Sunday, January 2, 2011


ಮತ ಎಣಿಕೆಗೆ ಸಕಲ ಸಿದ್ದತೆ, ಪಟ್ಟಣದಲ್ಲಿ ಬಿಗಿ ಬಂದುಬಸ್ತು
ಚಿಕ್ಕನಾಯಕನಹಳ್ಳಿ,ಜ.02: ತಾಲೂಕಿನ ಚುನಾವಣಾ ಕ್ಷೇತ್ರಗಳ ಮತ ಎಣಿಕೆಗಾಗಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ 7ಕೊಠಡಿಗಳಲ್ಲಿ ಮತಎಣಿಕೆ ನಡೆಯಲಿದ್ದು 3ಕೊಠಡಿ ಜಿ.ಪಂ ಕ್ಷೇತ್ರ, 4ಕೊಠಡಿ ತಾ.ಪಂ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜ್ ತಿಳಿಸಿದ್ದಾರೆ.
ಜನವರಿ 4ರ ಮಂಗಳವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯಕ್ರಮ ನಡೆಯಲಿದ್ದು 100ಜನ ಪೋಲಿಸ್ ಸಿಬ್ಬಂದಿ ಮತ್ತು 100 ಮಂದಿ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಅಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಕಾನೂನು ಸುವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಧ್ಯ ಮಾರಟವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ಹೊತ್ತಿಗೆಲ್ಲಾ ಮುಗಿಯುವ ನಿರೀಕ್ಷಿ ಇದೆ ಎಂದರು.
ಜಿ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : ಜಿ.ಪಂ ಕ್ಷೇತ್ರಗಳಿಗೆ 3ಕೊಠಡಿ ಮೀಸಲಿಟ್ಟಿದ್ದು 1ನೇ ಕೊಠಡಿ ಹೇಮಾವತಿಯಲ್ಲಿ ಹುಳಿಯಾರು ಮತ್ತು ಹೊಯ್ಸಳಕಟ್ಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 2ನೇ ಕೊಠಡಿ
ಘಟ್ಟಪ್ರಭ ಕಂದಿಕೆರೆ , ಹಂದನಕೆರೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 3ನೇ ಕೊಠಡಿ ವೇದಾವತಿಯಲ್ಲಿ ಶಟ್ಟಿಕೆರೆ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ತಾ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : 4ನೇ ಕೊಠಡಿ ಶರಾವತಿಯಲ್ಲಿ ತಾ.ಪಂ.ನ 6ಕ್ಷೇತ್ರಗಳಾದ ಹುಳಿಯಾರು, ಯಳನಡು, ತಿಮ್ಲಾಪುರ, ಕೆಂಕೆರೆ, ಗಾಣದಾಳು, ಹೊಯ್ಸಲಕಟ್ಟೆ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
5ನೇ ಕೊಠಡಿ ನೇತ್ರಾವತಿಯಲ್ಲಿ 6ಕ್ಷೇತ್ರಗಳಾದ ತಿಮ್ಮನಹಳ್ಳಿ, ತೀರ್ಧಪುರ, ಕಂದಿಕೆರೆ, ಮಾಳಿಗೆಹಳ್ಳಿ, ಹೊನ್ನೆಬಾಗಿ, ಜೆ.ಸಿ.ಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
6ನೇ ಕೊಠಡಿ ಕೃಷ್ಣದಲ್ಲಿ ಶೆಟ್ಟಿಕೆರೆ ಮತ್ತು ಕುಪ್ಪೂರು ಈ 2ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
7ನೇ ಕೊಠಡಿ ಮಲಪ್ರಭದಲ್ಲಿ 5ಕ್ಷೇತ್ರಗಳಾದ ಮತಿಘಟ್ಟ, ಬರಗೂರು, ಹಂದನಕೆರೆ, ಡಿ.ವೈ.ಗೆರೆ, ದಸೂಡಿ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
ಎ.ಬಿ.ವಿ.ಪಿ. ತಾಲೂಕು ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜ.02: ಆಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲೂಕು ಘಟ್ಟದ ನೂತನ ಕಛೇರಿ ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಉದ್ಘಾಟಿಸಿದರು.
ಪಟ್ಟಣದ ಚಿಕ್ಕ ಆಂಜನೇಯ ಸ್ವಾಮಿ ಬಳಿ ಉದ್ಘಾಟನೆಗೊಂಡ ಅಭಾವಿಪ ಕಛೇರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತು.ಹಾ.ಒಕ್ಕೂಟದ ಅದ್ಯಕ್ಷ ಶಿವನಂಜಪ್ಪ ಹಳೇಮನೆ, ಅಭಾವಿಪ ಸಂಘಟನೆಯು ಹೆಚ್ಚು ಪ್ರಚಲಿತವಾಗಿ ವಿದ್ಯಾಥರ್ಿಗಳ ಸಮಸ್ಯೆಗಳನ್ನು ನಿವಾರಿಸಲು ಹೋರಾಡಬೇಕು, ಚಿಕ್ಕದಾಗಿ ಸ್ಥಾಪಿತವಾಗಿರುವ ಕಛೇರಿ ಅತಿ ಎತ್ತರಕ್ಕೆ ಬೆಳೆಯಬೇಕೆಂದು ಆಶಿಸಿದರು.
ಸಮಾರಂಭದಲ್ಲಿ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಮಾರಸಂದ್ರ ಸಿದ್ದರಾಮಯ್ಯ, ಕಾರ್ಯಕರ್ತರುಗಳಾದ ರಾಕೇಶ್, ನವೀನ್, ಚಂದನ್ ಉಪಸ್ಥಿತರಿದ್ದರು.