Tuesday, May 20, 2014

ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆಯಬೇಕು
ಚಿಕ್ಕನಾಯಕನಹಳ್ಳಿ,ಮೇ.20: ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆದು ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕ್ ಸಣ್ಣಪುಟ್ಟ ಸಮಾಜದವರನ್ನು ಗುತರ್ಿಸಿ ಅವರನ್ನು ಆಥರ್ಿಕವಾಗಿ ಸದೃಢರನ್ನಾಗಿಸಲು ಮುಂದಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲೂಕಿನ ಬಂಗಾರಗೆರೆ ತಾಂಡ್ಯದಲ್ಲಿ ಶ್ರೀ ಸೇವಾಲಾಲ್ ಸ್ವಸಹಾಯ ಸಂಘದವರು ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಅಲೆಮಾರಿ ಬುಡಕಟ್ಟುಗಳಾದ ದಕ್ಕಲಿಗರು, ದೊಂಬಿದಾಸರು, ಸಿಳ್ಳೇಕ್ಯಾತರು ಸೇರಿದಂತೆ ಹಮ್ಮಾಮ್ ಕೋಮಿನ ತಮ್ಮಾಮ್ ಜನರನ್ನು ಗುತರ್ಿಸಿ ಅವರು ಇಚ್ಚಿಸುವ ವ್ಯಾಪಾರ ವ್ಯವಹಾರಗಳನ್ನು ಮಾಡಲು ಸ್ವಸಹಾಯ ಸಂಘಗಳ ಮೂಲಕ ಹಣಕಾಸಿನ ನೆರವನ್ನು ನೀಡಿದ್ದು ಈ ಎಲ್ಲಾ ಸಮಾಜದವರು ನಿಷ್ಠೆಯಿಂದ ಸಾಲವನ್ನು ಮರುಪಾವತಿ ಮಾಡಿ ತಮ್ಮ ವ್ಯವಹಾರಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಬ್ಯಾಂಕ್ನ ಬೆಳವಣಿಗೆಗೂ ಸಹಕರಿಸುತ್ತಿದ್ದಾರೆ ಎಂದರು.
ಬಂಗಾರಗೆರೆ ತಾಂಡ್ಯದಲ್ಲಿನ ಇಪ್ಪತ್ತು ಜನ ಸದಸ್ಯರಿರುವ ಸ್ವಸಹಾಯ ಸಂಘಕ್ಕೆ ಇಲ್ಲಿಯವರೆಗೂ ಐದು ಲಕ್ಷ ರೂ ಸಾಲ ನೀಡಿದ್ದು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡರೆ ಆ ಸಂಘಗಳಿಗೂ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದರು, ಆಲದಕಟ್ಟೆ ತಾಂಡ್ಯದ ಸೇವಾಲಾಲ್ ಸಂಘವೂ ಇದೇ ರೀತಿ ಉತ್ತಮ ಪ್ರಗತಿ ಹೊಂದಿದ್ದರಿಂದ ಆ ಸಂಘಕ್ಕೆ ಡಿ.ಸಿ.ಸಿ.ಬ್ಯಾಂಕ್ ಉಚಿತವಾಗಿ ಸೇಫ್ ಲಾಕರ್ನ್ನು ನೀಡಿದೆ ಎಂದರಲ್ಲದೆ, ತಾಲೂಕಿನಲ್ಲಿರುವ ಸ್ವಸಹಾಯ ಸಂಘಗಳಿಗೆ 13 ಕೋಟಿ ರೂಗಳಷ್ಟು ಸಾಲ ನೀಡಲಾಗಿದೆ ಎಂದು ಎಸ್.ಆರ್.ರಾಜ್ಕುಮಾರ್ ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಲಂಬಾಣಿ ಜನಾಂಗದ ಬಾಂಧವರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು, ಹಿಂದೆ ಮಕ್ಕಳಿಗೆ ಆಸ್ತಿ ಮಾಡಬೇಕೆಂಬ ಕಾಲ ಒಂದಿತ್ತು, ಈಗ ಮಕ್ಕಳನ್ನೇ ಆಸ್ತಿ ಮಾಡುವ ಕಾಲ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರಲ್ಲದೆ, ಸಮಾಜದ ಬಡ ಬಂಧುಗಳು ಸಕರ್ಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಪಡೆಯುವ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸೇವಾಲಾಲ್ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಈ ಊರಿಗೆ ನ್ಯಾಯಬೆಲೆ ಅಂಗಡಿ ಮುಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.
ತಾ.ಪಂ.ಸದಸ್ಯೆ ಚೇತನ ಗಂಗಾಧರ್ ಮಾತನಾಡಿ ಇಲ್ಲಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಮುಜರಾಯಿ ಇಲಾಖೆಯಿಂದ ದೇವಸ್ಥಾನ ನಿಮರ್ಾಣ, ತಾಂಡ್ಯಕ್ಕೊಂದು ಸಮುದಾಯ ಭವನ, ಬಡವರಿಗೆ ಉಚಿತ ನಿವೇಶನ ನೀಡುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಗ್ರಾ.ಪಂ.ಯಿಂದ ಮಾತ್ರ ಸಾಧ್ಯ ಆದ್ದರಿಂದ ಇ.ಓ.ರವರು ಈ ಬಗ್ಗೆ ಹೆಚ್ಚು ಗಮನ ನೀಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಇಚ್ಚಾಶಕ್ತಿಯನ್ನು ತೋರಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಬರಗೂರು ಬಸವರಾಜು, ಬರಗೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಬಿ.ಎನ್.ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ಮ್ಯಾನೇಜರ್ ಟಿ.ಎನ್.ನಾಗರಾಜು, ವಿ.ಎಸ್.ಎಸ್.ಎನ್. ಸಿ.ಇ.ಓ. ಬಿ.ಸಣ್ಣಕರಿಯಪ್ಪ, ನಿದರ್ೇಶಕ ಜಾಫರ್ ಸಾಧಿಕ್ ಸೇರಿದಂತೆ ಹಲವರಿದ್ದರು.
ಸಮಾರಂಭದಲ್ಲಿ ವಕೀಲ ಯತೀಶ್ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕ ರಂಗನಾಥ್ ಸ್ವಾಗತಿಸಿದರು.

ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ವರ ರಸ್ತೆ ಅಪಘಾತದಲ್ಲಿ ಮರಣ
 ಚಿಕ್ಕನಾಯಕನಹಳ್ಳಿ,ಮೇ.20: ಮದುವೆಯ ಲಗ್ನಪತ್ರಿಕೆ ವಿತರಿಸಿಸಲು ಹೋಗಿದ್ದ ವರ ತನ್ನದಲ್ಲದ ತಪ್ಪಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡುರಾತ್ರಿಯಲ್ಲಿ ನಡೆದಿದೆ.
 ತಾಲೂಕಿನ ಸಾಲಕಟ್ಟೆ ಕ್ರಾಸ್ ಮತ್ತು ಮುದ್ದೇನಹಳ್ಳಿ ಗೇಟ್ ಮಧ್ಯೆ ನಡು ರಸ್ತೆಯಲ್ಲಿ  ಕೆಟ್ಟು ನಿಂತಿದ್ದ ಲಾರಿಗೆ ಬೈಕ್ನಲ್ಲಿ ಬಂದ ದೊಡ್ಡ ಬಿದರೆ ತೋಟದ ಮನೆ ವಾಸಿ ಡಿ.ಎನ್.ಸೋಮಶೇಖರಯ್ಯ ಉರುಫ್ ಸುರೇಶ್ ಮತ್ತು ಹೊಸಹಟ್ಟಿಯ ನಿಂಗರಾಜು ಢಿಕ್ಕಿ ಹೊಡೆದ ಪರಿಣಾಮ ಡಿ.ಎನ್.ಸೋಮಶೇಖರ್ ಸಾವನ್ನಪ್ಪಿದ್ದರೆ ನಿಂಗರಾಜು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಸೋಮಶೇಖರಯ್ಯನ ಮದುವೆ ತನ್ನ ಅಕ್ಕನ ಮಗಳೊಂದಿಗೆ ಇದೇ 24, 25ರಂದು ನಡೆಯಬೇಕಿತ್ತು, ಈ ಸಂಬಂಧ ತನ್ನ ಬಂಧುಬಳಗದವರಿಗೆ ಲಗ್ನ ಪತ್ರಿಕೆಯೊಂದಿಗೆ ಕೊಡಲು  ತನ್ನ ಸ್ನೇಹಿತನೊಂದಿಗೆ ತೆರಳಿದ್ದ ಮೃತ ಸೋಮಶೇಖರ್, ಸೋಮವಾರ ರಾತ್ರಿ ತಡ ರಾತ್ರಿ ಮುದ್ದೇನಹಳ್ಳಿ ಗೇಟ್ ಬಳಿ ಬರುತ್ತಿರುವಾಗ ರಸ್ತೆ ಮಧ್ಯೆ ಲಾರಿಯೊಂದ ಕೆಟ್ಟು ನಿಂತಿತ್ತು, ಈ ಬಗ್ಗೆ  ಯಾವುದೇ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳದ ಲಾರಿ ಡ್ರೈವರ್ನ ಅಜಾಗರೂಕತೆಯಿಂದಾಗಿ  ಬೈಕ್ನ ಸವಾರ ಸೋಮಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೋರ್ವ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಲಾರಿ ಚಾಲಕ ಘಟನೆ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾನೆ.

ಎಸ್.ಪಿ.ಎಂ.ರವರನ್ನು ಗೆಲ್ಲಿಸುವ ಮೂಲಕ ಮತದಾರರು ಪ್ರೌಢಿಮೆ ಮೆರೆದಿದ್ದಾರೆ. :  ಡಾ.ಡಿ.ಆರ್. ನಾಗೇಶ್ 
ಚಿಕ್ಕನಾಯಕನಹಳ್ಳಿ,ಮೇ.20: ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಪ್ರೌಢಿಮೆ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕೃಷಿ ಮತ್ತು ಕೃಷಿ ಕಾಮರ್ಿಕ ಘಟಕದ ಬೆಂಗಳೂರು ವಿಭಾಗದ ಪ್ರಧಾನ ಕಾರ್ಯದಶರ್ಿ ಡಾ.ಡಿ.ಆರ್. ನಾಗೇಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ.ಸಿದ್ದರಾಮಯ್ಯನವರ ಸಮಾಜಿಕ ಕಳಕಳಿ, ಪಕ್ಷದ ರಾಜ್ಯಾಧ್ಯಕ ಡಾ.ಜಿ.ಪರಮೇಶ್ವರ ರವರ ಸಂಘಟನಾ ಚಾತುರ್ಯ ಹಾಗೂ ಅಬ್ಯಾಥರ್ಿ ಎಸ್.ಪಿ.ಎಂ.ಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಮತದಾರರು ಮನಸೋತು ಹೆಚ್ಚಿನ ಮತ ನೀಡಿ ಅವರ ಜಯಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.
ಸ್ಪಧರ್ೆ ಚುನಾವಣೆಯ ಸಂದರ್ಭಕ್ಕೆ ಸೀಮಿತವಾಗಿರಬೇಕು, ಗೆದ್ದ ನಂತರ ಕ್ಷೇತ್ರದ ಎಲ್ಲಾ ಜನರ ಪ್ರತಿನಿಧಿಯಾಗುವುದರಿಂದ ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ದುಡಿಯಬೇಕು ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಮತದಾರರು ಯಾವುದೇ ರಾಗ ದ್ವೇಷಗಳಿಗೆ ಬಲಿಯಾಗದೆ ಸಹೌರ್ಧತೆಯಿಂದ  ಅಭಿವೃದ್ದಿಯ ನಿಟ್ಟಿನಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.




ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದ ಪಿ.ಡಿ.ಓ.: ಕಾಮಗಾರಿ ದಾಖಲೆಗಳ ಬಗ್ಗೆ ತನಿಖೆಗೆ ಒತ್ತಾಯ.
ಚಿಕ್ಕನಾಯಕನಹಳ್ಳಿ : ಗೋಡೆಕೆರೆ ಗ್ರಾಮ ಪಂಚಾಯ್ತಿಯಲ್ಲಿ 2010-11ರಿಂದ 2013-14ರವರೆಗೆ ನಡೆದಿರುವ ಎನ್.ಆರ್.ಇ.ಜಿ ಕಾಮಗಾರಿ, ಶೌಚಾಲಯ ಮತ್ತು ಪಂಚಾಯ್ತಿ ಕರವಸೂಲಾತಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು  ಪಂಚಾಯ್ತಿ ಸದಸ್ಯರೇ ತನಿಖೆಗೆ  ಒತ್ತಾಯಿಸಿದ್ದಾರೆ.
ಪಟ್ಟಣದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸದಸ್ಯರುಗಳು, ಗೋಡೆಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಪಂಚಾಯ್ತಿಯ ಪಿಡಿಓ ಕೋಕಿಲರವರಲ್ಲಿ ಕೇಳಿದರೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ, ಈ ಬಗ್ಗೆ ಪಂಚಾಯ್ತಿಯಲ್ಲಿನ ಹಾಲಿ ಸದಸ್ಯರಿಗೆ ಅವಮಾನ ಮಾಡಿರುವುದಲ್ಲದೆ,  ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರವ ಬಗ್ಗೆ ಅನುಮಾನ ಬರುವಂತೆ ವತರ್ಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2010-11ನೇ ಸಾಲಿನಿಂದ 2013-14ನೇ ಸಾಲಿನವರೆ ಗ್ರಾಮ ಪಂಚಾಯ್ತಿಗೆ ಸಕರ್ಾರದಿಂದ ಬಂದ ಹಣದ ಲೆಕ್ಕ ಹಾಗೂ ಈ ಹಣ ಯಾವ ಯಾವ ಬಾಬ್ತಿಗೆ ಖಚರ್ು ಮಾಡಲಾಗಿದೆ ಎಂಬುದರ ಬಗ್ಗೆ ಪಂಚಾಯ್ತಿ ಪಾಸ್ಪುಸ್ತಕದ ನಕಲಿನ ಸಮೇತ ಮಾಹಿತಿ ನೀಡಲು ಕೋರಲಾಗಿತ್ತು ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡುತ್ತಿಲ್ಲ,  ಅಲ್ಲದೆ ಪಂಚಾಯ್ತಿ ಬಿಲ್ ಕಲೆಕ್ಟರ್ 2010ರಿಂದ 2013-14ನೇ ಸಾಲಿನವರೆಗೆ ವಸೂಲಿ ಮಾಡಿರುವ ಕಂದಾಯದ ವಿವರವನ್ನು ನೀಡುವಂತೆ  ಮನವಿ ಮಾಡಲಾಗಿತ್ತು ಆದರೆ ಪಿಡಿಓರವರು ಈ ಬಗ್ಗೆಯೂ ಸದಸ್ಯರಿಗೆ ಮಾಹಿತಿ ನೀಡಿಲ್ಲವೆಂದು ಆಪಾದಿಸಿದ್ದಾರೆ. 
 ಈ ಬಗ್ಗೆ ಮಾಚರ್್ 11ರ 2014 ಹಾಗೂ ಏಪ್ರಿಲ್ 28 2014ರಂದು ಪುನಃ ಮನವಿ ಸಲ್ಲಿಸಿ 13ನೇ ಹಣಕಾಸು ಯೋಜನೆಯಲ್ಲಿ 2010ರಿಂದ 2014ರವರೆಗೆ ಶೌಚಾಲಯ ಮತ್ತು ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಹಣಕಾಸಿನ ವಿವರಗಳನ್ನು ಫಲಾನುಭವಿಗಳ ವಿಳಾಸದೊಂದಿಗೆ ಮಾಹಿತಿ ಕೇಳಿದರೂ ಸಹ ಮಾಹಿತಿ ನೀಡಿರುವುದಿಲ್ಲ, ಪಿಡಿಓರವರನ್ನು ಈ ಬಗ್ಗೆ ಮೌಖಿಕವಾಗಿ ಕೇಳಿದಾಗ ಅಧ್ಯಕ್ಷರು ಪಂಚಾಯ್ತಿ ರೆಕಾಡರ್್ಗಳನ್ನು ಪಂಚಾಯ್ತಿ ಕಛೇರಿಯಲ್ಲಿಯೇ ಪರಿಶೀಲಿಸಲು ತಿಳಿಸಿರುತ್ತಾರೆ ಎಂದು ಹೇಳುತ್ತಾರೆ ಆದರೆ ಸದಸ್ಯರು ಕೇಳುವ ಯಾವುದೇ ದಾಖಲೆಗಳನ್ನು ನೀಡದೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ಆರೋಪಿಸುತ್ತಾರೆ.  
ಪಿಡಿಓರವರು ಯಾವುದೇ ಮಾಹಿತಿ ಹಾಗೂ ದಾಖಲೆಗಳನ್ನು ನೀಡುತ್ತಿಲ್ಲವೆಂದಿರುವ ಸದಸ್ಯರುಗಳಾದ ಗೋ.ನಿ.ವಸಂತಯ್ಯ ಜಿ.ಪಿ.ಲೋಕೇಶ್, ತಿಮ್ಮೇಗೌಡೃ, ಬಸವಲಿಂಗಯ್ಯ ಪಂಚಾಯ್ತಿಯಲ್ಲಿನ ಎಲ್ಲಾ ವ್ಯವಹಾರಗಳ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೆ ಹಾಲಿ ಸದಸ್ಯರಿಗೆ ಲಿಖಿತವಾಗಿ ಮಾಹಿತಿ ನೀಡದೆ ಇರುವ ಪಿಡಿಓರವರ ಮೇಲೆ ಕ್ರಮ ಕೈಗೊಳ್ಳುವಂತೆ  ಸಕರ್ಾರವನ್ನು ಒತ್ತಾಯಿಸಿದ್ದಾರೆ.