Friday, July 15, 2011ಕಾನೂನು ತಿಳುವಳಿಕೆಗೆ ಬಡವ ಬಲ್ಲಿದನೆಂಬ ಬೇದ ಬೇಡ
ಚಿಕ್ಕನಾಯಕನಹಳ್ಳಿ,ಜು.15 : ನ್ಯಾಯಾಲಯದ ದಾವೆಗಳನ್ನು ಕಕ್ಷಿದಾರರು ವಕೀಲರನ್ನು ನೇಮಿಸಿ ದಾವೆ ಇತ್ಯರ್ಥ ಪಡಿಸಲು ಆಗದಿರುವಂತಹ ಬಡ ಕಕ್ಷಿದಾರರಿಗೆ ಸಕರ್ಾರದಿಂದ ವಕೀಲರನ್ನು ನೇಮಿಸಿ ನ್ಯಾಯಲಯದ ದಾವೆ ಪೂರ್ಣಗೊಳ್ಳುವವರೆಗೆ ಪ್ರಕರಣದ ಖಚರ್ು ವೆಚ್ಚವನ್ನು ಸಕರ್ಾರ ಭರಿಸುವುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆದ ತಾಲ್ಲೂಕು ಕಾನೂನು ಸಲಹಾ ಕೇಂದ್ರದ ಪ್ರಾರಂಭ ಹಾಗೂ ಕಾನೂನು ನೆರವು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ಕಾರಣಗಳಿಂದ ಕಾನೂನಿನ ಬಗ್ಗೆ ಅರಿವು ಇರದ ಜನಸಾಮಾನ್ಯರು ಕಾನೂನಿನ ಬಗ್ಗೆ ತಪ್ಪಾಗಿ ತಿಳುವಳಿಕೆ ಪಡೆಯುತ್ತಿದ್ದಾರೆ, ಅಂತಹವರಿಗೆ ಕಾನೂನಿನ ಅರಿವನ್ನು ಮೂಡಿಸಲು, ನ್ಯಾಯಾಲಯಕ್ಕೆ ಕಕ್ಷಿದಾರರು ಸಲ್ಲಿಸಿರುವ ಯಾವುದೇ ಕಾನೂನಿನ ಬಗ್ಗೆ ಸಲಹೆ ನೀಡಲು ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆಯಲಾಗಿದೆ ಎಂದ ಅವರು, ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆದಿರುವುದು ಕಾನೂನಿನ ಬಗ್ಗೆ ಅರಿವಿರದ ಜನಸಾಮಾನ್ಯರು ಹೆಚ್ಚಾಗಿ ಆಗಮಿಸುತ್ತಿದ್ದು ಅಂತಹವರಿಗೆ ಅನುಕೂಲವಾಗಲಿ ಮತ್ತು ಖಾತೆ ಬದಲಾವಣೆಗಳ ಬಗ್ಗೆ ತಿಳುವಳಿಕೆ ಪಡೆಯಲೆಂಬ ಉದ್ದೇಶವನ್ನು ಹೊಂದಿ ಸಲಹಾ ಕೇಂದ್ರ ತೆರೆಯಲಾಗಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಜನಸಾಮಾನ್ಯರು ಸಣ್ಣ ಪುಟ್ಟ ವಿಚಾರಗಳಿಗಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ತಪ್ಪಿಸಲು, ಅಶಕ್ತರಿಗೆ ನೆರವಾಗಲು ಸಲಹಾ ಕೇಂದ್ರ ತೆರೆಯಲಾಗಿದ್ದು ತಾಲ್ಲೂಕಿನ ಯಾವುದೇ ವಿವಾದಗಳು, ನಮೂನೆಗಳ ಅಜರ್ಿ ವಿಚಾರಣೆಗಳನ್ನು ಬಗೆ ಹರಿಸಲಾಗುವುದು ಎಂದ ಅವರು ಪ್ರತಿ ವಾರದ ಎರಡು ದಿನ ಇಬ್ಬರು ವಕೀಲರು ಸಲಹಾ ಕೇಂದ್ರದಲ್ಲಿ ಬೆಳಗ್ಗೆ 10 ರಿಂದ 1ರವರೆಗೆ, ಮತ್ತು 2ರಿಂದ 6ರವರೆಗೆ ಸಲಹೆ ನೀಡುತ್ತಾರೆ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶೆ ಎ.ಜಿ.ಶಿಲ್ಪ ಮಾತನಾಡಿ ತಾಲ್ಲೂಕು ಕಛೇರಿಯಲ್ಲಿ ತೆರೆದಿರುವ ಸಲಹಾ ಕೇಂದ್ರದಿಂದ ಜನರಿಗೆ ಯಾವುದೇ ದಾವೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ದೊರಕುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಯಾವುದೇ ರೀತಿಯ ಕುಂದುಕೊರತೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಸಿ.ಪಿ.ಐ, ಕೆ.ಪ್ರಭಾಕರ್ ವಕೀಲರ ಸಂಘದ ಕಾರ್ಯದಶರ್ಿ ಸಿ.ರಾಜಶೇಖರ್, ಸಕರ್ಾರಿ ಅಭಿಯೋಜಕರಾದ ಕೆ.ಎಲ್.ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.
ರೋಗಭಾದೆ ನಿವಾರಣೆಗೆ ಹೋಬಳಿ ಮಟ್ಟದಲ್ಲಿ ರೈತರ ಸಭೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಜು.15 : ತೆಂಗಿಗೆ ತಾಲ್ಲೂಕಿನ ವಿವಿಧ ಕಡೆ ಅನೇಕ ರೋಗಭಾದೆಗಳು ಕಾಡುತ್ತಿದ್ದು ತೋಟಗಾರಿಕೆ ಇಲಾಖೆಯವರು ಹೋಬಳಿವಾರು ಸಭೆ ನಡೆಸಿ ರೈತರಿಗೆ ರೋಗದ ಬಗ್ಗೆ ಜಾಗೃತಿ ದೊರಕಿಸಬೇಕೆಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು ತಿಳಿಸಿದರು.
ಪಟ್ಟಣದ ಸಕರ್ಾರಿ ನೌಕರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕೊಳೆರೋಗ, ಕಪ್ಪುತಲೆ ಹಾಗೂ ಕೆಂಪು ಮೂತಿ ಹುಳುಗಳ ಭಾದೆ ತಾಲ್ಲೂಕಿನಲ್ಲಿ ಜಾಸ್ತಿಯಾಗಿದ್ದು ಅಧಿಕಾರಿಗಳು ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಮಗ್ರ ಹತೋಟಿಗೆ ಪರಿಹಾರ ಸೂಚಿಸುವಂತೆ ಸಲಹೆ ನೀಡಿದರು.
ಕಾರ್ಯದಶರ್ಿ ರಂಗನಕೆರೆ ಮಹೇಶ್ ಮಾತನಾಡಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಉಪಾಧ್ಯಕ್ಷ ಬಿ.ಸಿ.ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್, ನಿದರ್ೇಶಕ ಬಿ.ಎಲ್.ರೇಣುಕಪ್ರಸಾದ್ ಮಾತನಾಡಿದರು. ಮೀನುಗಾರಿಕೆಯ ಸಹಾಯಕ ನಿದರ್ೇಶಕ ಉಮೇಶ್, ಜಲಾನಯನ ಇಲಾಖೆ ಅಧಿಕಾರಿ ಮೋಹನ್, ಸಭೆಗೆ ಮಾಹಿತಿ ನೀಡಿದರು.
ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ವೆಂಕಟೇಶ್, ವಿಶ್ವನಾಥ್ ಮತ್ತಿತರರರಿದ್ದರು. ಕೃಷಿ ಸಹಾಯಕ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ ವಂದಿಸಿದರು.

ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ವಿಜೇತರು
ಚಿಕ್ಕನಾಯಕನಹಳ್ಳಿ,ಜು.15 : ಅನ್ನಪೂಣರ್ೆಶ್ವರಿ ಕಲಾ ಸಂಘದವರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೃತ್ಯಪಟುಗಳು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಧಾನಕರ ಬಹುಮಾನಗಳನ್ನು ಪಡೆದಿದ್ದಾರೆ.
ಸಿನಿಯರ್ ಸೋಲೊ ನೃತ್ಯ ಫಲಿತಾಂಶ. ; ಪ್ರಥಮ ಸ್ಥಾನ ಅಸ್ಲರ್ ದಾವಣಗೆರೆ, ದ್ವಿತೀಯ ಸ್ಥಾನ ತನೋಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ಅರುಣ್ ಬೆಂಗಳೂರು, ಸಮಾಧಾನಕರ ಜಗದೀಶ್ ಆನೇಕಲ್ ,ನವೀನ್ ಕುಮಾರ್ ತುಮಕೂರು, ಪ್ರಥಮಸ್ಥಾನ ರಾಘವೇಂದ್ರ ಹರಿಹರ,ದ್ವಿತೀಯ ಸ್ಥಾನ ಶ್ರೀ ಕಾಂತ್ ಆನೇಕಲ್,ತೃತೀಯ ಸ್ಥಾನ ಅಜೀತ್ ಜಿ.ವಿ.ಆರ್. ಮೂಡಿಗೆರೆ ಸಮಾಧಾನಕರ ಚರಣ್ ಕೆ.ಹಚ್. ಚಿಕ್ಕಬಳ್ಳಾಪುರ,ಶರತ್ ತುಮಕೂರು.
ಹಿರಿಯರ ಗುಂಪು : ಪ್ರಥಮ ಸ್ಥಾನ ನ್ಯೂಸ್ಹಿಲೀಟ್ ಡ್ಯಾನ್ಸ್ ಅಕಾಡಮಿ ಆನೇಕಲ್ ,ದ್ವಿತೀಯ ಸ್ಥಾನ ನ್ಯೂರಂಜಿತ್ ಡ್ಯಾನ್ಸ್ ಗ್ರೋಪ್ ಹರಿಹರ, ತೃತೀಯ ಸ್ಥಾನ ಆದಿಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು, ಸಮಾಧಾನಕರ ಸ್ಟ್ರೆಲೀಷ ಡ್ಯಾನ್ಸ್ ಗ್ರೋಪ್ ತುಮಕೂರು, ಗಣೇಶ್ ಡ್ಯಾನ್ಸ್ ಗ್ರೋಪ್ ಮುದ್ದೂರು, ಸವರ್ೋತ್ತಮ ಪ್ರಶಸ್ತಿ ರಾಯಲ್ ಮೆಟ್ರೋಗ್ರೆಸ ಭದ್ರಾವತಿ, ಅತಿಶ್ರೇಷ್ಠ ಪ್ರಶಸ್ತಿ ಚರಣ್ &ತಂಡ ಚಿಕ್ಕಬಳ್ಳಾಪುರ, ಶ್ರೇಷ್ಠ ಪ್ರಶಸ್ತಿ ಕಿರಣ್ &ತಂಡ ಬೆಂಗಳೂರು.
ಕಿರಿಯರ ಸೋಲೊ ನೃತ್ಯ : ಪ್ರಥಮ ಸ್ಥಾನ ತರುಣ್ ದಾವಣಗೆರೆ, ದ್ವಿತೀಯ ಸ್ಥಾನ ನಿರೂಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ನಿಧಿ ದಾವಣಗೆರೆ, ಸಮಾ-ನಿತ್ಯಾಚಂದನ ಬೆಂಗಳೂರು, ಚೈತ್ರ ತಿಪಟೂರು, ಪ್ರದೀಪ್ ಕುಮಾರ್ ಬೆಂಗಳೂರು, ಸುಕೃತ್ ದಾವಣಗೆರೆ ,ಅನೋಷ ದಾವಣಗೆರೆ ಪದ್ಮಾಶ್ರೀ ಚಿಕ್ಕಮಂಗಳೂರು ದಿವ್ಯ ಬೆಂಗಳೂರು, ಪ್ರಥ-ಪ್ಲೆಯಿಂಗ್ ಭರ್ಡ ದಾವಣಗೆರೆ , ದ್ವಿತೀ-ಸೂಪರ್ ಸ್ಟೆಷ್ಸ್ ರಾಣಿಬೆನ್ನೂರು,ತೃತೀ-ಕಿಯೋಟಿವ್ ಚಿಕ್ಕನಾಯಕನಹಳ್ಳಿ, ಸಮಾಧಾನಕರ ರೂಬಿಶೇಖರ್ ತುಮಕೂರು, ವಿದೇಶ್ &ತಂಡ ಹರಿಹರ, ಸವರ್ೋತ್ತಮ ಪ್ರಶಸ್ತಿ-ಅನೋಷ &ತಂಡ ಮಂಡ್ಯ, ಅತಿಶ್ರೇಷ್ಠ ಪ್ರಶಸ್ತಿ ಹೆಸ್ಮಿನಿ ದಾವಣಗೆರೆ, ಶ್ರೇಷ್ಠ ಪ್ರಶಸ್ತಿ ಸ್ಕೂಲ್ ತುಮಕೂರು ಪಡೆದಿದ್ದಾರೆ.