Saturday, July 30, 2011


ಬಡವರ ಬಗ್ಗೆ ಕಾಳಜಿವಹಿಸುವುದು ಪತ್ರಕರ್ತನ ಧ್ಯೇಯವಾಗಬೇಕು: ಡಾ.ಸ್ವರೂಪ್ಚಿಕ್ಕನಾಯಕನಹಳ್ಳಿ,ಜು.30 : ದೇಶದ ಎಲ್ಲಾ ವ್ಯಕ್ತಿಗೆ ಶಿಕ್ಷಣ, ಆಹಾರ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವುದು ಸಕರ್ಾರದ ಕೆಲಸ, ಈ ಕೆಲಸ ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿಮರ್ಾಣ ಮಾಡುವ ಕೆಲಸವನ್ನು ಪತ್ರಿಕೆ, ಪತ್ರಕರ್ತ ಮಾಡಬೇಕಾದ ಕೆಲಸ ಎಂದು ಸಿದ್ದಾರ್ಥ ಮಾಧ್ಯಮ ಕೇಂದ್ರ ನಿದರ್ೇಶಕ ಡಾ.ಸುಚೇತನ್ ಸ್ವರೂಪ್ ಹೇಳಿದರು. ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಕಾಯರ್ಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಳ್ಳಸಾಗಾಣಿಕೆ, ವ್ಯಭಿಚಾರ ಹಾಗೂ ಅರಿಯದ ಜನರನ್ನು ಮೋಸದ ಮೂಲಕ ವಂಚಿಸಿ ಬಂಡವಾಳ ಮಾಡುತ್ತಿರುವುದು ಹೆಚ್ಚಾಗಿರುವ ಸಮಾಜದಲ್ಲಿ ಪತ್ರಕರ್ತ ಜಾಗೃತನಾಗರಿಬೇಕು ಎಂದರು. ಈ ವ್ಯವಸ್ಥೆಯಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗಿ ದೇಶದ ಪ್ರಜಾಸತ್ತಾತ್ಮಕತೆ ನಾಶವಾಗುತ್ತಿದೆ ಎಂದು ವಿಶ್ಲೇಷಿಸಿದ ಅವರು, ಪತ್ರಿಕೆ ನಡೆಸುವುದು ಬಹಳ ಕಷ್ಠ ಒಂದು ಪತ್ರಿಕೆಯ ಮುದ್ರಣಗೊಂಡ ಹೊರಬರುವ ಹೊತ್ತಿಗೆ ಹತ್ತು ರೂಗಳಷ್ಟು ವೆಚ್ಚ ತಗುಲಲಿದೆ, ಪತ್ರಿಕೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಕೇವಲ ಮೂರು ರೂಗಳಿಗೆ ಮಾರಾಟ ಮಾಡಲಾಗುತ್ತದೆ ಉಳಿದ ಹಣವನ್ನು ಪತ್ರಿಕೆಯವರು ಜಾಹಿರಾತಿನಿಂದ ನಷ್ಟ ತುಂಬಬೇಕಾಗಿದೆ, ನಷ್ಟವನ್ನು ತುಂಬಿಕೊಟ್ಟ ಜಾಹೀರಾತುದಾರರ ಹಿತಕ್ಕೆ ತಕ್ಕಂತೆ ಕೆಲವೊಮ್ಮೆ ಪತ್ರಿಕೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ನಿಮರ್ಾಣವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದರು. ಜನಸಾಮಾನ್ಯರು ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಗೆ ಆಗುವ ನಷ್ಠವನ್ನು ತಪ್ಪಿಸಬೇಕಾಗಿದೆ ಎಂದರಲ್ಲದೆ, ಪತ್ರಕರ್ತನಾಗಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ ಅವನಿಗೆ ತನ್ನ ಬರವಣಿಗೆಯೆ ಪದವಿ ಎಂದರಲ್ಲದೆ ತನ್ನ ಲೇಖನದ ಮೂಲಕ ಸಮಾಜವನ್ನು ತಿದ್ದುವ ಹಾಗೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಪತ್ರಕರ್ತನ ಬರವಣಿಗೆಯು ಕತ್ತಿಗಿಂತ ಹರಿತವಾದದ್ದು ಎಂಬುದನ್ನು ನಾವೆಲ್ಲ ಬಲ್ಲವು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಬೇಕೆಂದರು, ರಾಜಕಾರಣಿ, ಅಧಿಕಾರಿ ಹಾಗೂ ಕಿಡಿಗೇಡಿಗಳು ಮಾಡುವ ತಪ್ಪುಗಳನ್ನು ಪತ್ರಿಕೆಯವರು ತಮ್ಮ ಬರವಣಿಗೆಯಿಂದ ತಿಳಿಸಬೇಕು ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ ನಕಲಿ ಪತ್ರಕರ್ತರ ಹಾವಳಿಯನ್ನು ತಪ್ಪಿಸಲು ಸಂಘ ಚಿಂತಿಸುತ್ತಿದ್ದು ಅದಕ್ಕಾಗಿ ಪೋಲಿಸ್ ಇಲಾಖೆ ಪತ್ರಕರ್ತರಿಗೆ ಗುರುತಿನ ಕಾಡರ್್ನ್ನು ಕೆಲವೇ ದಿನಗಳಲ್ಲಿ ನೀಡಲಿದೆ ಎಂದರಲ್ಲದೆ, ಪತ್ರಕರ್ತರಿಗೆ ವಿಮೆ, ಆರೋಗ್ಯ ವಿಮೆ, ನಿವೇಶನ, ಬಸ್ಪಾಸ್ ಸೌಲಭ್ಯವನ್ನು ಸಕರ್ಾರ ನೀಡಬೇಕೆಂದರು. ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು. ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕ್ಷಣ ಕ್ಷಣಕ್ಕೂ ಜನಸಾಮಾನ್ಯರಿಗೆ ಮಾಹಿತಿ ನೀಡುವ ಪತ್ರಕರ್ತರು ಬಡವರ ಏಳಿಗೆಗೆ ಶ್ರಮಿಸಬೇಕು ಎಂದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ , ಜಿಲ್ಲಾ ಪತ್ರಕರ್ತರ ಸಂಘಧ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾಲೂಕು ಸಂಘದ ಕಾರ್ಯದಶರ್ಿ ಸಿ.ಎಚ್.ಚಿದಾನಂದ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾಥರ್ಿನಿಗಳಾದ ಫ್ಹರಾನಾ, ರೂಪ ಪ್ರಾಥರ್ಿಸಿದರೆ, ಗೋವಿಂದರಾಜು ಸ್ವಾಗತಿಸಿದರು, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿದರೆ ಆರ್.ಸಿ.ಮಹೇಶ್ ವಂದಿಸಿದರು.
ಎನ್.ಎಫ್.ಜಿ.ಸಿ.ಯಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಚಿಕ್ಕನಾಯಕನಹಳ್ಳಿ,ಜು.30: 2011-12ನೇ ಸಾಲಿನ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ ಆಗಸ್ಟ್ 5ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಜಂಟಿ ನಿದರ್ೇಶಕ ಪ್ರೊ.ಟಿ.ಗಂಗಾಧರಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣಯಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.