Saturday, December 25, 2010

ಜೆ.ಡಿ.ಎಸ್, ಬಿ.ಜೆ.ಪಿ. ಸಿಂಹಪಾಲಿಗಾಗಿ ಹೋರಾಟ. ಜೆ.ಡಿ.ಯು, ಕಾಂಗ್ರೆಸ್ ಸ್ಥಾನ
ಹೆಚ್ಚಿಸಿಕೊಳ್ಳುವ ಹಠ.

(ಕೆ.ಎನ್.ಎನ್)
ಚಿಕ್ಕನಾಯಕನಹಳ್ಳಿ,ಡಿ.25: ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಮತದಾರನನ್ನು ಓಲೈಸುವ ಅಂತಿಮ ಪ್ರಯತ್ನವಾಗಿ ಆಮೀಷಕ್ಕೆ ಇಡು ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಕ್ಷಣ ಕ್ಷಣಕ್ಕೂ ಅಬ್ಯಾಥರ್ಿಗಳ ಪರವಾದ ವಾತಾವರಣ ಬದಲಾಗುತ್ತಿದೆ.
ನಾಮಪತ್ರ ಅಂತಿಮಗೊಂಡು ನಿಜವಾದ ಅಬ್ಯಾಥರ್ಿಗಳು ಯಾರೆಂಬುದು ಸ್ಪಷ್ಟವಾದ ಐದಾರು ದಿನಗಳ ತನಕ ಒಂದು ರೀತಿಯ ಅಲೆ ನಿಮರ್ಾಣವಾಗಿದ್ದರೆ, ಶುಕ್ರವಾರದಿಂದ ಅದರ ಸ್ವರೂಪವೇ ಬದಲಾಗುತ್ತಿದೆ. ಕೊನೆಯ ಎರಡು ದಿನಗಳಲ್ಲಿ ಚುನಾವಣೆಯ ತಂತ್ರಗಳು ವಿಭಿನ್ನರೀತಿಯಾಗಿರುವುದರಿಂದ ಮತದಾರರ ಒಲವು ಯಾವ ಕಡೆ ಎಂಬುದನ್ನು ಸುಲಭವಾಗಿ ಅಥರ್ೈಸುವುದು ಕಷ್ಟ ಸಾಧ್ಯವೇ ಸರಿ.
ಅಬ್ಯಾಥರ್ಿಗಳ ಹಾಗೂ ಅವರ ಬೆಂಬಲಿಗರ ಹಲವಾರು ತಂತ್ರಗಾರಿಕೆಗಳ ನಡುವೆಯೂ, ಮತದಾರ ತಾನು ಯಾರಿಗೆ ಓಟು ನೀಡಬೇಕೆಂಬ ಗುಟ್ಟನ್ನು ಆತ್ಮೀಯವಾಗಿ ಮಾತಿಗೆಳೆದಾಗ ಮಾತ್ರ ಸೂಕ್ಷ್ಮವಾಗಿ ತಿಳಿಸ ಬಲ್ಲ. ಕೆಲಸಕ್ಕಾಗಿ ಪತ್ರಿಕೆ ಗ್ರಾಮಸ್ಥರಿಂದ ಪಡೆದ ವಿವರಣೆಗಳನ್ನು ವಿಶ್ಲೇಷಿಸಿದಾಗ ದೊರೆತ ಮಾಹಿತಿ ಇಂತಿದೆ.
ತಾಲೂಕಿನಲ್ಲಿನ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪೈಕಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್. ಸಿಂಹಪಾಲನ್ನು ಪಡೆಯುವುದಾಕ್ಕಾಗಿ ಶತಾಯಗಥಾಯ ಹೋರಾಡುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆ.ಡಿ.ಯು ತಲಾ ಎರಡು ಕ್ಷೇತ್ರಗಳನ್ನು ಪಡೆಯಲೇ ಬೇಕೆಂದು ಹಠ ಹಿಡಿದಿವೆ. ನಡುವೆ ಜೆ.ಡಿ.ಯು ಹಾಗೂ ಬಂಡಾಯ ಅಬ್ಯಾಥರ್ಿ ಬಲ ಮೇಲುಗೈ ಆದರೆ ಇದರಿಂದ ಬಿ.ಜೆ.ಪಿ.ಗೆ ಸಹಿಸಿಕೊಳ್ಳುವುದು ಕಷ್ಟವಾದರೆ, ಕಾಂಗ್ರೆಸ್ ಬಲಿಷ್ಟವಾದಷ್ಟು ಜೆ.ಡಿ.ಎಸ್.ಗೆ ಪೆಟ್ಟು ಗ್ಯಾರಂಟಿ.
ಮಾಜಿ ಸಿ.ಎಂ. ಕುಮಾರಸ್ವಾಮಿ ಗರಡಿಯಲ್ಲಿ ಚೆನ್ನಾಗಿ ಪಳಗಿರುವ ಶಾಸಕ ಸಿ.ಬಿ.ಸುರೇಶ್ ಬಾಬು, ಇತ್ತೀಚೆಗಂತೂ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದ ಹಸ್ತರಾಗಿರುವಂತಿದೆ. ತಮ್ಮ ಯಾವುದೇ ನಡೆಯನ್ನು ಬಿಟ್ಟುಕೊಡದೆ ಚುನಾವಣಾ ತಂತ್ರಗಳನ್ನು ರಾತ್ರಿ ಕಾಯರ್ಾಚರಣೆಗೆ ಮೀಸಲಿಟ್ಟಿದ್ದಾರೆ. ಬಿ.ಜೆ.ಪಿ. ಕಿರಣ್ಕುಮಾರ್ ರವರು ತಮ್ಮ ಅನುಭವದ ಜೊತೆಗೆ ಸಂಸದ ಜಿ.ಎಸ್.ಬಸವರಾಜು ರವರೊಂದಿಗೆ ಒಂದು ರೌಂಡ್ ಬಂದಿದ್ದಾರೆ ಮತದಾರರ ಆಸೆ ಆಮೀಷಗಳನ್ನು ಪೂರೈಸಲು ಸನ್ನದ್ದರಾಗಿದ್ದಾರೆ ಹಣವನ್ನು ಸ್ಪಲ್ಪ ಧಾರಳವಾಗಿಯೇ ಕೈ ಬಿಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಜೆ.ಡಿ.ಯು. ಜೆ.ಸಿ.ಮಾಧುಸ್ವಾಮಿ ಪಕ್ಷಕ್ಕಿಂತ ನಾಯಕತ್ವಕ್ಕೆ ಬೆಲೆ ಕೊಡಿ, ಬೆಂಗಳೂರಿನಲ್ಲಿರುವ ಜನರು ಬೇಕೇ, ಕ್ಷೇತ್ರದಲ್ಲಿ ವಾಸ್ತವ್ಯ ಇರುವ ನಾಯಕರು ಬೇಕೊ ಆರಿಸಿಕೊಳ್ಳಿ ಎಂಬ ಭಾವನಾತ್ಮಕ ಮಾತುಗಳಿಂದ ಜನರನ್ನು ತಮ್ಮ ಪರವಾಗಿ ಎಳೆದುಕೊಳ್ಳುವ ಜೊತೆಗೆ ತಮ್ಮ ಕೈಲಾದ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರೆ. ಕಾಂಗ್ರೆಸ್ನಲ್ಲಿ ಈಗ ಒಂದಿಷ್ಟು ಚೇತರಿಕೆಯ ವಾತಾವರಣ ಮೂಡಿದೆ, ಹೊಯ್ಸಳಕಟ್ಟೆ, ಹುಳಿಯಾರು, ಕಂದಿಕೆರೆ ಜಿ..ಕ್ಷೇತ್ರಗಳಲ್ಲಿ ಪದೇ ಪದೇ ಕಾಣಸಿಗುತ್ತಿರುವ ಜಯಚಂದ್ರ ರವರ ಮಗ ಸಂತೋಷ ಇಲ್ಲಿಯೇ ಗಿರಿಕಿ ಹೊಡೆಯುತ್ತಿದ್ದಾರೆ. ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ ತಮ್ಮ ಕೈಲಾದಷ್ಟು ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ.
ಜಿ.ಪಂ. ಕ್ಷೇತ್ರಗಳ ಪೈಕಿ ಶೆಟ್ಟೀಕೆರೆ ಕ್ಷೇತ್ರಕ್ಕೆ ಎಲ್ಲಿಲ್ಲದ ಮಹತ್ವ ಯಾಕೆಂದರೆ ತಾಲೂಕಿನ ಗಣಿ ಪ್ರದೇಶದಲ್ಲಿನ ಶೇ.80ರಷ್ಟು ಖನಿಜ ಇರುವುದು ಪ್ರದೇಶದ ವ್ಯಾಪ್ತಿಯಲ್ಲಿಯೇ, ಈಗಾಗಿ ಇಲ್ಲಿ ಐದು ಜನ ಅಬ್ಯಾಥರ್ಿಗಳು. ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಯು, ಜೆ,ಡಿ.ಎಸ್ ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ. ಇಲ್ಲಿ ಬಿ.ಜೆ.ಪಿ.ಯವರ ಕಾಲನ್ನು ಜೆ.ಡಿ.ಯು ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ ಎಳೆಯುತ್ತಿದ್ದರೆ, ಕಾಂಗ್ರೆಸ್ನವರ ಕಾಲನ್ನು ಜೆ.ಡಿ.ಎಸ್.ನವರು ಎಳೆಯುತ್ತಿದ್ದಾರೆ.
ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆರಂಭದಿಂದ ಇಲ್ಲಿಯವರೆಗೂ ಗೆದ್ದಿರುವವರು ಲಿಂಗಾಯಿತರೇ ಹೆಚ್ಚು, ಇಲ್ಲಿ ಹಿಂದುಳಿದ ವರ್ಗಗಳ ಮತಗಳೂ ನಿಣರ್ಾಯಕವಾದವು ಎಂಬುದನ್ನು ಇತ್ತೀಚಗಷ್ಟೇ ಅರಿತಿರುವುದರಿಂದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಹಿಂದುಳಿದವರನ್ನು ಕಣಕ್ಕಿಳಿಸಿದ್ದಾರೆ. ಜೆ.ಡಿ.ಎಸ್. ಸಾಸಲು ಸತೀಶ್ ಇಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಲಕ್ಕಪ್ಪನವರಿಗೆ ತೊಡರಗಾಲು ಆಗುತ್ತಾರೆಯೇ ಹೊರತು ಗೆಲ್ಲುವ ಅವಕಾಶಗಳು ಕಡಿಮೆ. ಜೆ.ಡಿ.ಯುನ ಶಂಕರಲಿಂಗಯ್ಯನಿಗೆ ಹಿಂದೆ ಸೋತಿದ್ದಾರೆಂಬ ಅನುಕಂಪ ಹಾಗೂ ಜೆ.ಸಿ.ಎಂ. ಪ್ರಭಾವಳಿ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ ಹಾಗೂ ಪಕ್ಷೇತರ ಅಬ್ಯಾಥರ್ಿ ಬಿ.ಎನ್.ಶಿವಪ್ರಕಾಶ್ಗೆ ನೇರ ಹಣಾಹಣಿ ಇದ್ದರೂ, ಬಿ.ಜೆ.ಪಿ. ಅಬ್ಯಾಥರ್ಿ ಪಂಚಾಕ್ಷರಯ್ಯ ಪ್ರಬಲ ಅಬ್ಯಾಥರ್ಿಯೇ, ಮೂವರು ಲಿಂಗಾಯಿತರು ಓಟಗಳನ್ನು ಹಂಚಿಕೊಳ್ಳಲಿದ್ದು, ಹಿಂದುಳಿದವರ ಪೈಕಿ ಇಬ್ಬರಿದ್ದು ಉಳಿದ ಜಾತಿಯವರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಯಾರೇ ಗೆದ್ದರೂ ಅಲ್ಪ ಮತಗಳ ಅಂತರದಲ್ಲೇ. ಚುನಾವಣೆಯ ದಿನ ಯಾರ್ಯಾರ ಬೆಂಬಲಕ್ಕೆ ಯಾರ್ಯಾರು ಪಾಂಪ್ಲೇಟ್ ಹಿಡಿದು ನಿಲ್ಲುತ್ತಾರೆ ಎಂಬುದರ ಮೇಲೂ ಒಂದು ಕಣ್ಣಿದೆ.
ಕಂದಿಕೆರೆ ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳು ಸ್ಪಧರ್ಿಸಿವೆ ಇಲ್ಲಿ ಪಕ್ಷೇತರರಿಲ್ಲ, ಬಂಡಾಯದ ಬಿಸಿಯೂ ಕಡಿಮೆ. ಇಲ್ಲಿ ಆರಂಭದಲ್ಲಿ ಕಾಂಗ್ರೆಸ್ನ ಪರಮೇಶ್ವರಯ್ಯ ವೀಕ್ ಎಂಬಂತೆಯೇ ಇತ್ತು, ಆದರೆ ಸಂತೋಷ ಜಯಚಂದ್ರ ಅಖಾಡಕ್ಕಿಣದ ಮೇಲೆ ಸ್ವಲ್ಪ ಚೇತರಿಕೆ ಕಂಡಿದೆ, ಬಿ.ಜೆ.ಪಿ.ಪಕ್ಷದ ಆಲದಕಟ್ಟೆ ಸಿ.ರಂಗನಾಯ್ಕ ಬೆಂಗಳೂರಿನಿಂದ ಧುತ್ತನೆ ಬಂದು ನಿಂತಿರುವದರಿಂದ ಸ್ಥಳೀಯರೇ ಆದರೂ ಇವರು ಕ್ಷೇತ್ರದ ಜನರಿಗೆ ಹೊರಗಿನಂತೆ ಕಾಣುತ್ತಿದ್ದಾರೆ. ಇಲ್ಲಿ ಜೆ.ಡಿ.ಯು ಹಾಗೂ ಜೆ.ಡಿ.ಎಸ್.ಗೆ ನೇರ ಸ್ಪಧರ್ೆ. ಜೆ.ಡಿ.ಎಸ್. ಹೀರಯ್ಯ ಕ್ಷೇತ್ರಕ್ಕೆ ಹೊಸಬ, ಶಾಸಕ ಸಿ.ಬಿ.ಸುರೇಶ್ ಬಾಬು ರವರ ಬೆಂಬಲ ಪ್ರಬಲವಾಗಿ ಕೆಲಸ ಮಾಡಿದರೆ ಉಂಟು ಇಲ್ಲದಿದ್ದರೆ, ಜೆ.ಡಿ.ಯು. ಅಬ್ಯಾಥರ್ಿ ಲೋಹಿತಾ ಬಾಯಿಗೆ ಅವಕಾಶ ಹೆಚ್ಚು. ಲೋಹಿತಾ ಇಷ್ಟು ಪ್ರಬಲವಾಗಲು ಕಾರಣ ಅಬ್ಯಾಥರ್ಿಯ ಭಾವ ಸಿಂಗದಹಳ್ಳಿ ರಾಜ್ಕುಮಾರ್ಗೆ ಕ್ಷೇತ್ರದಲ್ಲಿರುವ ನೆಟ್ ವಕರ್್ ಹಾಗೂ ಕಳೆದ ಜಿ.ಪಂ.ಗಳಲ್ಲಿ ಸೋತಿದ್ದಾರೆಂಬ ಸಿಂಪತಿ ಚೆನ್ನಾಗಿ ಕೆಲಸ ಮಾಡಿತ್ತಿರುವುದರಿಂದ ಲೋಹಿತಾ ಬಾಯಿಯ ಗೆಲುವನ್ನು ತಡೆಯುವುದು ಬೇರೆ ಅಬ್ಯಾಥರ್ಿಗಳಿಗೆ ಕಷ್ಟ ಸಾಧ್ಯ.
ಹಂದನಕೆರೆ ಜಿ.ಪಂ. ಕ್ಷೇತ್ರದಲ್ಲಿ ಆರು ಜನ ಸ್ಪಧರ್ೆಯಲ್ಲಿದ್ದು, ಜೆ.ಡಿ.ಎಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಯು ತ್ರಿಕೋನ ಸ್ಪಧರ್ೆ ಇದೆ. 40 ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಜೆ.ಡಿ.ಎಸ್. ಜಾನಮ್ಮ ರಾಮಚಂದ್ರಯ್ಯ, ಯಶೋಧ ಬಸವರಾಜು ನೇರ ಹಣಾಹಣಿಯಲ್ಲಿದ್ದಾರೆ, ಉಳಿದ 15 ರಲ್ಲಿ ಜೆ.ಡಿ.ಯು. .ಎಸ್. ಅನುಸೂಯಮ್ಮ ಪ್ರಬಲರಾಗಿದ್ದಾರೆ. ಯಾವ್ಯಾವ ಮತಗಟ್ಟೆಗಳಲ್ಲಿ ಯಾರ್ಯಾರು ಯಾರ್ಯಾರ ಸೀರೆಯ ಸೆರಗು ಹಿಡಿದು ಎಳೆದಾಡುತ್ತಾರೊ ಹೇಳುವುದು ಕಷ್ಟ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳಿಂದ ನಾಲ್ಕು ಅಬ್ಯಾಥರ್ಿಗಳು ಸ್ಪಧರ್ೆಯಲ್ಲಿದ್ದಾರೆ ಇದರಲ್ಲಿ ಆರಂಭದಲ್ಲಿ ಜೆ.ಡಿ.ಎಸ್ನ ಜಯಲಕ್ಷ್ಮಿ, ಬಿ.ಜೆ.ಪಿ. ನಿಂಗಮ್ಮ ನವರ ಬೆಂಬಲಿಗರುಗಳು ನಮ್ಮಿಬ್ಬರಲ್ಲಿ ಯಾರು ಬೇಕಾದರೂ ಗೆಲ್ಲ ಬಹುದೆಂದು ಅಂದುಕೊಂಡಿದ್ದರು, ಆದರೆ ಈಗ ಕಾಂಗ್ರೆಸ್ನ ಸಂತೋಷ ಜಯಚಂದ್ರ ಲವಲವಿಕೆಯಿಂದ ಓಡಾಡುತ್ತಿರುವುದು ಜೆ.ಡಿ.ಯು. ವರಿಷ್ಠ ಮಾಧುಸ್ವಾಮಿ ಜನರನ್ನು ತಮ್ಮ ಮಾತಿನ ಮೋಡಿಗೆ ಎಳೆದುಕೊಂಡಿರುವುದರಿಂದ ಜಯಲಕ್ಷ್ಮಿ ಮತ್ತು ನಿಂಗಮ್ಮ ಹೆಚ್ಚು ತ್ರಾಸು ಪಡಬೇಕಿದೆ.
ಹುಳಿಯಾರು ಜಿ.ಪಂ. ಕ್ಷೇತ್ರದಲ್ಲಿ 5 ಜನ ಮಹಿಳೆಯರಲ್ಲಿ ಹೊರೆ ಹೊತ್ತಿರುವ ಎನ್.ಜಿ. ಮಂಜುಳ ನಾನು ಮುಂದು ಎಂದರೆ, ಕಮಲ ಹಿಡಿದಿರುವ ಮಹಿಳೆ ಎಸ್.ಎಚ್.ಲತಾ ನಾನೇನು ಕಮ್ಮಿ ಇಲ್ಲ ಎನ್ನುತ್ತಿದ್ದಾರೆ, ರೇಣುಕಾದೇವಿ ಬಾಣ ಹಿಡಿದು ಯಾರಿಗೆ ಹೊಡೆಯಲಿ ಎನ್ನುತ್ತಿದ್ದಾರೆ, ರಮಾದೇವಿ ಓಟದಲ್ಲಿ ಸ್ವಲ್ಪ ಮುಂದಿರುವ ಇಬ್ಬರ ಪೈಕಿ ಯಾರಿಗೆ ಕೈ ಕೊಡಲಿ ಎನ್ನುತ್ತಿದ್ದಾರೆ. ಬಾಣದ ಹೊಡೆತದಿಂದ ಹಾಗೂ ಕೈ ಕೆಲಸದವರಿಂದ ಮಂಜುಳ ಹಾಗೂ ಲತಾ ಇಬ್ಬರಲ್ಲಿ ಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾರೆ ನೋಡಬೇಕಿದೆ.
ತಾ.ಪಂ. ಕ್ಷೇತ್ರಗಳ ಪಕ್ಷವಾರು ವಿಶ್ಲೇಷಣೆ: 19 ತಾ.ಪಂ. ಕ್ಷೇತ್ರಗಳ ಪೈಕಿ ಜೆ.ಡಿ.ಎಸ್. ಏಳು ಕ್ಷೇತ್ರಗಗಳಲ್ಲಿ, ಜೆ.ಡಿ.ಯು. ಐದು ಕ್ಷೇತ್ರಗಳಲ್ಲಿ, ಬಿ.ಜೆ.ಪಿ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನಗಳಲ್ಲಿ ಮುಂದಿವೆ.
ಶುಕ್ರವಾರ ರಾತ್ರಿ ಹಾಗೂ ಶನಿವಾರ ನಡೆಯುವ ಚುನಾವಣಾ ತಂತ್ರಗಳನ್ನು ಯಾವ್ಯಾವ ಪಕ್ಷಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೂ ಫಲಿತಾಂಶ ನಿಂತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ