Saturday, February 20, 2016

ತೋಟಗಾರಿಕೆ ಇಲಾಖೆ ಬರಪರಿಹಾರ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ :
 ರೈತರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ : ತೋಟಗಾರಿಕೆ ಇಲಾಖೆಯಿಂದ ರೈತರಿಗೆ ನೀಡುವ ಬರ ಪರಿಹಾರ ನಿಧಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ರೈತರು ತೋಟಗಾರಿಕಾ ಇಲಾಖಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬರಪರಿಹಾರದಲ್ಲಿ ಮಧ್ಯವತರ್ಿಗಳಿಂದ ಹಣ ಪಡೆದು ಸಣ್ಣ ರೈತರ ಬದಲಾಗಿ ದೊಡ್ಡ ರೈತರಿಗೆ ಬರಪರಿಹಾರ ರೂಪದಲ್ಲಿ ಹಣ ನೀಡಿದ್ದಾರೆ ಎಂದು ಆರೋಪಿಸಿದ ರೈತರು,  ಬರಪರಿಹಾರದಲ್ಲಿ ಹಣ ನೀಡುವಾಗ ನೋಟಿಸ್ ಬೋಡರ್್ಗೆ ಹಾಕದೆ ತಮಗೆ ಬೇಕಾದ ರೈತರಿಗೆ 3ರಿಂದ 6ಸಾವಿರ ರೂಪಾಯಿವರೆಗೂ ಮಧ್ಯವತರ್ಿಗಳಿಂದ ಲಂಚ ಪಡೆದು ಅನುಧಾನ ನೀಡಿದ್ದಾರೆ ಎಂದರು.
 ರೈತರಿಂದ  ಇಲಾಖಾಧಿಕಾರಿಗಳು ಅಜರ್ಿಯನ್ನು ತೆಗೆದುಕೊಂಡಿಲ್ಲ, ನೋಟಿಸ್ ಬೋಡರ್್ಗೆ ಸಕರ್ಾರದ ಸೌಲಭ್ಯಗಳ ಮಾಹಿತಿಯನ್ನು ಹಾಕಿಲ್ಲ. ತಮಗೆ ಲಂಚ ನೀಡಿದವರಿಗೆ ಹಣ ನೀಡಿದ್ದಾರೆ, ಈ ಪಟ್ಟಿಯಲ್ಲಿ  ದೊಡ್ಡ ರೈತರಿಗೂ ಹಣ ನೀಡಿದ್ದಾರೆ, ಬರಪರಿಹಾರದಲ್ಲಿ ಸಣ್ಣ ರೈತರನ್ನು ಗುರುತಿಸಬೇಕಾದ ರೈತರನ್ನು 10ರಿಂದ 15ಎಕರೆ ಇರುವ ರೈತರನ್ನು ಗುರುತಿಸಿ ಹಣ ನೀಡಿರುವುದರಿಂದ ಸಣ್ಣ ರೈತರಿಗೆ ಅಧಿಕಾರಿಗಳು ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.
ರೈತ ತೀರ್ಥಪುರ ವಾಸು ಮಾತನಾಡಿ, ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ, ಇಲಾಖಾ ವತಿಯಿಂದ ರೈತರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ನೋಟಿಸ್ ಬೋಡರ್್ಗೂ ಹಾಕುವುದಿಲ್ಲ, ಇದರಿಂದ ತೋಟಗಾರಿಕಾ ಇಲಾಖಾ ವತಿಯಿಂದ ರೈತರಿಗೆ ಯಾವ ಯಾವ ಸವಲತ್ತು ಸಿಗುತ್ತವೆ ಎಂಬುದು ತಿಳಿಯುತ್ತಿಲ್ಲ, ಕಛೇರಿಗೆ ರೈತರು ಭೇಟಿ ನೀಡಿ ಪರಿಹಾರದ ಬಗ್ಗೆ ಮಾಹಿತಿ ಕೇಳಿದರೆ ಯಾರೊಬ್ಬರೂ ರೈತರಿಗೆ ಸ್ಪಂದಿಸುತ್ತಿಲ್ಲ ಈಗಾದರೆ ರೈತರು ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಕರ್ಾರ ಕೂಡಲೇ ಇದರ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಒತ್ತಾಯಿಸಿದರು.
ರೈತ ಸೋಮಶೇಖರಯ್ಯ ಮಾತನಾಡಿ, ರೈತರು ತೋಟಗಾರಿಕಾ ಇಲಾಖೆಗೆ ಬಂದು ಪರಿಹಾರದ ಹಣದ ಬಗ್ಗೆ ಮಾಹಿತಿ ಕೇಳಿದರೆ  ಚುನಾವಣೆ ಇರುವುದರಿಂದ ಈಗ ನೀತಿ ಸಂಹಿತೆ ಇದೆ, ಮಾಹಿತಿಯನ್ನೂ  ನೀಡುವುದಿಲ್ಲ ಎಂದು ಹೇಳುತ್ತಾರೆ, ಆದರೆ ಹಣ ನೀಡಿದರೆ ಮಾತ್ರ ಇವರಿಗೆ ಯಾವ ನೀತಿ ಸಂಹಿತೆಯೂ ಅಡ್ಡ ಬರುವುದಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೈತರುಗಳಾದ ಸುಬ್ರಹ್ಮಣ್ಯ, ವಿಶ್ವನಾಥ್, ಜಯಣ್ಣ, ಸೋಮಣ್ಣ, ಸಿದ್ದರಾಮಣ್ಣ, ಬಗ್ಗನಹಳ್ಳಿಯ ಶಿವಯೋಗಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
 

1
ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ ಎಂದು ರೈತರಿಂದ ದೂರು ಬಂದಿದ್ದು ಇದರಿಂದ ತೋಟಗಾರಿಕೆ ಇಲಾಖೆಯ ಕಡತಗಳನ್ನು ತರಲು ಹೇಳಿದ್ದು ಬಂದ ನಂತರ ಪರಿಶೀಲಿಸಲಾಗವುದು, ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು.

                                                                                               ತಹಶೀಲ್ದಾರ್, ಗಂಗೇಶ್.
      2
ರೈತರು ಆರೋಪಿಸಿರುವಂತೆ ತೋಟಗಾರಿಕಾ ಇಲಾಖೆಯಲ್ಲಿ ಬರಪರಿಹಾರದ ಅಡಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ರೈತರಿಂದ ಮಧ್ಯವತರ್ಿಗಳು ಹಣ ಪಡೆದಿದ್ದಾರೆ ಎಂಬ ದೂರು ಇದೆ, ಆದರೆ ಪಡೆದವರ ಹೆಸರನ್ನು ರೈತರೂ ಹೇಳುತ್ತಿಲ್ಲ, ತೋಟಗಾರಿಕಾ ಇಲಾಖೆ ರೈತರ ಪಟ್ಟಿಯನ್ನು ತಯಾರಿಸಿ ತಾಲ್ಲೂಕು ಕಛೇರಿಗೆ ನೀಡಿದ್ದೇವೆ, ತಹಶೀಲ್ದಾರ್ ಪಟ್ಟಿಯನ್ನು ಪರಿಶೀಲಿಸಿ,  ರೈತರ ಉಳಿತಾಯ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ರೈತರ ಖಾತೆಗೆ ಜಮಾಡಲಾಗುವುದು.
ಮಹಾಲಕ್ಷ್ಮಮ್ಮ, 
                                                       ಹಿರಿಯ ಸಹಾಯಕ ನಿದರ್ೇಶಕರು, ತೋಟಗಾರಿಕಾ ಇಲಾಖೆ, ಚಿ.ನಾ.ಹಳ್ಳಿ.