Wednesday, October 10, 2012


  1. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುವಾಗ ಅಲ್ಲಿನ ಬೆಳೆಗೆ ನೀರು ಬಿಡುಎನ್ನುವುದು  ಎಂತಹ ನ್ಯಾಯ: ಡಾ.ಯತೀಶ್ವರಶಿವಾಚಾರ್ಯಸ್ವಾಮಿ

  • ವಿದ್ಯಾಥರ್ಿಗಳಿಗೂ ತಟ್ಟಿದ ಕಾವೇರಿ ಹೋರಾಟದ ಕಾವು
  • ಮಾನವ ಸರಪಳಿ ರಚಿಸಿ,  ರಸ್ತೆತಡೆ.


 ಚಿಕ್ಕನಾಯಕನಹಳ್ಳಿ,ಅ.08 ; ಹಳೇ ಮೈಸೂರು ಪ್ರಾಂತ್ಯದವರು ಕುಡಿಯುವ ನೀರಿಗಾಗಿ ನಂಬಿರುವುದೇ ಕಾವೇರಿ ನೀರನ್ನು, ನಾವಿಲ್ಲಿ ಕುಡಿಯುವ ನೀರಿಗೇ ಪರಿತಪಿಸುತ್ತಿರುವಾಗ ತಮಿಳುನಾಡಿನ ಜನಕ್ಕೆ  ಬೇಸಾಯಕ್ಕೆ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ಸಂಘಟನೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಬಾರಿಯ ಬರಗಾಲದ ಸಂದರ್ಭದಲ್ಲಿ ನೀರಿನ  ವಿಷಯವಾಗಿ ಜಯಲಲಿತಾ ಸಮಸ್ಯೆ ಉಂಟು ಮಾಡುತ್ತಲೇ ಇರುತ್ತಾರೆ, ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನಮ್ಮವಳು, ನಮಗಾಗಿ ಮೀಸಲಿರುವಳು, ಕೇಂದ್ರ ಸಕರ್ಾರ ಕಾವೇರಿ ವಿಚಾರವಾಗಿ ತಮಿಳುನಾಡಿನ ಪರ ವಹಿಸುವ ಮೂಲಕ  ರಾಜ್ಯಕ್ಕೆ ಮೋಸ ಮಾಡುತ್ತಲೇ ಬಂದಿದ್ದಾರೆ ಎಂದರು.
ಭಾಜಪ ಮುಖಂಡ  ಶಿವಣ್ಣ ಮಾತನಾಡಿ, ಕೇಂದ್ರ ಸಕರ್ಾರ ರಾಜಕೀಯ ಉದ್ದೇಶದಿಂದ ಕಾವೇರಿ ನದಿ ನೀರನ್ನು ಬಳಸಿಕೊಂಡಿರುವುದು ಖಂಡನೀಯವಾಗಿದೆ, ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದರೆ ನೀರಿಗಾಗಿ ರಾಜ್ಯಾದ್ಯಂತ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ, ಈಗಾಗಲೇ ತಮಿಳುನಾಡಿಗೆ ಬಿಟ್ಟಿರುವ ನೀರಿನಿಂದ ಕಬಿನಿ ಜಲಾಶಯ ಖಾಲಿಯಾಗುವ ಭೀತಿ ಎದುರಾಗಿದೆ, ಇದರಿಂದ ರೈತರಿಗೆ ತೀವ್ರ ರೀತಿಯ ಸಂಕಷ್ಟ ಎದುರಾಗಿ ಮುಂದಿನ ದಿನಗಳಲ್ಲಿ ಹನಿ ನೀರಿಗೂ ಇಲ್ಲಿನ ಜನ ಪರದಾಡುವ ಸ್ಥಿತಿ ಎದುರಾಗಲಿದೆ ಎಂದರು. 
ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೂ ಸಹ ಕೇಂದ್ರ ಸಕರ್ಾರ ತಮಿಳುನಾಡಿಗೆ ನೀರನ್ನು ಬಿಡಬೇಕು ಎಂದು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದರಲ್ಲದೆ,  ಜನವರಿ ನಂತರ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಂಚಾಲಕ ಜಾಕಿರ್ ಹುಸೇನ್, ಕಾರ್ಯಕರ್ತರುಗಳಾದ ರವಿ, ಮಧು, ಸುಧಿಂದ್ರ, ಕರವೇ ಕಾರ್ಯಕರ್ತರಾದ ಮಧು, ಸೇರಿದಂತೆ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡು , ಮಾನವ ಸರಪಳಿ ರಚಿಸಿದರು, ರಸ್ತೆ ತಡೆ ನಡೆಸಿದರು.