Tuesday, March 13, 2012
ಜಿಲ್ಲೆಯಲ್ಲಿ ಉತ್ತಮ ಪ್ರಗತಿಯ ಪ್ರಥಮ ಸಂಘವನ್ನಾಗಿಸಲು ಶ್ರಮಿಸುವೆ
ಚಿಕ್ಕನಾಯಕನಹಳ್ಳಿ,ಮಾ.13: ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗಿಂತ ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘವನ್ನು ಜಿಲ್ಲೆಯಲ್ಲೇ ಉತ್ತಮ ಪ್ರಗತಿಯ ಪ್ರಥಮ ಪತ್ತಿನ ಸಹಕಾರ ಸಂಘ ಮಾಡಲು ಸಂಘದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಾಲ್ಲೂಕು ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ನಂದಿನಿ ಹಾಲು ಉತ್ಪಾಕರುಗಳ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ 2012ನೇ ಸಾಲಿನ  ಚುನಾವಣೆಯಲ್ಲಿ 3ನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹಳೆಮನೆ ಶಿವನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀನರಸಿಂಹಯ್ಯರವರಿಗೆ ನಿದರ್ೇಶಕರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಮನೆ ಶಿವನಂಜಪ್ಪ ಸಂಘದ ಅಭಿವೃದ್ದಿಗಾಗಿ ನಿಷ್ಠೆಯಿಂದ  ಕಾರ್ಯನಿರ್ವಹಿಸಲಿದ್ದು, ಟೀಕೆಗಳಿಗೆ ಕಿವಿಗೊಡದೆ ಅಭಿವೃದ್ದಿ ಕಡೆಗೆ ಕೊಂಡೊಯ್ಯುಲು ಶ್ರಮಿಸುತ್ತೇನೆ, ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನಂದಿನಿ ಪತ್ತಿನ ಸಹಕಾರ ಸಂಘದಲ್ಲಿ ಜಾತಿ, ಭೇದ ಮಾಡದೆ, ಒಂದೇ ರೀತಿಯ ವ್ಯವಸ್ಥೆ ಇರುವುದು ಎಂದು ತಿಳಿಸಿದರು.
3ನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಲಕ್ಷ್ಮೀನರಸಿಂಹಯ್ಯ ಮಾತನಾಡಿ ವಿಸ್ತರಣಾಧಿಕಾರಿಗಳಿಗೂ, ಸಂಘದ ಸದಸ್ಯರಿಗೂ, ಖಾತೆದಾರರಿಗೂ  ಉತ್ತಮವಾದ ಸಂಬಂಧ ಇರಬೇಕು ಆಗ ಸಂಘದಲ್ಲಿ ಅಭಿವೃದ್ದಿ ಕಾಣುತ್ತದೆ ಎಂದರು.
ಸಮಾರಂಭದಲ್ಲಿ ನಿದರ್ೇಶಕ ಸಿದ್ದರಾಮಯ್ಯ, ವಿಸ್ತರಣಾಧಿಕಾರಿ ಯರಗುಂಟಪ್ಪ ಉಪಸ್ಥಿತರಿದ್ದರು.
ಬರ ನಿರ್ವಹಣಾ ಕೋಶದ ಸಹಾಯವಾಣಿ
ಚಿಕ್ಕನಾಯಕನಹಳ್ಳಿ,ಮಾ.13: ತಹಶೀಲ್ದಾರ್ ಕಛೇರಿಯಲ್ಲಿ ಬರಪರಿಹಾರ ನಿರ್ವಹಣಾ ಕೋಶವನ್ನು ತೆರೆಯಲಾಗಿದ್ದು, ಇಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಹಾಗೂ ಇತರೆ ಉದ್ಯೋಗ ಸೃಜನ ಕಾಮಗಾರಿಗಳ ದೂರುಗಳು ಹಾಗೂ ಸಲಹೆಗಳನ್ನು ಸ್ವೀಕರಿಸಲು ಈ ಕೋಶವನ್ನು ತೆರೆಯಲಾಗಿದೆ.
ಬರ ಪರಿಹಾರ ನಿರ್ವಹಣಾ ವಿಷಯವಾಗಿ ಹೆಚ್ಚಿನ ಮಾಹಿತಿಗಾಗಿ ಈ ಕೋಶದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು  ಸಾರ್ವಜನಿಕರು 08133-267242 ಈ ಸಂಖ್ಯೆಯನ್ನು ಸಂರ್ಪಕಿಸಲು ಕೋರಲಾಗಿದೆ.
ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಪಟ್ಟಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಿ ಪ್ರೌಢಶಾಲೆಗಳ ಗ್ರೇಡ್-2 ಸಹ ಶಿಕ್ಷಕರ ತಾತ್ಕಾಲಿಕ ಹೆಚ್ಚುವರಿ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸದರಿ ಪಟ್ಟಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ದಿ.15.03.12ರೊಳಗೆ ಕಛೇರಿಗೆ ಮುದ್ದಾಂ ಸಲ್ಲಿಸಿ ಸ್ವೀಕೃತಿ ಪಡೆಯಲು ಬಿ.ಇ.ಓ. ಸಾ.ಚಿ.ನಾಗೇಶ್ ಕೋರಿದ್ದಾರೆ.