Saturday, November 17, 2012


ಚೌಡಿಕೆ ಎಲ್ಲಮ್ಮ ದೇವಾಲಯದ ಉದ್ಘಾಟನೆ, ಕಳಶಾರೋಹಣ
ಚಿಕ್ಕನಾಯಕನಹಳ್ಳಿ,ನ.16 : ಪಟ್ಟಣದ ಚೌಡಿಕೆ ಗುಡಿಕಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ನೂತನ ದೇವಾಲಯ ಉದ್ಘಾಟನೆ ಮತ್ತು ವಿಮಾನ ಗೋಪುರಕ್ಕೆ ಕಳಶಾರೋಹಣ ಮಹೋತ್ಸವವನ್ನು ಇದೇ ನವಂಬರ್ 18, 19, ಹಾಗೂ 20ರಂದು ಏರ್ಪಡಿಸಲಾಗಿದೆ.
18ರಂದು ಭಾನುವಾರ ಗೋಧೂಳಿ ಲಗ್ನದಲ್ಲಿ ಚೌಡಿಕೆ ಗುಡಿಗಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ದೇವಸ್ಥಾನದ ಮುಂಭಾಗದಲ್ಲಿ ಗಣಪತಿ ಪೂಜೆ, ಧ್ವಜಾರೋಹಣ ಹಾಗೂ ಗಂಗಾಪೂಜೆ ನಂತರ ಮಂಡಲ ಕಳಸ ಸ್ಥಾಪನೆ, ರಾತ್ರಿ 10ಕ್ಕೆ ದೇವಿಯೊಂದಿಗೆ ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಪಯಣ, 19ರಂದು ತೀರ್ಥರಾಮೇಶ್ವರ ವಜ್ರದ ಹೊಳೆಯಲ್ಲಿ ದೇವಿಯವರಿಗೆ ಪುಣ್ಯ ಜಲಗಂಗಾ  ಸ್ನಾನ, ಮಧ್ಯಾಹ್ನ 12.15ಕ್ಕೆ ನೂತನ ದೇವಾಳಯದ ಪ್ರವೇಶ ಮತ್ತು ಚೌಡಿಕೆ ರೇಣುಕಾ ಯಲ್ಲಮ್ಮ ದೇವಿಯವರ ಪ್ರತಿಷ್ಠಾಪನೆ, 20ರ ಮಂಗಳವಾರದಂದು ದೀಕ್ಷೆ ಪಡೆದ ಚೌಡಿಕೆ ಬಾಲಕರಿಂದ ಜೋಗಿ ಭೀಕ್ಷಾಸೇವೆ ನಂತರ ಕುಂಕುಮಾರ್ಚನೆ ಮಹಾಮಂಗಳಾರ ಕಾರ್ಯಕ್ರಮ ನಡೆಯಲಿದೆ.
ಮಾದಿಗರು ಹಾಗೂ ದಕ್ಕಲಿಗರ ಸಹಪಂಕ್ತಿ ಭೋಜನ
ಚಿಕ್ಕನಾಯಕನಹಳ್ಳಿ,ನ.16 : ಮಾದಿಗ ಜನಾಂಗ ದಕ್ಕಲಿಗ ಜನಾಂಗವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ ಎಂದು ಕೆಲವರು ತಾಳಿದ್ದ ಭಾವನೆಯನ್ನು ಹೋಗಲಾಡಿಸಲು ಮಾದಿಗ ಹಾಗೂ ದಕ್ಕಲಿಗ ಸಮುದಾಯ ಸೇರಿ ಸಹಪಂಕ್ತಿ ಭೋಜನ ಏರ್ಪಡಿಸಿರುವುದೇ ಉದಾಹರಣೆ ಎಂದು ಮಾದಿಗ ಜನಾಂಗದ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಪಟ್ಟಣದ ಗಾಂಧಿನಗರದ ದಕ್ಕಲಿಗ ವಾಸಸ್ಥಾನದಲ್ಲಿ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಮಾದಿಗ, ದಕ್ಕಲಿಗ ಸಮುದಾಯದ ಸಹಪಂಕ್ತಿ ಭೋಜನ ಮತ್ತು ಸಕರ್ಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾದಿಗ ಹಾಗೂ ದಕ್ಕಲಿಗ ಜನಾಂಗದವರ ಒಬ್ಬರಿಗೊಬ್ಬರ ಭಾಂದವ್ಯ ಉತ್ತಮವಾಗಿದೆ, ಈ ಭಾಂದವ್ಯವನ್ನು ಹೋಗಲಾಡಿಸಲು ಈ ಸಮುದಾಯದವರ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಅಸ್ಪೃಶ್ಯತೆಯಿಂದಾಗಿ ಸಮಾಜದಿಂದ ದೂರ ಉಳಿದಿರವು  ಜನಾಂಗದವರನ್ನು ಮುಖ್ಯವಾಹಿನಿಗೆ ಕರೆತರಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಎಂದರಲ್ಲದೆ ಯಾವೋದೋ ಒಂದು ಪಿ.ಎಚ್.ಡಿ ಮಾಡಲು ದಕ್ಕಲಿಗ ಜನಾಂಗವನ್ನು ಬಳಸಿ ಜನಾಂಗದ ಸ್ಥಿತಿಯನ್ನು ಕೆಳವರ್ಗಕ್ಕೆ ಕರೆದೊಯ್ಯುವುದು ಸರಿಯಲ್ಲ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಮಾದಿಗರು ಹಾಗೂ ದಕ್ಕಲಿಗ ಜನಾಂಗದವರು ಇರುವಂತಹ ಬಿನ್ನಾಭಿಪ್ರಾಯಗಳನ್ನು ತೊಡೆದು ಹಾಕಲು ಸಹಪಂಕ್ತಿ ಭೋಜನ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಆದರೆ ಸಹಪಂಕ್ತಿ ಭೋಜನ ಕಾರ್ಯಕ್ರಮ ಸ್ಥಳೀಯರೊಂದಿಗೆ ಆಗದೆ ಮೇಲ್ವರ್ಗದವರನ್ನು ಕರೆದು ಸಹಪಂಕ್ತಿ ಭೋಜನ  ಮಾಡಿದರೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಸಕರ್ಾರ ದಲಿತರನ್ನು ದೇವಾಲಯಗಳ ಪ್ರವೇಶಕ್ಕೆ ಅವಕಾಶ ನೀಡಿದರೂ, ಕೆಲವು ದೇವಾಲಯಗಳಲ್ಲಿ ಒಳಗೆ ಪ್ರವೇಶಿಸಲು ಅವಕಾಶ ನೀಡದೇ ಇರುವುದು ವಿಷಾದನೀಯ, ದಕ್ಕಲಿಗರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನ ಹೊಯ್ಸಲಕಟ್ಟೆ ಗ್ರಾಮಪಂಚಾಯ್ತಿಗೆ ಅಲೆಮಾರಿ ಜನಾಂಗದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅಲೆಮಾರಿ ಜನಾಂಗಕ್ಕೂ ರಾಜಕೀಯ ಪ್ರಾತಿನಿದ್ಯದ ಜೊತೆಯಲ್ಲಿ ಆಥರ್ಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರುವುದು ಮುಖ್ಯ ಎಂದರು. ದಕ್ಕಲಿಗ ಕಾಲೋನಿಯಲ್ಲಿ ಸಮುದಾಯ ಭವನ ನಿಮರ್ಿಸಲು ಸ್ಥಳಿಯ ಶಾಸಕರ ಅನುಧಾನದಲ್ಲಿ 2 ಲಕ್ಷ ರೂಪಾಯಿ ಬಿಡುಗಡೆಗೆ ಮಂಜೂರಾತಿ ನೀಡಿದರು.
ತಹಶಿಲ್ಧಾರ್ ಎನ್.ಆರ್. ಉಮೇಶ್ಚಂದ್ರ ಮಾತನಾಡಿ ದಕ್ಕಲಿಗ ಜನಾಂಗ ಅತಿ ಹಿಂದುಳಿದಿದ್ದು ದಲಿತ ಹಾಗೂ ದಕ್ಕಲಿಗ ಎಂಬ ಕೀಳು ಮೇಳು ಎಂಬ ಬಾವನೆ ಬರಬಾರದು ದಕ್ಕಲಿಗ ಜನಾಂಗ ವಾಸಿಸುವ ಸ್ಥಳದಲ್ಲಿ ಮನೆ ಹಾಗೂ ನಿವೇಶನ ವ್ಯವಸ್ಥೆಗೆ ಪುರಸಭೆ ಹಾಗೂ ತಾಲ್ಲೂಕು ಆಡಳಿತವತಿಯಿಂದ ಸಕರ್ಾರ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಕ್ಕಲಿಗ ಸಮುದಾಯದ ಬಬ್ಬೂರಯ್ಯ ಮಾತನಾಡಿ ನಾವೂ ಹಾಗೂ ಮಾದಿಗರು ಅನ್ಯೋನ್ಯದಿಂದಿದ್ದೇವೆ ಕಿಡಿಗೇಡಿಗಳಿಂದ ಜನಾಂಗ-ಜನಾಂಗಗಳ ಸಮಸ್ಯೆ ಏರ್ಪಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಡಿ.ಎಸ್.ಎಸ್ ಮುಖಂಡ ಲಿಂಗದೇವರು ಮಾತನಾಡಿ ದಕ್ಕಲಿಗ ಹಾಗೂ ಮಾದಿಗರಲ್ಲಿ ಬಿರುಕು ಮೂಡಿಸಲು ಗೊಂದಲ ಸೃಷ್ಠಿಸಿದ್ದಾರೆ ಆದರೆ ನಮ್ಮ ಜನಾಂಗಗಳಲ್ಲಿ ಯಾವುದೇ ರೀತಿಯ ಅಸ್ಪುಶ್ಯತೆ ಆಚರಣೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಟಿ.ವರದರಾಜು, ಸಿ.ಎಲ್.ದೊಡ್ಡಯ್ಯ, ಬಿ.ಇ.ಓ ಸಾ.ಶಿ.ನಾಗೇಶ್, ಗೋ.ನಿ.ವಸಂತಕುಮಾರ್, ಬಬ್ಬೂರಯ್ಯ, ಲಿಂಗದೇವರು, ಜೆ.ಸಿ.ಪುರ ಗೋವಿಂದರಾಜು, ಮಲ್ಲಿಕಾಜರ್ುನಯ್ಯ, ಅಶೋಕ, ಮತ್ತಿತರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಅಥ್ಲೆಟಿಕ್ಗೆ ಆಯ್ಕೆಯಾಗಿರುವ ಜಿ.ವಿ.ರೂಪೇಶ್ಗೆ ಎ.ಬಿ.ವಿ.ಪಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ, ಪಟ್ಟಣದ ಸಕರ್ಾರಿ ಸ್ವತಂತ್ರ್ಯ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಿ.ವಿ ರೂಪೇಶ್ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ ವಿಭಾಗದಲ್ಲಿ ಆಯ್ಕೆಯಾಗಿದ್ದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ನಮ್ಮರೂರಿನ ವಿದ್ಯಾಥರ್ಿರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುವದು ಸಂತಸದ ವಿಷಯ. ಸರಕಾರ ಪ್ರತಿ ತಾಲೂಕಿನಲ್ಲಿ ಅಥ್ಲೆಟಿಕ್ಸಗೆ ಸಂಭದಪಟ್ಟ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ಇಂತವರನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಬೇಕು, ನಗರದ ಕ್ರೀಡ ಅಭಿಮಾನಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಕ್ರೀಡ ಪಟುಗಳನ್ನು ಪ್ರೋತ್ಸಹ ನೀಡಬೇಕು. ಇದರಿಂದ ನಮ್ಮ ತಾಲ್ಲೂಕಿಗೂ ಹೆಸರು ಬರುತ್ತದೆ ಎಂದರೂ.
ಕ.ರ.ವೇ ಅಧ್ಯಕ್ಷ ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಯಾರು ಸಹ ರಾಷ್ಟ್ರಮಟ್ಟಕೆ ಆಯ್ಕೆಯಾಗಿಲ್ಲ ನಮ್ಮ ಊರಿನ ಹುಡುಗ ಆಯ್ಕೆಯಾಗಿರುವುದು ಸಂತಸ ತಂದಿದೆ. ಹೆಚ್ಚಿನ ಪ್ರೋತ್ಸಹ ಸಿಕ್ಕರೆ ಅಂತರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ, ಪರಿಶ್ರಮ ಮುಖ್ಯ ಎಂದರು.
ಈ ಸಂದರ್ಭದಲ್ಲಿ ರೂಪೇಶ್ನ ತಂದೆ,ತಾಯಿ, ಶರತ್, ವಾಸು ಹರೀಶ್, ಸುದಕರ್, ಮಾರುತಿ, ಅಕ್ರಂ ಉಪಸ್ಥಿತರಿದ್ದರು.

ಡಾ.ರಾಜ್ ನೆನಪು : ಸಾರ್ವಜನಿಕರಿಂದ ಸಾಕ್ಷ್ಯಚಿತ್ರಗಳ ವೀಕ್ಷಣೆ
ಚಿಕ್ಕನಾಯಕನಹಳ್ಳಿ,ನ.16 : ಡಾ.ರಾಜ್ಕುಮಾರ್ರವರು ಅಭಿನಯಿಸಿರುವ 200ಕ್ಕೂ ಹೆಚ್ಚು ಚಿತ್ರಗಳ ಸಾಕ್ಷ್ಯ ಚಿತ್ರಗಳ ಪೋಟೋ, ಪುಸ್ತಕಗಳ, ಪ್ರದರ್ಶನ, ಹಾಗೂ ರಾಜ್ರವರು ಹಾಡಿರುವ ಹಾಡುಗಳ ಸಿ.ಡಿ.ಯನ್ನು ಪಟ್ಟಣದ ಸುಪ್ರೀಂ ಸೆಲೂನ್ನಲ್ಲಿ ಸಾರ್ವಜನಿಕವಾಗಿ ಪ್ರದಶರ್ಿಸಲಾಗಿತ್ತು. 
ಡಾ.ರಾಜ್ರವರು ಅಭಿನಯಿಸಿರುವ ಚಿತ್ರಗಳ ಸುಮಾರು 2000ಸಾವಿರಕ್ಕೂ ಹೆಚ್ಚು ಪೋಟೋಗಳನ್ನು ಪ್ರದರ್ಶನಕ್ಕಿಡಲಾಗಿದ್ದು ಈ ಚಿತ್ರಗಳಲ್ಲಿ ರಾಜ್ರವರು ಅಭಿನಯಿಸಿರುವ ಮೊದಲ ಚಿತ್ರಗಳಿಂದ ಕೊನೆಯ ಚಿತ್ರದವರೆವಿಗೂ ಪ್ರದರ್ಶನಕ್ಕಿಡಲಾಗಿತ್ತು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಡಾ.ರಾಜ್ರವರು ಪೌರಾಣಿಕ, ಸಾಮಾಜಿಕಗಳಲ್ಲಿನ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗವನ್ನು ಉತ್ತುಂಗದ ಮಟ್ಟಕ್ಕೆ ಕರೆದೊಯ್ದಿದ್ದಾರೆ ಅವರ ನೆನಪು ಸದಾ ಇರಬೇಕು, ಅಂತಹ ಕಾರ್ಯದಲ್ಲಿ ಸುಬ್ರಹ್ಮಣ್ಯರವರು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಈ ರೀತಿಯ ಕಾರ್ಯಕ್ರಮಗಳು ನಾಡಿನ ಎಲ್ಲೆಡೆ ನಡೆಯಬೇಕು ಎಂದರು.
ಸುಪ್ರೀಂ ಸೆಲೂನ್ನ ಮಾಲೀಕ ಸುಬ್ರಹ್ಮಣ್ಯ ಮಾತನಾಡಿ ಕಳೆದ 8ತಿಂಗಳಿನಿಂದಲೂ ಸೆಲೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ನಮ್ಮ ಕೆಲಸದ ಜೊತೆಗೆ ಸಾಹಿತ್ಯ ಸೇವೆ ಮಾಡುವ ಕಾರ್ಯಕ್ಕಾಗಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಾ.ರಾಜ್ರವರನ್ನು ನೆನಪಿಗಾಗಿ ರಾಜ್ರವರು ಅಭಿನಯಿಸಿರುವ ಹಾಗೂ ಅವರ ವಿವಿಧ ರೀತಿಯಲ್ಲಿ ಚಿತ್ರಗಳನ್ನು ಸಂಗ್ರಹಿಸಿ ಇಂದು ಪ್ರದರ್ಶನಕ್ಕಿಡಲಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಡಾ.ರಾಜ್ಕುಮಾರ್ ಅಭಿಮಾನಿ ರೂಪೇಶ್ ಮಾತನಾಡಿ ಸುಮಾರು 25-30 ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ ಚಿತ್ರಗಳು ಹಾಗೂ ಪುಸ್ತಕಗಳನ್ನು ಇಂದು ಪ್ರದರ್ಶನಕ್ಕಿಡಲಾಗಿದೆ ಅಲ್ಲದೆ ಸಾರ್ವಜನಿಕರು, ಡಾ.ರಾಜ್ರವರ ಅಭಿಮಾನಿಗಳು, ಕಲಾವಿದರು, ಗಾಯಕರು ಸಾಕ್ಷ್ಯಚಿತ್ರ ವೀಕ್ಷಿಸಿದರು.

9ಡಿಗ್ರಿಯಷ್ಟು ಕಡಿಮೆಯಾದ ಉಷ್ಣಾಂಶ, ಹೆಚ್ಚಿದ ಶೀತ, ಜನರಿಗೆ ನಡಕು
ಚಿಕ್ಕನಾಯಕನಹಳ್ಳಿ,ನ.17 : ರಾಜ್ಯದ ಹವಾಮಾನಕ್ಕೆ ಹೋಲಿಸಿದರೆ  ತಾಲೂಕಿನಲ್ಲಿ ಅತ್ಯಂತ ಕನಿಷ್ಟ ಉಷ್ಣಾಂಶ  ದಾಖಲಾಗಿದ್ದು, ಮಾಮೂಲಿಗಿಂತ 9ಡಿಗ್ರಿ ಉಷ್ಣಾಂಶಕಡಿಮೆ ಯಾಗಿದೆ, ಈ ಮೂಲಕ ವಾತಾವರಣ  ಇಲ್ಲಿನ ಜನಕ್ಕೆ ಭಾರಿ ಚಳಿಯನ್ನು ತಂದೊಡ್ಡಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ  ಜನ  ವಿಪರೀತ ಚಳಿಯಿಂದಾಗಿ ಮುಂಜಾನೆ ಹೊರಗೆ ಬರಲು, ಸ್ವಟರ್, ಟೋಪಿ ಹಾಗೂ ಜಕರ್ಿನ್ಗಳ ಮೊರೆ ಹೋಗುತ್ತಿದ್ದಾರೆ.   
ಮುಂಜಾನೆಯ ಶೀತವಾತಾವರಣದಿಂದ ಮೈ ಬಿಸಿ ಮಾಡಿಕೊಳ್ಳಲು ಜನರು ರಸ್ತೆಯಲ್ಲಿರುವ ಕೆಲ ಕಸದ ವಸ್ತುಗಳನ್ನು ಸೇರಿಸಿ ಬೆಂಕಿ ಹಾಕಿ ಬೆಚ್ಚಗಾಗುತ್ತಿದ್ದಾರೆ. 
21 ಡಿಗ್ರಿ ಸೆಲ್ಸಿಯಸ್ನಷ್ಟು ವಾತಾವರಣ ಕೂಡಿದ್ದು ಪ್ರತಿ ಗಂಟೆಗೆ 10 ಕಿ.ಮೀ ವೇಗದಂತೆ ಗಾಳಿ ಬೀಸುತ್ತಿದ್ದು  ರಾತ್ರಿ 8ರಿಂದ ಶುರುವಾಗುವ ಶೀತವಾತಾವರಣ ಬೆಳಗಿನ ಜಾವ 4ಗಂಟೆ ಸುಮಾರಿನಲ್ಲಿ ಹೆಚ್ಚುತ್ತದೆ. ಈ ಶೀತವಾತಾವರಣದಿಂದ ಶಾಲಾ ಮಕ್ಕಳಿಂದ ಹಿಡಿದು ವಯಸ್ಕ ವೃದ್ದರವರೆಗೂ ಆರೋಗ್ಯ ಹದೆಗಟ್ಟಿದೆ. ನೆಗಡಿ, ಕೆಮ್ಮು, ಗಂಟಲ ಕೆರೆತ, ಜ್ವರದಿಂದ ಜನರು ಆಸ್ಪತ್ರೆಗೆ ತೆರಳುತ್ತಿರುವುದು ಕಂಡುಬರುತ್ತಿದೆ.
ಎ.ಪಿ.ಎಂ.ಸಿ.ಚುನಾವಣೆ: ಚಳಿಯಲ್ಲಿ ಕಾವೇರುತ್ತಿರುವ ಸಮರ
ಚಿಕ್ಕನಾಯಕನಹಳ್ಳಿ,ನ.17 : ಚಿಕ್ಕನಾಯಕನಹಳ್ಳಿಯ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯ 13ಕ್ಷೇತ್ರಗಳಲ್ಲಿ 1ಕ್ಷೇತ್ರ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 12 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ.
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದಿಂದ ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಎಸ್.ಆರ್.ರಾಜ್ಕುಮಾರ್(ಸಿಂಗದಹಳ್ಳಿ) ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 12 ಕ್ಷೇತ್ರಗಳ ಅಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದಾರೆ. ಇದೇ 25ರಂದು ಬೆಳಗ್ಗೆ 8ರಿಂದ 4ರವರೆಗೆ ಮತದಾನ ನಡೆಯಲಿದೆ. ನವಂಬರ್ 27ರಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ನಡೆಯಲಿದೆ.
  ಹನ್ನೆರಡು ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಬ್ಯಾಥರ್ಿಗಳು, ಯಳನಡು ಕ್ಷೇತ್ರ :  ವೈ.ಸಿ.ಸಿದ್ದರಾಮಯ್ಯ, ಟಿ.ಕೆ.ರಮೇಶಯ್ಯ, ಲಕ್ಷ್ಮಯ್ಯ, ಕರಿಯಪ್ಪ, ಹುಳಿಯಾರು ಕ್ಷೇತ್ರ :  ಆರ್.ಪಿ.ವಸಂತಯ್ಯ, ಕೆ.ಎಮ್.ರಾಜಶೇಖರಪ್ಪ, ಹೆಚ್.ಆರ್.ರಂಗನಾಥ್, ಸೈಯದ್ ಜಲಾಲ್, ಹೊಯ್ಸಳಕಟ್ಟೆ ಕ್ಷೇತ್ರ : ರುದ್ರಪ್ಪ ಡಿ.ಆರ್, ರಾಮಾನಾಯ್ಕ, ಸೋಮಶೇಖರನಾಯ್ಕ, ಲಚ್ಚಾನಾಯ್ಕ, ತಿಮ್ಮನಹಳ್ಳಿ ಕ್ಷೇತ್ರ : ಸಣ್ಣಕರಿಯಪ್ಪ, ರಾಮಚಂದ್ರಯ್ಯ, ಎಸ್.ಆರ್.ಸ್ವಾಮಿನಾಥ್, ಬಸವರಾಜು, ತೀರ್ಥಪುರ ಕ್ಷೇತ್ರ : ವಸಂತಲಕ್ಷ್ಮೀ, ಲತಾ.ಇ, ದ್ರಾಕ್ಷಾಯಣಮ್ಮ, ಈರಮ್ಮ, ಕಂದಿಕೆರೆ ಕ್ಷೇತ್ರ : ಸಣ್ಣಯ್ಯ, ಬಿ.ಕೆ.ಜಯಣ್ಣ, ಬಿ.ಪಂಚಾಕ್ಷರಯ್ಯ, ಚಿ.ನಾ.ಹಳ್ಳಿ ಕಸಬಾ ಕ್ಷೇತ್ರ : ಸಿ.ಕೆ.ಶಾಂತಕುಮಾರ್, ರಂಗಸ್ವಾಮಿ, ಸಿ.ಕೆ.ಗುರುಸಿದ್ದಯ್ಯ, ಬಸವರಾಜು, ಶಾಂತಕುಮಾರ್, ಲಿಂಗರಾಜು ದೇವರಮನೆ, ಕೆ.ಶಿವಣ್ಣ, ಹಂದನಕೆರೆ ಕ್ಷೇತ್ರ : ಸೋಮಶೇಖರಯ್ಯ, ಕಾಂತರಾಜ್ ಅರಸ್, ಚಂದ್ರಣ್ಣ, ಆರ್.ಜಿ.ನೀಲಕಂಠಪ್ಪ, ಮತಿಘಟ್ಟ ಕ್ಷೇತ್ರ : ಹೆಚ್.ಬಸವರಾಜು, ನಟರಾಜು, ಬಸವರಾಜು, ಶೆಟ್ಟಿಕೆರೆ ಕ್ಷೇತ್ರ : ಎನ್.ಸಿದ್ದೇಗೌಡ, ಬಿ.ಸಿ.ಶಿವಕುಮಾರ್, ಕೆ.ಹೆಚ್.ಈಶ್ವರಮೂತರ್ಿ, ಕೃಷ್ಣಮೂತರ್ಿ, ಜೆ.ಸಿ.ಪುರ ಕ್ಷೇತ್ರ : ಆರ್.ಗಂಗಾಧರಯ್ಯ, ಎಮ್.ಎನ್.ಶಿವರಾಜು, ನಿಜಾನಂದಮೂತರ್ಿ, ಎಸ್.ಜಿ.ಮಹೇಶ್, ಬಿ.ಶಿವಶಂಕರಯ್ಯ, ವರ್ತಕರ ಕ್ಷೇತ್ರದಿಂದ : ಎಲ್.ಆರ್.ಬಾಲಾಜಿ, ಸಿ.ಎಸ್.ಶಾಂತಕುಮಾರ್, ವೈ.ಎ.ರಿಯಾಜ್ ಅಹಮದ್, ಕೆ.ನಿಂಗರಾಜು ಸ್ಪಧರ್ಿಸಿದ್ದಾರೆ. 
ವಿಶ್ವದಲ್ಲಿನ ಎಲ್ಲಾ ಕನ್ನಡಿಗರಿಗೆ ಡಾ.ರಾಜ್ ಎಂದೆಂದಿಗೂ ಅಣ್ಣ: 
ಚಿಕ್ಕನಾಯಕನಹಳ್ಳಿ,ನ.17 : ಡಾ.ರಾಜ್ಕುಮಾರ್ರವರು ಮೌಲ್ಯಾಧಾರಿತ ಜೀವನಕ್ಕೆ ಸಾಕ್ಷಿಯಾಗಿ ಬಾಳಿದವರು, ಚಿಂತನೆ, ಸಾಮಾಜಿಕ ಪ್ರಜ್ಞೆಯನ್ನು ಹೊಂದಿ ಸೂಕ್ಷ್ಮ ಸಂವೇದನಾಶೀಲ ಕಲಾವಿದರಾಗಿ ಯಾವುದೇ ಪಾತ್ರಕ್ಕೂ ತಕ್ಕ ಅಭಿನಯ  ನೀಡುತಿದ್ದರು ಎಂದು ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಅಭಿಪ್ರಾಯಪಟ್ಟರು.
ಪಟ್ಟಣದ ಸುಪ್ರೀಂ ಮೆನ್ಸ್ ಸೆಲೂನ್ನಲ್ಲಿ ಆಯೋಜಿಸಿದ್ದ ಡಾ.ರಾಜ್ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ರವರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಜಾತಿ ಮೀರಿ ಬೆಳೆದವರು, ಸಿಂಗಾನಲ್ಲೂರಿನ ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮರವರ ಪುತ್ರರಾದ ಡಾ.ರಾಜ್, ಗುಬ್ಬಿ ವೀರಣ್ಣ ಕಂಪನಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಗುಬ್ಬಿವೀರಣ್ಣ ಕಂಪನಿಯೂ ಅವರಿಗೆ ಶಾಲೆಯಾಗಿ, ವಿಶ್ವವಿದ್ಯಾಲಯವಾಗಿ, ನಟನಾ ಕೌಶಲ್ಯದ ತರಬೇತಿ ನೀಡಿ, ಕಲಾ ವಿಶಾರದನಾಗಿ ಹೊರಹೊಮ್ಮಿದರು ಎಂದರಲ್ಲದೆ,   ಅವರ ವಿನಯ, ಬೇರೆಯವರಿಗೆ ನೋಯಿಸದೇ ಇರುವುದು, ಸತ್ಯಜೀವನ, ಆದರ್ಶ ಪ್ರಾಯವಾದುದು ಎಂದರು. 
12ನೇ ಶತಮಾನದಲ್ಲಿ ಬಸವೇಶ್ವರರಿಗೆ ಅಣ್ಣ ಎಂದು ಪ್ರೀತಿಯಿಂದ ಕರೆದದ್ದು ಬಿಟ್ಟರೇ ಈಗ ಈ ಅಭಿದಾನವನ್ನು ಜನರು ಡಾ.ರಾಜ್ರವರಿಗೆ ಅಣ್ಣ ಎನ್ನುವ ಮೂಲಕ ಅಭಿಮಾತನದ ಉತ್ತುಂಗಕ್ಕೆ ಕೊಂಡ್ಯೋಯ್ದರು.  
ಸುಪ್ರೀಂ ಸುಬ್ರಹ್ಮಣ್ಯರವರು 8 ತಿಂಗಳಿದಲೂ ಸೆಲ್ಯೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ.ರಾಜ್ ಒಂದು ನೆನಪು ಚಿ.ನಾ.ಹಳ್ಳಿ ಪಟ್ಟಣದ ಜನರಿಗೆ ಸುಬ್ರಹ್ಮಣ್ಯರವರು ನೀಡಿದ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ತುಮಕೂರು ನಟರಾಜ್, ಡಾ.ರಾಜ್ರವರ ಸಹ ನಟರಾಗಿ ಅನೇಕ ಚಲನಚಿತ್ರದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾ, ಡಾ.ರಾಜ್ರವರು ಚಿತ್ರತಂಡದಲ್ಲಿನ ಎಲ್ಲಾ ವರ್ಗ ಕಲಾವಿದರೊಂದಿಗೆ ಬೆರತು ಯಾವುದೇ ತಾರತಮ್ಯ ಮಾಡದೇ ಸಹಪಂಕ್ತಿ ಭೋಜನ ಸವಿಯುತ್ತಿದ್ದರು. ಸಹ ನಟರಿಗೆ ಅನೇಕ ಹಿತವಚನ ಹೇಳುತ್ತಿದ್ದರು, ಅವರ ಸರಳ ಜೀವನ ನಮ್ಮೆಲ್ಲರಿಗು ಆದರ್ಶ ಪ್ರಾಯವಾದದೆಂದು ಹೇಳಿದರು.
ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಡಾ.ರಾಜ್ರವರು ಕನ್ನಡದ ಆಸ್ತಿ ಎಂದು ವಣರ್ಿಸಿದರು. ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಎಂದೇ ಖ್ಯಾತರಾದ ಎಂ.ಸಿ.ಕಲ್ಲೇಶ್ರವರ ಹಾಗೂ  ಮೈಸೂರು ಕುಮಾರ್ರ ಗಾಯನ ಅಭಿಮಾನಿಗಳನ್ನು ರಂಜಿಸಿತು. 
ಸಮಾರಂಭದಲ್ಲಿ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸ್ವಾಗತಿಸಿ, ಸಿ.ಎಚ್.ರೂಪೇಶ್ ನಿರೂಪಿಸಿ, ಸಿ.ಪಿ.ಗಿರೀಶ್ ವಂದಿಸಿದರು.