Tuesday, June 7, 2016

ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.07 : ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ 2016-17ನೇ ಸಾಲಿನ ಪ್ರವೇಶ ಪಡೆಯಲು ಅರ್ಹ ವಿದ್ಯಾಥರ್ಿನಿಯರಿಂದ ಅಜರ್ಿ ಆಹ್ವಾನಿಸಲಾಗಿದೆ.
ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶ್ರೀ ಮರಿರಂಗನಾಥ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ವಸತಿ ನಿಲಯಕ್ಕೆ ಎಲ್ಲಾ ಜಾತಿ, ವರ್ಗದವರಿಗೂ ಅವಕಾಶವಿರುತ್ತದೆ, ವಿದ್ಯಾಥರ್ಿನಿಯರು ನಿಲಯ ಪ್ರವೇಶಕ್ಕೆ ಅಜರ್ಿ ಸಲ್ಲಿಸಬಹುದಾಗಿದ್ದು ಆಯ್ಕೆಯಾದ ವಿದ್ಯಾಥರ್ಿಗಳಿಗೆ ಉಚಿತ ಊಟ, ವಸತಿ ಸೌಕರ್ಯವಿರುತ್ತದೆ, ನಿಗಧಿತ ನಮೂನೆಯನ್ನು ವಸತಿ ನಿಲಯದಿಂದ ಅಜರ್ಿ ಪಡೆದು ಜೂನ್ 15ರೊಳಗೆ ವಸತಿ ನಿಲಯದ ಮೇಲ್ವಿಚಾರಕರಿಗೆ ಸಲ್ಲಿಸಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08133267776, ಮೊ.ನಂ. : 9535044254 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.

ಪರಿಸರ ರಕ್ಷಿಸಿ : ನ್ಯಾಯಾಧೀಶ
ಚಿಕ್ಕನಾಯಕನಹಳ್ಳಿ,ಜೂ.07 : ಮನುಷ್ಯ ಪರಿಸರ ಹಾಳು ಮಾಡಿರುವುದರಿಂದ ಪ್ರಕೃತಿಯಲ್ಲಿ ಏರುಪೇರು ಉಂಟಾಗಿ ವಾತಾವರಣ ಕಲುಷಿತಗೊಂಡಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ವಿಷಾಧಿಸಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪರಿಸರ ದಿನಾಚಾರಣೆಯಲ್ಲಿ ಮಾತನಾಡಿ, ಶಬ್ದ ಮಾಲಿನ್ಯ, ವಾಯುಮಾಲಿನ್ಯದಿಂದ ಪ್ರಕೃತಿಯಲ್ಲಿನ ವಾತಾವರಣ ಬದಲಾವಣೆಯಾಗಿದೆ ಇದೇ ರೀತಿ ಪರಿಸರವನ್ನು ಹಾಳು ಮಾಡಿದರೆ ಮುಂದೊಂದು ದಿನ ನಾವು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ವಿವಿಧ ಇಲಾಖೆಗಳು ಪರಿಸರ ಉಳಿವಿಗಾಗಿ ಸಸಿ ನೆಡಬೇಕು, ಪರಿಸರವನ್ನು ಸಂರಕ್ಷಿಸಬೇಕಾಗಿದೆ, ನಾವು ಉಸಿರಾಡುವ ಗಾಳಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು ಇದನ್ನು ತಪ್ಪಿಸಲು ಪರಿಸರ ಉಳಿಸಬೇಕಾಗಿದೆ ಎಂದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ವೈವಿಧ್ಯಮಯ ಜೀವ ಸಂಪತ್ತು ಪ್ರಕೃತಿಯಲ್ಲಿದೆ, ಈ ಜೀವ ಸಂಪತ್ತನ್ನು ಬೆಳೆಸಿ ರಕ್ಷಿಸುವ ಕರ್ತವ್ಯ ನಮ್ಮದಾಗಿದೆ, ಮುಂದೆ ಪರಿಸರವನ್ನು ರಕ್ಷಿಸದಿದ್ದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಶಾಲಾ ಕಾಲೇಜುಗಳ ಮೈದಾನ, ಮನೆಗಳಲ್ಲಿ, ಜಮೀನುಗಳಲ್ಲಿ ಸಸಿ ನೆಡುವ ಅವಕಾಶ ಎಲ್ಲಲ್ಲಿ ಇದೆಯೋ, ಅಲ್ಲಲ್ಲಿ ಸಸಿ ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿದ್ದಾರಾಜನಾಯಕ, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರ್, ಅರಣ್ಯ ಉಪ ವಲಯಾಧಿಕಾರಿ ಅನಿಲ್ ಕುಮಾರ್, ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ, ಹನುಮಂತಯ್ಯ, ಚಿಕ್ಕಣ್ಣ, ದಿಲೀಪ್, ಮತ್ತಿತರರು ಉಪಸ್ಥಿತರಿದ್ದರು.

ಕೆರೆಗೆ ಎಸೆದಿರುವ ನವಜಾತ ಶಿಶು
ಚಿಕ್ಕನಾಯಕನಹಳ್ಳಿ,ಜೂ.7: ನವಜಾತ ಶಿಶುವೊಂದನ್ನು ಯಾರೋ ಕೆರೆಯಲ್ಲಿ ಎಸೆದು ಹೋಗಿದ್ದು,ದೇಹವನ್ನು ಮೀನುಗಳು ಕಿತ್ತು ತಿಂದಿರುವ ಅಮಾನವೀಯ ಘಟನೆ ತಾಲ್ಲೂಕಿನ ಅವಳಗೆರೆ ಕೆರೆಯಲ್ಲಿ ಕಂಡು ಬಂದಿದೆ.
  ಮಂಗಳವಾರ ಬೆಳಗ್ಗೆ ಕೆರೆ ಕಡೆ ಹೋಗಿದ್ದ ಕೆಲವರು ಮಗುವಿನ ಕಳಬರ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಪತ್ರಿಕೆಗೆ ವಿಷಯ ಮುಟ್ಟಿಸಿದ್ದಾರೆ.ಸುತ್ತಮುತ್ತಲಿನ ಗ್ರಾಮಗಳಾದ ರಾಮನಗರ,ದೇವರಹಳ್ಳಿ,ಅವಳಗೆರೆ,ಅವಳಗೆರೆಹಟ್ಟಿ,ಮೂಡಲಹಟ್ಟಿಗಳಿಂದ ಜನ ಬಂದು ನೋಡಿ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.ಸೋಮವಾರ ರಾತ್ರಿ ಯಾರೋ ಮಗುವನ್ನು ತಂದು ಕೆರೆಯಲ್ಲಿ ಹಾಕಿರಬಹುದು ಎಂಬುದು ಜನರ ಊಹೆ.