Thursday, August 11, 2011ಜಾಗತೀಕರಣ ಶೋಷಣೆ ಆಧಾರಿತ ಸಮಾಜವನ್ನು ಕಟ್ಟುತ್ತಿದೆ.ಚಿಕ್ಕನಾಯಕನಹಳ್ಳಿ,ಆ.11 : ಜಾಗತೀಕರಣ ಹುಟ್ಟು ಹಾಕುತ್ತಿರುವುದು ಹಣಕಾಸು ಬಂಡವಾಳಶಾಹಿಯೇ ವಿನಾಃ, ವಿಸ್ತೃತ ನೆಲೆಯ ಬಂಡವಾಳ ಶಾಹಿಯಲ್ಲ, ಅದು ದುಡಿಯುವ ವರ್ಗವನ್ನು ನಿರ್ಲಕ್ಷಿಸಿ ಅಧಿಕಾರದ ಶ್ರೇಣೀಕರಣವನ್ನು ಒಳಗೊಂಡು ಅಸಮಾನತೆಯ ಆಧಾರವನ್ನು ಎತ್ತಿಹಿಡಿದಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ವಿಷಯವಾಗಿ ಯು.ಜಿ.ಸಿ. ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಸಂಪತ್ತು, ಹಣ, ಉತ್ಪಾದನೆಗಳು ಮಾತ್ರ ಅಭಿವೃದ್ದಿಯೆನಿಸಿಕೊಂಡಿವೆ, ಇದರಿಮದ ಸಾಮಾಜಿಕ ನ್ಯಾಯವು ದೂರವಾಗುತ್ತಿದೆ ಎಂದರಲ್ಲದೆ, ಎನ್.ಆರ್.ನಾರಾಯಣಮೂತರ್ಿ, ಅಜೀಮ್ ಪ್ರೇಮ್ಜಿ, ವಿಜಯಮಲ್ಯ, ಅಶೋಕ್ಖೇಣಿ, ಪಿಈಎಸ್ ದೊರೆಸ್ವಾಮಿ ಮುಂತಾದವರಿಗೆ ಸಾಮಾಜಿಕ ನ್ಯಾಯದ ಅರ್ಥ ತಿಳಿಯಬೇಕಿದ್ದು ಸಾಮಾಜಿಕ ನ್ಯಾಯವು ಮೀಸಲಾತಿಗಿಂತ ವಿಸ್ತೃತವಾದ ಸಂಗತಿಯಾಗಿದೆ ಎಂದರು. ಮನುಷ್ಯ ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಕ್ರಮ ಸಾಮಾಜಿಕ ನ್ಯಾಯವಾಗಿದೆ, ಅಂತಹ ಸಮಾಜವನ್ನು ನಾವು ಕಟ್ಟಬೇಕು ಆದರೆ ಜಾಗತೀಕರಣ ಸ್ಥಳೀಯತೆಯನ್ನು ನಾಶಮಾಡಿ ಶೋಷಣೆಯನ್ನು ಆಧರಿಸಿದ ಸಮಾಜವನ್ನು ಕಟ್ಟುತ್ತಿದೆ ಎಂದು ವಿಷಾದಿಸಿದರಲ್ಲದೆ ಸ್ಥಳೀಯತೆ ಮತ್ತು ಜಾಗತೀಕರಣಗಳು ಸೇರಿ ಮಹಿಳೆಯರನ್ನು ಶೋಷಿಸುತ್ತಿವೆ ಇದರಿಂದ ದುಡಿಮೆಯು ಮಹಿಳೀಕರಣಕ್ಕೆ ಒಳಗಾಗಿದೆ ಎಂದರು. ಉದ್ದಿಮೆಗಳು ಮಹಿಳೆಯರನ್ನು ಹೆಚ್ಚು ಹೆಚ್ಚು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಬಯಸುತ್ತವೆ, ಇದರ ಹಿಂದಿನ ಉದ್ದೇಶ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವುದಲ್ಲ, ಅವರು ಸಂಘಟಿತರಾಗುವುದಿಲ್ಲ, ಅವರಿಗೆ ದುಡಿಮೆಯೆನ್ನುವುದು ಪೂರಕವಾದ ಸಂಗತಿಯಾಗಿದ್ದು ಅವರ ಕುಟುಂಬದಲ್ಲಿ ವರಮಾನ ಗಳಿಸುವವರಲ್ಲ, ಇದರಿಂದಾಗಿ ಉದ್ದಿಮೆಗಳು ಅವರಿಗೆ ಎಷ್ಟು ಕೂಲಿ ನೀಡಿದರೂ, ಎಷ್ಟು ಗಂಟೆಗಳ ಕಾಲ ದುಡಿಸಿಕೊಂಡರೂ ನಡೆಯುತ್ತದೆ, ಅವರು ಮುಷ್ಕರ ಮಾಡುವುದಿಲ್ಲ ಇದರಿಂದ ಲಿಂಗ ಅಸಮಾನತೆ ವ್ಯವಸ್ಥೆ ಸಾಮಾನ್ಯವಾಗಿದೆ ಎಂದ ಅವರು ಜಾಗತೀಕರಣದಿಂದ ಬದಲಾವಣೆಗಳು ತೀವ್ರಗತಿಯಲ್ಲಿ ನೆಡೆಯುತ್ತಿದೆ, ಸ್ಥಳೀಯತೆಗೆ ಅಪಾಯ ಬಂದಿದ್ದು ಕನ್ನಡ ಅಂದರೆ ಸ್ಥಳೀಯ ಭಾಷೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ, ಈಗ ಜಾಗತೀಕರಣ ತಡೆಯುವುದು ಅಸಾಧ್ಯವಾಗಿದೆ ಈಗ ನಮ್ಮ ಮುಂದಿರುವ ದಾರಿಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವುದು, ಅದರಿಂದ ಉಂಟಾಗುತ್ತಿರುವ ಬದಲಾವಣೆಯ ಗತಿ ಸ್ವರೂಪವನ್ನು ತಿಳಿದುಕೊಳ್ಳವುದಕ್ಕೆ ಪ್ರಯತ್ನಿಸುವುದಾಗಿದೆ ಎಂದರು. ಜಾಗತೀಕರಣದಿಂದ ಸ್ಥಳೀಯ ಸಂಸ್ಕೃತಿ ಸಾಹಿತ್ಯ ನಮ್ಮ ಭಾಷೆ ಕಳೆದುಹೋಗುವುದಿಲ್ಲ ಅದರ ಬಗ್ಗೆ ನಾವು ನಿರಾಶಾವಾದಿಗಳಾಗುವ ಅಗತ್ಯವಿಲ್ಲ ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸ್ಥಳೀಯತೆಯನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ನಾವು ಜಾಗೃತರಾಗಬೇಕು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಜಾಗತಿಕ ವೇದಿಕೆಯ ಮೂಲಕ ಪ್ರಬಲರು ದುರ್ಬಲರ ಮೇಲೆ ತಮ್ಮ ಆಕ್ರಮಣವನ್ನು ಹೇರುತ್ತಿದ್ದಾರೆ, ಏಷ್ಯನ್ ಜನರ ಮೇಲೆ ಯೂರೋಪ್ ಜನರು ಹೇರುವ ಆಕ್ರಮಣವನ್ನು ನಾವು ಕಣ್ಣಾರೆ ನೋಡಿರುವುದಾಗಿದೆ ಎಂದ ಅವರು ವಿದೇಶದಲ್ಲಿರುವ ಭಾರತೀಯ ಹೆಣ್ಣು ಮಕ್ಕಳ ಸಮಸ್ಯೆಯನ್ನು ವಿವರಿಸಿದರು.ಕೆಲವು ಸಾಹಿತಿಗಳು ತೆಲುಗು, ಇಂಗ್ಲೀಷ್ ಕಲಿತ ನಂತರ ಕನ್ನಡಕ್ಕೆ ಅನುವಾದ ಮಾಡಿಕೊಂಡು ಬರುತ್ತಿದ್ದಾರೆ ಇದಕ್ಕೆ ಕಾರಣ ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಇರುವ ಧೋರಣಾ ಮನೋಭಾವವಾಗಿದೆ ಎಂದ ಅವರು, ಸಾಹಿತಿಗಳಾದ ಲಿಂಗದೇವರು ಹಳೇಮನೆ, ಸಾ.ಶಿ.ಮರುಳಯ್ಯರವರು ಕನ್ನಡದಲ್ಲಿ ಸಾಹಿತ್ಯವನ್ನು ಬರೆದರೂ ಸರಿಯಾದ ಸ್ಥಾನಮಾನ ಅವರಿಗೆ ಸಿಗಲಿಲ್ಲ ಎಂದರಲ್ಲದೆ ಇಂದು ಎಲೆಕ್ಟ್ರಾನಿಕ್ ವಸ್ತುಗಳಿಂದಲೇ ಹೆಚ್ಚಾಗಿ ಜಾಗತಿಕ ವ್ಯವಸ್ಥೆ ಬದಲಾಗಿರುವುದು, ಕೇವಲ ಬಣ್ಣದಿಂದ ಯಾರನ್ನು ಅಳೆಯಬಾರದು ಅವರ ಗುಣದ ಬಗ್ಗೆ ಅರಿಯಬೇಕು ಎಂದರು. ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ, ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ಸಂಘಟನಾ ಕಾರ್ಯದಶರ್ಿ ಬಿ.ಎಸ್.ಬಸವಲಿಂಗಯ್ಯ ಉಪಸ್ಥಿತರಿದ್ದರು.