Friday, July 22, 2016


ಅಕ್ರಮ ಮರಳು ಗಣಿಗಾರಿಕೆ ತಡೆಯಲು ರೈತರ ಒತ್ತಾಯ
ಚಿಕ್ಕನಾಯಕನಹಳ್ಳಿ,ಜು.22 : ಅಕ್ರಮ ಮರಳು ಗಣಿಗಾರಿಕೆಯಿಂದ ಅಂರ್ತಜಲ ನಾಶವಾಗಿ, ನೈಸಗರ್ಿಕ ಸಂಪತ್ತು ಹಾಳು ಮಾಡುತ್ತಿರುವ ದಂದೆಕೋರರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ನಗರ ಘಟಕ ಶಾಖೆ ಪದಾಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹಮೂತರ್ಿ ಮನವಿ ಸಲ್ಲಿಸಿದರು.
ರೈತ ಸಂಘದ ಟೌನ್ ಶಾಖೆ ಅಧ್ಯಕ್ಷ ಸಿ.ಕೆ.ಮೈಲಾರಪ್ಪ ಮಾತನಾಡಿ, ಪಟ್ಟಣದ ಕುಡಿಯುವ ನೀರಿಗೆ ಆಸರೆಯಾಗಿರುವ ಕೆರೆ ಅಕ್ರಮ ಮರಳುಗಣಿಗಾರಿಕೆಯಿಂದ ವಿರೂಪಗೊಂಡಿದೆ. 85ಎಕ್ಟರ್ ಪ್ರದೇಶಕ್ಕೂ ಹೆಚ್ಚೂ ಭೂ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಮರಳು ನಿಕ್ಷೇಪವನ್ನು ದಂಧೆಕೋರರು ದೋಚುತ್ತಿದ್ದಾರೆ. ಅಕ್ರಮ ಮರಳು ಸಾಕಣೆಯನ್ನು ತಕ್ಷಣ ತಡೆಯದಿದ್ದರೆ ಉಗ್ರ ಗಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
   ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನೀರನ್ನು ಏತ ನೀರಾವರಿ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆ ನೀರು ಹಿಡಿದಿಡುವ ಸಾಮಥ್ರ್ಯ ಕಳೆದುಕೊಂಡಿದ್ದು ಮಳೆಗಾಲದಲ್ಲೂ ಪಟ್ಟಣ ವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
    ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್ಗಳು ನಿರಂತರವಾಗಿ ಮರಳು ಎತ್ತುತ್ತಿವೆ. ಹಗಲು ರಾತ್ರಿ ಅವ್ಯಹತವಾಗಿ ಮರಳು ಸಾಗಣಿಕೆ ನಡೆಯುತ್ತಿದೆ. ಇದರಿಂದ ಅಂರ್ತಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಸುತ್ತ ಮುತ್ತಲ ಹಲವು ಹಳ್ಳಿಗಳ ಸಾವಿರಾರು ಹೆಕ್ಟೇರ್ ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ ಎಂದರು.
ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಅಕ್ರಮ ಮರಳು ದಂದೆಕೋರರ ವಿರುದ್ದ ಕ್ರಮ ಜರುಗಿಸಿ, ರೈತರ ನೀರಿನ ಬವಣೆ ನೀಗಿಸಬೇಕು. ಇಲಾಖೆಗಳು ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ರೈತ ಸಂಘದ ಕಾರ್ಯದಶರ್ಿ ಸಿ.ಕೆ.ಸತೀಶ್, ಸಿ.ಎಸ್.ಬಸವರಾಜು, ಮುಖಂಡರುಗಳಾದ ತಿಪ್ಪಯ್ಯ, ಪುಟ್ಟಹನುಮಯ್ಯ, ಈಶ್ವರಯ್ಯ, ಡಿ.ರಾಮಯ್ಯ, ಗೋಪಾಲಯ್ಯ. ಸಿ.ಆರ್, ಬಾಸ್ಕರ್ಬಾಬು, ಶಶಿಧರ್, ಬಸವಯ್ಯ, ಅನಿಲ್ಕುಮಾರ್, ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಿ 
ಚಿಕ್ಕನಾಯಕನಹಳ್ಳಿ,ಜು.22 : ಗಿಡಮರಗಳನ್ನು ನಾವು ಬೆಳೆಸುವುದರ ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೂ ಪರಿಸರ ಜಾಗೃತಿ ಮೂಡಿಸಬೇಕು ಎಂದು ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆದ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾಥರ್ಿ ಸಂಘದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರದಿಂದ ಆಗುವ ಅನುಕೂಲಗಳ ಬಗ್ಗೆ ಸಾರ್ವಜನಿಕರು ಒಬ್ಬರಿಂದ ಒಬ್ಬರು ಪ್ರಚಾರ ಮಾಡಬೇಕು, ಕಾಡು ಉಳಿದರೆ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ ಎಂದರು.
ಡಿಎಸ್ಎಸ್ ಮುಖಂಡ ಲಿಂಗದೇವರು ಮಾತನಾಡಿ, ಚಿ.ನಾ.ಹಳ್ಳಿಯಲ್ಲಿ ಗಣಿಕಾರಿಕೆಯಿಂದ ಪರಿಸರಕ್ಕೆ ಹಾನಿಯಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ ಜನರಿಗೆ ತೊಂದರೆ ಕೊಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಾರ್ವಜನಿಕರು ತಾಲ್ಲೂಕಿನ ಕಾಡು ಕಣಿವೆಗಳನ್ನು ಉಳಿಸುವ ಕಡೆ ಗಮನ ಹರಿಸಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮನುಷ್ಯ ಸಂಘ ಜೀವಿ, ಒಬ್ಬರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಪರಿಸರ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು.ಮನೆಗೊಂದು ಮರದಂತೆ ಶಾಲೆಗೊಂದು ವನ ರೂಪುಗೊಳ್ಳಬೇಕು ಎಂದರು.
ಶಿಕ್ಷಕ ದಿನಕರ್ ಮಾತನಾಡಿ, ತಾಲ್ಲೂಕಿಗೆ ಸಾಲು ಮರದ ತಿಮ್ಮಕ್ಕನವರು ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಗಿಡ ನೆಟ್ಟಿದ್ದರ ಪರಿಣಾಮ ಇಂದು ತಾಲ್ಲೂಕಿನಲ್ಲಿ ಮರಗಳು ದೊಡ್ಡದಾಗಿ ಬೆಳೆದು ಉತ್ತಮ ಗಾಳಿ ದೊರಕುತ್ತಿದೆ ಎಂದರು.
 ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ಮುಖ್ಯೋಪಾಧ್ಯಾಯರಾದ ರಾಮ್ಕುಮಾರ್, ದೇವರಾಜು, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.


ಜನಸಂಪರ್ಕ ಸಭೆ ಜುಲೈ 30
ಚಿಕ್ಕನಾಯಕನಹಳ್ಳಿ,ಜು.22 : ತಾಲ್ಲೂಕಿನ ಹಂದನಕೆರೆ ಹೋಬಳಿ ಚೌಳಕಟ್ಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಜುಲೈ 30ರಂದು ಬೆಳಗ್ಗೆ 11ಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ತಹಶೀಲ್ದಾರ್ ಗಂಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.