Thursday, December 3, 2015


ವಿಕಲ ಚೇತನ ಮಕ್ಕಳಿಗೆ ಧೈರ್ಯ, ಆತ್ಮಸ್ಥೈರ್ಯ ತುಂಬಿ : ಬಿ.ಇ.ಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ : ವಿಕಲ ಚೇತನ ಮಕ್ಕಳಲ್ಲಿ ದೈರ್ಯ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಪೋಷಕರು ವಿಕಲಚೇತನ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆ ನೀಡುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ, ಸಕರ್ಾರ  ವಿಕಲಚೇತನರ ಮಕ್ಕಳಿಗೆ ನೀಡುವ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
  ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಗ್ರಾಮೀಣ ವಿಕಲಚೇತನ ಮಕ್ಕಳಿಗೆ ರೋಟರಿ ಕ್ಲಬ್ ಮುಖಾಂತರ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದಲ್ಲಿ ವಿಕಲಚೇತನ ಮಕ್ಕಳಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ ಗ್ರಾಮೀಣ ಪ್ರದೇಶ ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಸಿ.ಡಿ.ಪಿ.ಓ ಅನಿಸ್ ಕೈಸರ್ ಮಾತನಾಡಿ ವಿಕಲಚೇತನ ಮಕ್ಕಳು ಶಾಪವಲ್ಲ ತಾಯಿ ಗರ್ಭದರಿಸಿರುವ ಸಮಯದಲ್ಲಿ ತಮ್ಮ ಆರೋಗ್ಯ ಹಾಗೂ ಉತ್ತಮ ಆಹಾರ ಸೇವಿಸದೆ ಇರುವುದರಿಂದ ವಿಕಲಚೇತನ ಮಕ್ಕಳು ಹುಟ್ಟುತ್ತಾರೆ ಆದ್ದರಿಂದ ತಾಯಂದಿರು ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ. ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬಿ.ಆರ್.ಸಿ. ತಿಮ್ಮರಾಯಪ್ಪ, ಆರೋಗ್ಯ ಇಲಾಖೆಯ ಶ್ರೀನಿವಾಸ್ ಹಾಗೂ ಮಧುಸೂಧನ್ ಉಪಸ್ಥಿತರಿದ್ದರು.
ಬೆಂಗಳೂರಿನ ಸೌಭಾಗ್ಯಮ್ಮರವರು ಕ್ರೀಡೆಯಲ್ಲಿ ಭಾಗವಹಿಸಿದ್ದ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಿಸದರು. ಹಿಮಾಲಯ ಗಾಮರ್ೆಂಟ್ಸ್ ಮಾಲೀಕ ಗೀಸೂಲಾಲ್ ಮಕ್ಕಳಿಗೆ ಬಟ್ಟೆ ವಿತರಿಸಿದರು. ಶಿಕ್ಷಕಿ ಸರ್ವಮಂಗಳ ಪ್ರಾಥರ್ಿಸಿದರು, ದಾದಾಪೀರ್ ಸ್ವಾಗರಿಸಿದರು. ವಿಶ್ವೇಶ್ವರ ನಿರೂಪಿಸಿದರು.


ನಿರಂತರವಾಗಿ ಸಾಯುತ್ತಿರುವ ಕುರಿಗಳು : ಬೇಸೆತ್ತ ಕುರಿಗಾಹಿಗಳು ಕುರಿಗಳನ್ನು ಬಾವಿಗೆ ಎಸೆದ ಪ್ರಸಂಗ 
ಚಿಕ್ಕನಾಯಕನಹಳ್ಳಿ : ಕಳೆದ 20 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ, ಇದರಿಂದ ನಿರಂತರವಾಗಿ ಕುರಿಗಳು ಸಾಯುತ್ತಿದ್ದು ಬೇಸತ್ತ ಕುರಿಗಾಹಿಗಳು ಸತ್ತ ಕುರಿಗಳನ್ನು ಬಾವಿಗೆ ಎಸೆದಿರುವ ಪ್ರಸಂಗ ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿಯಲ್ಲಿ ನಡೆದಿದೆ.  
  ಇತ್ತೀಚೆಗೆ ಬಿದ್ದ ಮಳೆಯಿಂದ ವಾತಾವರಣ ಕೂಡ ಶೀತಮಯವಾದ್ದರಿಂದಾಗಿ ಕುರಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿವೆ. ಕೆಲವು ದಿನಗಳಿಂದ ಕುರಿಗಳಿಗೆ ಜ್ವರದ ಬಾದೆಯ ತೀವ್ರತೆಯಿಂದಾಗಿ ನೀಲಿನಾಲಿಗೆ ರೋಗ, ಗೆಣ್ಣುಹುಣ್ಣು ಕುಂಡುರೋಗ, ಗಂಡಲುಬೇನೆ, ಕರಳುಬೇನೆಯಂತಹ ರೋಗಗಳಿಗೆ ತುತ್ತಾಗಿ ದಿನಂಪ್ರತಿ ಕುರಿಗಳು ಸಾವನ್ನಪ್ಪುತ್ತಿವೆ. 
ಕುರಿ, ಆಡು, ಮೇಕೆ ಸಾಕಾಣಿಕೆ ಪ್ರೋತ್ಸಾಹಿಸುತ್ತಿರುವ ಸಕರ್ಾರ ನುರಿತ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳದೆ ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಸದೆ ಕುರಿಗಾಹಿಗಳನ್ನು ನಿರ್ಲಕ್ಷಿಸಿ ಕುರಿಗಳ ಮಾರಣ ಹೋಮಕ್ಕೆ ಸಕರ್ಾರ ನೇರಕಾರಣ ಎಂದು ಕುರಿಗಾಹಿಗಳು ಆರೋಪಿಸಿದ್ದಾರೆ. 
ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿ ಗ್ರಾಮದ ಕುರಿಗಾಹಿ ಜಗದೀಶ್ ಹೇಳುವಂತೆ ನಮ್ಮ ಗ್ರಾಮದಲ್ಲಿ 60 ಮನೆಗಳಿದ್ದು ಎಲ್ಲರೂ ಕುರಿಗಾಹಿಗಳಾಗಿದ್ದೇವೆ ನಮ್ಮ ಬದುಕು ನಿರ್ವಹಣೆ ಕುರಿ ಸಾಕಾಣಿಕೆಯಿಂದ ನಡೆಯಬೇಕಿದೆ ಒಂದೊಂದು ಕುಟುಂಬದಲ್ಲಿ 100ರಿಂದ 150 ಕುರಿಗಳಿದ್ದು ಇವುಗಳಿಗೆ ರೋಗ ಕಾಣಿಸಿಕೊಂಡಿದೆ, ಈ ವಿಷಯವನ್ನು ಪಶು ಇಲಾಖೆಯ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಸೂಕ್ತ ಲಸಿಕೆ ಹಾಕುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕುರಿಗಾಯಿ ಬಸವಯ್ಯ ಮಾತನಾಡಿ ನಮ್ಮ ಕುರಿಗಳನ್ನು ರಕ್ಷಿಸಿಕೊಳ್ಳಲು ಹತ್ತಿರದ ಪಶು ಆಸ್ಪತ್ರೆಗೆ  ಹೋದರೆ ವೈದ್ಯರಿರೋಲ್ಲ ಆಸ್ಪತ್ರೆಯಲ್ಲಿ ಔಷಧಿ ಕೇಳಿದರೂ ಬಂದಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ,  ಹೆಚ್ಚು ಬೆಲೆ ನೀಡಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧಿ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷ ಹಾಲ್ದೇವರಹಟ್ಟಿ ಗೋವಿಂದಪ್ಪ ಮಾತನಾಡಿ, ಔಷಧಿ ಬಂದಿದ್ದರೂ ಸಕರ್ಾರದ ಮಟ್ಟದಲ್ಲಿ ಸರಬರಾಜು ಆಗುತ್ತಿಲ್ಲ ಸಕರ್ಾರಗಳ ಪರಿಶಿಷ್ಟ ಜಾತಿ ಪಂಗಡದ ವರ್ಗಗಳಿಗೆ ತಾಲ್ಲೂಕಿನಾದ್ಯಾಂತ 1 ಲಕ್ಷದ 60ಸಾವಿರಕ್ಕೂ ಹೆಚ್ಚು ಕುರಿಗಳಿದ್ದು ಅತಿ ಮಳೆಯಿಂದಾಗಿ ಕುರಿ ಮೇಕೆಗೆ ಕಾಲುಬಾಯಿ ಜ್ವರ ತಾಲ್ಲೂಕಿನಾದ್ಯಂತ ಕಾಣಿಸಿಕೊಂಡಿದೆ, ರೋಗ ನಿಯಂತ್ರಣಕ್ಕೆ ಬೇಕಾದ ಔಷಧಿಯನ್ನು ಸರಬರಾಜು ಮಾಡದೇ ಇರುವುದರಿಂದ ಕುರಿಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ.
ಸಕರ್ಾರ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕೆ ರಕ್ಷಾ ಬ್ಲೂವ್ಯಾಕ್ಸಿನ ಎಂಬ ಔಷಧಿ ಸರಬರಾಜು ಮಾಡುತ್ತಿಲ್ಲ, ಜಾನುವಾರುಗಳಿಗೆ ಕೆಚ್ಚಲು ಬಾಯಿ ರೋಗ ಬಂದು ಸಾಯುವಂತಾದರೂ ಇದಕ್ಕೂ ಅಗತ್ಯ ಔಷಧಿಗಳನ್ನು ಪೂರೈಸುತ್ತಿಲ್ಲ, ಪಶು ಆಸ್ಪತ್ರೆಗೆ ಔಷಧಿ ಸರಬರಾಜು ಮಾಡುವುದಾಗಲಿ, ವೈದ್ಯರ ನೇಮಿಸುವುದಾಗಲೀ, ಇದಾವುದನ್ನೂ ಮಾಡದೇ ಕುರಿಗಾಹಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಹೀಗಾಗಿ ರೈತರು ನೆಮ್ಮದಿಯ ಜೀವನ ನಡೆಸುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಸ್ಥಳಕ್ಕೆ ಪಶು ಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ಕಾಂತರಾಜು ಭೇಟಿ ನೀಡಿ, ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಮಳೆ ನೀರಿನಿಂದ ನೀರಿನಿಂದ ಕ್ಯೂಲಿಕೈಡ್ ಮಿಡ್ಜಿಸ್ ಎಂಬ ನೊಣ ಉತ್ಪತ್ತಿಯಾಗಿ ನೀರು ಕುಡಿಯುವುದರಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ, ಗಂಟಲುಬೇನೆ, ಗೆಣ್ಣುಹುಣ್ಣು ಮುಂತಾದ ರೋಗ ಕಾಣಿಸಿಕೊಳ್ಳುತ್ತಿದೆ, ರೋಗಗಳಿಗೆ ಲಸಿಕೆ ಕೊರತೆಯಿಂದಾಗಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ, 10 ತಿಂಗಳಿನಿಂದ ಪಶು ವೈದ್ಯ ಆಸಪತ್ರೆಗೆ ಔಷಧಿ  ಸರಬರಾಜಾಗಿಲ್ಲ, ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು ಏಕಕಾಲದಲ್ಲಿ ತಾಲ್ಲೂಕಿನ ಎಲ್ಲಾ ಕಡೆ ಸಂಚರಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ, ರೈತರು ಕೂಡ ನಮ್ಮೊಂದಿಗೆ ಸಹಕರಿಸಬೇಕು, ಜೋಗು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದು, ನಿಂತ ನೀರನ್ನು ಕುಡಿಸದಂತೆ ಕುರಿಗಾಯಿಗಳು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

 ರೈತ ಆತ್ಮಹತ್ಯೆ

ಚಿಕ್ಕನಾಯಕನಹಳ್ಳಿ,ಡಿ.03 : ತಾಲ್ಲೂಕಿನ ಪಂಕಜನಹಳ್ಳಿಯಲ್ಲಿ ರೈತ ಮಲ್ಲೇಶ್(33) ಸಾಲ ಭಾದೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಮಲ್ಲೇಶ್ ಜೆ.ಸಿ.ಪರ ಕೆ.ಜಿ.ಬಿ.ಯಲ್ಲಿ 30ಸಾವಿರ ರೂ, ಜೆ.ಸಿ.ಪುರ ವಿ.ಎಸ್.ಎಸ್.ಎನ್ಲ್ಲಿ 15ಸಾವಿರ ಹಾಗೂ ಕೈ ಸಾಲ 75ಸಾವಿರ ಮಾಡಿಕೊಂಡು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.