Tuesday, December 20, 2011



ಚಿ.ನಾ.ಹಳ್ಳಿ ತಾಲೂಕಿಗೆ  ಹೇಮೆ ಹರಿಸಲು ಮೂವತ್ತು ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಡಿ.19: ತಾಲೂಕಿನ ಮೂರು ಹೋಬಳಿಗಳಿಗೆ ಹೇಮಾವತಿ ನಾಲೆಯಿಂದ  ಕುಡಿಯುವ ನೀರು ಒದಗಿಸುವ ಯೋಜನೆಗೆ 30 ಕೋಟಿ ರೂಗಳನ್ನು ಮಂಜೂರು ಮಾಡಿರುವ ಸಕರ್ಾರವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಅಭಿನಂದಿಸಿದ್ದಾರೆ.
ತಾಲೂಕಿನ 26 ಕೆರೆಗಳಿಗೆ ನೀರು ಸರಬರಾಜು ಮಾಡಲು ಸಕರ್ಾರ 102.60 ಕೋಟಿ ರೂಗಳನ್ನು ಮಂಜೂರು ಮಾಡಿದ್ದು,  ಈ ಪೈಕಿ ಮೂರನೇ ಒಂದು ಭಾಗದಷ್ಟು ಹಣವಾದ 30 ಕೋಟಿ ರೂಗಳನ್ನು ಸಕರ್ಾರ ಬಿಡುಗಡೆ ಮಾಡಿದೆ ಎಂದರು,  ಈ ಯೋಜನೆ ಜಾರಿಗೆ ತರುವಲ್ಲಿ ಸಂಸದ ಜಿ.ಎಸ್.ಬಸವರಾಜು ನೀರಾವರಿ ತಜ್ಞ ಪರಮಶಿವಯ್ಯನವರ ಜೊತೆಗೂಡಿ ಶ್ರಮಿಸಿರುವುದು, ತಾಲೂಕಿನ ಮಾಜಿ ಶಾಸಕರುಗಳು ಹಾಗೂ ರೈತ ಸಂಘ, ಕನ್ನಡ ಪರ ಸಂಘಟನೆಗಳ ಹೋರಾಟ ಹಾಗೂ  ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರವರ ಇಚ್ಚಾಶಕ್ತಿಗೆ ನನ್ನ ಕೃತ್ಞತೆಗಳನ್ನು ಅಪರ್ಿಸಲು ಇಚ್ಚಿಸುತ್ತೇನೆ ಎಂದರು.
ಬರದ ನಾಡಿಗೆ ಕುಡಿಯುವ ನೀರು ತರುವಲ್ಲಿ ಮೂರು ಜನ ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಲಕ್ಕಪ್ಪನವರೂ ಶ್ರಮಿಸಿದ್ದಾರೆ ಎಂದ ಅವರು, ನೀರು ತರುವಲ್ಲಿ ಎಲ್ಲರೂ  ಪಕ್ಷಭೇತ ಮರೆಯುವದರ ಜೊತೆಗೆ  ವಿವಿಧ ಸಂಘಟನೆಗಳು ಕೈ ಜೋಡಿಸಿದರೆ ಈ ಯೋಜನೆಯನ್ನು ಅತೀ ಶೀಘ್ರವಾಗಿ ಜನತೆಗೆ ಅಪರ್ಿಸಬಹುದು ಎಂದರು. ಯಾವ ರಾಜಕೀಯ ಪಕ್ಷದವರೂ  ನೀರಿನ ವಿಷಯದಲ್ಲಿ ರಾಜಕಾರಣ ಮಾಡದೆ ಜನತೆಯ ಆಶಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು ತಾಲೂಕಿನ ಅಭಿವೃದ್ದಿ ದೃಷ್ಟಿಯಿಂದ ಅವಶ್ಯಕವೆಂದರು.
ತಾಲೂಕಿನ ಹಂದನಕೆರೆ ಹೋಬಳಿಯ ಮತಿಘಟ್ಟ ಭಾಗಕ್ಕೆ  ಹೊನ್ನವಳಿಯಿಂದ ಹಾಗೂ ಕಂದಿಕೆರೆ ಹೋಬಳಿಯ ಗುಡ್ಡದಾಚೆ ಭಾಗಕ್ಕೆ ನಿಟ್ಟೂರು ಕಡೆಯಿಂದ ಹಾಗೂ ಬುಕ್ಕಾಪಟ್ಟಣದ ಭಾಗದ ರಾಮಲಿಂಗಾಪುರದ ಕೆರೆಗೆ ಕಳ್ಳಂಬೆಳ್ಳಾ ಕಡೆಯಿಂದ ನೀರು ತರಬಹುದರ ಬಗ್ಗೆ ಆಲೋಚನೆ ಮಾಡುತ್ತಿದ್ದು ಈ ಬಗ್ಗೆಯೂ ಶ್ರಮಿಸುವುದಾಗಿ ತಿಳಿಸಿದರು.
ಯು.ಜಿ.ಡಿ.ಗೆ 22ಕೋಟಿ ರೂ ಪ್ರಸ್ತಾವನೆ: ಪಟ್ಟಣದ ಒಳ ಚರಂಡಿ ವ್ಯವಸ್ಥೆಯನ್ನು ಜಾರಿಗೆ ತರಲು ಸಕರ್ಾರಕ್ಕೆ 22 ಕೋಟಿ ರೂಗಳ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಿದೆ ಎಂದರಲ್ಲದೆ, ಈಗಾಗಲೇ ಸವರ್ೆ ಕಾರ್ಯ ಮುಗಿದಿದ್ದು, ಒಳ ಚರಂಡಿ ನೀರನ್ನು ಊರಿನ ಹೊರಭಾಗಕ್ಕೆ ಬಿಡಲು ಅಗತ್ಯವಿರುವ ಜಮೀನುಗಳನ್ನು ಗುತರ್ಿಸಲಾಗುತ್ತಿದ್ದು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಕರ್ಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು. 
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ  ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಈ ಸಂಬಂಧ ಸಾರಿಗೆ ಸಚಿವ ಆರ್. ಅಶೋಕ್ ರವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರು ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿದರ್ೇಶಕರಿಗೆ ಸೂಚಿಸಿರುವುದಾಗಿ ತಿಳಿಸಿದರು, ಈ ನಿಲ್ದಾಣಕ್ಕೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
2012 ಮಾಚರ್ಿ ಅಂತ್ಯಕ್ಕೆ ತೀ.ನಂ.ಶ್ರೀ. ಭವನ ಪೂರ್ಣ: ಪಟ್ಟಣದ ಟೆಲಿಪೋನ್ ಕಛೇರಿ ಪಕ್ಕದಲ್ಲಿ ನಿಮರ್ಾಣವಾಗುತ್ತಿರುವ ತೀ.ನಂ.ಶ್ರೀ.ಶತಮಾನೋತ್ಸವ ಭವನವನ್ನು 2012ರ ಮಾಚರ್ಿ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವರು ಲಿಖಿತವಾಗಿ ತಿಳಿಸಿದ್ದು, ಈ ಕಾಮಗಾರಿ ಈಗಾಗಲೇ ಲಿಂಟೆಲ್ ವರೆವಿಗೆ ನಿಮರ್ಾಣ  ಮುಗಿಸಿದ್ದು ಲಿಂಟೆಲ್ ಮೇಲ್ಬಾಗದ ಮೇಲ್ಕಟ್ಟಡದ ಕೆಲಸ ಪ್ರಗತಿಯಲ್ಲಿದೆ ಎಂದರಲ್ಲದೆ, ಈ ಕಾಮಗಾರಿಗೆ ಈಗಾಗಲೇ ಜಿಲ್ಲಾಧಿಕಾರಿಗಳ ಮುಖೇನ ಒಂದು ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ,  ಈ ಕಾಮಗಾರಿಗೆ ಇನ್ನೂ 50 ಲಕ್ಷ ರೂಗಳ  ಅನುದಾನ ಅವಶ್ಯಕತೆ ಇದೆ,  ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ತೀ.ನಂ.ಶ್ರೀ.ಭವನವನ್ನು ಒಟ್ಟು ಒಂದುವರೆ ಕೋಟಿ ರೂಗಳ ಅಂದಾಜಿನಲ್ಲಿ ನಿಮರ್ಿಸಲು ಯೋಜಿಸಲಾಗಿದೆ ಎಂದರು.
ಪಟ್ಟಣದಲ್ಲಿ ಈಗಾಗಲೇ ನಿಮರ್ಾಣವಾಗಿರುವ ಅಗ್ನಿಶಾಮಕ ಠಾಣೆ, ವಾಲ್ಮೀಕಿ ಭವನ, ತಾಲೂಕು ಕ್ರೀಡಾಂಗಣ,  ಸಂತೆ ಸ್ಥಳ ಹಾಗೂ ಪಟ್ಟಣದ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ಅಂಬೇಡ್ಕರ್ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಪುರಸಭಾ ಸದಸ್ಯರುಗಳಾದ ರವಿ(ಮೈನ್ಸ್), ಎಂ.ಎನ್.ಸುರೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ದಾನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ-2
ಹಿಂದುಳಿದ ಹಾಗೂ ಪರಿಶಿಷ್ಟರ ಬಗ್ಗೆಯೂ ನಮ್ಮ ಬ್ಯಾಂಕ್ ಹೆಚ್ಚು ಕಾಳಜಿವಹಿಸಿದೆ ಕೆ.ಎನ್.ಆರ್
ಚಿಕ್ಕನಾಯಕನಹಳ್ಳಿ,ಡಿ.19 ; ಅತಿ ಹಿಂದುಳಿದ ಜನರು ಇರುವುದು ಹಳ್ಳಿಗಾಡಿನಲ್ಲಿ, ಇಲ್ಲಿರುವ ಶೇ.80ರಷ್ಟು  ಜನ ಕೃಷಿಕರಾಗಿದ್ದು ಅವರಿಗೆ ಆಥರ್ಿಕವಾಗಿ ಸದೃಡವಾಗಲು ಆಗುತ್ತಿಲ್ಲ ಅವರಿಗಾಗಿ ಸಾಲದ ಸೌಲಭ್ಯ ನೀಡಲಾಗುತ್ತಿದೆ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
    ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ನಡೆದ ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,  ಸಣ್ಣ ಮತ್ತು ದೊಡ್ಡ ಹಿಡುವಳಿ ರೈತರುಗಳ ಜೀವನ ಸುಧಾರಿಸಲು ಬ್ಯಾಂಕಿನ ಸಾಲ ನೀಡಲಾಗುತ್ತಿದೆ, ರೈತರು ತಮ್ಮಲ್ಲಿರುವ ಹಣವನ್ನು ಖಚರ್ು ಮಾಡಿ ಕೃಷಿಗೆ ಹಾಕಿದರೂ ಲಾಭ ಸಿಗದೆ ಅವರು ಬೇರೆಯವರಿಂದ ಹೆಚ್ಚು ಬಡ್ಡಿಗೆ ಸಾಲ ಮಾಡಿ ಆತ್ಮಹತ್ಯೆ ಪ್ರಕರಣಗಳಲ್ಲಿ ತೊಡಗುತ್ತಿದ್ದಾರೆ, ಇದನ್ನು ಹಾಗೂ ರೈತರ ತಲೆ ಮೇಲೆ ಇರುವ ಖಾಸಗಿ ಬಡ್ಡಿ ಸಾಲದ ಹೊರೆ ಕಡಿಮೆ ಮಾಡಲು ಜಿಲ್ಲಾ ಬ್ಯಾಂಕ್ ನಿರ್ಧರಿಸಿದ್ದು ಹಳ್ಳಿಗಾಡಿನ ಪ್ರದೇಶದವರಿಗೆ ನಿರಂತರವಾಗಿ ಸಾಲ ನೀಡುತ್ತಿದೆ ಎಂದರು. ಹಿಂದುಳಿದವರ್ಗ ಹಾಗೂ ಪರಿಶಿಷ್ಟರ ಕಡೆಯೂ ಡಿಸಿಸಿ ಬ್ಯಾಂಕ್ ಗಮನ ಹರಿಸುತ್ತಿದೆ ಎಂದರು.
 ಬ್ಯಾಂಕಿಗೆ ಸಕರ್ಾರದಿಂದ ಯಾವುದೇ ರೀತಿಯ ಹಣ ಬರುವುದಿಲ್ಲ, ನಬಾಡರ್್ನಿಂದ ಮಾತ್ರ ಅಲ್ಪಸ್ವಲ್ಪ ಬರುತ್ತದೆ ಅದನ್ನು ಅವಧಿಯೊಳಗೆ ಬ್ಯಾಂಕ್ ಪೂರ್ಣಗೊಳಿಸಬೇಕು, ಆದರೂ ರೈತರಿಗೆ ಹಾಗೂ ಸ್ವಸಹಾಯ ಸಂಘದವರಿಗೆ ಸಾಲ ನೀಡಲಾಗುತ್ತಿದೆ ಅದನ್ನು ಖಾತೆದಾರರು ಕಟ್ಟುವ ಠೇವಣಿಯಿಂದ ನೀಡಲಾಗುತ್ತಿದೆಯಾದ್ದರಿಂದ ಸಾಲ ಪಡೆದವರು ಮರುಪಾವತಿ ಮಾಡಲು ಮುಂದಾಗಬೇಕು ಹಾಗೂ ಸಾಲಕ್ಕೆ ಮಾತ್ರ ಜಿಲ್ಲಾ ಬ್ಯಾಂಕ್ ಬೇಕು ಖಾತೆಯಲ್ಲಿ ಠೇವಣಿ ಇಡಲು ಬೇರೆ ಬ್ಯಾಂಕ್ ಬೇಕೇ ಇದರ ಬಗ್ಗೆ ರೈತರು ಯೋಚಿಸಬೇಕು, ರೈತರು ತಮ್ಮ ಹಣವನ್ನು ಡಿಸಿಸಿ ಬ್ಯಾಂಕ್ನಲ್ಲಿ  ಠೇವಣ ಇಡಬೇಕೆಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ರೈತರು ಹೊಸದಾಗಿ ತಮ್ಮ ಜಮೀನುಗಳಿಗೆ ಪಂಪ್ಸೆಟ್ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲೇಬೇಕು,  ಇಲ್ಲವಾದರೆ ಸಂಪರ್ಕ ಅಳವಡಿಸಲು ಅನುಮತಿ ನೀಡುವುದಿಲ್ಲವೆಂಬ  ತುಮಕೂರು ಜಿಲ್ಲೆಯಲ್ಲಿರುವ ಹೊಸ ಶಾಸನವನ್ನು ಬದಲಿಸಬೇಕು,  ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಇಂಧನ ಸಚಿವೆ ಶೋಭಾ ಕರೆಂದ್ಲಾಜೆರವರಿಗೆ ತಿಳಿಸಿರುವುದಾಗಿ ಹೇಳಿದರು.
 ರೈತರು ತಮ್ಮ ಜಮೀನುಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕೊಡಿಸಿಕೊಳ್ಳಲು ಆಗದೆ ಪರದಾಡುತ್ತ ತಮ್ಮ ಬಳಿ ಬಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ, ಸಕರ್ಾರವೂ ಸಹ ಹಳೇ ಪಂಪ್ಸೆಟ್ ಕೆಟ್ಟು ಹೋದರೆ ಹೊಸದಾಗಿ ಅಳವಡಿಸಿಕೊಳ್ಳಲು ಅನುಮತಿ ನೀಡುತ್ತಿಲ್ಲ ಹಾಗೆಯೇ  ಯಾವುದೇ ಹೊಸ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಹಾಕಿಸುವ ಸ್ಥಿತಿಯಲ್ಲಿಯೂ ಇಲ್ಲ ಇದರಿಂದ ರೈತರ ಆಥರ್ಿಕ ಜೀವನಕ್ಕೆ ತೊಂದರೆಯಾಗಲಿದ್ದು ಇದಕ್ಕಾಗಿ ಹೋರಾಟ ಅನಿವಾರ್ಯವಾಗಲಿದೆ ಎಂದರು.
 ರೈತರು ಬೆಳೆಯುವ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ, ತಮ್ಮ ತೋಟದಲ್ಲಿ ಬೆಳೆಯುವ ಎಳನೀರನ್ನು 3ರೂಗೆ ಸಗಟು ವ್ಯಾಪಾರಿಗಳಿಗೆ ಮಾರಾಟಮಾಡುತ್ತಿದ್ದು,  ಈ ಸಗಟು ಮಾರಾಟಗಾರರು ಮಾರುಕಟ್ಟೆಯಲ್ಲಿ 10ರೂಗೆ ಮಾರಾಟಮಾಡುತ್ತಿದ್ದಾರೆ,  ಇಂತಹ ಹಲವಾರು ವ್ಯಾಪಾರಿ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದರೂ ರೈತರ ಹೆಸರಿನಲ್ಲಿ ಹಸಿರು ಟವಲ್ ತೊಟ್ಟು ಅಧಿಕಾರ ಸ್ವೀಕರಿಸಿದ ಸಕರ್ಾರ  ಇದರ ಬಗ್ಗೆ ಗಮನ ಹರಿಸುತ್ತಿಲ್ಲವೆಂದರು.  
ರಾಜ್ಯದಲ್ಲಿ ಭ್ರಷ್ಠಾಚಾರ ಹೆಚ್ಚಾಗುತ್ತಿದೆ, ರಾಜಕಾರಣ ದುಡ್ಡಿಗಾಗಿ ನಡೆಯುತ್ತಿದೆ, ರಾಜ್ಯ ಅಫೀಮು, ಗಾಂಜ ಬೆಳೆಯುವ ಜಾಗವಾಗಿದೆ ಇವುಗಳ ವಿರುದ್ದ ಸಮರ ಸಾರುವವರು ಬೇಕಾಗಿದ್ದಾರೆ ಇವುಗಳ ವಿರುದ್ದ ಹೋರಾಟಕ್ಕೆ ಎಲ್ಲರೂ ಮುಂಚೂಣಿಯಲ್ಲಿರಬೇಕು ಎಂದರಲ್ಲದೆ ನಾವು ಶಾಸಕರಾಗಿದ್ದಾಗ ವಿಧಾನಸಭೆಗಳಲ್ಲಿ ಹಾಗೂ ತಾಲ್ಲೂಕಿನ ಕೆಡಿಪಿ ಸಭೆಗಳಲ್ಲಿ  ಇವುಗಳ ಬಗ್ಗೆ ಚಚರ್ಿಸುತ್ತಿದ್ದೆ, ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ ಯೋಗ್ಯರನ್ನು ಆರಿಸಿ ವಿಧಾನಸಭೆಗೆ ಕಳುಹಿಸುವುದು ಜನತೆಯ ಮೇಲಿದ್ದು ಜನತೆ ಯೋಗ್ಯರನ್ನು ಆರಿಸಬೇಕಾಗಿದೆ  ಮತ್ತು ತಾಲ್ಲೂಕಿನ  ಹಂದನಕೆರೆ ಹೋಬಳಿಯ ಸಮಸ್ಯೆ ಗಗನಕ್ಕೇರಿದ್ದು ಇಲ್ಲಿಗೆ ಜಿಲ್ಲಾ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಮಾಡುತ್ತಿರುವುದು ಜನತೆಗೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜಿಲ್ಲಾ ಬ್ಯಾಂಕ್ ರೈತರು ಹಾಗೂ ಸ್ವಸಹಾಯ ಸಂಘಗಳಿಗೆ 18 ಲಕ್ಷ ರೂ ಹೊಸ ಸಾಲ ನೀಡುತ್ತಿದೆ, ಮುಸ್ಲಿಂ, ಸಮುದಾಯ ದಕ್ಕಲಿಗರು, ಕೊರಮ ಇತ್ಯಾದಿ ಹಿಂದುಳಿದ ಸಮುದಾಯಗಳಿಗೆ ಸಾಲ ನೀಡುವ ಮೂಲಕ ಆ ಸಮುದಾಯಗಳನ್ನು ಆಥರ್ಿಕವಾಗಿ ಸಹಕರಿಸುವ  ತರುವ ಕಾರ್ಯ ಮಾಡುತ್ತಿದ್ದೇವೆ, ಸಾಲ ಸೌಲಭ್ಯವನ್ನು ತಾಲ್ಲೂಕಿನಲ್ಲಿ ಮೊದಲು ಮಾಡಿದ್ದು ಈಗ ಈಡೀ ಜಿಲ್ಲೆಯಲ್ಲಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬರಗೂರು ನಾಗರಾಜು, ಬಸವಣ್ಣ, ಬಾಬು, ಆರ್.ಜಿ.ಕುಮಾರ್, ರಾಮಚಂದ್ರಪ್ಪ, ಪುಟ್ಟರಾಜ್ ಮುಂತಾದವರಿದ್ದರು.
ಟಿಪ್ಪು ಅಭಿಮಾನಿ ಮಹಾವೇದಿಕೆ ಉದ್ಘಾಟನೆ, ರಾಜ್ಯೋತ್ಸವ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ .ಡಿ.20:- ತಾಲ್ಲೂಕು ಟಿಪ್ಪುಸುಲ್ತಾನ್ ಅಭಿಮಾನಿ ಮಹಾವೇದಿಕೆ ಸಂಘದ ಉದ್ಘಾಟನೆ  ಹಾಗೂ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮವನ್ನು ಇದೆ 21ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಟಿಪ್ಪುಸುಲ್ತಾನ್ ಅಭಿಮಾನಿ ಮಹಾವೇದಿಕೆ ವತಿಯಿಂದ ಪಟ್ಟಣದ ತಾತಯ್ಯನಗೋರಿ ಮುಂಭಾಗ ಹಮ್ಮಿಕೊಂಡಿದ್ದು ಸಮಾರಂಭಕ್ಕೂ ಮುನ್ನ  ಕನಕ ಭವನದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಕನ್ನಡ ಬಾವುಟ, ಟಿಪ್ಪು ಬಾವುಟಗಳೊಂದಿಗೆ ಗಣ್ಯರು ಮೆರವಣಿಗೆ ಭಾಗವಹಿಸುವರು, ನಂತರ ತಾತಯ್ಯನ ಗೊರಿಯ ಮಂಭಾಗ ಕಾರ್ಯಕ್ರಮ ನಡೆಯುತ್ತದೆ.  ಕಾರ್ಯಕ್ರಮದಲ್ಲಿ ಶಾಸಕರು, ತಾಲೂಕಿನ ಗಣ್ಯ ವ್ಯಕ್ತಿಗಳು, ತುಮಕೂರು ಟಿಪ್ಪು ಸಂಘದ ಅದ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಟಿಪ್ಪು ಸಂಘದ ಅಧ್ಯಕ್ಷರಾದ ಅಸ್ಲಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಸಿಕ ಪಿಂಚಿಣಿಯಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಿ
ಚಿಕ್ಕನಾಯಕನಹಳ್ಳಿ .ಡಿ.20:- ತಾಲ್ಲೂಕಿನ ಎಸ್.ಎಸ್.ವೈ, ವಿಧವೆ ವೇತನ ಮಂಜೂರಾತಿಯಾಗಿತ್ತು ಆದರೆ ಕಳೆದ ಕೆಲವು ತಿಂಗಳಿಂದ  ತಾಲ್ಲೂಕಿನ 4000 ಸಾವಿರ ಜನರಿಗೆ ವೇತನದ ಹಣ ಬರದೆ ಅನ್ಯಾಯವಾಗುತ್ತಿದೆ ಎಂದು ಗ್ರಾ.ಪಂ ಸದಸ್ಯೆ ಬಿ.ಎನ್.ಶಶಿಕಲಾ ಆರೋಪಿಸಿದ್ದಾರೆ.
ಗ್ರಾಮ ಲೆಕ್ಕಿಗರು ಸರಿಯಾಗಿ ವರದಿ ಮಾಡದೆ, ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ, ಹಾಗೂ ಆರ್.ಐ ಹಾಗೂ ತಹಶೀಲ್ದಾರ್ರ ವರದಿಯ ಮೇಲೆ ಎ.ಸಿ ಅವರಿಗೆ ವರದಿ ಕಳಿಸಿದ್ದರು ಆದ್ದರಿಂದ ಜಿಲ್ಲಾಧಿಕಾರಿಯವರು ನೀಡಿರುವ  ವರಿದಿಯನ್ನು ಮರುಪರಿಶೀಲಿಸಿ ತಾಲ್ಲೂಕಿನ ದಲಿತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳಿಗೆ ತಿಂಗಳ ವೇತನವನ್ನು ಮಂಜೂರು ಮಾಡಿಸಿ ಇಲ್ಲವಾದರೆ ತಾಲ್ಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಿರಿಯರು ಮಕ್ಕಳಂತೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಡಿ.20 :  ಹಿರಿಯರು ಮಕ್ಕಳಂತೆ, ಅವರ ಜೊತೆ ನಮ್ಮೆಲ್ಲರ ಒಡನಾಟ ಸ್ನೇಹ, ಪ್ರೀತಿಯಿಂದ ಕೂಡಿದಾಗ, ಅವರ ಜೀವನವು ಖುಷಿಯಾಗಿ ಮುಂದೆ ಸಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ನಡೆದ ನಕರರವರ ಮತ್ತು ನಿವೃತ್ತ ನೌಕರರ ದಿನಾಚಾರಣೆ, ಸರ್ವ ಸದಸ್ಯರ ವಾಷರ್ಿಕ ಮಹಾಸಭೆ ಹಾಗೂ ನಿವೃತ್ತ ನೌಕರರ ಸಂಘದ ಮೊದಲನೆ ಮಹಡಿ ಕಟ್ಟಡದ ಉದ್ಘಾಟಿನೆ ನೆರವೇರಿಸಿ ಮಾತನಾಡಿದ ಅವರು ಹಿರಿಯರ ಬಾವನೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ, ಅವರು ಜೀವನದ ಅನುಭವಸ್ಥರಾಗಿದ್ದು ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಅಗತ್ಯವಾಗಿದೆ, ಈಗಿನ ಯುವಕರು ಹಿರಿಯರ ಮಾರ್ಗದರ್ಶನವನ್ನು ಅರಿಯಬೇಕು ಎಂದ ಅವರು ಹಿರಿಯರು ತಮ್ಮ ನಿವೃತ್ತಿ ನಂತರವೂ ಸಮಾಜದಲ್ಲಿ ಒಂದಲ್ಲ ಒಂದು ರೀತಿ ಕಾರ್ಯನಿರ್ವಹಿಸಬೇಕು ಆಗ ಅವರಿಗೆ ತಮ್ಮ ವಯಸ್ಸಿನ ಬಗ್ಗೆ ತಿಳಿಯದೆ ಮುಂದುವರೆಯುತ್ತಾರೆ ಹಾಗೂ ಹಿರಿಯರ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸುವುದಾಗಿ ಅವರು ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯ ಸರ್ಕರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎನ್.ಸಂಪತ್, ಕಾರ್ಯದಶರ್ಿ ರೇವಣಸಿದ್ದಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ, ಕಾರ್ಯದಶರ್ಿ ಸಿ.ಡಿ.ರುದ್ರಮುನಿ, ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ವಾಣಿಜ್ಯ ಇಲಾಖೆಯ ನಿವೃತ್ತ ಸಹಾಯುಕ್ತ ಆಯುಕ್ತ ಕ್ಯಾಪ್ಟನ್ ಸೋಮಶೇಖರ್, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಮೈನ್ಸ್(ರವಿ) ಹಾಗೂ ಹಿರಿಯ ನಾಗರೀಕರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಲಿತಮ್ಮ ಪ್ರಾಥರ್ಿಸಿದರೆ, ಸಿ.ಕೆ.ವಿಶ್ವೇಶ್ವರಯ್ಯ ಸ್ವಾಗತಿಸಿದರು.