Thursday, September 2, 2010

ಗ್ರಾ.ಪಂ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಸೆ.02: ಗ್ರಾಮ ಪಂಚಾಯ್ತಿ ನೌಕರರ ವಿವಿಧ ಬೇಡಿಕೆಗಳನ್ನು ಇದೇ 6ರ ಸೋಮವಾರ ಪ್ರತಿಭಟನೆ ಹಾಗೂ ಅನಿಧರ್ಿಷ್ಠ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆಯನ್ನು ನಗರದ ಹಳೆಯೂರು ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ನೆಹರು ಸರ್ಕಲ್ ಮುಖಾಂತರ ತಾಲೂಕು ಪಂಚಾಯ್ತಿ ಕಛೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾದಂಬರಿಗಾತರ್ಿ ದಿ.ತ್ರಿವೇಣಿ ನೆನಪು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಸೆ.02: ಭುವನೇಶ್ವರಿ ಯುವಕ ಸಂಘ ಮತ್ತು ಜ್ಞಾನಪೀಠ ಪ್ರೌಡಶಾಲೆ ಸಂಯುಕ್ತ ಆಶ್ರಯದಲ್ಲಿ ಕಾದಂಬರಿಗಾತರ್ಿ ದಿವಂಗತ ತ್ರಿವೇಣಿಯವರ ಜನ್ಮದಿನದ ಸವಿನೆನಪನ್ನು ಇದೇ ಸೆಪ್ಟಂಬರ್ 6ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಜ್ಞಾನಪೀಠ ಪ್ರೌಡಶಾಲೆ ಆವರಣದಲ್ಲಿ ಮಧ್ಯಾಹ್ನ 3-30ಕ್ಕೆ ಹಮ್ಮಿಕೊಂಡಿದ್ದು ಮುಖ್ಯೋಪಾಧ್ಯಾಯ ಗೋವಿಂದರಾಜ್, ಸಂಘದ ಗೌರವಾಧ್ಯಕ್ಷ ಸಿ.ಕೆ.ಶಾಂತಕುಮಾರ್, ಅಧ್ಯಕ್ಷ ಸಿ.ಎಸ್.ರೇಣುಕಾಮೂತರ್ಿ ಉಪಸ್ಥಿತರಿರುವರು.
ಸೆ.08ಗುರುನಮನ
ಚಿಕ್ಕನಾಯಕನಹಳ್ಳಿ,ಸೆ.02: ತಾಲೂಕು ಕಸಾಪ, ರೋಟರಿ-ಇನ್ನರ್ವೀಲ್ ಕ್ಲಬ್ ಮತ್ತು ಕೆನರ ಬ್ಯಾಂಕ್ ವತಿಯಿಂದ ಗುರುನಮನ ಮತ್ತು ನಗರದ ಎಲ್ಲ ಪ್ರೌಡಶಾಲೆ ಮುಖ್ಯೋಪಾಧ್ಯಾಯ ಮತ್ತು ಕಾಲೇಜು ಪ್ರಾಚಾರ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ್ 8ರ ಬುಧವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಬಾಲಭವನದಲ್ಲಿ ಸಂಜೆ 5-30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಕೆನರ ಬ್ಯಾಂಕ್ ಡಿ.ಜಿ.ಎಂ. ರವೀಂದ್ರ ಭಂಡಾರಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಸ್ಟೀಸ್ ಎನ್.ವೆಂಕಟಾಚಲ ಮುಖ್ಯೋಪಾಧ್ಯಾಯ ಮತ್ತು ಪ್ರಾಚಾರ್ಯರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಕೆನರ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಎಸ್.ಜಿ.ನಾಗರಾಜ್, ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಉಪಸ್ಥಿತರಿರುವರು.
ಸೆ.05ರಂದು ಶಿಕ್ಷಕರ ದಿನಾಚರಣೆ
ಚಿಕ್ಕನಾಯಕನಹಳ್ಳಿ,ಸೆ.02: ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟಂಬರ್ 5ರ ಭಾನುವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣ ಮಾಡಲಿದ್ದು ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಿದ್ದಾರೆ.
ಬೆಂಗಳೂರಿನ ಭವತಾರಿಣಿ ಆಶ್ರಮ ಮಾತಾಜಿ ವಿವೇಕಮಹಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದು ವಿಧಾನ ಪರಿಷತ್ ಮುಖ್ಯ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಎಂ.ಆರ್.ಹುಲಿನಾಯ್ಕರ್ ಜಿ.ತಿಮ್ಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿ.ಪಂ.ಸದಸ್ಯರಾದ ಸುಶೀಲಸುರೇಂದ್ರಯ್ಯ, ಜಿ.ರಘುನಾಥ್, ಜಯಮ್ಮದಾನಪ್ಪ, ಹೊನ್ನಪ್ಪ, ಈರಣ್ಣ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಸಿ.ಪಿ.ಐ ರವಿಪ್ರಸಾದ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘಧ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.