Monday, December 31, 2012ಯುವತಿಯ ಮೇಲೆ ಅತ್ಯಾಚಾರ: ಶೀಘ್ರ, ಉಗ್ರ ರೂಪದ ಶಿಕ್ಷೆಗೆ ಒತ್ತಾಯಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
                         
ಚಿಕ್ಕನಾಯಕನಹಳ್ಳಿ,ಡಿ.31 : ಮಹಿಳೆಯರಿಗೆ ಪುರುಷರಿಂದ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅಂಜದೆ ಅನ್ಯಾಯದ ವಿರುದ್ದ ಹೋರಾಡಿ ಇಂತಹ ಹೋರಾಟಕ್ಕೆ ಎಲ್ಲಾ ಮಹಿಳಾ ಸಂಘಟನೆಗಳು ಬೆಂಬಲಿಸುತ್ತವೆ ಎಂದು ಸೃಜನಾ ಸಂಘಟನೆಯ ಎನ್.ಇಂದಿರಮ್ಮ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಸೃಜನಾ ಸಂಘಟನೆ ಹಾಗೂ ಪುರಸಭಾ ಸದಸ್ಯೆಯರು, ಇನ್ನರ್ವೀಲ್ ಸಂಸ್ಥೆ, ಅಕ್ಕಮಹಾದೇವಿ ಮಹಿಳಾ ಸಮಾಜ, ಶಿವಶಕ್ತಿ ಸಂಘ, ವಾಸವಿ ಮಹಿಳಾ ಸಮಾಜ, ತಾಲ್ಲೂಕು ವಿಜ್ಞಾನ ಕೇಂದ್ರ ಹಾಗೂ ಕಾಲೇಜು ವಿದ್ಯಾಥರ್ಿಗಳು ದೆಹಲಿಯ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾಥರ್ಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸಕರ್ಾರಕ್ಕೆ ಮನವಿ ಪತ್ರ ಅಪರ್ಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ಸ್ತ್ರೀ ಕುಲದ ಮೇಲೆ ನಡೆದ ಅಮಾನುಷ ಹಲ್ಲೆ, ಈ ಕೃತ್ಯ ಎಸಗಿದ ಎಲ್ಲಾ ಅಪರಾಧಿಗಳಿಗೂ ಗರಿಷ್ಠ ಮಟ್ಟದ ಶಿಕ್ಷೆಯಾಗಬೇಕು ಹಾಗೂ ಇಂತಹ ಪ್ರಕರಣಗಳಲ್ಲಿ ಸಕಾರಿ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸುವ ಜೊತೆಗೆ ಆರೋಪಿಗಳ ಮೇಲೆ ತೀವ್ರವಾದ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಮಹಿಳೆಯರ ಮೇಲೆ ಕುಕೃತ್ಯ ನಡೆಸುವ ಆರೋಪಿಗಳು ಎಷ್ಟೇ ಬಲಾಡ್ಯರಾಗಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಭೋದನೆಯಾಗಬೇಕು ಎಂದರು.
ಹುಳಿಯಾರಿನ ಇನ್ನರ್ವೀಲ್ ಕ್ಲಬ್ನ  ಜಯಲಕ್ಷ್ಮೀ ಮಾತನಾಡಿ ನನ್ನ ಗಂಡನಿಂದ ನನಗೂ ಆಸಿಡ್ ಎರಚುವ ಮೂಲಕ ಅನ್ಯಾಯವಾಗಿತ್ತು ಎಂದರಲ್ಲದೆ, ರಾಯಚೂರಿನಲ್ಲಿ ಅತ್ಯಾಚಾರ ನಡೆಸಿದ ವ್ಯಕ್ತಿಯೊಬ್ಬ ಹುಡುಗಿಗೆ ಬೆದರಿಕೆ ಹಾಕಿದ್ದರು ಎರಡು ದಿನಗಳ ನಂತರ ಈ ವಿಷಯ ತಿಳಿದು ಮಹಿಳೆಯರೆಲ್ಲ ಸೇರಿ ಪ್ರತಿಭಟನೆ ನಡೆಸಿ ಈ ಕೃತ್ಯದ ವಿರುದ್ದ ಹೋರಾಡಿ ಜಯಗಳಿಸಿದ್ದೆವು, ಇದೇ ರೀತಿ ಅನ್ಯಾಯದ ನಡೆದ ಮಹಿಳೆಯರು ಹೆದರದೆ ವಿಷಯವನ್ನು ತಿಳಿಸಿದರೆ ನ್ಯಾಯಕ್ಕಾಗಿ ಹೋರಾಡಬಹುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಅತ್ಯಾಚಾರದಂತಹ ಹೇಯ ಕೃತ್ಯ ನಡೆಯುತ್ತಿರುವುದು ಭಾರತೀಯ ಹೆಣ್ಣು ಮಕ್ಕಳ ದೌಭರ್ಾಗ್ಯ, ಪುಸ್ತಕದಲ್ಲಿ ಮಾತ್ರ ಹೆಣ್ಣಿಗೆ ಉತ್ತಮ ಸ್ಥಾನಮಾನವನ್ನು ಸಕರ್ಾರ ಕಲ್ಪಿಸುತ್ತಿದೆ, ಆದರೆ ಭದ್ರತೆ ದುಷ್ಠಿಯಲ್ಲಿ ರಕ್ಷಣೆ ದೊರಕುತ್ತಿಲ್ಲ ಎಂದ ವಿಷಾದಿಸಿದರು.
ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ ಮಾತನಾಡಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು, ಮಹಿಳೆಯರ ಗೌರವ ಪೂರ್ಣ ಬದುಕಿಗೆ ಸಾಧ್ಯವಾಗುವಂತೆ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಸಶಕ್ತಿ ಕಾನೂನು ಜಾರಿ ಮಾಡಿ ಪೋಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಅತ್ಯಾಚಾರಿಗಳು ಭಾರತದ ಉಗ್ರರು ಇವರಿಗೆ ಸಕರ್ಾರ ಉಗ್ರಶಿಕ್ಷೆ ನೀಡಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ  ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸೃಜನ ಸಂಘದ ಅಧ್ಯಕ್ಷೆ ಎಲ್.ಜಯಮ್ಮ, ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ಭವಾನಿಜಯರಾಂ, ತೇಜಾವತಿನರೇಂದ್ರಬಾಬು, ಪುಷ್ಪಶಿವಣ್ಣ, ಚಂದ್ರಿಕಾಮೂತರ್ಿ, ಧರಣಿಲಕ್ಕಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಜ್ಞಾನ ಸಂಘದ ರಾಮಕೃಷ್ಣಪ್ಪ,  ಸೇರಿದಂತೆ ಹಲವರಿದ್ದರು.
                         (ಸುದ್ದಿ 2)
ಜೆ.ಡಿ.ಯು.ವತಿಯಿಂದ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.31 : ದೆಹಲಿಯಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಸಾವಿನಂತಹ ಘಟನೆಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿದ್ದು ಕೇಂದ್ರ ಸಕರ್ಾರ ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದರಲ್ಲಿ ವಿಫಲವಾಗಿದ ಎಂದು ತಾಲ್ಲೂಕು ಸಂಯುಕ್ತ ಜನತಾದಳ(ಜೆ.ಡಿ.ಯು) ಪ್ರತಿಭಟನೆ ನಡೆಸಿತು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೆದಾರ್ ಬೊಮ್ಮಯ್ಯರಿಗೆ ಮನವಿ ಪತ್ರ ಸಲ್ಲಿಸಿದರು.
ಇಂದು ಮಹಿಳೆಯರ ರಕ್ಷಣೆಯ ಬಗ್ಗೆ ಸಕಾರ ಭಾರತೀಯ ದಂಡ ಸಂಹಿತೆಯು ಕಲಂನನ್ನು ತಿದ್ದುಪಡಿ ಮಾಡಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಹಾಗೂ ಮರಣ ದಂಡನೆಯಂತಹ ಶಿಕ್ಷೆಯನ್ನು ತರಬೇಕೆಂದು ಒತ್ತಾಯಿಸಿದರು.
ತುಮಕೂರು ಜೆಡಿಯು ಅಧ್ಯಕ್ಷ ಕೆ.ಜಿ.ಎಲ್.ರವಿ, ತಾಲ್ಲೂಕು ಸಂಚಾಲಕ ಪ್ರಕಾಶ್ಯಾದವ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
                      ಕೃಷಿ, ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ
                                   
ಚಿಕ್ಕನಾಯಕನಹಳ್ಳಿ,ಡಿ.31 : ಕೃಷಿ ಮತ್ತು ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ,  ಇವರೆಡನ್ನು ಜೊತೆಯಲ್ಲಿ ತೆಗೆದುಕೊಂಡು ಹೋದರೆ ರೈತರ ಆಥರ್ಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ಕೃಷಿ ತಜ್ಞ ಡಾ.ಶಶಿಕಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಜಾಗೃತಿ ಆಂದೋಲನ ಹಾಗೂ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾವಯುವ ಕೃಷಿಯಲ್ಲಿ ಮಣ್ಣಿನ ಅಸ್ಥಿತ್ವವಿರುತ್ತದೆ, ರಾಸಾಯನಿಕಗಳನ್ನು ಹೆಚ್ಚು ಬಳೆಸಿದರೆ ಮಣ್ಣು ಈ ಅಸ್ಥಿತ್ವವನ್ನು ಕಳೆದುಕೊಳ್ಳದಂತೆ ಎಂದ ಅವರು, ಹೆಚ್ಚು ಜಮೀನು ಹೊಂದಿರುವ ರೈತರು ತಮ್ಮ ಕೃಷಿ ಜೊತೆಗೆ ಖುಷ್ಕಿಗೆ, ತೋಟಗಾರಿಕೆಗೆ, ಹೈನುಗಾರಿಕೆಗೆ ಹಾಗೂ ಇತ್ಯಾದಿ ಉಪಕಸುಬುಗಳಿಗೆ ಜಮೀನನ್ನು ಮೀಸಲಿಟ್ಟರೆ ಕೃಷಿಯೊಂದಿಗೆ ಉತ್ತಮ ಲಾಭ ಪಡೆಯಬಹುದಾಗಿ ಹಾಗೂ ಹೈನುಗಾರಕೆ ಕೃಷಿ ಮಾಡುವಾಗ ಸುಧಾರಿತ ಹೈನುಗಾರಿಕೆ ಮಾಡಲು ತಿಳಿಸಿದರು.
ಸಮಗ್ರ ಕೃಷಿ ಪದ್ದತಿ ಜೊತೆಗೆ ಎಲ್ಲಾ ಕೃಷಿಯನ್ನು ಅಳವಡಿಸಿಕೊಂಡು ಸಾವಯುವ ಕೃಷಿ ಮಾಡಲು ಹಾಗೂ ಕೃಷಿಯಲ್ಲಿ ಒಂದೇ ರೀತಿಯ ಬೆಳೆ ಬೆಳೆಯುವ ಬದಲು ಪರಿವರ್ತನಾ ಬೆಳೆ ಮಾಡಲು ತಿಳಿಸಿದರು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ಪಾದನೆ ಹೆಚ್ಚಿಸಬಹುದು ಎಂದರು.
ದೇಶದಲ್ಲಿ ಕಾಡು ನಾಶವಾಗಿರುವುದರಿಂದ ಚರ್ಮರೋಗ ರಕ್ತದೊತ್ತಡ ದಂತಹ ಖಾಯಿಲೆಗಳು ಹೆಚ್ಚುತ್ತಿದೆ. ದೇಶದಲ್ಲಿ ಶೇ.12 ರಷ್ಟು ಮಾತ್ರ ಕಾಡಿರುವುದರಿಂದ ಮಳೆ ಕಡಿಮೇಯಾಗಿ ಕೃಷಿಗೆ ಹಿನ್ನೆಡಿಯಾಗುತ್ತಿದೆ. ಶೇ.32 ರಷ್ಟು ಜನಕ್ಕೆ ಅಸ್ತಮಾ ರೋಗವಿದೆ. ಕಾಡು ಕೃಷಿ ನಶಿಸಿರುವುದಿರಿಂದ ಜಮೀನು ಕೃಷಿ ನಶಿಸಲು ಕಾರಣವಾಗಿ ಪ್ರತಿ ರೈತರು ತಮ್ಮ ತೋಟಗಳಲ್ಲಿ 2 ರಿಂದ 3 ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಜೇನು ಕೃಷಿಗೆ ಹೆಚ್ಚು ಒತ್ತು ನೀಡಿ ಜೇನು ಸೇವಿಸುವುದರಿಮದ ಅನೇಕ ರೋಗಗಳು ಮಾಯವಾಗುತ್ತದೆ. ಪಟ್ಟಣಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ ಇದರಿಂದ ಮನುಷ್ಯ ಆರೋಗ್ಯ ಹದಗೆಡುತ್ತಿದೆ. ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಮಡು ರೈತರು ತೋಟಗಾರಿಕೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೀನುಸಾಕಾಣಿಕೆ ಹಾಗೂ ತರಕಾರಿ ಜೊತೆಯಲ್ಲಿ ಸೊಪ್ಪು ಬೆಳೆಯಬೇಕೆಂದು ಸಲಹೆ ನೀಡಿದರು. ನಮ್ಮ ದೇಶದಲ್ಲಿ ಆಹಾರ ಪದ್ದತಿ ಸರಿ ಇಲ್ಲದೆ ವಿದೇಶಿ ಆಹಾರದ ದಾಸರಾಗುತ್ತಿರುವುದರಿಮದ ಇನ್ನು 5 ವರ್ಷಗಳಲ್ಲಿ ದೇಶದಲ್ಲಿ ಪ್ರತಿಯೊಂದು ಮನೆಗಳಲ್ಲಿ ರೋಗದ ಕೇಂದ್ರಗಳಾಗುವುದರಲ್ಲಿ ದೂರವಿಲ್ಲ ಆದ್ದರಿಂದ ಭಾರತದ ಆಹಾರ ಪದ್ದತಿಯನ್ನು ಅಳವಡಿಕೊಸಿಕೊಳ್ಳಬೇಕೆಂದು ತಿಳಿಸಿದರು.
ಜಿ.ಪಂ. ಸದಸ್ಯ ಲೋಹಿತಾಬಾಯಿ ಮಾತನಾಡಿ ನಗರ ಪ್ರದೇಶಗಳಲ್ಲಿ ಗ್ರಾಮೀಣ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ನಗರದಲ್ಲಿನ ಆಹಾರ ಪದ್ದತಿಯನ್ನು ಅಳವಡಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ರೈತರು ಬೆಳೆದ ಬೆಳೆಗೆ ದೇಶದಲ್ಲಿ ಬೆಲೆ ಇಲ್ಲ. ವಿದೇಶಗಳಿಂದ ಆಮದು ಮಾಡಿಕೊಂಡ ನಗರ ಪ್ರದೇಶಗಳಲ್ಲಿ ಬಳಸುತ್ತಿರುವುದು ವಿಷಾದನೀಯ, ಸಕರ್ಾರ ಸಾವಯವ ಕೃಷಿಗೆ ಸಕರ್ಾರ ಹೆಚ್ಚು ಒತ್ತು ನೀಡುತ್ತಿದ. ಆದ್ದರಿಂದ ರೈತರು ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ ಹಾಕಿ ಬೆಳೆ ಬೆಳೆಯುವುದನ್ನು ರೂಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು
ಡಾ|| ಮಮತ ಮಾತನಾಡಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಉತ್ಕೃಷ್ಟ ದಜರ್ೆಯ ಆಹಾರವಾದ ಆರ್ಕ, ನವಣೆ ಬಡವರ ಆಹಾರ ಈಗ ಶ್ರೀಮಂತರ ಆಹಾರವಾಗುತ್ತಿದೆ. ಈ ಎರಡು ಆಹಾರದಲ್ಲಿ ಮನುಷ್ಯನಿಗೆ ಬೇಕಾದ ಇನ್ಸುಲಿನ್ ಉತ್ಪತ್ತಿಮಾಡುವ ಗುಣವಿದೆ. ಆರ್ಕದಲ್ಲಿ ರೋಗ ನಿರೋಧಕ ಅಂಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ನಿಂಗಮ್ಮ ರಾಮಯ್ಯ, ತಾ.ಪಂ. ಉಪಾಧ್ಯಕ್ಷ ಲತಾಕೇಶವಮೂತರ್ಿ, ಲತಾವಿಶ್ವೇಶ್ವರಯ್ಯ, ತೀರ್ಥಪುರ ಗ್ರಾ.ಪಂ.ಅಧ್ಯಕ್ಷೆ ಪದ್ಮಮ್ಮ, ಕೃಷಿ ಅಧಿಕಾರಿ ಕೃಷ್ಣಪ್ಪ, ಗೋಪಾಲನಹಳ್ಳಿ ರಘು, ನಿವೃತ್ತ ಕೃಷಿ ಅಧಿಕಾರಿ ಗಂಗಾಧರಪ್ಪ, ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

                     
ಕುಪ್ಪೂರು ಗದ್ದಿಗೆ ಮಠದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.31 : ಮನುಷ್ಯ ಚಾರಿತ್ರ್ಯ ಹೀನನಾಗದೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕೆಂದು ಹಾರನಹಳ್ಳಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮರುಳ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನಜಾಗೃತಿ ಭಾವೈಕ್ಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಸಮಾಜದಲ್ಲಿ ಬೇಗ ಶ್ರೀಮಂತರಾಗಬೇಕೆಂಬ ಆಸೆಯಿಂದ  ಬಹುತೇಕರು ಕೆಟ್ಟ ಮಾರ್ಗದಲ್ಲಿ ಹಣ ಸಂಪಾದನೆಗಿಳಿದಿದ್ದಾರೆ. ಅನ್ಯ ಮಾರ್ಗದಲ್ಲಿ ಹಣ ಆಸ್ತಿ ಸಂಪಾದನೆಗೆ ಹೋದರೆ ಜೀವನದ ನೆಮ್ಮದಿ ಮರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಾಜ-ಮಹಾರಾಜರ ಕಾಲದಲ್ಲಿ ಕಾವಿಧಾರಿಗಳಿಗೆ, ಸನ್ಯಾಸಿಗಳಿಗೆ ಹೆಚ್ಚಿನ ಮಹತ್ವವಿತ್ತು. ಆದರೆ ಇಂದು ಸನ್ಯಾಸಿಗಳ ಬಗ್ಗೆಯೂ ಅಪಸ್ವರ ಕೇಳಿ ಬರುತ್ತಿರುವುದು ದುದರ್ೆವವೆನಿಸಿದೆ. ಸನ್ಯಾಸಿಯೆಂದರೆ ತ್ಯಾಗದ ಸಂಕೇತ. ಮಠಾಧೀಶರುಗಳು ಹರಿಷಡ್ವರ್ಗಗಳನ್ನು ಜಯಿಸಿ ಸಾತ್ವಿಕ ಜೀವನ ನಡೆಸಬೇಕು ಎಂದರು.ದಿನ ಸಮಾಜದಲ್ಲಿ ದಿನನಿತ್ಯ ಅನ್ಯಾಯ ಮೋಸ-ಕ್ರೌರ್ಯಗಳು ಹೆಚ್ಚಾಗುತ್ತಿವೆ ಎಂದ ಅವರು ಈ ಬಗ್ಗೆ ಜನಜಾಗೃತಿ ಮೂಡಿಸಲು ಮಠಾಧೀಶರು ಮುಂದಾಗಬೇಕೆಂದರು. ತುಮಕೂರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಭಗವಂತನು ಸೃಷ್ಠಿಕರ್ತನೇ ಹೊರತು ಲಯ ಕರ್ತನಲ್ಲ. ಪ್ರಳಯಕ್ಕೆ ಭೀತಿ ಪಡುವುದನ್ನು ಬಿಟ್ಟು  ಕಾನೂನಿಗೆ ಭೀತಿ ಪಡಿ. ಕಾನೂನಿನ ಬಗ್ಗೆ ಹೆದರಿಕೆಯಿದ್ದರೆ ಸಮಾಜ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇಂದು ಧರ್ಮವೂ ವ್ಯವಹಾರವಾಗುತ್ತಿದ್ದು, ಭಕ್ತಿ ಭಾವನೆಗಳು ವಾಣಿಜ್ಯೀಕರಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.ುಡಿಯೂರು ರಂಭಾಪುರಿ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ , ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರಿಗೆ ಕುಪ್ಪೂರು ಮರುಳ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಸಿಪಿಐ ಲೋಕೇಶ್ವರ್ ಶ್ರೀ ಕುಪ್ಪೂರೇಶ್ವರ ವಡಪುಗಳು ವಿಸಿಡಿ ಬಿಡುಗಡೆಗೊಳಿಸಿದರು.ುಪ್ಪೂರು ಈಶಾ ಮರುಳ ಸಿದ್ಧೇಶ ಭಜನಾಗೀತೆಗಳನ್ನು ಬಿಡುಗಡೆಮಾಡಲಾಯಿತು. ಮಾಜಿ ಶಾಸಕ ಎಸ್.ಪಿ. ಗಂಗಾಧರಪ್ಪ, ಬೆಂಗಳೂರಿನ ಉಮಾಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದಯಾಶಂಕರ್ ನಿರೂಪಿಸಿದರು. ಕೋಟೆ ನಾಗರಾಜ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

             aPÀÌ£ÁAiÀÄPÀ£ÀºÀ½îAiÀÄ C¨sÁ«¥À ªÀw¬ÄAzÀ zɺÀ°AiÀÄ ¥ÁågÁªÉÄrPÀ¯ï 
             «zÁåyð¤ CvÁåZÁgÀPÉÆ̼ÀUÁV ¸ÁªÀ£ÀߦàzÀPÁÌV ªÉÆA§wÛ ¨É¼ÀV¹ 
             ±ÀæzÁÝAf° C¦ð¸À¯Á¬ÄvÀÄ. F ¸ÀAzÀ¨sÀðzÀ°è C¨sÁ«¥À vÁ.¥ÀæªÀÄÄSï 
            ZÉÃvÀ£ï¥Àæ¸Ázï, vÁ.¨sÁd¥À CzsÀåPÀë «Ä°Ö粪ÀtÚ, PÀgÀªÉà CzsÀåPÀë 
            ¹.n.UÀÄgÀĪÀÄÆwð, C¨sÁ«¥À PÁAiÀÄðzÀ²ð ¢°Ã¥ï, «zÁåyðUÀ¼ÀÄ ¨sÁUÀªÀ»¹zÀÝgÀÄ.

           
2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಡಿ.31 : ಚಿಕ್ಕನಾಯಕನಹಳ್ಳಿ ವಿಧಾನಸಭಾಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜೆ.ಡಿ.ಎಸ್ ಪಕ್ಷದ ವತಿಯಿಂದ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಇದೇ ಜನವರಿ 1ರಂದು ಅಭಿನಂದನೆ ಸಲ್ಲಿಸಲಿದ್ದಾರೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕರಮ ನಡೆಯಲಿದ್ದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪ್ರೇಮ ಮಹಾಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಶಿರಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರು, ಪುರಸಭಾಧ್ಯಕ್ಷರು, ಪುರಸಭಾ ಸದಸ್ಯರು, ಸಂಘಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.