರಿಸುವ ಸ್ಥತಿ ಎದುರಾಗಿದ್ದು ದನಕರುಗಳು ಸಾಯುವ ಸ್ಥಿತಿಗೆ ಬಂದಿವೆ, ಈ ಗ್ರಾಮದಲ್ಲಿ ನೂರಾರು ಲೀಟರ್ ಹಾಲನ್ನು ಪಟ್ಟಣಕ್ಕೆ ಕೊಂಡೊಯ್ಯುತ್ತೇವೆ ಆದರೆ ನೀರಿಲ್ಲದೆ ದನಕರುಗಳು ಹಾಲನ್ನು ಸರಿಯಾಗಿ ನೀಡುತ್ತಿಲ್ಲ ಇದರಿಂದ ನಮ್ಮ ಆಥರ್ಿಕ ಜೀವನದ ಮೇಲೂ ಹೊಡೆತ ಬಿದ್ದಿದೆ  ಎಂದು ಗ್ರಾಮಸ್ಥರು ಪ್ರತಿಭಟನೆ ವೇಳೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ತಾಲ್ಲೂಕು ಪಂಚಾಯ್ತಿ ಆಡಳಿತ ವ್ಯವಸ್ಥೆ ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರಪ್ರತಿಭಟನೆ ಮಾಡುವುದಾಗಿ ತಿಳಿಸಿದರಲ್ಲದೆ ಟ್ಯಾಂಕರ್ ನೀರಿನ ವ್ಯವಸ್ಥೆಯಿಂದ ಗ್ರಾಮಸ್ಥರು ಪರಸ್ಪರ ಜಗಳವಾಡುತ್ತಿದ್ದಾರೆ ಅದಕ್ಕಾಗಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಿಸಲು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಂಜಾಮರಿ, ಷಣ್ಮುಖ, ಗಂಗಾಧರ್ ಹಾಗೂ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಭಾಷಾ ಬೋಧಕರು ವಿದ್ಯಾಥರ್ಿಗಳಿಗೆ ಕನ್ನಡ ವ್ಯಾಕರಣದ ಬಗ್ಗೆ ಹೆಚ್ಚು ಒತ್ತು ನೀಡಿ
ಚಿಕ್ಕನಾಯಕನಹಳ್ಳಿ : ಇಂದಿನಿಂದಲೇ ಕನ್ನಡ ಭಾಷಾ ಭೋದಕರು ವಿದ್ಯಾಥರ್ಿಗಳಿಗೆ ವ್ಯಾಕರಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದರೆ ವಿದ್ಯಾಥರ್ಿ ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆಯುತ್ತಾರೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕಿಯರ ಪ್ರೌಡಶಾಲೆಯಲ್ಲಿ ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಭೋದಕರ ಸಂಘದ ವತಿಯಿಂದ ನಡೆದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.85ರಷ್ಟು ಫಲಿತಾಂಶ ಬರುತ್ತದೆಂದು ನಿರೀಕ್ಷಿಸಿದ್ದೆವು, ಆದರೆ ಕಳೆದ ಬಾರಿಗಿಂತ 5ರಷ್ಟು ಪಲಿತಾಂಶ ಕಡಿಮೆ ಬಂದಿದೆಯಲ್ಲದೆ, ತಾಲ್ಲೂಕು ಜಿಲ್ಲೆಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಶಿಕ್ಷಕರು ಈಗಿನಿಂದಲೇ ವಿದ್ಯಾಥರ್ಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಫಲಿತಾಂಶ ಬರುವಂತೆ ಕರೆ ನೀಡಿದರು. 
ತಾಲ್ಲೂಕಿನಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಕಾಯರ್ಾಗಾರಗಳು ನಡೆಯುತ್ತಿವೆ ಆದರೂ ತಾಲ್ಲೂಕಿನಲ್ಲಿ 4ಶಾಲೆಗಳು ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ. 2013-14ನೇ ಸಾಲಿನಲಿ ಇನ್ನೂಮ ಉತ್ತಮ ಫಲಿತಾಂಶ ಎಲ್ಲಾ ಶಾಲೆಗಳಲ್ಲೂ ಬರಬೇಕು ಎಂದರಲ್ಲದೆ ಅದಕ್ಕಾಗಿ ತರಬೇತಿ ಹಾಗೂ ಮೌಲ್ಯಮಾಪನದ ಬಗ್ಗೆ ವ್ಯಾಪಕ ಚಚರ್ೆಯಾಗಬೇಕು, ಇಂತಹ ಕಾರ್ಯಗಾರದಲ್ಲಿ ಶಿಕ್ಷಕರು ಭಾಗವಹಿಸಿ, ಮೂಲ ಉದ್ದೇಶದ ಅರಿವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು. 
ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ ತಾಲ್ಲೂಕಿನ ಕನ್ನಡ ಭಾಷಾ ಬೋಧಕರ ಸಂಘಟನೆ ಕನ್ನಡ ಭಾಷಾ ಬೋಧನೆಯ  ಬಗ್ಗೆ ಶಿಕ್ಷಕರಲ್ಲಿ ಹೆಚ್ಚಿನ ತರಬೇತಿ ನೀಡುತ್ತಿದೆ, ಆದರೂ ತಾಲ್ಲೂಕಿನ 58ಶಾಲೆಗಳಲ್ಲಿ ಕೇವಲ 4ಶಾಲೆಗಳು ಮಾತ್ರ ಶೇ.100ರಷ್ಟು ಪಲಿತಾಂಶ ಪಡೆದಿವೆ ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ವಿದ್ಯಾಥರ್ಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಪ್ರೀತಿ ವಿಶ್ವಾಸ ಬರುವಂತೆ ನೋಡಿಕೊಳ್ಳಬೇಕು ಎಂದರು.
ಡಿ.ವಿ.ಪಿ.ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಲ್.ಮಲ್ಲಿಕಾಜರ್ುನಯ್ಯ ಮಾತನಾಡಿ ಕನ್ನಡ ಭಾಷೆ ಸುಲಭವಲ್ಲ, ಕನ್ನಡವೂ ಕಠಿಣ ಎಂಬುದನ್ನು ಮಕ್ಕಳಿಗೆ ಅರಿವು ಮೂಡಿಸಬೇಕು, ಹಾಗೂ ಕನ್ನಡದ ಬಗ್ಗೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು 2013-14ನೇ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಶೇ.100ರಷ್ಟು ಪಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು. ಸಮಾರಂಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಪ್ಪ, ಮಂಜಯ್ಯಗೌಡರು ಉಪಸ್ಥಿತರಿದ್ದರು.
ಇದೇ 17ರಂದು ಚಿ.ನಾ.ಹಳ್ಳಿಯಲ್ಲಿ ಬಿ.ಎಸ್.ಪಿ.ಪಕ್ಷದ ಸಭೆ

ಚಿಕ್ಕನಾಯಕನಹಳ್ಳಿ,ಜು.13: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಜನ ಸಮಾಜ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರ ಸಭೆಯನ್ನು ಇದೇ 17ರ ಸೋಮವಾರ ಬೆಳಿಗ್ಗೆ11ಕ್ಕೆ ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದೆ ಎಂದು ಪಕ್ಷದ ಸಂಚಾಲಕರು ತಿಳಿಸಿದ್ದಾರೆ.
ಪಕ್ಷದ ನಾಯಕರು ಹಾಗೂ ರಾಜ್ಯ ಸಮಿತಿ ಪ್ರಧಾನ ಕಾರ್ಯದಶರ್ಿಯವರಾದ ಕ್ಯಾಪ್ಟನ್ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಆದ್ದರಿಂದ ಪಕ್ಷದ ಎಲ್ಲ ಮುಖಂಡರುಗಳು ಮತ್ತು ಸಕ್ರಿಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವಂತೆ ಸಂಚಾಲಕರುಗಳಾದ ಆರ್.ರಂಗಸ್ವಾಮಿ ಕೋರಿದ್ದಾರೆ. 


ಜನರ ಸಮಸ್ಯೆ ಬಗೆಹರಿಸುವುದೇ ಜಯಕನರ್ಾಟಕ ಸಂಘದ ಧ್ಯೇಯ:

ಚಿಕ್ಕನಾಯಕನಹಳ್ಳಿ,ಜೂ.12 : ಜಯಕನರ್ಾಟಕ ವೇದಿಕೆ ಎರಡನೇ ಪಂಕ್ತಿ ನಾಯಕರಿಗಾಗಿ ಹುಡುಕಾಡುತ್ತಿದೆ, ಅದಕ್ಕಾಗಿ 2ವರ್ಷಕ್ಕೊಮ್ಮೆ ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಬದಲಾಯಿಸುತ್ತದೆ ಎಂದು ಜಯಕನರ್ಾಟಕ ಸಂಘಟನೆಯ ರಾಜ್ಯ ಯುವ ಅಧ್ಯಕ್ಷ ಕೆ.ಎನ್.ಜಗದೀಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯನ್ನು ಎನ್.ಮುತ್ತಪ್ಪರೈರವರು ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕೆಂದು ಆಸೆಯನ್ನಿಟ್ಟುಕೊಂಡು ವೇದಿಕೆ ಸ್ಥಾಪಿಸಿದರು. ರಾಜ್ಯದ 30ಜಿಲ್ಲೆಗಳಲ್ಲೂ ಸಂಘಟನೆ ಮಾಡುವ ಮೂಲಕ ಸುಮಾರು 18ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಹೊಂದಿ, ಜನ ಪರ ಚಿಂತನೆಗೆ ಹಾಗೂ ಅವರ ಸಮಸ್ಯೆಗೆ ಸ್ಪಂದಿಸಲು ಮುಂದಾದರು ಅವರ ಮಾದರಿಯಲ್ಲೇ ತಾಲ್ಲೂಕಿಗೆ ಆಗಮಿಸಿರುವ ನಾವು ಮುತ್ತಪ್ಪರೈರವರ ಅನುಪಸ್ಥಿತಿಯಲ್ಲಿ ನಿಮ್ಮೊಂದಿಗೆ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗಿದ್ದೇವೆ ಎಂದರು.
ಸಕರ್ಾರ ಮತ್ತು ಜನರ ನಡುವೆ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲು ಇಚ್ಛಿಸಿರುವ ಯುವಕರಿಗೆ ಜಯಕನರ್ಾಟಕ ಸಂಘಟನೆ ಆದ್ಯತೆ ನೀಡುತ್ತಿದೆ, ರಾಜ್ಯದ ಸಮಸ್ಯೆಗಳ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಬಡಿದೆಬ್ಬಿಸಲು ಸಂಘಟನೆಯ ಅವಶ್ಯಕತೆ ಇದೆ, ಆದರೆ ಸಂಘಟನೆಯಲ್ಲಿ ಯಾವ ದುರುದ್ದೇಶವೂ ಇರುವುದಿಲ್ಲವೆಂದು ತಿಳಿಸಿದರು.
ನಮ್ಮ ಸಂಘಟನೆಯಲ್ಲಿರುವ ಹಲವರು ಇಂದು ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರಿನ ಬಿಬಿಎಂಪಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು ಆ ಮೂಲಕ ಜನರ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದರಲ್ಲದೆ ಜಯಕನರ್ಾಟಕ ಸಂಘಟನೆಯ ಕಾರ್ಯಕರ್ತರಿಗೆ ಸ್ಮಾಟರ್್ಕಾಡರ್್ನ್ನು ನೀಡುತ್ತಿದೆ, ಇದರಲ್ಲಿ ನಮ್ಮ ಕಛೇರಿಯ ದೂರವಾಣಿ ಸಂಪರ್ಕವಿದೆ,  ಕಾರ್ಯಕರ್ತರು ತಾವು ದೂರದ ಊರಿನಲ್ಲಿ ಸಮಸ್ಯೆ ಎದುರಾದಗ ದೂರವಾಣಿಗೆ ಸಂಪಕರ್ಿಸಿದರೆ ಅಲ್ಲಿನ ಕಾರ್ಯಕರ್ತರು ನಿಮ್ಮ ಸಮಸ್ಯೆ ನಿವಾರಿಸಲು ಮುಂದಾಗುವರು ಹಾಗೂ ಜನರಿಗೆ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿರುವ ಸಂಘಟನೆ ಮುಂದೆ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮೆಡಿಕಲ್ ಕ್ಯಾಂಪ್ ಹಮ್ಮಿಕೊಳ್ಳಲಿದೆ ಎಂದರು.  
ಜಿಲ್ಲಾ ಜಯಕನರ್ಾಟಕ ಸಂಘಟನೆಯ ಅಧ್ಯಕ್ಷ ದೀಪಕ್ ಮಾತನಾಡಿ ನಾವು ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸಲು ಈಗಾಗಲೇ 5ಜಿಲ್ಲೆಗಳಲ್ಲಿ ಕಾರ್ಯಕರ್ತರಲ್ಲಿ ಚಚರ್ಿಸಿದ್ದೇವೆ, ತುಮಕೂರು ಜಿಲ್ಲೆಯ ತಾಲ್ಲೂಕುಗಳಿಗೂ ತೆರಳಿ ಅಲ್ಲಿನ ಯುವಶಕ್ತಿಯನ್ನು ನಮ್ಮೊಂದಿಗೆ ಕೈಜೋಡಿಸಲು ಕೋರಿದ್ದೇವೆ, ಅಲ್ಲದೆ ಸಂಘಟನೆಯ ಸದಸ್ಯತ್ವವನ್ನು ಹೆಚ್ಚಿಸಿ ಸಂಘಟನೆಯಿಂದ ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯದ ವಿರುದ್ದ ಹೋರಾಟ ಮಾಡಲು ತಿಳಿಸಿದ್ದೇವೆ ಎಂದರಲ್ಲದೆ ಪಕ್ಷಗಳು ಸಂಘಟನೆ ಮಾಡುವುದು ಅಧಿಕಾರ ಬರುವವರೆಗೆ ಮಾತ್ರ ಆದರೆ ನಮ್ಮ ಸಂಘಟನೆ ಜನರ ಸಮಸ್ಯೆ ನಿವಾರಿಸುವುದಕ್ಕಾಗಿ  ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯಕನರ್ಾಟಕ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್,  ತಾಲೂಕು ಗೌರವಾಧ್ಯಕ್ಷ ಹೆಚ್.ಬಿ.ಪ್ರಕಾಶ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಉಪಾದ್ಯಕ್ಷ ಚಂದ್ರು(ಜೆಸಿಬಿ), ತಾಲ್ಲೂಕು ಯುವ ಅಧ್ಯಕ್ಷ ಭೈರೇಶ್, ನಾಗರಾಜು, ಧೃವಕುಮಾರ್ ಮುಂತಾದವರಿದ್ದರು.
ಸ್ಥಳೀಯ ಜನಪ್ರತಿನಿದಿ  ಮತ್ತು ಗಣಿಭಾದಿತ ರೈತರನ್ನು ದೂರವಿಟ್ಟು ಗಣಿಗಾರಿಕೆ ಸಭೆ: ತಾ.ಪಂ.ಅಧ್ಯಕ್ಷರ ಆಕ್ರೋಶ
ಚಿಕ್ಕನಾಯಕನಹಳ್ಳಿ,ಜೂ.11 : ಗಣಿ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಚಚರ್ಿಸಲುಶಾಸಕರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಗೆ ಜಿ.ಪಂ, ತಾ.ಪಂ. ಸದಸ್ಯರನ್ನು ಹಾಗೂ ಗಣಿಭಾದಿತ ರೈತರನ್ನು ಆಹ್ವಾನಿಸಿದೆ ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಆರೋಪಿಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 3ವರ್ಷಗಳಿಂದ ಮಳೆ ಬೆಳೆ ಇಲ್ಲದ ಸಂದರ್ಭದಲ್ಲಿ ಗಣಿ ಭಾಗದಿಂದ ಲಕ್ಷಾಂತರ ಟನ್ ಕಬ್ಬಿಣದ ಅಧಿರು ಸಾಗಿಸಿದ್ದಾರೆ, ರಸ್ತೆ ಅಭಿವೃದ್ದಿ ಹಾಗೂ ಗ್ರಾಮಗಳ ಅಭಿವೃದ್ದಿಗೆ ಪ್ರತಿಟನ್ಗೆ 25ರೂ ನಂತೆ ಹಣ ತೆಗೆದಿದ್ದರೂ ಅದನ್ನು ಉಪಯೋಗಿಸಿ ರಸ್ತೆ ರಿಪೇರಿ ಮಾಡಿಸದ ತಾಲೂಕು ಆಡಳಿತ ನಿರ್ಲಕ್ಷದೆ ಎಂದರು.
 ಲಾರಿಗಳು ಚಲಿಸುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ರಸ್ತೆಗಳಿಗೆ ನೀರನ್ನು ಸಿಂಪಡಿಸದೇ ಇರುವುದರಿಂದ ಗಣಿ ಧೂಳು ತೋಟಗಳ ತೆಂಗು, ಅಡಿಕೆ ಬೆಳೆಗಳ ಮೇಲೆ ಧೂಳು ಕುಳಿತುಕೊಳ್ಳುವುದರಿಂದ ಸರಿಯಾದ ಬೆಳೆಯಾಗದೆ ರೈತರಿಗೆ ತೀವ್ರತರ ನಷ್ಠವುಂಟಾಗಿದೆ. ಸೊಂಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಗಣಿ ಧೂಳಿನಿಂದ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೊಂಡೇನಹಳ್ಳಿ ಮಾವಿನ ಮರದ ಬಳಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮ ಗಣಿ ಭಾಗದಲ್ಲಿ ಸಂಚರಿಸುವ ಲಾರಿ ಮಾಲೀಕರು, ಟ್ರಾನ್ಸ್ಪೋಟರ್್ ಗುತ್ತಿಗೆದಾರರು ಹಾಗೂ ಮೈನ್ಸ್ನವರನ್ನು ಮಾತ್ರ ಶನಿವಾರ ನಡೆದ ಸಭೆಗೆ ಆಹ್ವಾನ ನೀಡಿದ್ದಾರೆ ಹೊರತು ರೈತರನ್ನು ಕಡೆಗಣಿಸಿ ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಪರಿಹಾರ ಕೆಲವರಿಗೆ ನೀಡಿ, ಉಳಿದವರಿಗೆ ಪರಿಹಾರ ನೀಡದೆ ಇರುವುದು ದುರಂತ, ಐದು ವರ್ಷಗಳ ಹಿಂದ ಗಣಿ ಭಾಗದಲ್ಲಿ ಸಂಚರಿಸುವ ರಸ್ತೆಗಳಿಗೆ ಡಾಂಬರು ಹಾಕಿಸುತ್ತೇವೆ ಎಂದು ಆಶ್ವಾಸನೆ ನೀಡಿದರು, ಇದುವರೆಗೂ ಡಾಂಬಾರು ಹಾಕಿಲ್ಲ ಎಂದು ದೂರಿದರು. 
ರೈತರ ಬೆಳೆಗೆ ಬೆಂಬಲ ಬೆಲೆ ನಿಗಧಿಡಪಸಿ, ನೆಫೆಡ್ ಕೇಂದ್ರಕ್ಕೆ ಒತ್ತಾಯ:  ರೈತರು ಬೆಳೆದ ತೆಂಗಿನ ಬೆಲೆ ಕಡಿಮೆಯಾಗಿ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಇದರಿಂದ ರೈತ ಕಂಗಾಲಾಗಿದ್ದಾನೆ, ಇಂತಹ ಸಂದರ್ಭದಲ್ಲಿ ಸಕರ್ಾರ ರೈತರ ನೆರವರಿಗೆ ಬರುವಂತೆ ಒತ್ತಾಯಿಸಿದ ಅವರು ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಎ.ಪಿ.ಎಂ.ಸಿ ಗಳಲ್ಲಿ ನಫೆಡ್ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿದರು. ಜೂನ್ 18ರ ಒಳಗೆ ನಫೆಡ್ ಕೇಂದ್ರ ಪ್ರಾರಂಭಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನಿರಂಜನಮೂತರ್ಿ ಹಾಗೂ ಕೆಂಕೆರೆ ನವೀನ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸುವಂತೆ ಒತ್ತಾಯಿಸಿದರು. ಕಳೆದ ಮೂರು ವರ್ಷಗಳಿಂದ ತೀವ್ರ ಬರಗಾಲದಿಂದ ತತ್ತರಿಸಿರುವ ರೈತರು ರಾಷ್ಟ್ರೀಕೃತ ಬ್ಯಾಂಕ್ನಿಂದ ತೆಗೆದುಕೊಂಡ ಸಾಲವನ್ನು ಸಕರ್ಾರ ಕೂಡಲೇ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಹಾಗೂ ಕೃಷಿ ಇಲಾಖೆ ವತಿಯಿಂದ ಉಚಿತವಾಗಿ ರೈತರಿಗೆ ಸಮರ್ಪಕ ಬಿತ್ತನೆ ಬೀಜ ವಿತರಿಸಲು ಸಕರ್ಾರ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ, ಕಾನಕೆರೆ ಪರಮೇಶ್, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.


ತಾಲೂಕಿನ ಹೆಸರು ಗಿಡಗಳಲ್ಲಿ ಹೇನಿನ ಬಾದೆ:
ಮುಂಜಾಗ್ರತೆ ವಹಿಸಲು ರೈತರಿಗೆ ಸಲಹೆ
ಚಿಕ್ಕನಾಯಕನಹಳ್ಳಿ,ಜೂ.12 :  ತಾಲ್ಲೋಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಭಿತ್ತನೆಯಾದ ಹೆಸರು ಬೆಳೆಯಲ್ಲಿ ಹೇನಿನ ಬಾದೆ ಕಂಡು ಬಂದಿದೆ ಎಂದು ಸಹಾಯಕ ಕೃಷಿ ನಿದರ್ೇಶಕರಾದ ಕೃಷ್ಣಪ್ಪ ತಿಳಿಸಿದ್ದಾರೆ.
ಹೆಸರು ಗಿಡದಲ್ಲಿ ಎಲೆಗಳ ಮುದುಡಿರುವುದು, ಗಿಡಗಳಲ್ಲಿ ಗುಂಪಾಗಿ ಹೇನುಗಳಿರುವುದು, ಹೇನಿನ ಬಾದೆಯ ಲಕ್ಷಣಗಳಾಗಿದ್ದು ಈ ಭಾದೆಯ ಹತೋಟಿಗೆ ತರಲು 1.7 ಮಿಲಿ ಡೈಮಿಥೋಯೇಟ್(ರೋಗರ್)1ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು, 1 ಎಕರೆಗೆ 200ಲೀ ಸಿಂಪರಣಾ ದ್ರಾವಣ ಬಳಸಬೇಕಾಗುತ್ತದೆ ಎಂದಿದ್ದಾರೆ.
ನಂಜುರೋಗ :-ಎಲೆಗಳು ಕಾಂತಿಹೀನಗೂಂಡು ಹೂವು ಸರಿಯಾಗಿ ಬಿಡುವುದಿಲ್ಲ ಇದರ ಹತೋಟಿಗಾಗಿ ಅಂತರ್ಪ್ಯಾಡಿ ಸಸ್ಯಸಂರಕ್ಷಣ ಔಷಧಿ ಸಿಂಪಡಿಸಬೇಕು ಎಂದು ತಿಳಿಸಿರುವ ಅವರು 1.7 ಮಿಲಿ ಡೈಮಿಥೋಯೇಟ್ ಔಷಧಿಯನ್ನು 1ಲೀ ನೀರಿನ ಪ್ರಮಾಣದಲ್ಲಿ ಬಳಸಿ ಸಿಂಪಡಿಸಬೇಕು ಎಂದಿದ್ದಾರೆ.
ಎಲೆತಿನ್ನುವ ಹುಳುವಿನಬಾದೆ ಕಂಡುಬಂದಲ್ಲಿ 2 ಮಿಲಿ ಕ್ಲೋರೋಫೈರಿಪಾಸ್ ಔಷಧಿಯನ್ನು 1ಲೀ ನೀರಿನ ಪ್ರಮಾಣದಲ್ಲಿ ಬಳಸಿ ಸಿಂಪಡಿಸಲು ಹಾಗೂ 1 ಎಕರೆ ಪ್ರಮಾಣದಲ್ಲಿ 250ಲೀ ಸಿಂಪರಣಾ ದ್ರಾವಣ ಬಳಸಬೇಕಾಗಾಗಿದ್ದು ಈ ಬಗ್ಗೆ ಸಸ್ಯಸಂರಕ್ಷಣಾ ಕ್ರಮಗಳನ್ನು ಕೈಗೂಳ್ಳಲು ರೈತ ಭಾಂದವರಲ್ಲಿ ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.