Saturday, June 25, 2011






ಹೋರಾಟಕ್ಕೆ ಸಂದ ಫಲ : ಜ.ಎಸ್.ಬಸವರಾಜು ಚಿಕ್ಕನಾಯಕನಹಳ್ಳಿ,1983ರಿಂದಲೂ ಕುಡಿಯುವ ನೀರಾವರಿಗಾಗಿ ಹೋರಾಟ ಮಾಡಿದ ಪರಿಣಾಮವಾಗಿ ಈಗ 102 ರೂ ಕೋಟಿಯನ್ನು ಸಕರ್ಾರ ಬಿಡುಗಡೆ ಮಾಡಿ ತಾಲ್ಲೂಕಿನ ಜನತೆಯ ನೀರಿನ ದಾಹ ನೀಗಿಸಿರುವುದು ಸಂತೋಷಕರ ವಿಷಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಬಿಜೆಪಿ ಕಾಯರ್ಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದಿನ ಸಕರ್ಾರವು ತಾಲ್ಲೂಕಿನ ಕುಡಿಯುವ ನೀರಿನ ಬವಣೆ ನೀಗಿಸುವ ಪ್ರಯತ್ನದಲ್ಲಿ ನಮ್ಮ ಸಕರ್ಾರ ಬರುವವರೆಗೂ ಸ್ಪಂದಿಸಿರಲಿಲ್ಲ ಈಗ ಜನರ ಸಮಸ್ಯೆಗೆ ಸ್ಪಂದಿಸಿರುವ ಮೂಲಕ ನಮ್ಮ ಪಕ್ಷ ಜನಪರ ಕಾಳಜಿ ಮೆರೆದಿದೆ ಎಂದರು. 102 ಕೋಟಿ ರೂಗಳ ಈ ಯೋಜನೆಯಲ್ಲಿ 3 ಕೆರೆಗಳಿಗೆ ಏತ ನೀರಾವರಿ ಮೂಲಕ ಹಾಗೂ 24 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಯಲಿದೆ. ಈ ಸಾಲಿನ ಆಯವ್ಯಯದಲ್ಲಿ 35 ಕೋಟಿರೂ ತೆಗೆದಿರಿಸಲಾಗಿದೆ ಎಂದ ಅವರು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರ ಬೆಂಬಲದಿಂದಲೂ, ಹಲವಾರು ಜನಪ್ರತಿನಿಧಿಗಳ ಹೋರಾಟದ ಫಲವಾಗಿ ತಾಲ್ಲೂಕಿನ ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ ಈ ಯೋಜನೆಯಲ್ಲಿ ಶೆಟ್ಟಿಕೆರೆ ಕೆರೆಗೆ 71 ಎಂ.ಸಿ.ಎಫ್.ಟಿ ಪೆಮ್ಮಲದೇವರಹಳ್ಳಿ ಕೆರೆ 28 ಎಂ.ಸಿ.ಎಫ್.ಟಿ, ದಾಸಿಹಳ್ಳಿ ಕೆರೆ 6.5, ಚುಂಗನಹಳ್ಳಿ 11.5, ಕೊಡಲಾಗರಕೆರೆ 5.5, ಮಾರಸಂದ್ರ 1.9, ನವಿಲೆಕೆರೆ 6.5, ಅಣೆಕಟ್ಟೆಕೆರೆ 30, ದಬ್ಬೆಘಟ್ಟಕೆರೆ 2.3, ಚಿಕ್ಕನಾಯಕಹಳ್ಳಿಕೆರೆ 45, ಕಂದಿಕೆರೆ 100, ಕುಪ್ಪೂರು 18.2, ತಮ್ಮಡಿಹಳ್ಳಿಕೆರೆ 1.2, ತಿಮ್ಲಾಪುರಕೆರೆ 105, ಹುಳಿಯಾರು 99.5, ನಡುವನಹಳ್ಳಿ 9.78, ಜೆ.ಸಿ.ಪುರ 18.2, ಕಿಬ್ಬನಹಳ್ಳಿ ಮತ್ತು ಬಿಳಿಗೆರೆಗೆ 52. ಪಟ್ಟದೇವರಕೆರೆ 20 ರಷ್ಟು ನೀರನ್ನು ಹಾಯಿಸಲಾಗುವುದು ಎಂದರು. ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ಈ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿ ಈ ಭಾಗದ ಜನರಿಗೆ ಮಾತು ಕೊಟ್ಟಂತೆ ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಜನರ ನಂಬಿಕೆಗೆ ಪಾತ್ರರಾಗಿದ್ದಾರೆ, ಇವರಿಗೆ ಸಹಕರಿಸಿದ ಸಚಿವರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ತಾಲ್ಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು. ಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ತಾಲ್ಲೂಕು ಬಿಜೆಪಿ ಕಾರ್ಯದಶರ್ಿ ಸುರೇಶ್ಹಳೇಮನೆ, ಬಸವರಾಜು, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಖಂಡರಾದ ಶ್ರೀನಿವಾಸಮೂತರ್ಿ, ಮೈಸೂರಪ್ಪ, ಗಂಗಾಧರಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಕೆರೆಗಳಿಗೆ ನೀರು ಹಾಯಿಸಲು ರೈತರ ಸಹಕಾರ ಮುಖ್ಯಚಿಕ್ಕನಾಯಕನಹಳ್ಳಿ,; ತಾಲ್ಲೂಕಿನ 27 ಕೆರೆಗಳ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಮಂಜೂರಾತಿ ನೀಡಿದ್ದು, ಈ ಯೋಜನೆಯ ಶೀಘ್ರ ಕಾರ್ಯಗತಕ್ಕೆ ರೈತರ ಸಹಕಾರ ಮುಖ್ಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಯೋಜನೆ ಅನುಷ್ಠಾನ ಹಂತದಲ್ಲಿ ಕೆರೆಗಳಿಗೆ ಹರಿಯುವ ನೀರು ಕೆಲವು ಜಮೀನುಗಳ ಮೂಲಕ ಹರಿಯಲಿದೆ. ಇದಕ್ಕಾಗಿ ತಕರಾರು ಮಾಡದೆ ರೈತರು ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟರೆ ಜಮೀನಿಗೆ ಸಕರ್ಾರ ತಕ್ಕ ಬೆಲೆ ನೀಡಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಿ ನೀರನ್ನು ಹರಿಸಲಿದೆ. ಆಯಾ ಭಾಗದ ರೈತರು ನಾಗರೀಕ ಸಮಿತಿ ರಚಿಸಿಕೊಂಡು ಜಮೀನುಗಳನ್ನು ಬಿಟ್ಟುಕೊಡುವಲ್ಲಿ ಈ ಯೋಜನೆಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು.ನೇತ್ರಾವತಿಯ ನದಿ ತಿರುವ ಯೋಜನೆಗೆ ತಾಂತ್ರಿಕ ಅನುಮತಿ ದೊರಕಿದ್ದು, ಯೋಜನೆಯ ಅನುಮೋದನೆಗೆ ಸಂಸತ್ನಲ್ಲಿ ಅಂಗೀಕಾರಕ್ಕಾಗಿ ಕಳಿಸಲಾಗಿದ್ದು, ಸುಮಾರು 13500 ಕೆರೆಗಳ ನೀರನ್ನು ಹರಿಸಲಾಗುವುದು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ತಾಲ್ಲೂಕು ನೀರಾವರಿ ಹೋರಾಟ ಸಮಿತಿಯ 35ವರ್ಷ ಹೋರಾಟವು ಈಗ ಫಲಿಸಿದ್ದು ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಸಂಸದರಿಗೆ ಅಭಿನಂದಿಸುತ್ತೇವೆ ಎಂದರು.ಗೋಷ್ಠಿಯಲ್ಲಿ ಕುಂದರಹಳ್ಳಿ ರಮೇಶ್, ಬಿ.ಎನ್.ಶಿವಪ್ರಕಾಶ್, ನಾರಾಯಣಗೌಡ, ಮಿಲ್ಟ್ರಿ ಶಿವಣ್ಣ, ಮುಂತಾದವರು ಉಪಸ್ಥಿತರಿದ್ದರು.