Tuesday, April 16, 2013


ಬಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ.

ಚಿಕ್ಕನಾಯಕನಹಳ್ಳಿ,ಏ.16 : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಕಾಂಗ್ರೆಸ್ ಮುಖಂಡರು ಕೈಕೈ ಮಿಲಾಯಿಸುವ ಹಂತ ತಲುಪಿ ಸಿ.ಬಸವರಾಜು ರವರು ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು  ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಘಟನೆ ನಡೆಯಿತು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸೀಮೆಣ್ಣೆ ಕೃಷ್ಣಯ್ಯನವರನ್ನು ನೇಮಿಸಿರುವ ವಿಷಯ ಪ್ರಸ್ತಾಪವಾಗಿ ಸಭೆಯಲ್ಲಿದ್ದ ಮುಖಂಡರಲ್ಲೇ ಗೊಂದಲವೇರ್ಪಟ್ಟಿತ್ತು. ಗೊಂದಲಕ್ಕೆ ಇನ್ನಷ್ಟು ಇಂಬುಕೊಡುವಂತೆ ಸಿ.ಬಸವರಾಜುರವರ ಬೆಂಬಲಿಗರು ಏರಿದ ಧ್ವನಿಯಲ್ಲಿ ಅಲ್ಲಿದ್ದ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಗಲಾಟೆ ಗದ್ದಲ ಅತಿಯಾಗಿ ಯಾರ ಮಾತನ್ನು ಯಾರೂ ಕೇಳುವಂತಿರಲಿಲ್ಲ.
ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ವಿಧಾನ ಸಭೆಯ ಅಧಿಕೃತ ಅಭ್ಯಥರ್ಿ ಎಸ್.ಎನ್.ಸತೀಶ್ ಸಾಸಲು ಮಧ್ಯ ಪ್ರವೇಶಿಸಿ  ಸೀಮೆಣ್ಣೆ ಕೃಷ್ಣಯ್ಯನವರ ನೇಮಕಾತಿ ವಿಷಯವಾಗಿ ಗೊಂದಲವಾಗಿರುವುದರಿಂದ ಈ ವಿಷಯವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಕ್ಷದ ವರಿಷ್ಠರಿಗೆ ತಿಳಿಸುವುದಾಗಿ ಹೇಳಿದರಲ್ಲದೆ,  ಈ ಬಗ್ಗೆ ಸೂಕ್ತ ಆದೇಶ ಬರುವವರೆಗೆ ಸಿ.ಬಸವರಾಜು ರವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಈ ವಿಷಯವಾಗಿ ಗೊಂದಲ ಬೇಡ ಪಕ್ಷದ ವರಿಷ್ಠರ ಆದೇಶ ಪಾಲಿಸೋಣ ಎಂದು ಹೇಳುತ್ತಿದ್ದ ಸಮಯದಲ್ಲೇ ಮಧ್ಯೆ ಪ್ರವೇಶಿಸಿದ ಸೀಮೆಣ್ಣೆ ಕೃಷ್ಣಯ್ಯ, ವರಿಷ್ಠರು ನನ್ನನ್ನು ಬಿ.ಸಿ.ಸಿ. ಅಧ್ಯಕ್ಷನಾಗಿ ನೇಮಿಸಿರುವುದರಿಂದ ನಾನೇ ಮುಂದುವರೆಯುತ್ತೇನೆ ಎಂದಾಕ್ಷಣ ಹಿಂದೆ ನಿಂತಿದ್ದ ಸಿ.ಬಸವರಾಜು ಸೀಮೆಣ್ಣೆ ಕೃಷ್ಣಯ್ಯ ನವರನ್ನು ತಳ್ಳಿದರು. 
ಈ ಘಟನೆಯಿಂದ ವಿಚಲಿತರಾದ ಸೀಮೆಣ್ಣೆ ಕೃಷ್ಣಯ್ಯ ನವರು ತಮ್ಮನ್ನು ತಳ್ಳಿದವರು ಯಾರೆಂಬುದನ್ನು ನೋಡುವುದರೊಳಗಾಗಿ ಬಸವರಾಜು ಬೆಂಬಲಿಗರು ಕೈ ಮೇಲೆತ್ತಿದ್ದರು. ಪರಿಸ್ಥಿತಿಯನ್ನು ಅರಿತ ಸೀಮ್ಮೆಣ್ಣೆ ಕೃಷ್ಣಯ್ಯ ಕೆಲವರ ದೌರ್ಜನ್ಯಕ್ಕೆ ಧಿಕ್ಕಾರವಿರಲಿ ಎಂದು ಘೋಷಣೆ ಕೂಗುತ್ತಾ ಹೊರಟು ಹೋದರು.
ಕೊರಳಪಟ್ಟಿ ಹಿಡಿದು ಎಳೆದಾಡಿ ಹೊಡೆದರು: ಪರಿಸ್ಥಿತಿ ತಿಳಿಯಾಯಿತು ಎಂಬುವಷ್ಟರಲ್ಲಿ ಮನೆಗೆ ತೆರಳಿದ್ದ ಸೀಮೆಣ್ಣೆಕೃಷ್ಣಯ್ಯ ಪುನಃ ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬಂದು ಕೆ.ಪಿ.ಸಿ.ಸಿ. ಕಛೇರಿಯಿಂದ ತನ್ನನ್ನು ನೇಮಕ ಮಾಡಿರುವ ಒಕ್ಕಣೆ ಇರುವ ಆದೇಶ ಪ್ರತಿಯನ್ನು ತಂದು ಸ್ಥಳದಲ್ಲಿದ್ದ ಮಾಧ್ಯಮದವರಿಗೂ ಸೇರಿದಂತೆ ಎಲ್ಲರಿಗೂ ಹಂಚುತ್ತಿದ್ದರು ಇದರಿಂದ ಕುಪಿತಗೊಂಡ ಸಿ.ಬಸವರಾಜು ಬಂದು ಬಂದವರೆ, ನನ್ನ ಬಗ್ಗೆ ವರಿಷ್ಠರಿಗೆ ಇಲ್ಲಸಲ್ಲದ ಚಾಡಿ ಚುಚ್ಚಿರುವುದಲ್ಲದೆ, ನನ್ನ ಮೇಲೆ ಪಿತೂರಿ ಮಾಡುತ್ತೀಯ ಎಂದು ಸೀಮೆಣ್ಣೆ ಕೃಷ್ಣಯ್ಯ ನವರ ಕೊರಳ ಪಟ್ಟಿ ಹಿಡಿದು ಎಳೆದಾಡಿದರಲ್ಲದೆ, ಸಿ.ಬಸವರಾಜು ರವರ ಕೈ ಸೀಮೆಣ್ಣೆ ಕೃಷ್ಣಯ್ಯನವರ ಕೆನ್ನೆಗೆ ತಾಕೀತು ಇಬ್ಬರೂ ಕ್ಷಣಕಾಲ ಸೆಣೆಸಾಡಿದರು, ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ.ಪ್ರಭಾಕರ್ ರವರಿಗೆ  ಸೀಮೆಣ್ಣೆ ಕೃಷ್ಣಯ್ಯ ನನ್ನ ಮೇಲೆ ಹಲ್ಲೆಯಾಗಿದೆ ಈ ಬಗ್ಗೆ ದೂರು ಕೊಡುವುದಾಗಿ ತಿಳಿಸಿದರು.
( ಈ ವರದಿಗೆ ಪೊಟೊ ಇದೆ)

ತಾಲೂಕಿನ ಹೋರಾಟಗಳಿಗೆ ಸದಾ ಸ್ಪಂದಿಸುತ್ತೇನೆ ರೈತ ಸಂಘದ ಅಭ್ಯಥರ್ಿ ಸತೀಶ್ ಕೆಂಕೆರೆ

ಚಿಕ್ಕನಾಯಕನಹಳ್ಳಿ,ಏ.16: ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ, ಸೋತರೂ ರೈತರ ಪರವಾಗಿನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ ಎಂದು ರೈತ ಸಂಘದ ಅಧಿಕೃತ ಅಭ್ಯಥರ್ಿ ಸತೀಶ್ಕೆಂಕೆರೆ ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮ್ಮ ಬೆಂಬಲಿಗರ ಜೊತೆ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
 ರೈತರ ಪರವಾಗಿ ಮಾಡಿದ ಹೋರಾಟದಿಂದಲೇ ತಾಲ್ಲೂಕಿನ ಜನತೆಗೆ ಪರಿಚಿತನಾಗಿದ್ದೇನೆ, ಆದ್ದರಿಂದ ಈ ಬಾರಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರಲ್ಲದೆ ಓಟು ಕೊಡಿ ನೋಟು ಕೊಡಿ ಎಂಬ ಸಂದೇಶವನ್ನಿಟ್ಟುಕೊಂಡು ರೈತ ಸಂಘ ಚುನಾವಣೆಯಲ್ಲಿ ಸ್ಪದರ್ಿಸುತ್ತಿದೆ ಎಂದರು.
ತಾಲ್ಲೂಕಿನಲ್ಲಿ ನೀರಾವರಿ ಹೋರಾಟದ ಬಗ್ಗೆ ಹಾಗೂ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಹೋರಾಟ ಮಾಡುವವರೇ ಇಲ್ಲದಂತಾಗಿದ್ದ ಸಂದರ್ಭದಲ್ಲಿ ನಮ್ಮ ಸಂಘ ರೈತರ ಪರವಾಗಿ ಧ್ವನಿ ಎತ್ತಿ ತಾಲ್ಲೂಕಿಗೆ ನೀರು ತರುವಲ್ಲಿ ಶ್ರಮಿಸಿದೆ ಎಂದರು. ರೈತ ಸಂಘದ ಅಭ್ಯಥರ್ಿಗಳು ವಿಧಾನಸಭೆಗೆ ಆಯ್ಕೆಯಾದರೆ ಹುಳಿಯಾರು ಹೋಬಳಿಯನ್ನು ತಾಲ್ಲೂಕನ್ನಾಗಿ ಪರಿವತರ್ಿಸಲು ಹಾಗೂ ಕೊಬ್ಬರಿಗೆ ವೈಜಾನಿಕ ಬೆಲೆ ತರಲು ಸದನದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ 1ಲಕ್ಷ ರೂ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಆದರೆ ರೈತ ಸಂಘ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ರಾಜ್ಯ ರೈತ ಸಂಘ ತೀಮರ್ಾನಿಸಿದೆ ಎಂದರಲ್ಲದೆ ರಾಜ್ಯದ ಹಲವು ಪಕ್ಷಗಳು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ ಆದರೆ ನಮ್ಮ ಸಂಘ ಯಾವುದೇ ಪ್ರಣಾಳಿಕೆ ಬಿಡಗಡೆ ಮಾಡದೆ ಕೆಲಸ ಮಾಡಿ ತೋರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅಣೆಕಟ್ಟೆ ವಿಶ್ವನಾಥ್, ಬೆನ್ನಾಯ್ಕನಹಳ್ಳಿ ದೇವರಾಜು, ಮಲ್ಲೇಶ್ ಕೆಂಕೆರೆ. ತಿಮ್ಲಾಪುರ ಶಂಕರಪ್ಪ , ಗಂಗಾಧರಪ್ಪ ದಬ್ಬೇಘಟ್ಟ, ಷಣ್ಮುಖ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಯಲ್ಲಿ ಕವಿಗೋಷ್ಠಿ

ಚಿಕ್ಕನಾಯಕನಹಳ್ಳಿ,ಏ.16: ಪಟ್ಟಣದ ಯಗಾದಿ ಸಂಭ್ರಮದ ಪ್ರಯುಕ್ತ ಯುಗಾದಿ ಸಂಭ್ರಮಾಚರಣೆಗಾಗಿ ರೋಟರಿ ಬಾಲಭವನದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಗೋಷ್ಠಿಯನ್ನು ಕವಿ-ರಂಗಕಮರ್ಿ ನಟರಾಜ್ ಹೊನ್ನವಳ್ಳಿ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಸ್ಥಳೀಯ ಕವಿಗಳಾದ ಶಬ್ಬೀರ್, ಗುರುಪ್ರಸಾದ್ ಕಂಟಲಗೆರೆ, ನವೀನ್ ಹಳೇಮನೆ, ಬಿ.ಪಿ.ನಾಗರಾಜ್, ಮೇ.ನಾ.ತರಂಗಿಣಿ, ಶ್ರೀಧರ್ ದೇವರಹಳ್ಳಿ, ಧನಂಜಯ ದೇವರಹಳ್ಳಿ, ಎಸ್.ಬಿ.ಕುಮಾರ್, ಸಿ.ರವಿಕುಮಾರ್, ವಿಜಯಹಾಲುಗೊಣ, ಪುಷ್ಪ ಶಿವಣ್ಣ, ಟಿ.ಎಲ್.ರಂಗನಾಥ ಶೆಟ್ಟಿ, ಸಿ.ಪಿ.ರಾಧಾಮಣಿ, ಸುರೇಶ್ ಎಚ್, ಡಿ.ಎಲ್.ರಮೇಶ್ ಭಾಗವಹಿಸಲಿದ್ದು, ಸಿ.ಗುರುಮೂತರ್ಿ ಕೊಟಿಗೆಮನೆ ಕವಿಗಳನ್ನು ಪರಿಚಯಿಸಲಿದ್ದಾರೆ.