Wednesday, May 8, 2013


ತಂದೆಯ ದಾಖಲೆ ಸರಿಗಟ್ಟಿದ ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ಬಾಬು.
ಚಿಕ್ಕನಾಯಕನಹಳ್ಳಿ,ಮೇ.8: ಈ ಬಾರಿಯ ಚುನಾವಣೆ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬುವಿನ ಮುಖದಲ್ಲಿ ನಗೆಯ ಹೊನಲನ್ನು ತಂದಿದ್ದರೆ, ಕೆ.ಜೆ.ಪಿ. ಯ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ರವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಅದೇನೆಂದರೆ ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆ.ಸಿ.ಎಂ. ಇರಬೇಕು ಇಲ್ಲ, ಕೆ.ಎಸ್.ಕೆ ಇರಬೇಕು. ಇಬ್ಬರಲ್ಲೊಬ್ಬರು ಇರಬೇಕು ಎಂಬುದನ್ನು ದೃಡಪಡಿಸಿದೆ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ತಮ್ಮ ತಂದೆಯ ದಾಖಲೆಗೆ ಸರಿಸಮನಾಗಿ, ತಂದೆಗೆ ತಕ್ಕ ಮಗ, ನಾನು ತಂದೆಯಂತೆಯೇ ಜನನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, 1974ರ ಚುನಾವಣೆಯಲ್ಲಿ ಮಾಜಿ ಸಚಿವ ದಿ.
ಎನ್.ಬಸವಯ್ಯ ಸಂಸ್ಥಾ ಕಾಂಗ್ರೆಸ್ನಿಂದ ಗೆಲವು ಸಾಧಿಸಿದ್ದರು,  ನಂತರ 1979ರಲ್ಲಿ ನಡೆದ ಚುನಾವಣೆಯಲ್ಲೂ ಇಂದಿರಾ ಕಾಂಗ್ರೆಸ್ನಲ್ಲಿ ಗೆಲುವು ಸಾಧಿಸಿದ್ದರು. ಅದೇ ರೀತಿ ಸಿ.ಬಿ.ಸುರೇಶ್ಬಾಬು 2008ರಲ್ಲಿ ಹಾಗೂ 2013ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಪ್ಪನಿಗೆ ತಕ್ಕ ಮಗ ಎಂಬುದನ್ನು ಸಾಬೀತು ಮಾಡಿದ್ದರೆ, ಆದರೆ ಎನ್.ಬಿ.ಯವರು ಪಕ್ಷ ಬದಲಾಯಿಸಿ ಜಯಪಡೆದಿದ್ದರು, ಸಿ.ಬಿ.ಎಸ್. ಎರಡೂ ಬಾರಿಯೂ ಹೊರೆಹೊತ್ತ ಮಹಿಳೆಯನ್ನೇ ನಂಬಿ ಜಯಶೀಲರಾಗಿದ್ದಾರೆ. 

ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲಿ ಒಮ್ಮೆ ಗೆದ್ದವರು ಮತ್ತೇ ಹಿಂದೆಯೇ ಆಯ್ಕೆ ಬಯಸಿದರೆ ಅದು ಸಾಧ್ಯವಾಗದ ಮಾತು ಎಂಬ ಪ್ರತೀತಿ ಇತ್ತು ಅದನ್ನು ಈ ಚುನಾವಣೆಯಲ್ಲಿ ಸಿ.ಬಿ.ಎಸ್. ಸುಳ್ಳು ಮಾಡಿದ್ದಾರೆ. ಅದೇ ರೀತಿ ಈ ಕ್ಷೇತ್ರದಲ್ಲಿ ಜಯಗಳಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಿಲ್ಲವೆಂಬ ಮಾತು ಮಾತ್ರ ಸುಳ್ಳಾಗಿಲ್ಲ ಎಂಬುದು ಇಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
2008ರ ಚುನಾವಣೆಗೆ ಹೊಲಿಸಿದರೆ ಸಿ.ಬಿ.ಸುರೇಶ್ಬಾಬು ಪಡೆದಿರುವ ಓಟುಗಳು 6,287 ಕಡಿಮೆಯಾಗಿದೆ.  ಕಳೆದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,84,288 ಇತ್ತು ಇದರಲ್ಲಿ ಚಲಾವಣೆಗೊಂಡಿದ್ದ ಮತಗಳು 1,43,589 ಮತಗಳು.  ಈ ಬಾರಿ ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 1,98,349, ಇದರಲ್ಲಿ ಚಲಾವಣೆಗೊಂಡವು 1,60,041 ಮತಗಳು ಮಾತ್ರ, ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು 11,139 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 
 ಜೆ.ಸಿ.ಮಾಧುಸ್ವಾಮಿ 49,620 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಬಂದಿದ್ದರೆ, ಕಳೆದ ಬಾರಿ ಜೆ.ಡಿ.ಯುನಲ್ಲಿ ಸ್ಪಧರ್ಿಸಿದ್ದ ಜೆ.ಸಿ.ಎಂ. 24308 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
ಈ ಬಾರಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ 29150 ಮತಗಳನ್ನು ಪಡೆದು ಮೂರನೇ ಸ್ಥಾನ ತಲುಪಿದ್ದಾರೆ. ಕಳೆದ ಬಾರಿ ಕೆ.ಎಸ್.ಕಿರಣಕುಮಾರ್ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.
ಕಳೆದ ಬಾರಿಯ ಚುನಾವಣೆಗೆ ಹೊಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳಷ್ಟು ಚೇತರಿಸಿಕೊಂಡಿದೆ, ಕಾಂಗ್ರೆಸ್ನ ಸಾಸಲು ಸತೀಶ್ 10,344 ಮತಗಳನ್ನು ಪಡೆದಿದ್ದಾರೆ, ಕಳೆದ ಬಾರಿ ಕಾಂಗ್ರೆಸ್ನ ಎನ್. ರೇಣುಕಪ್ರಸಾದ್ 3941 ಮತಗಳನ್ನು ಪಡೆದಿದ್ದರು.
 ರೈತ ಸಂಘದ ಕೆಂಕೆರೆ ಸತೀಶ್ 2086 ಮತಗಳು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್ 1743 ಮತಗಳು, ಬಿ.ಎಸ್.ಆರ್.ನ ದೇವರಾಜ್ 1624 ಮತಗಳು, ಸಿ.ಎಂ.ಮಂಜುಳಾ ನಾಗರಾಜ್ 1725, ಬರಗೂರು ರಾಮಚಂದ್ರಯ್ಯ 1648, ಜೆ.ಡಿ.ಯು.ನ ಜಿ.ಪ್ರಕಾಶ್ 1108, ಹನುಮಂತ ರಾಮನಾಯಕ್ 1019 ಮತಗಳನ್ನು ಪಡೆದಿದ್ದಾರೆ.