Tuesday, October 12, 2010

ಎ.ಪಿ.ಎಲ್. ಪಡಿತರದಾರರಿಗೆ ಅಕ್ಕಿ,ಗೋಧಿ ವಿತರಣೆ
ಚಿಕ್ಕನಾಯಕನಹಳ್ಳಿ,ಸೆ.12: ತಾಲೂಕಿನ ಭಾವಚಿತ್ರ ಸೆರೆ ಹಿಡಿದು ಶಾಶ್ವತ ಪಡಿತರ ಚೀಟಿ ವಿತರಿಸಿರುವ ಎ.ಪಿ.ಎಲ್. ಕಾಡರ್್ದಾರರಿಗೆ ಹಾಗೂ ಭಾವಚಿತ್ರ ಸೆರೆಹಿಡಿಯಲಾಗಿರುವ ನೆಮ್ಮದಿ ಎ.ಪಿ.ಎಲ್ ಪಡಿತರ ಚೀಟಿದಾರರಿಗೆ ವಿತರಿಸಲು ಅಕ್ಕಿ ಗೋಧಿ ಹಂಚಿಕೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಿರುವ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿವಾರು ವಿತರಿಸಲಾಗುವುದು ಎಂದಿರುವ ಅವರು, ಎ.ಪಿ.ಎಲ್. ಪಡಿತರ ಚೀಟಿ ಒಂದಕ್ಕೆ 5 ಕೆ.ಜಿ.ಅಕ್ಕಿ, ಗೋಧಿ ವಿತರಿಸಲಿದ್ದು, ಒಂದು ಕೆ.ಜಿ.ಅಕ್ಕಿಗೆ ರೂ 9.40 ದರದಲ್ಲಿ ಹಾಗೂ ಗೋಧಿ ಒಂದು ಕೆ.ಜಿ.ಗೆ ರೂ 7.20ರ ದರದಲ್ಲಿ ಮರು ಹಂಚಿಕೆ ನೀಡಿದೆ. ಸಂಬಂಧಪಟ್ಟವರು ಪಡಿತರವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಹೆಣ್ಣು ಮಕ್ಕಳು ಸ್ವಚ್ಚತೆ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ
ಚಿಕ್ಕನಾಯಕನಹಳ್ಳಿ,ಸೆ.12: ಹೆಣ್ಣು ಮಕ್ಕಳು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ರುಜಿನಗಳಿಂದ ದೂರಾವಾಗವುದರ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಥಿರತೆ ಕಾಪಾಡಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಗುತ್ತದೆ ಎಂದು ಪುರಸಭಾ ಅಧ್ಯಕ್ಷ ರಾಜಣ್ಣ ಅಭಿಪ್ರಾಯಪಟ್ಟರು.
ಪುರಸಭಾ ವ್ಯಾಪ್ತಿಯ ಜೋಗಿಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿ ಭಾಗ್ಯಲಕ್ಷ್ಮಿ ಫಲಾನುಭವಿಗಳ ಆರೋಗ್ಯ ತಪಾಸಣೆಯಿಂದ ಮಕ್ಕಳನ್ನು ಕಾಡುವ ಹಲವಾರು ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಬಹುದು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳು ಹೆಚ್ಚಿನ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ಸಮಯೋಚಿತ ಎಂದರು.
ಸಿ.ಡಿ.ಪಿ.ಓ. ಅನೀಸ್ ಖೈಸರ್ ಮಾತನಾಡಿ ಉಜ್ವಲ ಭವಿಷ್ಯಕ್ಕಾಗಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿನಂತಿಸಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಮಾತನಾಡಿ ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಣ್ಣು ಬ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲ ಕಾಮರ್ಿಕತೆಯಂತಹ ಸಾಮಾಜಿಕ ಪಿಡುಗುಗಳನ್ನು ದೂರ ಮಾಡಬಹುದೆಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಶ್ರೀಧರ್, ವಿಶಾಲಕ್ಷಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರತ್ನ ನಿರೂಪಿಸಿದರೆ, ಎ.ಸಿ.ಡಿ.ಪಿ.ಓ. ಪರಮೇಶ್ವರಪ್ಪ ಸ್ವಾಗತಿಸಿದರೆ, ರಾಧಮ್ಮ ವಂದಿಸಿದರು.