Friday, February 8, 2013


ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು

                 ಚಿಕ್ಕನಾಯಕನಹಳ್ಳಿ,ಫೆ.08 : ಸಕರ್ಾರದಿಂದ ಸಿಗುವ ಸವಲತ್ತು, ಸಹಾಯಧನದ ಮಾಹಿತಿಯ ಕೊರತೆ ನೇಕಾರರಿಗಿದೆ, ಸಕರ್ಾರದ ಸೌಲಭ್ಯಗಳ ಬಗ್ಗೆ ನೇಕಾರರು ಅರಿಯಬೇಕು ಅದಕ್ಕಾಗಿ ನೇಕಾರರ  ಸಂಘಟನೆ ಬಲಿಷ್ಠಗೊಂಡರೆ ಇಲಾಖೆಯ ಸೌಲಭ್ಯದ ಬಗ್ಗೆ ಅರಿವು ಮೂಡಿಸಿಕೊಡುವಲ್ಲಿ ಶ್ರಮಿಸುವುದಾಗಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಗಂಗಯ್ಯ ಹೇಳಿದರು.
 ಪಟ್ಟಣದ ಶ್ರೀ ಬನಶಂಕರಿ ಸಿಲ್ಕ್ ಹ್ಯಾಂಡ್ಲೂಮ್ ನೇಕಾರರ ಸಹಕಾರ ಸಂಘದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮಾರಾಟಗಾರರ ಸಂಘದ ವತಿಯಿಂದ  ನಡೆದ ವಿನ್ಯಾಸಗಳ ಪ್ರದರ್ಶನ ಹಾಗೂ ಬಣ್ಣ ಹಾಕುವ ಕಾರ್ಯಗಾರದಲ್ಲಿ ಮಾತನಾಡಿದರು.
ಎರಡು ದಿನಗಳ ಕಾಲ ನಡೆಯುತ್ತಿರುವ ಈ ಕಾಯರ್ಾಗಾರದಿಂದ ನೇಕಾರರಿಗೆ  ನೆರವಾಗಲಿದೆ, ಸೀರೆಗಳಿಗೆ ಬಣ್ಣ ಹಾಕುವ ಹಾಗೂ ಅದರಿಂದ ಲಾಭ ಪಡೆಯುವ ಬಗ್ಗೆ ಮಾಹಿತಿ ಪಡೆದು ತಾಂತ್ರಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರಲ್ಲದೆ ಕಾಲಕಾಲಕ್ಕೆ ಇಲಾಖೆವರು ನಡೆಸುವ ಕಾರ್ಯಕ್ರಮಕ್ಕೆ ಸಂಘದ ಆಡಳಿತ ಮಂಡಳಿ ಸ್ಪಂದಿಸಿ ನೇಕಾರರಿಗೆ ಅರಿವು ಮೂಡಿಸಿ ಅವರಿಗೆ ಆಥರ್ಿಕವಾಗಿ ಸದೃಡಗೊಳ್ಳಲು ತಿಳಿಸಬೇಕು ಅಲ್ಲದೆ ಸಕರ್ಾರದಿಂದ ನೇಕಾರರಿಗೆ ಸಿಗುವ ವಿದ್ಯುತ್ಶಕ್ತಿ ಸಹಾಯಧನದ ಮತ್ತಿತರ ಸೌಲಭ್ಯಗಳನ್ನು ಒಗ್ಗಟ್ಟಿನಿಂದ ಪಡೆಯಬೇಕು ಎಂದರು. 
ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಮತ್ತು ಮಾರಾಟಗಾರರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಕೈಮಗ್ಗ ಮತ್ತು ಜವಳಿ ಇಲಾಖೆಯವರು ನಡೆಸುವಂತಹ ಕಾಯರ್ಾಗಾರದಲ್ಲಿ ನೇಕಾರರು ಪಾಲ್ಗೊಂಡರೆ ಬಟ್ಟೆಗೆ ಯಾವ ರೀತಿ ಬಣ್ಣ ಹಚ್ಚಿ, ವ್ಯಾಪಾರದ ಕೌಶಲ್ಯವನ್ನು ವೃದ್ದಿಸಿಕೊಳ್ಳಬೇಕು ಜೊತೆಗೆ ಸಕರ್ಾರದ ಅನೇಕ ಸೌಲಭ್ಯಗಳ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು. ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಹಾಗೂ ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಾಕರ ಸಂಘ ಸ್ವತಂತ್ರ ಪೂರ್ವದಿಂದಲೂ ಇದ್ದು ಇಲ್ಲಿನ ನೇಕಾರರು ಅನೇಕ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಇಂತಹ ಕಾಯರ್ಾಗಾರದಿಂದಲಾದರೂ ನೇಕಾರರಿಗೆ ಸೌಲಭ್ಯ ದೊರಕಲಿ ಎಂದು ಆಶಸಿದರು. 
ಸಮಾರಂಭದಲ್ಲಿ ಬನಶಂಕರಿ ರೇಷ್ಮೆ ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ಕಿರಣ್ಕುಮಾರ್, ರೇವಣಸಿದ್ದೇಶ್ವರ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ್, ಸಿ.ಡಿ.ರಂಗಧಾಮಯ್ಯ ಸೇರಿದಂತೆ ಹಲವರಿದ್ದರು.
ಸಕರ್ಾರಿ ವೈದ್ಯರ ಮುಷ್ಕರ

ಚಿಕ್ಕನಾಯಕನಹಳ್ಳಿ,ಫೆ.08 : ಇಂದಿನಿಂದ ಪ್ರಾರಂಭವಾಗಿರುವ ಸಕರ್ಾರಿ ವೈದ್ಯರ ಮುಷ್ಕರದಿಂದಾಗಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸಲಿಲ್ಲ, ವೈದ್ಯರುಗಳು ಕೇಂದ್ರಗಳಲ್ಲೇ ಹಾಜರಿದ್ದು ಕೇವಲ ತುತರ್ು ಸೇವೆಗಳು ಮಾತ್ರ ಲಭ್ಯವಿದ್ದವು. 
ವೈದ್ಯರ ಪ್ರಮುಖ ಬೇಡಿಕೆಗಳಾದ ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ವಗರ್ಾಯಿಸಬೇಕು,  ಸರಿಯಾದ ಸಮಯಕ್ಕೆ ಸಂಬಳ ಆಗಬೇಕು ಮತ್ತು ವಗರ್ಾವಣಾ ನಿಯಮಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟು ವೈದ್ಯರುಗಳು ಮುಷ್ಕರದಲ್ಲಿ ನಿರತರಾಗಿದ್ದಾರೆ. ಮುಷ್ಕರ ನಾಳೆಯೂ ಮುಂದುವರಿಯುವ ಲಕ್ಷಣವಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.