Tuesday, January 12, 2016

ಸಾಹಿತ್ಯ ಪರಿಷತ್ ಕೆಲಸ ಮಾಡಲು ಪೂಣರ್ಾವಧಿ ಕಾರ್ಯಕರ್ತರಾಗಿರಬೇಕು

ಚಿಕ್ಕನಾಯಕನಹಳ್ಳಿ,ಜ.11 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಪೂರ್ಣವಧಿ ಕಾರ್ಯಕರ್ತರಾಗಿದ್ದರೆ ಮಾತ್ರ ಸಾಧ್ಯ ಎಂದು ಜಿಲ್ಲಾ ಕಸಾಪ ಆಕಾಂಕ್ಷಿ ಅಭ್ಯಥರ್ಿ ಮೇಜರ್ ಡಿ.ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳಿದ್ದು ಉಳಿದ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಪಾವಗಡ, ಗುಬ್ಬಿ, ಕೊರಟಗೆರೆಯಲ್ಲಿ  ಕನ್ನಡ ಸಾಹಿತ್ಯ ಭವನಗಳಾಗಬೇಕಾಗಿದೆ ಈ ಬಗ್ಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕಟ್ಟಡ ನಿಮರ್ಿಸಲು ಶ್ರಮಿಸುವುದಾಗಿ ತಿಳಿಸಿದರು.
 ವರ್ಷಕ್ಕೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಪುಸ್ತಕ ಮೇಳ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಿರಿಯ ಸಾಹಿತಿಗಳ, ಕಲಾವಿದರ, ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಮುಖಿ ಮುಖ್ಯ ಚಿಂತಕರ, ಕಲೆ, ಕ್ರೀಡೆ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ  ಸಾಧನೆ ಮಾಡಿರುವವರ ಕಿರು ಹೊತ್ತಿಗೆಯನ್ನು ಹೊರತರಲಾಗುವು ಎಂದರು.
 ಜಿಲ್ಲಾ ಕ.ಸ.ಪ ಚಟುವಟಿಕೆಗಳನ್ನು ಅಜೀವ ಸದಸ್ಯರಿಗೆ ತಲುಪಿಸಲು ಕಲ್ಪತರು ಕನ್ನಡ ನುಡಿ ತ್ರೈಮಾಸಿಕ ಪತ್ರಿಕೆಯನ್ನು ಹೊರತರುವ ಪ್ರಯತ್ನ ಕಸಾಪ ಚುನಾವಣೆಯ ನಂತರ ಮಾಡಲಿದ್ದೇವೆ,  1970ರಿಂದಲೂ ಅಧ್ಯಕ್ಷರ ಮನೆಗಳೇ ಸಾಹಿತ್ಯ ಪರಿಷತ್ತಿನ ಕಛೇರಿಗಳಾಗಿದ್ದವು, ನಮ್ಮ ಅವಧಿಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ|| ಸಿ. ಸೋಮಶೇಖರ್ರವರ ಹೃದಯಸ್ಪಶರ್ಿ ಸಾಹಿತ್ಯಾಭೀಮಾನದಿಂದ ಜಿಲ್ಲಾಡಳಿತದ ಮಿನಿ ವಿಧಾನಸೌಧದ 2ನೇ ಮಹಡಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತಿನ ಕಛೇರಿಗೆ ಕೊಠಡಿ ನೀಡಿದ್ದು ಒಂದು ಐತಿಹಾಸಿಕ ಸಂಗತಿಯಾಗಿದೆ ಎಂದರು.
ಗುಬ್ಬಿ ಮಾಜಿ ಕಸಾಪ ಅಧ್ಯಕ್ಷ ಸಿ.ಚಂದ್ರಯ್ಯ ಮಾತನಾಡಿ, ಕನ್ನಡಕ್ಕೆ ಸಕರ್ಾರದಿಂದ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ ಆದ್ದರಿಂದ ಕನ್ನಡ ಸಂಘಗಳು ಹಾಗೂ ಕಸಾಪ ಕನ್ನಡ ಉಳಿವಿಗಾಗಿ ಹೋರಾಡಲಿದೆ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಪದಾಧಿಕಾರಿಗಳು ಹಾರತುರಾಯಿಗಳಿಗೆ ಸೀಮಿತವಾಗಿರುವುದು ವಿಷಾಧದ ಸಂಗತಿ ಎಂದರು.
ನಿವೃತ್ತ ಪ್ರಾಧ್ಯಪಕ ಸಿದ್ದಲಿಂಗಪ್ಪ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಹಣದ ಪ್ರಭಾವ ಇರಬಾರದು, 2ಸಾವಿರದಷ್ಟು ಇತಿಹಾಸವಿರುವ ಕನ್ನಡ ಭಾಷೆ ಅಳಿವಿನ ಅಂಚಿಗೆ ಬಂದಿದೆ ಆದ್ದರಿಂದ ನಾವೆಲ್ಲರೂ ಕನ್ನಡ ಉಳಿಸಿ ಬೆಳೆಸಬೇಕು ಈ ಬಗ್ಗೆ ಪ್ರಾಮಾಣಿಕವಾಗಿ ಪರಿಷತ್ತಿನ ಮೂಲಕ ಹೋರಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಬ್ಬಿ ರೋಟರಿ ಮಾಜಿ ಅಧ್ಯಕ್ಷ ರಾಜಣ್ಣ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಲಿಂಗಪ್ಪ, ಪ್ರಕಾಶ್ ಉಪಸ್ಥಿತರಿದ್ದರು.
ಸ್ಥಳೀಯ ಜನರ ಅಭಿಪ್ರಾಯದಂತೆ ಜಿ.ಪಂ, ತಾ.ಪಂ. ಟಿಕೆಟ್ ಹಂಚಿಕೆ
ಚಿಕ್ಕನಾಯಕನಹಳ್ಳಿ,ಜ.11 : ಸದಾನಂದಗೌಡರು, ಯಡಿಯೂರಪ್ಪನವರಿಂದ ಪೋನ್ ಮಾಡಿಸಿದರೆ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವುದಿಲ್ಲ,  ಆಕಾಂಕ್ಷಿಗಳ ಬಗ್ಗೆ ಆಯಾ ಕ್ಷೇತ್ರಗಳಲ್ಲಿನ ಸ್ಥಳೀಯ ಜನರ ಬಳಿ ಚಚರ್ಿಸಿ ಅವರ ಅಭಿಪ್ರಾಯದಂತೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ಪಟ್ಟಣದ ಹೊರವಲಯದ ದಬ್ಬೆಘಟ್ಟದ ಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಡೆದ  ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಈ ಬಾರಿಯ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪಧರ್ಿಸಲು ಅಭ್ಯಥರ್ಿಗಳ ಪೈಪೋಟಿ ಇದೆ, ಆದ್ದರಿಂದ ಸ್ಥಳೀಯರ ಅಭಿಪ್ರಾಯ ಪಡೆದು ಟಿಕೆಟ್ ನೀಡುವುದಾಗಿ ತಿಳಿಸಿದರಲ್ಲದೆ, 1995ರಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪಧರ್ಿಸಿ ಎಂದು ನಾವೇ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಬೇಕಾಗಿತ್ತು,  ಆದರೆ ಈಗ ಚುನಾವಣೆಯಲ್ಲಿ ಸ್ಪಧರ್ಿಸಲು ಪೈಪೋಟಿ ಏರ್ಪಟ್ಟಿದೆ ಪ್ರತಿ ಕ್ಷೇತ್ರದಲ್ಲೂ ಐದರಿಂದ ಆರು ಮಂದಿ ಕಾರ್ಯಕರ್ತರು ಅಜರ್ಿ ಸಲ್ಲಿಸಿದ್ದಾರೆ ಎಂದರು.
ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ  24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, 6ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ನಮ್ಮ ಪಕ್ಷದ ಅಭ್ಯಥರ್ಿಗಳೇ ಹೆಚ್ಚು ಗೆಲುವು ಸಾಧಿಸಿದ್ದು,  ಮುಂಬರಲಿರುವ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಅಭ್ರ್ಯಥರ್ಿಗಳೇ ಹೆಚ್ಚಿನ ಮಟ್ಟದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದ ಅವರು,  ಜಿ.ಪಂ ಮತ್ತು ತಾ.ಪಂ. ಚುನಾವಣೆಗಾಗಿ ಆಕಾಂಕ್ಷಿ ಅಭ್ಯಥರ್ಿಗಳು ಸಲ್ಲಿಸಿರುವ ಅಜರ್ಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರವರೆಗೆ ಕಳುಹಿಸಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಮುಖಂಡರು ಸ್ಥಳೀಯರ ಸಭೆ ಸೇರಿ ಟಿಕೆಟ್ ನೀಡಲಾಗುವುದು ಅಲ್ಲಿಯೂ ಒಮ್ಮತ ಅಭಿಪ್ರಾಯ ಮೂಡದಿದ್ದರೆ ಕೋರ್ ಕಮಿಟಿ ಮೂಲಕ ಟಿಕೆಟ್ ನೀಡಲಾಗುವುದು ಎಂದರು.
ತಳಮಟ್ಟದ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ  ಚುನಾವಣೆ ಇದಾಗಿದ್ದು, ಕಾರ್ಯಕರ್ತರು ಈ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಹಲವು ಮುಖಂಡರು ಸೇರ್ಪಡೆಗೊಳ್ಳುತ್ತಿದ್ದಾರೆ ಮುಂದೆಯೂ ಇದೇ ರೀತಿ ಮುಂದುವರೆಯಲಿದೆ ಎಂಬ ಅಭಿಪ್ರಾಯವಿದೆ ಎಂದ ಅವರು ಚುನಾವಣೆಗಾಗಿ ಅಜರ್ಿ ಸಲ್ಲಿಸುವ ಅಭ್ಯಥರ್ಿಗಳು ಜನವರಿ 15ರವರೆಗೆ ಬಿಜೆಪಿ ಕಛೇರಿಯಲ್ಲಿ ಅಜರ್ಿ ಸಲ್ಲಿಸಬಹುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇದೆ, ಪಕ್ಷದ ಅಭ್ಯಥರ್ಿಗಳು ಎಲ್ಲಾ ಕಡೆಗಳಲ್ಲೂ ಗೆಲುವು ಸಾಧಿಸಬೇಕು ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿದ್ದು ಪಕ್ಷ ಜನಾಭಿಪ್ರಾಯದಂತೆ ಟಿಕೆಟ್ ನೀಡುವುದು, ಪಕ್ಷದ ಅಧಿಕೃತ ಅಭ್ಯಥರ್ಿಗೆ ಪರವಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ, ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು ಪಕ್ಷ ನೀಡುವ ಅಧಿಕೃತ ಅಭ್ಯಥರ್ಿಗೆ ಕಾರ್ಯಕರ್ತರು ಶ್ರಮಿಸಬೇಕು, ಪಕ್ಷದಲ್ಲಿ ಯಾರೊಂದಿಗೆ ಒಡಕು ಇದ್ದರೆ ಅದು ಬೇರೆಯವರಿಗೆ ಲಾಭವಾಗಬಾರದು ಕಾಯರ್ತಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಲು ತಿಳಿಸಿದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳಿಂದ ಹೆಚ್ಚಿನ ಅಜರ್ಿ ಬಂದಿವೆ, ಬಿಜೆಪಿ ಪಕ್ಷ ತಾಲ್ಲೂಕಿನ ಹೆಚ್ಚಿನ ಪಕ್ಷಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಪೆಟ್ಟಿಗೆ ಅಂಗಡಿ, ಟೀ ಅಂಗಡಿಗಳಲ್ಲಿ ಚಚರ್ಿತವಾಗುತ್ತಿದ್ದು ಎಲ್ಲಾ ಕಡೆಯಲ್ಲೂ ಪಕ್ಷದಿಂದ ಯಾರು ಸ್ಪಧರ್ಿಸಬಹುದು ಎಂಬ ಗುಸುಗುಸು ಚಚರ್ೆ ನಡೆಯುತ್ತಿದೆ, ಮುಂದೆ ಬರಲಿರುವ ತಾ.ಪಂ. ಚುನಾವಣೆಯಲ್ಲಿ 15ರಿಂದ 16 ಸ್ಥಾನಗಳನ್ನು ಪಕ್ಷ ಗೆಲುವು ಸಾಧಿಸಲಿದೆ ಎಂದರು. 
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಮಾತನಾಡಿ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸುವಂತೆ ತಿಳಿಸಿದರು. 
ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಜಿ.ಪಂ 6ಕ್ಷೇತ್ರಗಳಲ್ಲಿ 5 ಸ್ಥಾನವನ್ನು 24 ತಾ.ಪಂ.ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜಿಪಿ ಪಕ್ಷವನ್ನು ಗೆಲ್ಲಿಸುವುದಾಗಿ ತಿಳಿಸಿದ ಅವರು,  ತಾಲ್ಲೂಕಿನಲ್ಲಿ ಎಲ್ಲಾ ಜಿ.ಪಂ. ತಾ.ಪಂ.ಕ್ಷೇತ್ರಗಲ್ಲೂ ಬಿಜಿಪಿ ಪಕ್ಷದಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಕುಪ್ಪೂರು ಹಾಗೂ ಕೆಂಕೆರೆ ತಾ.ಪಂ.ಕ್ಷೇತ್ರಗಳಿಗೆ ತಲಾ 20ಜನ ಆಕಾಂಕ್ಷಿಗಳಿದ್ದು ಹೊಯ್ಸಳಕಟ್ಟೆ ಒಂದು ಜಿ.ಪಂ.ಕ್ಷೇತ್ರಕ್ಕೆ 10ಜನ ಆಕಾಂಕ್ಷಿಗಳಿದ್ದಾರೆ ಆದ್ದರಿಂದ ಅಭ್ಯಥರ್ಿಗಳ ಆಯ್ಕೆಯನ್ನು ಆಯಾ ಬೂತ್ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಆಯ್ಕೆಮಾಡಲಾಗುವುದು ಎಂದ ಅವರು ಪಟ್ಟಣದಲ್ಲಿರುವ ಬಿಜಿಪಿ ಕಛೇರಿಯಲ್ಲಿ ಆಕಾಂಕ್ಷಿಗಳ ಅಜರ್ಿಗಳನ್ನು ಸ್ವಿಕರಿಸಲಿದ್ದು ಇನ್ನು ಆಕಾಂಕ್ಷಿಗಳಿದ್ದರೆ ಅಜರ್ಿಸಲ್ಲಿಸ ಬಹುದು ಎಂದರು.
ಇಂದಿನ ಅಜರ್ಿ ಬಿಜಿಪಿ ಪಕ್ಷದ ಅಜರ್ಿ ಸ್ವಿಕರಿಸುವ ಸಭೆಯಲ್ಲಿ ಒಟ್ಟು 6ಜಿ.ಪಂ.ಕ್ಷೇತ್ರಗಳಲ್ಲಿ ಶೆಟ್ಟಿಕೆರೆ ಕ್ಷೇತ್ರಕ್ಕೆ 6 ಜನ ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದು, ಕಂದಿಕೆರೆ ಕ್ಷೇತ್ರಕ್ಕೆ 4, ಹಂದನಕೆರೆ ಕ್ಷೇತ್ರಕ್ಕೆ 6, ಹುಳಿಯಾರು ಕ್ಷೇತ್ರಕ್ಕೆ 8, ಹೊಯ್ಸಳಕಟ್ಟೆ ಕ್ಷೇತ್ರಕ್ಕೆ 10, ಬುಕ್ಕಾಪಟ್ಟಣ ಕ್ಷೇತ್ರಕ್ಕೆ 8 ಜನರಂತ ಒಟ್ಟು 42 ಜನ ಆಕಾಂಕ್ಷಿಗಳು ಅಜರ್ಿಸಲ್ಲಿಸಿದ್ದಾರೆ, ಹಾಗೂ 24 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಒಟ್ಟು 90 ಆಕಾಂಕ್ಷಿಗಳು ಅಜರ್ಿಗಳನ್ನು ಸಲ್ಲಿಸಿದ್ದಾರೆ.
ತಾಲ್ಲೂಕಿನ ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳಿಂದ ಆಗಮಿಸಿದ್ದ ಚುನಾವಣಾ ಆಕಾಂಕ್ಷಿಗಳಿಂದ ಅಜರ್ಿ ಸ್ವೀಕರಿಸಿದರು.
ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಸೀತಾರಾಮಯ್ಯ, ನೇತ್ರಾವತಿ, ಕೆಂಕೆರೆನವೀನ್, ವಸಂತಯ್ಯ, ಜಯಣ್ಣ, ರಮೇಶ್ಕುಮಾರ್, ರೂಪ ಮತ್ತಿತರರು ಉಪಸ್ಥಿತರಿದ್ದರು. 
ಬಾಕ್ಸ ಕಾಲಂ:  
ಇಂದು ನಡೆದ ಅಜರ್ಿ ಸ್ವಿಕಾರ ಸಭೆಗೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬಾರದಿರುವುದು ಅನೇಕರಲ್ಲಿ ಗೊಂದಲ ಉಂಟು ಮಾಡಿತ್ತು,  ಆದರೂ ಜಿ.ಸಿ.ಮಾಧುಸ್ವಾಮಿ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳಲ್ಲಿ ಅಜರ್ಿಸಲ್ಲಿಸಿದ್ದು ಹಾಗೂ ಕೆ.ಎಸ್.ಕಿರಣ್ಕುಮಾರ್ ತಮ್ಮ ಭಾಷಣದಲ್ಲಿ ಜೆ.ಸಿ.ಎಂ. ಪಕ್ಷದ ಮತ್ತೊಂದು ಕಾರ್ಯದಲ್ಲಿ ತೊಡಗಿರುವ ಬಗ್ಗೆ ನೀಡಿದ ಹೇಳಿಕೆ ಕಾರ್ಯಕರ್ತರಲ್ಲಿದ್ದ ಗೊಂದಲವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿರಬಹುದು ಎನ್ನಲಾಗಿದೆ.   

ಎಲ್ಲಾ ಸಮಾಜದಲ್ಲೂ ಒಡಕಿದೆ ಸಂಘಟನೆ ಮೂಲಕ ಬೆಳಸಬೇಕು
ಚಿಕ್ಕನಾಯಕನಹಳ್ಳಿ,ಜ.11 :  ತಮ್ಮ ಒಳ ಒಡಕುಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಸಮಾಜ ಮುಖಿಯಾಗಿ ಕಾರ್ಯಗಳನ್ನು ಮಾಡಿದರೆ ಅದು ದೇವರ ಪಾತ್ರಕ್ಕೆ ಪಾತ್ರರಾಗುತ್ತಾರೆ ಜೊತೆಗೆ ಸಮಾಜವು ಸಂಘಟಿತವಾಗುತ್ತದೆ  ಎಂದು ಶ್ರೀಪರಮಹಂಸ ಪಾರಿವ್ರಾಕಾಚಾರ್ಯ ನಾಮದೇವಾನಂದಭಾರತಿ ಸ್ವಾಮಿಜಿ ತಿಳಿಸಿದರು.
ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಯುವಕ ಮಂಡಳಿ, ಮತ್ತು ರುಕ್ಮಣಿ ಮಹಿಳಾ ಸಮಾಜದವರು ಆಯೋಜಿಸಿದ್ದ ವಿಠ್ಠಲ ರುಖುಮಾಯಿಯವರ ದಿಂಡಿ 6ನೇ ವರ್ಷದ ಉತ್ಸವ ಹಾಗೂ ಧಾಮರ್ಿಕ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಇವರು,  ಎಲ್ಲಾ ಸಮಾಜಗಳಲ್ಲೂ ಒಳ ಒಡಕುಗಳು ಇದ್ದದ್ದೇ ಅದರೂ ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಸಮಾಜ ಮುಖಿಯಾಗಬೇಕು ಎಂದರು.
ಗೋಡೆಕೆರೆಯ ಚರಪಟ್ಟಾದ್ಯಕ್ಷರಾದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಜಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ವಿಭಕ್ತ ಕುಟುಂಬಗಗಳೇ ಹೆಚ್ಚಾಗುತ್ತಿದ್ದ,  ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಆದ್ದರಿಂದ ಕುಟುಂಬದಲ್ಲಿ ನಂಬಿಕೆ ಇಟ್ಟು ಜೀವನ ನಡೆಸ ಬೇಕು ಎಲ್ಲರೂ ಒಟ್ಟಾಗಿ ಬಾಳ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಸಮಾಜದಲ್ಲಿನ ಎಲ್ಲಾ ಜಾತಿಗಳು ಒಂದೇ ಎಲ್ಲರೂ ಪ್ರಿತಿ ವಿಶ್ವಾಸಗಳಿಂದ ಹಾಗೂ ಸಮಾನತೆಯಿಂದ ಬದುಕಿದರೆ ಯಾವುದೇ ಗೊಂದಲಗಳು ಬರುವುದಿಲ್ಲ ಎಂದ ಅವರು ವಿಠ್ಠಲ ರುಖುಮಾಯಿ ದೇವಾಲಯಕ್ಕೆ ಶಾಸಕರ ನಿಧಿಯಿಂದ 3ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ತುಮಕೂರಿನ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಹೊಸದುರ್ಗದ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ವಲಯಾಧ್ಯಕ್ಷ ಉಮೇಶ ಗುಜರೆ ತುಮಕೂರಿನನ ಭಾ.ಕ್ಷ.ಸಮಾಜದ ಸತ್ಯನಾರಾಯಣ, ಪುರಸಭಾ ಸದಸ್ಯ ಮಲ್ಲೇಶಯ್ಯ, ಜೆಡಿಎಸ್ ಮುಖಂಡ ಕಲ್ಲೇಶ, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ, ಭಾಗವಹಿಸದ್ದರು.
ಕಾರ್ಯಕ್ರಮದಲ್ಲಿ ಶ್ರೀ ತುಕಾರಾಂ ರಾವ್, ಜಗದೀಶ್ಬಾಬು ಇವರಿಂದ ಭಜನಾ ಕಾರ್ಯಕ್ರಮ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭಾರತೀಯ ಪರಂಪರೆ ಉಳಿಸುವುದು ಯುವ ಪೀಳಿಗೆ ಕೈಯಲ್ಲಿದೆ
ಚಿಕ್ಕನಾಯಕನಹಳ್ಳಿ, : ಭಾರತೀಯ ಪರಂಪರೆ ಉಳಿಸುವ ರಾಯಭಾರಿಗಳಾಗಿ ಭರತ ಖಂಡದ ಬಗೆಗಿನ ಅಭಿಪ್ರಾಯವನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಡಿವಿಪಿ ಶಾಲೆಯ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ, ಶಿಲ್ಪಕಲೆ, ಪರಂಪರೆಗಳನ್ನು ಉಳಿಸುವುದು ಅಗತ್ಯವಾಗಿದೆ ಎಂದ ಅವರು ಯುವಕರು ತಮ್ಮ ಮನಸ್ಸನ್ನು ವಿಶಾಲಗೊಳಿಸಿ ದೊಡ್ಡ ಮಟ್ಟದ ಯಶಸ್ಸು ಕಾಣುವಲ್ಲಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಶಾಲೆಯ ವತಿಯಿಂದ ನಡೆದ ಸಾಂಸ್ಕೃತಿಕ, ಕ್ರೀಡೆ, ಕಲೆ ಇನ್ನಿತರ ವಿವಿಧ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ವಾಷರ್ಿಕೋತ್ಸವದ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಬೆಂಗಳೂರು ಡಿವೈಎಸ್ಪಿ ಸಿ.ಆರ್.ರವೀಶ್ರವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಸದಸ್ಯರಾದ ಎಂ.ಕೆ.ರವಿಚಂದ್ರ, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಎಂ.ಎನ್.ಸುರೇಶ್, ಡಿವಿಪಿ ಶಾಲಾ ಸಂಸ್ಥೆ ಕಾರ್ಯದಶರ್ಿ ಸಿ.ಎಸ್.ನಟರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಸಿ.ಪಿ.ಚಂದ್ರಶೇಖರಶೆಟ್ಟಿ, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಗ್ಯಾಸ್ ಸಂಪರ್ಕ ಬಳಸುವ ಮೂಲಕ ನೈಸಗರ್ಿಕ ಸಂಪನ್ಮೂಲ ಉಳಿಸಿ
ಚಿಕ್ಕನಾಯಕನಹಳ್ಳಿ,ಜ.12 : ಮರಗಳನ್ನು ಕಡಿಯದೇ ಗ್ಯಾಸ್ ಸಂಪರ್ಕ ಬಳಸಿ ಅಡುಗೆ ಮಾಡುವ ಮೂಲಕ ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸಾಮಾಜಿಕ ಅರಣ್ಯ ಇಲಾಖೆ ಕಛೇರಿ ಆವರಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅಭಿವೃದ್ದಿ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಈ ಯೋಜನೆಯಡಿ 220 ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿದ್ದು ಈಗ 46 ಮಂದಿ ಫಲಾನುಭವಿಗೆ ವಿತರಿಸುತ್ತಿದ್ದೇವೆ, ಉಳಿದ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ, ಅಗತ್ಯ ದಾಖಲಾತಿ ಸಲ್ಲಿಸಿದ ನಂತರ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕದ ಸೌಲಭ್ಯ ನೀಡಲಾಗುವುದು ಎಂದರಲ್ಲದೆ ಈ ಮೂಲಕ ಹೆಣ್ಣಮಕ್ಕಳು ಒಲೆಯ ಮುಂದೆ ಹೊಗೆ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವುದನ್ನು ತಪ್ಪಿಸಲಾಗುವುದು ಹಾಗೂ ಪರಿಸರವನ್ನು ಉಳಿಸುವ ಕಾರ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗ್ಯಾಸ್ ಸಂಪರ್ಕ ಬಳಸುವ ವಿಧಾನದ ಬಗ್ಗೆ ಮಾದರಿಯನ್ನು ತಿಳಿಸಲಾಯಿತು. 
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಎಂ.ಕೆ.ರವಿಚಂದ್ರ, ಸಿ.ಟಿ.ದಯಾನಂದ್, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ಅರಣ್ಯ ಇಲಾಖೆಯ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದರು ಯುವ ಪೀಳಿಗೆಯನ್ನು ಶಕ್ತಿಯನ್ನಾಗಿ ಪರಿವತರ್ಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.12 : ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಸಲುವಾಗಿ ಯುವ ಶಕ್ತಿಯನ್ನು ಸಂಘಟಿಸಿ ದೇಶ ಕಟ್ಟುವ ಸಂಕಲ್ಪವನ್ನು ಸ್ವಾಮಿವಿವೇಕಾನಂದರು ಹೊಂದಿದ್ದರು ಎಂದು ಪ್ರಾಂಶುಪಾಲರಾದ ಸಿದ್ದಗಂಗಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವೇಕಾನಂದರ 154ನೇ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾನತೆಯ ಮೂಲಕ ಸ್ವಾವಲಂಬಿಗಳಾಗಿರುವಂತೆ ಭಾರತೀಯರಿಗೆ ವಿವೇಕಾನಂದರು ಸಂದೇಶ ಸಾರಿದ ಮಹಾನ್ ಚೇತನರಾಗಿದ್ದರು, ಮಕ್ಕಳು ಸ್ವಾಮಿವಿವೇಕಾನಂದರ ಬದುಕನ್ನು ಅರಿತು ನಿಶ್ಚಿತ ಮನಸ್ಸಿನಿಂದ ಶಿಕ್ಷಣವನ್ನು ಚೆನ್ನಾಗಿ ಅಭ್ಯಸಿಸಿದರೆ ಸ್ವಾವಲಂಭಿಗಳಾಗುವುದರ ಜೊತೆಗೆ ದೇಶವು ಅಭ್ಯುದಯ ಸಾದನೆಯ ಹಾದಿ ಕಾಣುತ್ತದೆ ಎಂದರು.
ರಾಜ್ಯ ಎ.ಬಿ.ವಿ.ಪಿ ಕಾರ್ಯದಶರ್ಿ ಅಮರೇಶ್ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ನಡತೆಯ ಪ್ರತೀಕವಾದರೆ ಅಂತಹ ಮಕ್ಕಳಲ್ಲಿ ನಿಸ್ವಾರ್ಥ ಸೇವೆಯನ್ನು ಕಾಣಲಾಗುತ್ತದೆ, ಸ್ವಾಮಿ ವಿವೇಕಾನಂದರು ಆತ್ಮ ವಿಶ್ವಾಸದ ಪಾಠದಲ್ಲಿ ಸ್ವದೇಶಿ ಸಂಸ್ಕೃತಿಯನ್ನು ವಿದೇಶಿಯರಿಗೆ ಆನಾವರಣಗೊಳಿಸಿ ಭಾರತ ಒಂದು ಸ್ವಾಭಿಮಾನ ದೇಶ ಎಂಬುದನ್ನು ಪ್ರಚುರ ಪಡಿಸಿದ ಮಹಾನ್ ಸನ್ಯಾಸಿ ವಿವೇಕಾನಂದರು, ಸ್ವದೇಶದ ಮಣ್ಣಿನಲ್ಲಿ ಹೊರಲಾಡಿ ನನ್ನ ದೇಹ ಅಪವಿತ್ರಗೊಂಡಿತ್ತು ಈಗ ಪ್ರವಿತ್ರನಾದೆನು ಎಂದು ನಮ್ಮ ದೇಶದ ಮಣ್ಣಿನ ಪವಿತ್ರತೆಯನ್ನು ಸಾರಿ ಹೇಳಿದ ಮಹಾನ್ ಜ್ಞಾನಿ ಇವರ ಜೀವನ ಚರಿತ್ರೆ ಎಂದೆದಿಗೂ ಅಭ್ಯಸಿಸುವುದು ಪ್ರಸ್ಥುತವಾದದ್ದು ಎಂದರು.
ಪಂಚನಹಳ್ಳಿ ಸಕರ್ಾರಿ ಕಾಲೇಜಿನ ಪ್ರಾಂಶುಪಾಲ ಸಿ.ಡಿ.ಷಣ್ಮುಖಸ್ವಾಮಿ ಮಾತನಾಡಿ ವಿವೇಕಾನಂದರಿಗೆ ವಿದೇಶಿ ಮಹಿಳೆಯೊಬ್ಬರು ಮದುವೆಯಾಗುವಂತೆ ನೀಡಿದ್ದ ಬೇಡಿಕೆಗೆ ಚಕಿತರಾದ ಅವರು, ಆಕೆಯಿಂದ ವಿವರಣೆ ಪಡೆದು ನನ್ನನ್ನೇ ಮಗ ಎಂದು ತಿಳಿದುಕೋ ತಾಯೇ ಎನ್ನುವುದರ ಮೂಲಕ  ನಮ್ಮ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದರಲ್ಲದೆ ವಿದ್ಯಾಥರ್ಿಗಳು ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡರೆ ಈ ದೇಶವನ್ನು ವಿದೇಶಿಯರು ಇನ್ನು ಹೆಚ್ಚು ಗೌರವಿಸುವಂತಾಗುತ್ತದೆ ಎಂದರು. 
ಈ ಸಂದರ್ಭದಲ್ಲಿ ಜಿಲ್ಲಾ ಎ.ಬಿ.ವಿ.ಪಿ ಕಾರ್ಯದಶರ್ಿ ಜನಾರ್ಧನ್, ಉಪನ್ಯಾಸಕರಾದ ಪರಮೇಶ್ವರಪ್ಪ, ಗಿರೀಶ್, ಧನಂಜಯ್, ರವೀಂದ್ರ ಉಪಸ್ಥಿತರಿದ್ದರು.
ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡುತ್ತಿದ್ದಾರೆ. 
ಚಿಕ್ಕನಾಯಕನಹಳ್ಳಿ,ಜ.12 : ಕ್ರೀಡೆ, ವಿಜ್ಞಾನ ಪ್ರತಿಭಾ ಕಾರಂಜಿ ಮುಂತಾದ ಕ್ಷೇತ್ರಗಳಲ್ಲಿ ತಾಲ್ಲೂಕಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಗಣನೀಯ ಸಾಧನೆ ಮಾಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಬೆಂಗಳೂರು, ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 9ರಿಂದ 16ವರ್ಷದ ಮಕ್ಕಳಿಗಾಗಿ ಕಲಾಶ್ರೀ ಶಿಬಿರ ವಿವಿಧ ಸ್ಪಧರ್ೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಶ್ರೀ ಸ್ಪಧರ್ೆಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಇರುವ ಒಂದು ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಡಿ.ಪಿ.ಓ ಅನೀಸ್ಖೈಸರ್, ಮಕ್ಕಳು ಒಂದಲ್ಲ ಒಂದು ವಿಧದಲ್ಲಿ ಪ್ರಜ್ವಲಿಸಬೇಕಿದೆ ಎಂದರು.  ಕಾರ್ಯಕ್ರಮದಲ್ಲಿ ಎಸಿಡಿಪಿಓ ಪರಮೇಶ್ವರಪ್ಪ, ಇಸಿಓ ಕೆ.ಪಿ.ಚೇತನ, ಎನ್.ಪಿ.ಕುಮಾರಸ್ವಾಮಿ,  ಸಿಆರ್ಪಿ ಲೀಲಾವತಿ, ಶಿಕ್ಷಕರಾದ ಎಸ್.ಬಿ.ಕುಮಾರ್, ಗುರುಪ್ರಸಾದ್, ರುಕ್ಮಿಣಿ, ಸಿ.ಟಿ.ರೇಖಾ ಇತರರು ಉಪಸ್ಥಿತರಿದ್ದರು.
ಕಲಾಶ್ರೀ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳು :
ಪ್ರಬಂಧ ಸ್ಪದರ್ೆ : ಅನುಷ ಎಂ.ವಿ-ಪ್ರಥಮ ರೋಟರಿ ಶಾಲೆ, ಮಧುಸೂಧನ್-ದ್ವಿತೀಯ ಸಕರ್ಾರಿ ಪ್ರೌಡಶಾಲೆ.
ಚಿತ್ರಕಲೆ ಸ್ಪಧರ್ೆ : ತಸ್ವಿನ್ಸಿಂಹ-ಪ್ರಥಮ, ಸಕರ್ಾರಿ ಪ್ರೌಡಶಾಲೆ, ಅಯನ್ಪಾಷ-ದ್ವಿತಿಯ ನವೋದಯ ಶಾಲೆ.
ಏಕಪಾತ್ರಾಭಿನಯ : ಪ್ರಶಾಂತ್ ಸಿ.ಜಿ-ಪ್ರಥಮ, ಡಿವಿಪಿ ಶಾಲೆ, ಹರೀಶ್.ಕೆ-ದ್ವಿತೀಯ ಜಿ.ಹೆಚ್.ಎಸ್.ಬಡಕೇಗುಡ್ಲು.
ವಿಜ್ಞಾನ ಪ್ರಯೋಗ : ರೀತುನಂದ್-ಪ್ರಥಮ ನವೋದಯ ಶಾಲೆ, ಬೀರೇಶ್.ಸಿ.ಬಿ-ದ್ವಿತಿಯ ಅಂಬೇಡ್ಕರ್ ಶಾಲೆ.