Thursday, June 23, 2016




ಚಿ.ನಾ.ಹಳ್ಳಿ ಗಣಿಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಗಣಿಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
 ತಾಲ್ಲೂಕಿನಲ್ಲಿ ಸ್ಥಗಿತವಾಗಿರುವ ಗಣಿಗಾರಿಕೆಯನ್ನು  ಪುನರಾರಂಭಿಸಲು ಹಾಗೂ ಗಣಿಗಾರಿಕೆ ಪ್ರದೇಶಗಳ ಸ್ಥಿತಿಗತಿಯ ಸೂಕ್ತ ಮಾಹಿತಿಯನ್ನು ಆರು ವಾರಗಳೊಳಗೆ ನೀಡುವಂತೆ  ಸವರ್ೋಚ್ಛ ನ್ಯಾಯಾಲಯ ಗಡುವು ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
   ತಾಲ್ಲೂಕಿನ ಗಣಿಬಾದಿತ ಪ್ರದೇಶವಾದ ಗೊಲ್ಲರಹಟ್ಟಿ, ಹೊನ್ನೆಬಾಗಿ, ಬುಳ್ಳೇನಹಳ್ಳಿ, ಯರೆಕಟ್ಟೆ ರೆಡ್ಹಿಲ್ಸ್ ಭಾಗಗಳಿಗೆ ಬೇಟಿ ನೀಡಿಪರಿಶೀಲಿಸಿದರು. ಶೀಘ್ರ ವರದಿ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶೆಟ್ಟಿಕೆರೆ ಶಾಲೆಗೆ ಸಂಸದ ಭೇಟಿ 
ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿನ ಶೆಟ್ಟಿಕೆರೆಯ ಸಕರ್ಾರಿ ಪ್ರಾಥಮಿಕ ಪಾಠಶಾಲಾ ಬಳಿ ಇರುವ ಮೊಬೈಲ್ ಟವರ್ನಿಂದ ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗುರುವಾರ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಎಸ್ಎನ್ಎಲ್ ಹಾಗೂ ಟ್ರಾಯ್ ಅಧಿಕಾರಿಗಳ ಸಭೆ ಕರೆದು ತರಂಗಾಂತರಗಳ ಪರಿಣಾಮದ ಬಗ್ಗೆ ಚಚರ್ಿಸಿ ಟವರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. 
ಬಿಎಸ್ಎನ್ಎಲ್, ಏರ್ಟೆಲ್, ವೋಡಾಪೋನ್ ಕಂಪನಿಗಳಿಗೆ ಸಂಪರ್ಕ ಸೇವೆ ಒದಗಿಸುತ್ತಿರುವ ಟವರ್ ಶಾಲೆಯ ಬಳಿಯಿದೆ. ಐವರ್ ಹೊರಹಾಕುತ್ತಿರುವ ಅಪಾಯಕಾರಿ ತರಂಗಾಂತರಗಳಿಂದಾಗಿ  ಶಾಲಾ ಮಕ್ಕಳಿಗೆ ತಲೆನೋವು  ಶುರುವಾಗಿದೆ ಎಂದು ಮಕ್ಕಳು, ಪೋಷಕರು, ಸಾರ್ವಜನಿಕರು ದೂರಿದ್ದರು.
ದೂರುದಾರ ಶಶಿಧರ್ ಮಾತನಾಡಿ, ಶೆಟ್ಟಿಕೆರೆ ಶಾಲೆ ಬಳಿಯಲ್ಲಿ ಟವರ್ ನಿಮರ್ಾಣ ಮಾಡಿರುವುದರಿಂದ ಸುತ್ತಮುತ್ತಲಿನ ಜನರಿಗೆ, ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ತಿಪಟೂರು ಉಪವಿಭಾಗಾಧಿಕಾರಿ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ, ವೈದ್ಯಾಧಿಕಾರಿ ಶಿವಕುಮಾರ್, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಸರ್ಕಲ್ನಲ್ಲಿ ಬೆಳಗದ ಹೈಮಾಸ್ಕ್ ದೀಪ 
ಚಿಕ್ಕನಾಯಕನಹಳ್ಳಿ,ಜ.23 : ಪಟ್ಟಣದ ಹಲವು ಬಡಾವಣೆಗಳಲಿ ಹಗಲೆಲ್ಲಾ ಬೀದಿ ದೀಪಗಳು ಉರಿಯುತ್ತವೆ ಆದರೆ ಪಟ್ಟಣದ ಹೃದಯ ಭಾಗವಾದ ನೆಹರು ಸರ್ಕಲ್ ನಲ್ಲಿ ಇರುವ ಹೈಮಾಸ್ಕ್ ದೀಪ ಸೇರಿದಂತೆ ತಾಲ್ಲೂಕು ಕಛೇರಿಯಿಂದ ಹುಳಿಯಾರು ಗೇಟ್ ವರೆಗಿನ 30ಕ್ಕೂ ಹೆಚ್ಚು ಬೀದಿ ದೀಪಗಳು ರಾತ್ರಿಯೂ ಉರಿಯುವುದಿಲ್ಲ.
ನೆಹರು ಸರ್ಕಲ್ನ ಹೈಮಾಸ್ಕ್ ದೀಪ 3ತಿಂಗಳ ಹಿಂದೆಯೇ ಕೆಟ್ಟು ಹೋಗಿದ್ದು ಪಟ್ಟಣದ ಹೃದಯಭಾಗ ಕತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿ 11ರ ವರೆಗೂ ಸರ್ಕಲ್ನಲ್ಲಿ ಜನ ಸಂದಣೆ ಅಧಿಕವಾಗಿದ್ದು ಕತ್ತಲೆಯ ಕಾರಣಕ್ಕೆ ಹಲವು ಅಪಘಾತಗಳು ಸಂಭವಿಸುತ್ತಿವೆ. ಹಲವು ಅಪರಾಧ ಚಟುವಟಿಕೆಗಳೂ ನಡೆಯುತ್ತಿವೆ. ಇದೇ ಸ್ಥಿತಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್, ತಾಲ್ಲೂಕು ಕ್ರೀಡಾಂಗಣ, ತಾಲ್ಲೂಕು ಪಂಚಾಯ್ತಿ ಹಿಂಭಾಗ, ಡಿವಿಪಿ ಶಾಲೆ ಆವರಣ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯ್ತಿ ಎದುರು, ಶೆಟ್ಟಿಕೆರೆ ಗೇಟ್ನಲ್ಲಿಯೂ ಬೀದಿ ದೀಪಗಳು ಕಾರ್ಯನಿರ್ವಹಿಸದೆ ಕತ್ತಲು ಆವರಿಸಿದೆ. 
ನೆಹರು ಸರ್ಕಲ್ ಮೂಲಕ ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾತ್ರಯಾದರೆ ಭಾರಿ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಾತ್ರಿಯಿಡೀ ಹೊಸದುರ್ಗ-ಬೆಂಗಳೂರಿಗೆ ಈ ಮಾರ್ಗವಾಗಿ ಸಕರ್ಾರಿ ಹಾಗೂ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ಸರ್ಕಲ್ನಲ್ಲಿ ಬೆಳಕು ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು  ಪಾಂಡುರಂಗಯ್ಯ ಹೇಳಿದರು.
  ಸರ್ಕಲ್ ಮೂಲಕ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದಿಂದ ನಾಲ್ಕು ದಿಕ್ಕಿಗೆ ರಸ್ತೆಯಿದ್ದು ತಿರುವು ಇದೆ. ಕತ್ತಲಾದರೆ ವಿದ್ಯುತ್ನ ಬೆಳಕಿಲ್ಲದೆ ಅಪಘಾತಗಳಾಗುವ ಸಂಭವವಿದೆ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಬೀದಿ ದೀಪ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಟೆಂಡರ್ ಕರೆದ ನಂತರ ಹೈಮಾಸ್ಕ್ ಲೈಟ್ ಸರಿ ಮಾಡುತ್ತಾರೆ ಎಂದು ಉತ್ತರಿಸುತ್ತಾರೆ. ಕೂಡಲೇ ಹೈಮಾಸ್ಕ್ ದೀಪ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
  ಮತ್ತೊಂದೆಡೆ ಜೋಗಿಹಳ್ಳಿ, ಅಂಬೇಡ್ಕರ್ ನಗರ, ನಾಯಕರ ಬೀದಿ ಸೇರಿದಂತೆ ಹಲವು ಕಡೆ ವಿದ್ಯುತ್ ದೀಪಗಳು ಹಗಲಿನಲ್ಲೂ ಉರಿಯುತ್ತವೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅವೈಜ್ಞಾನಿಕ ರಸ್ತೆಗೆ ನಾಗರೀಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜೂ.23 : ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ಹಾಕುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಗುರುವಾರ ನಾಗರಿಕರು ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಗೌರಸಾಗರ ಗೇಟ್ ಬಳಿ ನಡೆದಿದೆ.
   ಚಾಮರಾಜನಗರ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಮೂಲಕ ಹಾದು ಹೋಗಿದ್ದು ಕಿಬ್ಬನಹಳ್ಳಿ ಕ್ರಾಸ್ನಿಂದ ಹುಳಿಯಾರುವರೆಗೆ 35 ಕಿಮೀ ರಸ್ತೆ ದುರಸ್ಥಿಕಾರ್ಯ ನಡೆಯುತ್ತಿದೆ. ಈಗಾಗಲೆ ಕಾಮಗಾರಿ ಕಡೆ ಹಂತ ತಲುಪಿದೆ. ರಸ್ತೆಗೆ ಡಾಂಬಾರ್ ಹಾಕಲಾಗಿದ್ದು ಎರಡೂ ಬದಿಗೆ ಗ್ರಾವೆಲ್ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
 ತಾಲ್ಲೂಕಿನ ಅವಳಗೆರೆ, ದೇವರಹಳ್ಳಿ, ಭೈರಾಪುರ, ಅವಳಗೆರೆ ಗೊಲ್ಲರಹಟ್ಟಿ, ಅವಳಗೆರೆ ಭೋವಿ ಕಾಲೋನಿ ಕೆಲ ಗ್ರಾಮಸ್ಥರು ಧಾವಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರುವ ವರೆಗೆ ಕಾಮಗಾರಿ ಮುಂದುವರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
    ಅವಳಗೆರೆ ಕಾಂತರಾಜು ಮಾತನಾಡಿ, ರಸ್ತೆ ಬದಿಗೆ, ಪಕ್ಕದ ಚೌಳು ಮಣ್ಣನ್ನು ಜೆಸಿಪಿ ಯಂತ್ರ ಬಳಸಿ ಹಾಕಲಾಗುತ್ತಿದೆ. ಪಕ್ಕದ ಜಂಗಲ್ ತೆಗೆಯುತ್ತಿಲ್ಲ. ಜಲ್ಲಿಕಲ್ಲ ಬಳಸಿ ಗ್ರಾವೆಲ್ ತಯಾರಿಸಿ ರಸ್ತೆಗಿಂತ ಎರಡು ಅಡಿ ಎತ್ತರಕ್ಕೆ ಗ್ರಾವೆಲ್ ಮಿಶ್ರಿತ ಮಣ್ಣು ಹಾಕಬೇಕೆಂಬ ನಿಯಮವಿದೆ, ಗುತ್ತಿಗೆದಾರರು ಯಾವುದೇ ನಿಯಮವನ್ನು ಪಾಲಿಸದೆ ಕಾಟಾಚಾರಕ್ಕೆ ಮಣ್ಣು ಹಾಕಿಸುತ್ತಿದ್ದಾರೆ. ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಕೊಚ್ಚಿ ಹೋಗುವ ಸಂಭವವಿದೆ, ಅಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.
  ದೇವರಹಳ್ಳಿ ನಾಗರಾಜು ಮಾತನಾಡಿ, ರಸ್ತೆ ಬದಿಗೆ ಮಣ್ಣು ಹಾಕಲು ಲಕ್ಷಾಂತರ ರೂಪಾಯಿ ಹಣ ಮೀಸಲಿಡಲಾಗಿದೆ. ಬೆಂಗಳೂರಿನ ಗುತ್ತಿಗೆದಾರ ಸೂರ್ಯಪ್ರಕಾಶ್ ಎಂಬುವರು ಕಾಮಗಾರಿ ಹೊಣೆ ಹೊತ್ತಿದ್ದು ಒಂದು ಬಾರಿಯೂ ಸ್ಥಳಕ್ಕೆ ಬಂದಿಲ್ಲ. ಬದಲಿಗೆ ರಾತ್ರಿ ಹಾಗೂ ಸಂಜೆ ವೇಳೆ ಜೆಸಿಬಿ ಯಂತ್ರಗಳನ್ನು ಬಿಟ್ಟು ಕಳ್ಳತನದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಕೊಟ್ಯಾಂತರ ರೂಪಾಯಿ ಹಣ ಮಣ್ಣು ಪಾಲಾಗುತ್ತಿದೆ ಎಂದು ಆರೋಪಿಸಿದರು.
  ಪ್ರತಿಭಟನೆಯಲ್ಲಿ ನಾಗರಿಕರಾದ ಶ್ರೀನಿವಾಸ್, ಶಿವಣ್ಣ, ಸ್ವಾಮಿ, ರಾಮಯ್ಯ, ಗುರುಶಾಂತಪ್ಪ, ಕೃಷ್ಣಮೂತರ್ಿ ಮುಂತಾದವರು ಉಪಸ್ಥಿತರಿದ್ದರು.