Thursday, May 19, 2016

ಜಾತ್ರೆಯಲ್ಲಿ ಜನಮನಸೂರೆಗೊಂಡ ಮೂರುಮುತ್ತು ನಗೆನಾಟಕ
 ಚಿಕ್ಕನಾಯಕನಹಳ್ಳಿ,ಮೇ.19 : ತಾಲ್ಲೂಕಿನ ಗೋಡೆಕೆರೆಯ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ದೊಡ್ಡಜಾತ್ರೆ ಅಂಗವಾಗಿ ಗುರುವಾರ ಶಶಾಂಕ ಮಂಡಲೋತ್ಸವ ಜರುಗಿತು. .ಬುಧವಾರ ಸಂಜೆ  ಅಶ್ವವಾಹನೋತ್ಸವ ಹಾಗೂ ಕುಂದಾಪುರದ ರೂಪಕಲಾ ನಾಟಕ ಸಂಸ್ಥೆ ವತಿಯಿಂದ 'ಮೂರುಮುತ್ತು' ನಗೆನಾಟಕ ಅಭಿನಯಿಸಲ್ಪಟ್ಟಿತು.
  ಗುರುವಾರ ಸಂಜೆ ತಾಲ್ಲೂಕಿನ ತಮ್ಮಡಿಹಳ್ಳಿ ವಿರಕ್ತ ಮಠದ ಆರಾಧ್ಯ ದೈವ ಪರ್ವತ ಮಲ್ಲಿಕಾಜರ್ುನ ಸ್ವಾಮಿ ಮೂತರ್ಿಯನ್ನು ಪಟ್ಟಣದ ಮೂಲಕ ಭಕ್ತರು ಕಾಲು ನಡಿಗೆಯಲ್ಲಿ ಗೋಡೆಕೆರೆಗೆ ಕರೆದೊಯ್ದರು.
ಇಂದು ಮಹಾ ರಥೋತ್ಸವ ಹಾಗೂ ಕಂತೆಸೇವೆ: ಮೇ.20 ಶುಕ್ರವಾರ ಸಂಜೆ ಮಹಾರಥೋತ್ಸವ ಹಾಗೂ ಧಾಮರ್ಿಕ ಕಾರ್ಯಕ್ರಮ ಜರುಗಲಿದೆ.ಸಾನಿಧ್ಯ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ಧರಾಮೇಶ್ವರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ. ಉದ್ಘಾಟನೆ: ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ. ನೇತೃತ್ವ; ನಂದಿಗುಡಿ ಬ್ರಹ್ಮನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ. ಉಪಸ್ಥಿತಿ;ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ,ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ,ಕರಿವೃಷಬ ದೇಶೀಕೇಂದ್ರ ಸ್ವಾಮೀಜಿ,ಗವಿಮಠದ ಚಂದ್ರಶೇಖರ ಸ್ವಾಮೀಜಿ,ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ಸ್ವಾಮೀಜಿ,ಮಾರಗೊಂಡನಹಳ್ಳಿ ವಿರಕ್ತ ಮಠದ ಬಸವಲಿಂಗಸ್ವಾಮೀಜಿ,ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ,ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ,ಕರಡಿಗವಿಮಠದ ಶಂಕರಾನಂದ ಸ್ವಾಮೀಜಿ,ಕಾರದಮಠದ ವೀರಬಸವ ಕಾರದೇಶ್ವರ ಸ್ವಾಮೀಜಿ,ಮಾಡಾಳು ವಿರಕ್ತ ಮಠದ ರುದ್ರಮುನೀಶ್ವರಸ್ವಾಮೀಜಿ,ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯ ಸ್ವಾಮೀಜಿ,ಪುಷ್ಪಗಿರಿ ಸಂಸ್ಥಾನ ಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ,ದೊಡ್ಡಗುಣಿ ಬ್ರಹ್ಮನ್ಮಠದ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸಾಮೀಜಿ,ಮಾದೀಹಳ್ಳಿ ಮಠದ ಮಲ್ಲಿಕಾಜರ್ುನ ಸ್ವಾಮೀಜಿ,ಹೊನ್ನವಳ್ಲಿ ಕರಿಸಿದ್ಧೇಶ್ವರ ಮಠದ ಶಿವಪ್ರಕಾಶ ಸಿವಾಚಾಯ್ ಸ್ವಾಮೀಜಿ ಭಾಗವಹಿಸಲಿದ್ದಾರೆ.
    ರಥೋತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ, ಶಾಸಕ ಸಿ.ಬಿ.ಸುರೇಶ್ಬಾಬು, ಕೇಂದ್ರ ಕೈಗಾರಿಕಾ ಸಚಿವ ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರುಗಳಾದ ಸೊಗಡು ಶಿವಣ್ಣ,ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ಮುಂತಾದವರು ಭಾಗವಹಿಸಲಿದ್ದಾರೆ.

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು : ಬಿ.ಇ.ಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮೇ.19 : ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇದನ್ನು ಕಸಿದುಕೊಳ್ಳುವ ಅಧಿಕಾರ ಸ್ವತಹ ಪೋಷಕರಿಗೂ ಇಲ್ಲ, 6ರಿಂದ 14ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕರೆತನ್ನಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ 23ನೇ ವಾಡರ್್ ಗಾಂಧಿನಗರದ ದಕ್ಕಲಿಗರ ಕೇರಿಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಶೇಷ ದಾಖಲಾತಿ  ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ತಮ್ಮ ಗುರಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಎನ್.ಇಂದಿರಮ್ಮ ಮಾತನಾಡಿ, ಅಲೆಮಾರಿ ಮಕ್ಕಳಿಗೆ ತಂದೆ-ತಾಯಿಯ ಪೋಷಣೆಯೂ ಗಗನ ಕುಸುಮವಾಗಿದೆ, ಅಲೆಮಾರಿಗಳಲ್ಲಿ ಶಿಕ್ಷಣ ಹಾಗೂ ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆಗಬೇಕು ಎಂದರು. 
ಕಾರ್ಯಕ್ರಮದಲ್ಲಿ ಬಿಆರ್ಸಿ ತಿಮ್ಮರಾಯಪ್ಪ, ಸಿಆರ್ಪಿ ಸುರೇಶ್, ಬಿಆಆರ್ಪಿ ವಿರೂಪಾಕ್ಷ, ಪುರಸಭಾ ಸದಸ್ಯೆ ಪ್ರೇಮದೇವರಾಜು, ಮುಖ್ಯೋಪಾಧ್ಯಾಯ ತಿಮ್ಮಾಬೋವಿ, ರಾಮಕ್ಕ, ಶಿಕ್ಷಕರುಗಳಾದ ಸಿ.ಟಿ.ರೇಖಾ, ಪುಟ್ಟಲಕ್ಷ್ಮೀ, ಸುವರ್ಣಮ್ಮ, ಜಯಮ್ಮ  ಮತ್ತಿತರರು ಉಪಸ್ಥಿತರಿದ್ದರು.




ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊಸಹಳ್ಳಿ ಗ್ರಾಮದ ಸಂಗಮೇಶ್ವರ ದೇವರ ಅಗ್ನಿಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.