ಗಾಳಿಗೆ ಧರೆಗುರುಳಿದ ಮರಗಳು, ಹೆಂಚುಗಳು
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಜೆ.ಸಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಗಸರಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಬೀಸಿದ ಬಾರಿ ಬಿರುಗಾಳಿಗೆ ತೆಂಗು, ಅಡಿಕೆ ಹಾಗೂ ಬಾಳೆ ನೆಲಕ್ಕುರುಳಿ ಮನೆಗಳ ಸೂರು ಹಾರಿ ಹೋಗಿವೆ.

ಅಗಸರಹಳ್ಳಿಯ 2ಕ್ಕೂ ಹೆಚ್ಚು ರೈತರ ತೋಟಗಳು ಮಳೆಗಾಳಿಗೆ ಬಲಿಯಾಗಿವೆ. ಬೋರೇಗೌಡರ ತೋಟದಲ್ಲಿ 35

ಗಂಗಾಧರಯ್ಯ ಮನೆಯ ನೂರಾರು ಹೆಂಚುಗಳು, ಕುಮಾರಸ್ವಾಮಿಯ ಮನೆಯ ತಗಡಿನ ಮೇಲ್ಚಾವಣಿ 80 ಅಡಿ ದೂರಕ್ಕೆ ಹಾರಿಹೋಗಿದೆ. ದಾಕ್ಷಾಯಿಣಮ್ಮ ಅವರ ಮನೆಯ ಹೆಂಚುಗಳು ಸಂಪೂರ್ಣ ಬಿರುಗಾಳಿಗೆ ನಾಶವಾಗಿದೆ, ಶಂಕರಯ್ಯ ಅವರ ಮನೆ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿ 50ಮೀ. ದೂರದಲ್ಲಿ ಬಿದ್ದಿವೆ.

ಕೋಟ್-1
ಗುರುವಾರ ರಾತ್ರಿ ಮಳೆ ಗಾಳಿಗೆ ಜೀವನಾಧಾರವಾಗಿದ್ದ ಬಾಳೆ ತೆಂಗು, ಅಡಿಕೆ ತೋಟಗಳು ಬಲಿಯಾಗಿವೆ. ತಾಲ್ಲೂಕು ಆಡಳಿತ ಶೀಘ್ರ ಸವರ್ೆಕಾರ್ಯ ನಡೆಸಿ ಪರಿಹಾರ ಒದಗಿಸಿಕೊಡಬೇಕು.
ಬೋರೇಗೌಡ,ರೈತ,ಅಗಸರಹಳ್ಳಿ.
ಕೋಟ್-2
ಅಗಸರಹಳ್ಳಿ ಒಂದರಲ್ಲೇ 20 ರೈತರಿಗೆ ಸೇರಿದ ತೋಟಗಳಲ್ಲಿ ಬಾಳೆ.ತೆಂಗು,ಅಡಿಕೆ ಮರಗಳು ಮಳೆಗಾಳಿಗೆ ಉರುಳಿವೆ.ಸವರ್ೇಕ್ಷಣೆ ನಡೆಸಿ ಅನಾಹುತವನ್ನು ಅಂದಾಜಿಸಲಾಗುವುದು.
ಆರ್.ಗಂಗೇಶ್,ತಹಶಿಲ್ದಾರ್.