Friday, April 9, 2010

ಕನಕ ದಾಸರ ಏಕಶಿಲೆಗೆ ಕ್ಷೀರಾಭಿಷೇಕ, ಬೈಕ್ ರ್ಯಾಲಿಯೊಂದಿಗೆ ಅದ್ದೂರಿ ಸ್ವಾಗತ

ಚಿಕ್ಕನಾಯಕನಹಳ್ಳಿ,ಏ.09: ಕನಕದಾಸರ ಏಕಶಿಲೆ ವಿಗ್ರಹವನ್ನು ರೂಪಿಸುವ ಶಿಲೆಯನ್ನು ಹೊಸದುರ್ಗ ಹೊಯ್ಯುವ ಮಾರ್ಗಮಧ್ಯೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಕನಕ ದಾಸರ ಅನುಯಾಯಿಗಳು ಬೈಕ್ ರ್ಯಾಲಿಯ ಮೂಲಕ ಅದ್ದೂರಿಯಿಂದ ಸ್ವಾಗತಿಸಿದರು.
ಹೊಸದುರ್ಗದ ಶಾಖಾಮಠದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕನಕ ದಾಸರ ಮೂತರ್ಿಯನ್ನು ನಿಮರ್ಿಸಲು ಯೋಜಿಸಿರುವ ಶಿಲೆಯನ್ನು ಹೊತ್ತುತಂದ 160 ಚಕ್ರದ ಬೃಹತ್ ಗಾತ್ರದ ವಾಹನಕ್ಕೆ ಹೂವಿನಿಂದ ಸಿಂಗರಿಸಿ, 300ಟನ್ ತೂಕದ 40ಅಡಿ ಉದ್ದದ ಏಕಶಿಲೆ ಹಾಗೂ ವಾಹನದಲ್ಲಿದ್ದ ಕನಕ ದಾಸರ ಕಿರು ವಿಗ್ರಹಕ್ಕೆ ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಬಳಿ ಕ್ಷೀರಾಭಿಷೇಕವನ್ನು ಮಾಡಿದರು.
ಪಟ್ಟಣಕ್ಕೆ ಗುರುವಾರ ಮಧ್ಯರಾತ್ರಿ ಆಗಮಿಸಿದ ವಾಹನ ತಾಲೂಕು ಕಛೇರಿ ಮುಂಭಾಗದಲ್ಲಿ ವಾಸ್ತವ್ಯ ಹೂಡಿದ್ದು, ಬೆಳಗ್ಗೆ 8.30ಕ್ಕೆ ಪಟ್ಟಣದಿಂದ ಹೊರಟ ವೇಳೆ ವಿವಿಧ ಪಕ್ಷದ ಮುಖಂಡರುಗಳು ಹಾಗೂ ಸಮಾಜದ ಗಣ್ಯರು ವಿವಿಧ ಮಂಗಳ ವಾದ್ಯಗಳೊಂದಿಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಬೈಕ್ ರ್ಯಾಲಿ ಮೂಲಕ ಬೀಳ್ಕೊಟ್ಟರು.
ಜೈನ ಇತಿಹಾದಲ್ಲಿ ಅಷ್ಟೇ ಏಕೆ ವಿಶ್ವದ ಪ್ರವಾಸಿ ಕ್ಷೇತ್ರವಾಗಿರುವ ಶ್ರವಣಬೆಳಗೊಳದ ಗೊಮ್ಮಟ ಮೂತರ್ಿಗೆ ವಿಶೇಷ ಸ್ಥಾನವನ್ನು ಕಲ್ಪಿಸಿದ ಚಾವುಂಡರಾಯನಂತೆ, ಕನಕ ದಾಸರ ಹೆಸರನ್ನು ಅಜರಾಮರಗೊಳಿಸಲು ಹೊರಟಿರುವ ಹೊಸದುರ್ಗದ ಮಾಜಿ ಶಾಸಕ ಹಾಗೂ ಕಾಗಿನೆಲೆ ಗುರು ಪೀಠದ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ನವರನ್ನು ಆಧುನಿಕ ಚಾವುಂಡರಾಯ ಎಂದು ಬಣ್ಣಿಸಿದ ಚಿ.ಲಿಂ.ರವಿಕುಮಾರ್, ಕನಕ ದಾಸರ ವಿಚಾರ ಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಕಾಗಿನೆಲೆ ಗುರುಪೀಠ ಕೈಗೆತ್ತಿಕೊಂಡಿರುವ ಕಾರ್ಯಗಳು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಶಾಸಕ ಜಿ.ಬಿ.ಗೋವಿಂದಪ್ಪ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ದೊರೆಮುದ್ದಯ್ಯ,ಶಿವಣ್ಣ ಮಿಲ್ಟ್ರಿ, ಸಮಾಜದ ಮುಖಂಡರುಗಳಾದ ಚಿ.ಲಿಂ.ರವಿಕುಮಾರ್, ಸೀಮೆಎಣ್ಣೆ ಕೃಷ್ಣಯ್ಯ, ರೇವಣ್ಣ ಒಡೆಯರ್, ಸಿ.ಎಂ.ಬೀರಲಿಂಗಯ್ಯ, ಸಿ.ಎಸ್.ರಾಜಣ್ಣ, ಸಿ.ಎಂ. ಗಂಗಾಧರ್, ಪರಶಿವಮೂತರ್ಿ, ಸಿ.ಎಚ್.ಗಂಗಾಧರ್ ಸೇರಿದಂತೆ ಹಲವರು ಹಾಜರಿದ್ದರು.