Thursday, June 9, 2016


ಗಾಳಿಮಳೆಗೆ ಹೆಂಚುಗಳು ಪುಡಿಪುಡಿ
ಚಿಕ್ಕನಾಯಕನಹಳ್ಳಿ,ಜೂ.09 : ತಾಲ್ಲೂಕಿನ ಹಂದನಕೆರೆ ಹೋಬಳಿ ಬಂದ್ರೆಹಳ್ಳಿ ತಾಂಡ್ಯದಲ್ಲಿ ಬುಧವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ 16ಕ್ಕೂ ಹೆಚ್ಚು ಮನೆಗಳ ಹೆಂಚು ಹಾಗೂ ತಗಡಿನ ಶೀಟು ಹಾರಿ ಹೋಗಿದೆ.
 ಬಂದ್ರೆಹಳ್ಳಿ ತಾಂಡ್ಯದ  ಗಂಗಾಧರನಾಯ್ಕ, ಸೋಮ್ಲಾನಾಯ್ಕ, ಸೋಮ್ಲಬಾಯಿ, ರೂಪಾಬಾಯಿ, ಚಂದ್ರನಾಯ್ಕ, ಕರಿಯಾನಾಯ್ಕ, ರಾಮಾನಾಯ್ಕ, ರಾಜಾನಾಯ್ಕ, ಗೌರಿಬಾಯಿ, ಕವಿತಬಾಯಿ, ಸಾವಿತ್ರಿಬಾಯಿ, ರಾಜಾನಾಯ್ಕ, ಉಮೇಶ್ನಾಯ್ಕ, ಕಾಳಾನಾಯ್ಕ, ಇವರು  ವಾಸಿಸುತ್ತಿದ್ದ ಜನರು ಮಳೆಗಾಳಿಯಿಂದಾಗಿ ರಾತ್ರೆಯೆಲ್ಲಾ ಪರದಾಡುವಂತಾಯಿತು, ಇವರ ಮನೆಗಳ ಹೆಂಚುಗಳು ಭಾಗಶಃ ಹಾರಿಹೋಗಿದೆ. ಈ ಸಂಬಂಧ ಹಂದನಕೆರೆ ಕಂದಾಯಾಧಿಕಾರಿ ತಿಪ್ಪೇಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಸುರಿದ ಮಳೆಯ ವಿವರ: ತಾಲ್ಲೂಕಿನಲ್ಲಿ ಬುಧವಾರ ತಾಲೂಕಿನ 7ಕಡೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ.
ಚಿಕ್ಕನಾಯಕನಹಳ್ಳಿ-13..ಮಿಮೀ, ಸಿಂಗದಹಳ್ಳಿ-10.2..ಮಿಮೀ, ಶೆಟ್ಟಿಕೆರೆ..13.ಮಿಮೀ, ದೊಡ್ಡ ಎಣ್ಣೆಗೆರೆ 50.2.ಮಿಮೀ, ಮತಿಘಟ್ಟ 25.4.ಮಿಮೀ,, ಬೋರನಕಣಿವೆ 33.4, ಹುಳಿಯಾರು.50.3.ಮಿಮೀ ಮಳೆಯಾಗಿದೆ.  ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿವೆ.
ಚಿಕ್ಕನಾಯಕನಹಳ್ಳಿ,ಜೂ.9: ಬುಧವಾರ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪಟ್ಟಣದ 6ನೇ ವಾಡ್ ಕೇದಿಗೆಹಳ್ಳಿ ಗುಂಡು ತೋಪಿನಲ್ಲಿ ವಾಸವಾಗಿರುವ ಅಲೆಮಾರಿ ಸುಡುಗಾಡು ಸಿದ್ಧರ ಗುಡಿಸಲಿಗೆ ನೀರು ನುಗ್ಗಿದೆ.
  ಅಖಿಲ ಕನರ್ಾಟಕ ಸುಡುಗಾಡು ಸಿದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷ ವೆಂಕಟೇಶಯ್ಯ ಮಾತನಾಡಿ, ಪ್ರತೀ ಮಳೆಗಾಲ ಬಂತೆಂದರೆ ನಮಗೆ ಜೀವ ಭಯ ಶುರುವಾಗುತ್ತದೆ. ಮಳೆ ನೀರು ವಾಸದ ಗುಡಿಸಲುಗಳಿಗೆ ನುಗ್ಗುತ್ತದೆ. ಕಳೆದ ಮಂಗಳವಾರ ರಾತ್ರಿ ಸುರಿದ ಮಳೆಗೆ ಏಕಾ ಏಕಿ ನೀರು ನುಗ್ಗಿ ಗುಡಿಸಲುಗಳು ಜಲಾವೃತವಾದವು. ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು. ಗುರುವಾರ ಬೆಳಗಿನಿಂದಲೂ ಮಳೆ ಬಿಟ್ಟೂ ಬಿಟ್ಟು ಸುರಿಯುತ್ತಿದ್ದು ಮತ್ತೆ ಗುಡಿಸಲುಗಳಿಗೆ ನೀರು ನುಗ್ಗುವ ಭಯ ಕಾಡುತ್ತಿದೆ.
    ಗುಡಿಸಲುಗಳ ಮೇಲೆ ವಿದ್ಯುತ್ ತಂತಿಗಳು ಆದು ಹೋಗಿದ್ದು  ಮಳೆಗಾಲದಲ್ಲಿ ಅನಾಹುತ ಆಗುವ ಸಂಭವವಿದೆ. ಅಲ್ಲದೆ ಪಕ್ಕದಲ್ಲೇ ಇರುವ ದೊಡ್ಡ ಹುಣುಸೇಮರ ಮಳೆಗಾಳಿಗೆ ಉರುಳಿದರೆ ಜೀವ ಹಾನಿ ಸಂಭವಿಸುವ ಅಪಾಯ ಇದೆ ಎಂದರು.
   ಮಳೆ ಬಂದ ತಕ್ಷಣ ವಿಷ ಜಂತುಗಳು ಗುಡಿಸಲು ಒಳಗೆ ನುಗ್ಗುತ್ತವೆ. ಕಳೆದ 25 ವರ್ಷಗಳಿಂದ 15 ಸುಡುಗಾಡು ಸಿದ್ಧರ ಕುಟುಂಬಗಳು ಇಲ್ಲೇ ವಾಸವಾಗಿವೆ. ಪುರಸಭೆಯಿಂದ ನಿವೇಶನ ಒದಗಿಸಿ ಒಂದು ಸೂರು ಕಟ್ಟಿಕೊಳ್ಳಲು ಅನುವು ಮಾಡಿ ಕೊಡುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ನಿವೇಶನ ಹಾಗೂ ಆಶ್ರಯ ಮನೆ ಒದಗಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದೇವೆ ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದರು.

ವಕೀಲರಿಂದ ನ್ಯಾಯಾಲಯ ಬಹಿಷ್ಕಾರ
ಚಿಕ್ಕನಾಯಕನಹಳ್ಳಿ,ಜೂ.9: ಉತ್ತಮ ಸಮಾಜ ನಿಮರ್ಾಣಕ್ಕೆ ನ್ಯಾಯದಾನ ಮಾಡುವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಕೀಲರಿಗೇ ನ್ಯಾಯಾಲಯದಲ್ಲಿ ಕೂರಲು ಸ್ಥಳಾವಕಾಶ ಹಾಗೂ ಮೂಲ ಸೌಕರ್ಯಗಳು ಇಲ್ಲದ ಕಾರಣ ವಕೀಲರು ಬೇಸತ್ತು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದು, ನ್ಯಾಯಾಲಯದ ಆವರಣದಿಂದ ತಾಲೂಕು ಕಛೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ವಕೀಲರು,  ತಾಲೂಕು ಕಛೇರಿ ತಲುಪಿ ಘೋಷಣೆ ಕೂಗಿದರು. ನ್ಯಾಯಾಲಯದ ಕಳೆದ 10 ವರ್ಷಗಳ ಹಿಂದೆ ನೂತನವಾಗಿ ನಿಮರ್ಾಣಗೊಂಡ ನ್ಯಾಯಾಲಯ ಕಟ್ಟಡದಲ್ಲಿ ಮೂರು ಹಂತದ ನ್ಯಾಯಾಲಯಗಳಿದ್ದು,  ಇಲ್ಲಿ 70ಕ್ಕೂ ಹೆಚ್ಚು ವಕೀಲರು ಹಾಗೂ ಮಹಿಳಾ ವಕೀಲರು ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು,  ವಕೀಲರುಗಳಿಗೆ ಕೂರಲು ಸರಿಯಾದ ಸ್ಥಳವಕಾಶವಿಲ್ಲದಿರುವುದರಿಂದ ಬೇಸತ್ತು ಜೂನ್ 9 ರಂದು ಸಾಂಕೇತಿಕವಾಗಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹಾಜರಾಗದೇ ವಕೀಲರು ಪ್ರತಿಭಟಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
 ಕೂರಲು ಸೂಕ್ತವಾದ ಕಟ್ಟಡ ನಿಮರ್ಿಸಬೇಕು ಹಾಗೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬಂದರೆ ಅವರಿಗೂ ಕೂರಲು ಸರಿಯಾದ ವ್ಯವಸ್ಥೆ, ವಕೀಲರ ಭವನ ಸೇರಿದಂತೆ  ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಮಾತನಾಡಿ, ಕಾನೂನು ಸಂಸದೀಯ ಸಚಿವರು ನಮ್ಮ ವಕೀಲರ ಸಂಘವೇ ಅವರಿಗೆ ಮಾತೃ ಸ್ಥಾನದಲ್ಲಿದ್ದು,  ಈ ಸಂಘದ ಮೂಲಕವೇ ಅವರು ಹಂತಹಂತವಾಗಿ ಮೇಲೇರಿದ್ದಾರೆ,  ಜೊತೆಗೆ ಸ್ವಕ್ಷೇತ್ರದವರಾಗಿದ್ದು ಅವರು ಈ ಕೂಡಲೇ ಇತ್ತ ಗಮನ ಹರಿಸಿ ವಕೀಲರ ಭವನ ನಿಮರ್ಾಣ ಕಾರ್ಯಕ್ಕೆ ಕೂಡಲೇ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ. 
 ಕಳೆದ 8 ವರ್ಷಗಳಿಂದ ವಕೀಲರ ಭವನ ನಿಮರ್ಿಸುವಂತೆ ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಶೀಘ್ರ ಈ ಕಾರ್ಯ ಕೈಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಕೀಲರ ಸಂಘ ಎಚ್ಚರಿಸಿದೆ ಎಂದರು.
ನಂತರ  ತಹಶೀಲ್ದಾರ್ ಆರ್. ಗಂಗೇಶ್ರವರಿಗೆ  ಮನವಿ ಅಪರ್ಿಸಿದರು. ಈ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಜಶೇಖರ್, ಕಾರ್ಯದಶರ್ಿ ಕೆ.ಎಂ. ಷಡಾಕ್ಷರಿ, ಎಸ್.ದಿಲೀಪ್, ಬಿ.ಕೆ.ಸದಾಶಿವಯ್ಯ, ಎಸ್.ಗೋಪಾಲಕೃಷ್ಣ, ಸಿ.ಎನ್. ಕೃಷ್ಣಮೂತರ್ಿ, ಕೆ.ಆರ್. ಚನ್ನಬಸವಯ್ಯ, ಎಂ.ಬಿ.ನಾಗರಾಜು, ಎಚ್.ಎಸ್.ಜ್ಞಾನಮೂತರ್ಿ ಡಿ.ಎಂ. ಸ್ವಾಮಿ,  ಜಿ. ಪರಮೇಶ್ವರ್, ಹನುಮಂತಯ್ಯ, ಟಿ.ಶಶಿಧರ್, ರತ್ನರಂಜನಿ, ಮಂಜುನಾಥ್, ರವಿ, , ರವಿ, , ಮೊದಲಾದವರು ಹಾಜರಿದ್ದರು. 

ಬೋಧಿವೃಕ್ಷದ ವತಿಯಿಂದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ,9: ಮಹಾತ್ಮ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಮುದ್ರಿತ ಭಾಷಣದ ಆಲಿಸುವಿಕೆ ಮತ್ತು ಚಚರ್ೆಯನ್ನು ಇದೇ 11ರಂದು ಹಮ್ಮಿಕೊಳ್ಳಲಾಗಿದೆ.
ಬೋಧಿವೃಕ್ಷ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ಈ ಕಾರ್ಯಕ್ರಮವನ್ನು ಪಟ್ಟಣದ ಡಿ.ವಿ.ಜಿ.ಎಚ್.ಎಸ್.ಶಾಲೆಯ ಆವರಣದಲ್ಲಿ ಮಧ್ಯಾಹ್ನ 1.30ಕ್ಕೆ ಹಮ್ಮಿಕೊಂಡಿದೆ. ಚಚರ್ೆಯಲ್ಲಿ ಕುಂದೂರು ತಿಮ್ಮಯ್ಯ, ನಾರಾಯಣರಾಜು, ಲಿಂಗದೇವರು, ಬೇವಿನಹಳ್ಳಿ ಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಎನ್.ಇಂದಿರಮ್ಮ, ಸಿಂಗದಹಳ್ಳಿ ರಾಜ್ಕುಮಾರ್, ಸುಪ್ರಿಂ ಸುಬ್ರಹ್ಮಣ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಟ್ರಸ್ಟ್ನ ಕಂಟಲಗೆರೆ ಗುರುಪ್ರಸಾದ್ ತಿಳಿಸಿದ್ದಾರೆ.

ಬಿಇಓ ಕಛೇರಿಯ ಪ್ರಕಟಣೆ
ಚಿಕ್ಕನಾಯಕನಹಳ್ಳಿ,ಜೂ.9: ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯವಾರು ಜೇಷ್ಠತಾ ಪಟ್ಟಿಯನ್ನು ಕಛೇರಿಯಾ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ.ಕೃಷ್ಣಮೂತರ್ಿ ತಿಳಿಸಿದ್ದಾರೆ.
ಸದರಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಶಿಕ್ಷಕರುಗಳು ಮತ್ತು ದಿನಾಂಕ 01.01.15 ರಿಂದ 31.12.15ರ ಅವಧಿಯಲ್ಲಿ ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರುವ ಸೇವಾನಿರತ ಶಿಕ್ಷಕರು ತಮ್ಮ ವಿದ್ಯಾರ್ಹತೆಯ ಪೂರಕ ದಾಖಲೆಗಳೊಂದಿಗೆ ಹಾಗೂ ರೆಗ್ಯೂಲರ್ ಆಗಿ ಪದವಿ ಪಡೆದಿದ್ದಲ್ಲಿ ಇಲಾಖಾ ಅನುಮತಿ ಪತ್ರದೊಂದಿಗೆ ದಿನಾಂಕ 11.06.216ರೊಳಗೆ ಕಛೇರಿಯ ವ್ಯವಸ್ಥಾಪಕರಿಗೆ ಮುದ್ದಾಂ ಸಲ್ಲಿಸುವುದು ತಡವಾಗಿ ಬಂದ ಮನವಿಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.