Tuesday, August 24, 2010

ಅರಸು; ಪ್ರಧಾನಿ ಹುದ್ದೆಯನ್ನು ನಿಭಾಯಿಸುವಂತಹ ವ್ಯಕ್ತಿತ್ವಹೊಂದಿದ್ದವರು: ಮುದ್ದು
ಚಿಕ್ಕನಾಯಕನಹಳ್ಳಿ,ಆ.24: ದೇಶದ ಪ್ರಧಾನಿ ಹುದ್ದೆಯನ್ನು ನಿಭಾಯಿಸುವ ಎದೆಗಾರಿಕೆ, ಸಮರ್ಥ ನಾಯಕತ್ವ ಹಾಗೂ ವಿಚಿಕ್ಷ್ಣದೂರ ದೃಷ್ಟಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ರವರಿಗಿತ್ತು ಎಂದು ಬಿ.ಸಿ.ಎಂ ಇಲಾಖೆಯ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಉಡೇವು ಬೀದಿಯಲ್ಲಿ ದೇವರಾಜ್ ಅರಸ್ರವರ 95ನೇ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಹಾಗೂ ಹಿಂದುಳಿದ ವರ್ಗಗಳಲ್ಲಿನ ಪ್ರತಿಭೆಗಳನ್ನು ಹುಡುಕಿ ತೆಗೆದು ಅವರನ್ನೆಲ್ಲಾ ಮುಖ್ಯವಾಹಿನಿಗೆ ತರುವ ಕೆಲಸವನ್ನು ಅವರು ಆ ಸಮಯದಲ್ಲಿ ಮಾಡದೇ ಹೊಗಿದ್ದರೆ ಇಂದಿಗೂ ಹಿಂದುಳಿದ ವರ್ಗಗಳು ಸಮಾಜದಲ್ಲಿನ ನಿರ್ಲಕ್ಷತೆಯ ಜನರಾಗಿ ಉಳಿಯಬೇಕಾಗಿತ್ತು ಎಂದರು.
ಬಡವರ ಪರವಾಗಿ ಅವರು ತೆಗೆದುಕೊಂಡ ಎರಡು ದಿಟ್ಟವಾದ ನಿಧರ್ಾರಗಳೆಂದರೆ ಒಂದು 'ಉಳುವವನೇ ಭೂಮಿಯ ಒಡೆಯ' ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದದ್ದು, ಮತ್ತೊಂದು ಹಾವನೂರು ವರದಿಗೆ ಆದ್ಯತೆ ನೀಡಿದ್ದು ಎಂದರಲ್ಲದೆ ನೀರಾವರಿಯ ಬಗ್ಗೆಯೂ ಅವರು ನಿಷ್ಣಾತರಾಗಿದ್ದರಿಂದಲೇ ಘಟಪ್ರಭಾ ಯೋಜನೆ ಸಾಕಾರಗೊಳ್ಳಲು ಕಾರಣವಾಯಿತು ಎಂದರು.
ರಾಜಕೀಯವಾಗಿ ಅವರು ಬೆಳೆಸಿದ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು ಅರಸು ರವರ ಹೆಸರನ್ನು ಚಿರಸ್ಥಾಯಿಗೊಳಿಸಿವೆ ಎಂದರಲ್ಲದೆ, ರಾಜಕೀಯವಾಗಿ ಅವರು ಹುಟ್ಟುಹಾಕಿದ ಬೀಜಗಳು ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸ್ ಮಾತನಾಡಿ ದೇವರಾಜ್ ಅರಸ್ರವರು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ವಿಶಾಲ ದೃಷ್ಟಿಯನ್ನು ಮೈಗೂಡಿಸಿಕೊಂಡಿದ್ದಾರೆ ವಿನಹ, ತನ್ನ ಜಾತಿಯೊಂದೇ ಮೇಲೇರಬೇಕೆಂಬ ಸಂಕುಚಿತ ಮನಸ್ಸಿನವರಾಗಿರಲಿಲ್ಲ ಎಂದರು.
ನಿಷ್ಠಾರವಾದಿಯಾದ ಅರಸುರವರು ತಮ್ಮ ಸ್ವಾರ್ಥಕ್ಕಾಗಿ ಎಂದೂ ತಮ್ಮ ತತ್ವ ಆದರ್ಶಗಳನ್ನು ಬಲಿಕೊಟ್ಟವರಲ್ಲ ಎಂದರಲ್ಲದೆ ಕೆಳಸ್ತರದವರನ್ನು ಮೆಲಕ್ಕೆತ್ತುವ ಸಂದರ್ಭಗಳಲೆಲ್ಲಾ ಎಂತಹ ಅಡ್ಡಿ ಆತಂಕಗಳಿಗೂ ಸೊಪ್ಪು ಆಕದೆ ಮುಂದುವರೆದವರೆದಿಂದ್ದಾಗಿ ಉಂಟಾದ ಶತ್ರುಗಳಿಗೂ ಕೇರ್ ಮಾಡಿದವರಲ್ಲ ಎಂದರು.
ಪುರಸಭೆಯ ವಿರೋಧ ಪಕ್ಷದ ನಾಯಕ ಸಿ.ಡಿ.ಚಂದ್ರಶೇಖರ್ ಮಾತನಾಡಿ ದೇವರಾಜ್ ಅರಸುರವರು ತಮ್ಮ ತಾಯಿಯ ತೌರೂರಾದ ಮಧುಗಿರಿಯಲ್ಲಿ ಜನ್ಮ ಪಡೆಯುವ ಮೂಲಕ ಜಿಲ್ಲೆಯ ಬಾಂಧವ್ಯನ್ನು ಗಟ್ಟಿಗೊಳಿಸಿ ಕೊಂಡರಲ್ಲದೆ, ನಮ್ಮ ಕ್ಷೇತ್ರದ ಆಗಿನ ಎಂ.ಎಲ್.ಎ ಬಸವಯ್ಯನವರಿಗೆ ಮಂತ್ರಿ ಸ್ಥಾನವನ್ನು ಕಲ್ಪಿಸಿಕೊಡುವ ಮೂಲಕ ರಾಜ್ಯಮಟ್ಟದಲ್ಲಿ ನಮ್ಮೂರಿಗೆ ಸ್ಥಾನಮಾನ ಕಲ್ಪಿಸಿಕೊಟ್ಟರು ಎಂದರಲ್ಲದೆ ಅದನ್ನು ಉಳಿಸಿಕೊಳ್ಳುವಲ್ಲಿ ನಾವು ಸೋತೆವು ಎಂದರು.
ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅರಸುರವರೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ಅರಸು ಸಂಘದವರು ಮೈಸೂರು ರಾಜರೊಬ್ಬರ ಸಮಾಧಿ ಸಂರಕ್ಷಣೆಗೆ ಮಾಡಿರುವ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಲಾಗುವುದು ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಸಿ.ಬಸವರಾಜು, ಅರಸು ಸಂಘದ ಅಧ್ಯಕ್ಷ ನಾಗರಾಜ್ ಅರಸ್ ಸೇರಿದಂತೆ ಹಲವರು ಮಾತನಾಡಿದರು.
ಸಮಾರಂಭದಲ್ಲಿ ಗೋಪಾಲರಾಜ್ ಅರಸ್ ಸ್ವಾಗತಿಸಿದರೆ, ಸ್ವಾಮಿ ರಾಜ್ ಅರಸ್ ನಿರೂಪಿಸಿದರು ಶ್ರೀನಿವಾಸ ರಾಜ್ ಅರಸ್ ಸಂಘದ ಮನವಿಯನ್ನು ವಾಚಿಸಿದರು, ಜಯರಾಮರಾಜ ಅರಸ್ ವಂದಿಸಿದರು.
ಆ.26ರಂದು ಕಾನೂನು ಅರಿವು-ನೆರವು ಕಾರ್ಯಕ್ರ
ಚಿಕ್ಕನಾಯಕನಹಳ್ಳಿ,ಆ.24: ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಇದೇ 26ರ ಗುರುವಾರ ಮಧ್ಯಾಹ್ನ 2ಗಂಟೆಗೆ ಏರ್ಪಡಿಸಲಾಗಿದೆ.
ಪಟ್ಟಣದ ತಾಲೂಕು ಆಫೀಸ್ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಉಪಾಧ್ಯಕ್ಷ ಎಂ.ಎಸ್.ಶಂಕರ್, ಸಿ.ಡಿ.ಪಿ.ಓ ಅನೀಸ್ಖೈಸರ್, ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ಟಿ.ಆಶಾ, ಸಿ.ರಾಜಶೇಖರ್, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ರೆವಿನ್ಯೂ ದಾಖಲಾತಿಗಳು ಹಾಗೂ ರಿಜಿಸ್ಟ್ರೇಷನ್ ಮತ್ತು ಕಾನೂನು ಎಂಬ ವಿಷಯವಾಗಿ ಹೆಚ್.ಎಸ್.ಚಂದ್ರಶೇಖರ್, ಮಹಿಳಾ ಹಾಗೂ ಮಕ್ಕಳ ರಕ್ಷಣೆ ಮತ್ತು ಕಾನೂನು ಎಂಬ ವಿಷಯವಾಗಿ ವೈ.ಜಿ.ಲೋಕೇಶ್ ಮಂಡಿಸಲಿದ್ದಾರೆ.


ಇಂದು ತಾಲೂಕು ಮಟ್ಟದ ಕ್ರೀಡಾ ಕೂಟ
ಚಿಕ್ಕನಾಯಕನಹಳ್ಳಿ,ಆ.24: ಹಿರಿಯ ಪ್ರಾಥಮಿಕ ಪಾಠಶಾಲೆಗಳ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಇದೇ 25ರ ಬುಧವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ ಧ್ವಜಾರೋಹಣ ನೆರವೇರಿಸುವರು.
ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಜ್ಯೋತಿ ಸ್ವೀಕಾರ ಮಾಡುಲಿದ್ದು, ತಾ.ಪಂ. ಇ.ಓ.ವೇದಮೂತರ್ಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಜಯಮ್ಮದಾನಪ್ಪ, ಜಿ.ರಘುನಾಥ್, ಹೊನ್ನಪ್ಪ, ಈರಣ್ಣ, ಸುಶೀಲಾ ಸುರೇಂದ್ರಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಮು.ಶಿ.ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಉಪಸ್ಥಿತರಿರುವರು.