Tuesday, January 26, 2016

ರಾಷ್ಟ್ರದ ಭದ್ರತೆಯನ್ನು ಹೆಚ್ಚಿಸುವ ಜವಬ್ದಾರಿ ನಮ್ಮ ಮೇಲಿದೆ
ಚಿಕ್ಕನಾಯಕನಹಳ್ಳಿ,ಜ.26 : ರಾಷ್ಟ್ರದ ಏಕತೆ ಸಮಗ್ರತೆ ಹಾಗೂ ಭದ್ರತೆಯನ್ನು ರಾಷ್ಟ್ರಕ್ಕೆ ಒದಗಿಸುವ ಬೃಹತ್ ಕೈಗನ್ನಡಿಯೇ ಸಂವಿಧಾನ ಎಂದು ತಹಸೀಲ್ದಾರ್ ಆರ್.ಗಂಗೇಶ್ ಹೇಳಿದರು.
ಪಟ್ಟಣದ ಎನ್. ಬಸವಯ್ಯ ಕ್ರೀಡಾಂಗಣದಲ್ಲಿ ನಡೆದ 67ನೇ ಗಣರಾಜ್ಯೋತವ್ಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಹಲವು ಧರ್ಮ, ಜಾತಿ, ಪಂಥ ಭಾಷೆಗಳ ಸಂಗಮವಾಗಿ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಅಖಂಡ ಭಾರತದ ಏಕತೆ, ಭಾರತ ಸ್ವತಂತ್ರ್ಯವಾದಾಗ 500ಕ್ಕೂ ಹೆಚ್ಚು ರಾಜ ಸಂಸ್ಥಾನಗಳಿದ್ದವವು, ಆಗ 7 ರಾಜ್ಯಗಳು ಮಾತ್ರ ಅಸ್ಥಿತ್ವದಲ್ಲಿದ್ದವು ಇಂತಹ ಸಂದರ್ಭದಲ್ಲಿ ಭಾರತದ ನಿಮರ್ಾತೃಗಳಾದ, ಮಹತ್ಮಗಾಂಧಿ, ಸರದಾರವಲ್ಲಭಾಯಿಪಟೇಲ್, ರಾಜಗೋಪಾಲಚಾರಿ ಮುಂತಾದವರು ಸಂವಿಧಾನ ರಚನಾ ಸಮಿತಿಯನ್ನು ರಚಿಸಿ. ಡಾ|| ಬಾಬು ರಾಜೇಂದ್ರಪ್ರಸಾದ್ ಸಮಿತಿಯ ಅಧ್ಯಕ್ಷರನ್ನಾಗಿ,  ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ರವರನ್ನು ನೇಮಿಸಿದರು  ಎಂದ ಅವರು,  ರಾಷ್ಟ್ರೀಯ  ಸಮಸ್ಯೆಗಳಾದ ಅನರಕ್ಷತೆ, ಅಂಧಕಾರ ಮೂಡನಂಬಿಕೆ. ನಿರುದ್ಯೋಗ, ಬಡತನ, ಭಾಷೆಯಂತಹ ಸಮಸ್ಯೆಗಳನ್ನು ಭಾರತ ಎದುರಿಸುವ ಜವಬ್ದಾರಿ ನಮ್ಮ ಮೇಲಿತ್ತು ಇದನ್ನು ಹೋಗಲಾಡಿಸುವ ಮೂಲಕ ಸಂವಿಧಾನ ತನ್ನ ಅಶಯಗಳನ್ನು ಈಡೇರಿಸಿದೆ ಈಗ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿ ಜಗತ್ತಿನ ಶಕ್ತಿ ರಾಷ್ಟ್ರವಾಗಿದ್ದೇವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು  ಮಾತನಾಡಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹನೀಯರನ್ನು ನಾವು ನೆನೆಯುವುದು ನಮ್ಮ ಕರ್ತವ್ಯ ದೇಶಾಕ್ಕಾಗಿ ಪ್ರತಿಯೊಬ್ಬ ಪ್ರಜೆಯು ಸೇವೆ ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್,ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಾದ ಸ್ವಾಮಿ. ಚೀರಂಜೀವಿ, ಹೆಚ್.ಆರ್.ಸ್ವಾತಿ, ಬಿ,ವಿದ್ಯಾ, ರಾಕೇಶ್. ಗೃಹರಕ್ಷಕದಳದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಮಂಜುನಾಥರಾಜಅರಸ್. ಕಲಾವಿದ ಖಲಂದರ್ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಪ್ರೇಮದೇವರಾಜ್. ಸಿ.ಪಿ.ಐ ಮಾರಪ್ಪ, ಪುರಸಭಾ ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ. ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ ಕಾರ್ಯನಿವರ್ಾಹಣಾಧಿಕಾರಿ ಕೃಷ್ಣಮೂತರ್ಿ ಮತ್ತಿತ್ತರರು ಉಪಸ್ಥಿತರಿದ್ದರು. 


ಸಕರ್ಾರದ ಸವಲತ್ತುಗಳನ್ನು ಬಳಸಿಕೊಳ್ಳಲು ಶಿಕ್ಷಣದ ಅವಶ್ಯತಕೆ ಇದೆ
ಚಿಕ್ಕನಾಯಕನಹಳ್ಳಿ,ಜ.26 : ಸಕರ್ಾರದ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಅದ್ದರಿಂದ ಎಲ್ಲರೂ ಶಿಕ್ಷಿತರಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಲಿಂಗದೇವರು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಹೋಬಳಿ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಹಾಗೂ ಸಕರ್ಾರದ ಸವಲತ್ತು ಪಡೆಯಲು ಸಂಘಟಿತರಾಗಬೇಕು, ಸಮಾಜದ ಮಕ್ಕಳನ್ನು ವಿದ್ಯಾವಂತರಾನ್ನಾಗಿ ಮಾಡುವುದರ ಮೂಲಕ ಮುಖ್ಯವಾಹಿನಿಗೆ ತರುವ ಅವಶ್ಯಕತೆ ಇದೆ ಎಂದರು.
ದಲಿತ ಮುಖಂಡ ಗೋ.ನಿ.ವಸಂತಕುಮಾರ್ ಮಾತನಾಡಿ, ದೇಶದ ಶೇ%80ರಷ್ಟು ದಲಿತರು ಅವಿದ್ಯಾವಂತರು, ಇಂದಿಗೂ ಕೂಡ ದಲಿತರಿಗೆ ಅಕ್ಷರ ಸಂಪರ್ಕ ತಪ್ಪಿಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ದಲಿತರು ನಿಕೃಷ್ಠ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣ ಪಡೆದು ವಿದ್ಯಾವಂತರಾದ 20%ರಷ್ಟು ದಲಿತರು ಉದ್ಯೋಗ ಪಡೆದು ತಾವು ಬೆಳೆದು ಬಂದ ಊರು ಹಾಗೂ ಸಮಾಜವನ್ನು ಮರೆಯುತ್ತಿದ್ದಾರೆ ಎಂದರು.    
ಶೆಟ್ಟಿಕೆರೆ ದಲಿತ ಸಂಘರ್ಷ ಸಮಿತಿ ಶಾಖೆಗೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಮೂಲಕ ಮರು ಚಾಲನೆ ನೀಡಲಾಯಿತು.
 ಕಾರ್ಯಕ್ರಮದ ಉದ್ಘಾಟನೆಯನ್ನು ದಸಂಸದ ಹಿರಿಯ ಹೋರಾಟಗಾರ ನಾರಾಯಣರಾಜು ನೆರವೇರಿಸಿದರು. ಸಭೆಯಲ್ಲಿ ಆರ್.ಗೋವಿಂದಯ್ಯ, ಶೆಟ್ಟಿಕೆರೆ ಗ್ರಾ.ಪಂ.ಸದಸ್ಯ ದೇವರಾಜು, ಬ್ಯಾಡರಹಳ್ಳಿ ಮಹಾದೇವಯ್ಯ, ಅಗಸರಹಳ್ಳಿ ನರಸಿಂಹಮೂತರ್ಿ, ಗಿರೀಶ್, ಹಾಲುಗೋಣ ಆರ್.ನರಸಿಂಹಮೂತರ್ಿ ಹಾಜರಿದ್ದರು.
ಜಂಗಮರ ಜೋಳಿಗೆಯಲ್ಲಿ ಸಾಹಿತ್ಯ ತುಂಬಿದೆ
ಚಿಕ್ಕನಾಯಕನಹಳ್ಳಿ,ಜ.26 : ಜಂಗಮರ ಜೋಳಿಗೆಯಲ್ಲಿ ಸಾಹಿತ್ಯ ತುಂಬಿದ್ದು ಮಹಾನ್ ಪುರಷರ ಮಾರ್ಗದರ್ಶನಗಳು ಅಡಕವಾಗಿವೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಹಾಗೂ ಸೇವಾದೀಕ್ಷಾ ಸ್ವೀಕಾರ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು,  ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳನ್ನು ತಿಳಿಸುವಂತಹ ಬದುಕನ್ನು ಕಲಿಸುವ ಜಂಗಮರ ಶರಣರ ವಚನಗಳನ್ನು ನಾವು ಸಾಮಾನ್ಯರಿಗೆ ಉಣಬಡಿಸ ಬೇಕಾಗಿದ್ದು ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಸಮಾಜದ ಬಂಧುಗಳಿಗೆ ನಾವು ಮನವರಿಕೆ ಮಾಡಬೇಕಾಗಿದೆ,  ಆದರ್ಶ ಜೀವನದ ಗುಣಗಳನ್ನು ಶರಣ ಸಾಹಿತ್ಯದ ಮೂಲಕ ತಿಳಿಸಬೇಕಾಗಿರುವುದು ಶರಣ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬದುಕನ್ನು ಅರ್ಥಮಾಡಿಕೊಂಡು ಬಂದಂತಹ ಸಾಹಿತ್ಯ, ವಚನ ಸಾಹಿತ್ಯ ಮನುಷ್ಯನಿಗೆ ಸ್ವಲ್ಪಮಟ್ಟಿನ ಶಾಂತಿ ನೆಮ್ಮದಿಯನ್ನು ನೀಡುವುದೆಂದರೆ ಅಧ್ಯಯನದಿಂದ ಹಾಗೂ ಸಂಗೀತದಿಂದ ಇಂತಹ ಅಧ್ಯಯನ ಮಾಡುವುದನ್ನು ನಾವು ರೂಪಿಸಿಕೊಳ್ಳಬೇಕಾಗಿದೆ, ಈ ಅಧ್ಯಯನಕ್ಕೆ ವಚನಗಳು ತಮ್ಮದೇ ಆದಂತಹ ದಾರಿದೀಪವಾಗಿದ್ದು ಇಂತಹ ವಚನಗಳು ಮತ್ತು ಶರಣ ಸಾಹಿತ್ಯ ಕೇವಲ ಲಿಂಗಾಯಿತ, ವೀರಶೈವ ಧರ್ಮಕ್ಕೆ ಮಾತ್ರ ಸೇರಿದವಲ್ಲ ಹಾಗೂ ಲಿಂಗಾಯಿತ ವೀರಶೈವ ಎಂಬುದು ಜಾತಿಯೂ  ಅಲ್ಲ ಇವು ವೀರಶೈವ ಧರ್ಮವಾಗಿದ್ದು ಸಮಾಜದಲ್ಲಿ ಕೆಳಹಂತದವರ ದೀನ ದಲಿತರನ್ನು ಮೇಲೆತ್ತುವ ಹಾಗೂ ಸಮಾಜದಲ್ಲಿ ಬದುಕುವುದನ್ನು ಕಲಿಸುವಂತಹ ಧರ್ಮವಾಗಿದೆ, ಬಸವಣ್ಣನವರು ಹೇಳಿರುವಂತೆ ಅರಿವೇ ಗುರುವಾಗಿದ್ದು ಇಂತಹ ಜೀವನದ ಅನುಭವನ್ನು ತಿಳಿಸಿರುವಂತಹ ವಚನ ಸಾಹಿತ್ಯಗಳನ್ನು ಮನೆ ಮನಗಳಿಗೆ ಮುಟ್ಟಿಸುವಂತಹ ಕಾರ್ಯ ಈ ಶರಣ ಸಾಹಿತ್ಯ ಪರಿಷತ್ತಿನಿಂದ ಆಗಬೇಕಾಗಿದೆ ನಮ್ಮ ಜೀವನಕ್ಕೆ ಶಾಂತಿ ಸಿಗಬೇಕದಾರೆ ಅದು ಓದುವ ಹಾಗೂ ಇಂತಹ ಸಾಹಿತ್ಯಗಳ ವಿಚಾರದಾರೆಗಳಿಂದ ಮಾತ್ರ ಸಾದ್ಯವಾಗಿದ್ದು ನಾವು ಇಂತಹವುಗಳನ್ನು ಉಳಿಸ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಸುತ್ತೂರಿನಲ್ಲಿ ಸುಮಾರು 30ವರ್ಷಗಳಹಿಂದ ಉದ್ಘಾಟನೆಯಾದ ಈ ಶರಣ ಸಾಹಿತ್ಯ ಪರಿಷತ್ತು 30 ಜಿಲ್ಲೆ, 175ತಾಲ್ಲೂಕುಗಳಲ್ಲೂ ತನ್ನ ಶಾಖೆಯನ್ನು ಹೊಂದಿದೆ, ಕದಳಿ ಮಹಿಳಾ ವೇದಿಕೆ ಎಂಬ ಹೆಸರಿನ ಶರಣೆಯರ ತಂಡವು ಸಹ ಇದರಡಿಯಲ್ಲಿ ತನ್ನ ಕೆಲಸ ಮಾಡುತ್ತಿದ್ದು ಶರಣ ಸಾಹಿತ್ಯ ಪರಿಷತ್ತು ಎಂದರೆ ಕೇವಲ ಲಿಂಗಾಯಿತ ವೀರಶೈವರ ಪರಿಷತ್ತಲ್ಲ,  ಪರಿಷತ್ತಿನಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಯವರು ಸಹ ಇದ್ದಾರೆ,  ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ನೀಡುವ ಉದ್ದೇಶದಿಂದ ಹಾಗೂ ಜೀವನ ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದ್ದು ರಾಷ್ಟ್ರಕ್ಕೆ ರಾಷ್ಟ್ರಪತಿ ಎಂಬಂತಹ ನಾಮಂಕಿತವನ್ನು ನೀಡಿದಂತಹ ತೀನಂಶ್ರೀಯವರು ಇದ್ದಂತಹ ಈ ತಾಲ್ಲೂಕಿನಲ್ಲಿ ಶರಣಸಾಹಿತ್ಯ ಪರಿಷತ್ತು ತನ್ನ ಕೇಲಸವನ್ನು ಕ್ರೀಯಾಶಿಲತೆಯಿಂದ ಮಾಡುಲಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಸಾಸಲಿನ ಆಡಿಟರ್ ಚಂದ್ರಣ್ಣ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸದಸ್ಯೆ ಶಶಿಕಲಾಜಯದೇವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಿ.ರವಿಕುಮಾರ್ ನಿರೂಪಿಸಿದರೆ, ಪರಿಷತ್ತಿನ ಅಧ್ಯಕ್ಷ ಟಿ.ಬಿ.ಮಲ್ಲಿಕಾಜರ್ುನ್ ಎಲ್ಲರನ್ನು ಸ್ವಾಗತಿಸಿದರು. ಮಲ್ಲಿಗೆ ಪ್ರಾಥರ್ಿಸಿದರು.