Wednesday, October 26, 2011



ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವಾಷರ್ಿಕೋತ್ಸವ ಸಮಾರಂಭವನ್ನು ಇದೇ ನವಂಬರ್ 1ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಸಹಾಯಕ ನಿದರ್ೇಶಕ ಎ.ಕೆ.ಬಸವರಾಜಪ್ಪ, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಮುಖ್ಯಾಧಿಕಾರಿ ಹೊನ್ನಪ್ಪ, ಪುರಸಬಾ ಸದಸ್ಯರಾದ ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ರಾಜಣ್ಣ, ಸಿ.ಎಂ.ರಂಗಸ್ವಾಮಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಪುರಸಭಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಸಾಹಿತಿ ಆರ್.ಬಸವರಾಜು, ಕಾಂಗ್ರೆಸ್ ಮುಖಂಡ ಕೃಷ್ಣೆಗೌಡ, ಸಿದ್ದು ಜಿ.ಕೆರೆ, ಸಿ.ಎನ್.ಹನುಮಯ್ಯ, ಚಿದಾನಂದ್, ನಿಂಗಪ್ಪ ಉಪಸ್ಥಿತರಿರುವರು.
ಮಹಾಲಕ್ಷ್ಮೀ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ಶ್ರೀ ಮಹಾಲಕ್ಷ್ಮೀದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ ನವಂಬರ್ 4ರಂದು ಏರ್ಪಡಿಸಲಾಗಿದೆ. ಸಮಾರಂಭವನ್ನು ದೇವಾಂಗ ಬೀದಿಯ ಬನಶಂಕರಿ ದೇವಾಲಯದ ಬಳಿ ಹಮ್ಮಿಕೊಂಡಿದ್ದು ಹಂಪಿ ಹೇಮಕೂಟದ ಗಾಯಿತ್ರಿ ಪೀಠಾಧ್ಯಕ್ಷರಾದ ದಯಾನಂದಪುರಿ ಮಹಾಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಮಹಾಲಕ್ಷ್ಮೀ ದೇವಾಲಯ ಸಮಿತಿ ಅಧ್ಯಕ್ಷ ವಿ.ಶೇಷಗಿರಿ(ಮಂದಾಲಿ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ನೇಕಾರರ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ, ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ.ಜೆ.ವೆಂಕಟರಮಣಪ್ಪ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೇಮಚಂದ್ರ, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಸಿ.ಟಿ.ವರದರಾಜು, ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ನಾಮಿನಿ ಸದಸ್ಯ ಈಶ್ವರ್ ಭಾಗವತ್, ಗಾಯಿತ್ರಿ ಪೀಠ ಸಂಸ್ಥಾನದ ಕಾರ್ಯದಶರ್ಿ ಕೆ.ಸಿ.ತಿಮ್ಮಶೆಟ್ಟಿ ಉಪಸ್ಥಿತರಿರುವರು.