Sunday, February 6, 2011


ತಾಲೂಕಿನಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘದ ಬೃಹತ್ ಬಹಿರಂಗ ಸಭೆ
ಚಿಕ್ಕನಾಯಕನಹಳ್ಳಿ,ಫೆ.06: ತಾಲೂಕು ಸಕರ್ಾರಿ ನೌಕರರ ಬೃಹತ್ ಬಹಿರಂಗ ಸಭೆಯನ್ನು ಇದೇ 9ರ ಬುಧವಾರ ಮಧ್ಯಾಹ್ನ 1.35ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದ್ದಾರೆ.
ಬಹಿರಂಗ ಸಭೆಯನ್ನು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ನೌಕರರ ಹಲವು ಬೇಡಿಕೆಗಳಾದ ಕೇಂದ್ರ ಸಕರ್ಾರ ತನ್ನ ನೌಕರರಿಗೆ ಜಾರಿಗೊಳಿಸಿರುವ ವೇತನ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ರಾಜ್ಯ ಸಕರ್ಾರಿ ನೌಕರರಿಗೂ ಜಾರಿಗೊಳಿಸುವುದು, ಕೇಂದ್ರ ಸಕರ್ಾರಕ್ಕನುಗುಣವಾಗಿ ರಾಜ್ಯ ಸಕರ್ಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡುವುದು, ವಗರ್ಾವಣೆ ಬಗ್ಗೆ ಕಾಯಿದೆ ರೂಪಿಸುವುದು, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸಕರ್ಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡುವುದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಕರ್ಾರಿ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸುವುದು, ರಾಜ್ಯ ಸಕರ್ಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಮೀಸಲಾತಿ ಪಡೆಯಲು ವರಮಾನದ ಮಿತಿ ಬಹಳ ಹಿಂದೆ ನಿಗದಿಪಡಿಸಲಾಗಿದ್ದು ಕೇಂದ್ರ ಸಕರ್ಾರದ ಮಾದರಿಯಲ್ಲಿಯೇ ವರಮಾನ ಮಿತಿ ಹೆಚ್ಚಿಸುವುದು, ಸೇವಾವಧಿಯ ಅಂತಿಮ ವರ್ಷದ ಸೇವೆಯನ್ನು ಪರಿಗಣಿಸಿ ವಾಷರ್ಿಕ ಮುಂಬಡ್ತಿಯನ್ನು ನೀಡುವುದು, ಸ್ಥಗಿತ ವೇತನ ಬಡ್ತಿಗಳನ್ನು ಹೆಚ್ಚಿಸುವುದು, ಸ್ಥಗಿತ ವೇತನ ಮುಂಬಡ್ತಿಗಳನ್ನು ವೇತನ ಶ್ರೇಣಯ ಕೊನೆಯ ಹಂತದ ವಾಷರ್ಿಕ ಮುಂಬಡ್ತಿಯನ್ನು ನೀಡುವುದರ ಬದಲು ಮುಖ್ಯ ವೇತನ ಶ್ರೇಣಿಯನ್ವಯ ನಂತರದ ಮುಂದಿನ ಹಂತಕ್ಕೆ ಸಮನಾದ ಮುಂಬಡ್ತಿಯನ್ನು ನೀಡುವುದು, ಸಕರ್ಾರಿ ನೌಕರರ ತಂದೆ-ತಾಯಿಗಳು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ 4ಸಾವಿರ ಮಾಸಿಕ ಪಿಂಚಣಿ ನಿರ್ಭಂದವನ್ನು ಸಡಿಲಿಸಿ ಪಿಂಚಣಿ ಪರಿಷ್ಕರಿಸಿದಂತೆ ಅವರ ಮಾಸಿಕ ಆದಾಯವನ್ನು ಪರಿಷ್ಕರಿಸುವುದು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ಸಂದರ್ಭದಲ್ಲಿ ಅವಲಂಬಿತರು ಎಂಬ ಬಗ್ಗೆ ದೃಡೀಕರಣಕ್ಕಾಗಿ ಕುಟುಂಬ ಆಹಾರ ಪಡಿತರ ಚೀಟಿಯನ್ನು ಪರಿಗಣಿಸವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದ್ದಾರೆ ಹಾಗೂ ಪಟ್ಟಣದ ನೌಕರರು ಮಧ್ಯಾಹ್ನ ಉಪಹಾರದ ಸಮಯದಲ್ಲಿ ಮಾತ್ರ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕುಪ್ಪೂರ್ ಗೋಪಾಲ್ ನಿಧನಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಶ್ರೀಗಳ ಸಂತಾಪ
ಚಿಕ್ಕನಾಯಕನಹಳ್ಳಿ,ಫೆ.6: ಸ್ವತಂತ್ರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲ್ ರವರ ನಿಧನಕ್ಕೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಅಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವಿದ್ಯಾಥರ್ಿ ದೆಸೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನವನ್ನು ಬೆಳಸಿಕೊಂಡಿದ್ದ ಶ್ರೀಯುತರು ಸ್ವಾತಂತ್ರಾನಂತರದಲ್ಲಿ ಪತ್ರಿಕೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಆಳುವ ವರ್ಗದ ಕಣ್ಣು ತೆರೆಸಿದ್ದ ಇವರ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ತಾಲೂಕಿನ ಹಿರಿಯ ಪತ್ರಕರ್ತರ ಗುಂಪಿನಲ್ಲಿ ಕೊನೆಯ ಕೊಂಡಿಯೊಂದು ಕಳಜಿದಂತಾಗಿದೆ ಎಂದಿದ್ದಾರೆ.
60 ವರ್ಷಗಳ ಸುದೀರ್ಘಕಾಲ ಪತ್ರಿಕಾ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಗೋಪಾಲ್ ಅವರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ದಯಾಮಯನಾದ ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಹಿತೈಷಿಗಳಿಗೆ ಅವರ ಅಗಲಿಕೆಯ ದುಃಕಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.ಹಿರಿಯಪತ್ರಕರ್ತ ಕುಪ್ಪೂರು ಗೋಪಾಲ್ರಾವ್ ಇನ್ನಿಲ್ಲ
ಚಿಕ್ಕನಾಯಕನಹಳ್ಳಿ: 06.02.11: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲರಾವ್ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದವರಾಗಿದ್ದು, ಇವರು ವಿದ್ಯಾಭ್ಯಾಸಕ್ಕಾಗಿ ತಿಪಟೂರಿಗೆ ತೆರಳಿ, ಅಲ್ಲಿ ಶ್ರೀ ರಾಮಾಜೋಯಿಸ್ ರವರ ಆಶ್ರಯ ಪಡೆದು, ಅವರು ನಡೆಸುತ್ತಿದ್ದ ಪತ್ರಿಕಾ ಏಜೆನ್ಸಿಯಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಂಚಿಕೊಂಡು ವಿದ್ಯಾಭ್ಯಾಸ ಪಡೆದರು, ಆ ಸಂದರ್ಭದಲ್ಲೇ ಶೇಷಪ್ಪನವರ ಕಿಡಿ ಪತ್ರಿಕೆ ಹಾಗೂ ಗಾಂಧೀಜಿಯವರು ಲೇಖನ ಬರೆಯುತ್ತಿದ್ದ ಹರಿಜನ ಪತ್ರಿಕೆ ಓದುವ ಮುಖಾಂತರ ಪ್ರಭಾವಿತರಾಗಿ ವಿದ್ಯಾಥರ್ಿ ಯೂನಿಯನ್ ಮುಖಂಡರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟ ಚಳುವಳಿಗೆ ಧುಮುಕಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಬಂಧನಕ್ಕೊಳಗಾದರು ಬಾಲಕ ಎಂಬ ಕಾರಣಕ್ಕೆ ಬ್ರಿಟಿಷ್ ಸಕರ್ಾರ ಬಂಧಿಸುತ್ತಿರಲಿಲ್ಲ, ಆನಂತರ ಇವರು ಜವಾಬ್ದಾರಿ ಸಕರ್ಾರ ರಚನೆಯ ಸಂದರ್ಭದಲ್ಲಿ ಮರು ಹೋರಾಟಕ್ಕೆ ಧುಮುಕಿದಾಗ ತಿಪಟೂರಿನಲ್ಲಿ ಬಂಧಿಸಿ ಇವರನ್ನು ಬೆಂಗಳೂರಿನ ಕಾರಾಗೃಹದಲ್ಲಿ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಈ ಸಂದರ್ಭದಲ್ಲಿ ಹೆಚ್. ಎಸ್. ದೊರೆ ಸ್ವಾಮಿ ಹಾಗೂ ಎಂ. ಎಸ್. ಹನುಮಂತರಾವ್ ರವರ ಪರಿಚಯ ಪಡೆದು ಇನ್ನು ಉತ್ಸಾಹದಿಂದ ಹೋರಾಟ ನಡೆಸಿದವರು. ಇವರು ವಿದ್ಯಾಥರ್ಿ ಜೀವನದ ನಂತರ ಬದುಕಿಗಾಗಿ ಚಿಕ್ಕನಾಯಕನಹಳ್ಳಿಯನ್ನು ಹರಸಿ ಬಂದ ಇವರು, ವೃತ್ತಿಯಲ್ಲಿ ಬಸ್ ಎಜೆಂಟ್, ಬೀಡಾ ಅಂಗಡಿ, ಚಿಲ್ಲರೆ ವ್ಯಾಪಾರ, ಗೃಹ ಕೈಗಾರಿಕೆ ವಸ್ತು ತಯಾರಿಕೆಯ ಮೂಲಕ ಪತ್ರಿಕಾ ಜೀವನಕ್ಕೆ ಧುಮುಕಿ ಪ್ರಜಾವಾಣಿ ಪತ್ರಿಕೆಯ ಪ್ರತಿನಿಧಿಯಾಗಿ 60 ವರ್ಷಗಳ ಕಾಲ ಸೇವೆ ಸಲ್ಲಿಸಿ, 50 ವರ್ಷಗಳ ಕಾಲ ಇದೇ ಪತ್ರಿಕೆ ವರದಿಗಾರರಾಗಿ ಇವರ ನಿರಂತರ ಸೇವೆಯ ಮುಖಾಂತರ ಹೆಚ್ಚು ಮನ್ನಣೆಗೆ ಒಳಗಾದವರು. ಪಾಮರ ಎಂಬ ನಾಮಧೇಯದಲ್ಲಿ ಹಲವು ಪತ್ರಿಕೆಗಳಿಗೆ ಕವನಗಳನ್ನು ಬರೆದಿದ್ದಾರೆ. ನೆಹರು ಕುಟುಂಬಕ್ಕೆ ನಿಷ್ಠರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಮಾಡಿ ಕಾಂಗ್ರೆಸ್ ಅನ್ನು ಸುಭದ್ರವಾಗಿ ಕಟ್ಟಿ ಬೆಳೆಸಿದವರು.
ಇವರು ತಾಲ್ಲೂಕಿನ ಟೌನ್ ಕೋ-ಆಪರೇಟೀವ್ ಬ್ಯಾಂಕ್, ಗೃಹ ನಿಮರ್ಾಣ ಸಹಕಾರಿ ಸಂಘ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿಯೂಕಾಡ ಸೇವೆ ಸಲ್ಲಿಸಿದ್ದರು, ಕೈಗಾರಿಕ ಸಹಕಾರಿ ಸಂಘ, ದೇಶೀಯ ವಿದ್ಯಾಪೀಠ ಪ್ರೌಢಶಾಲೆ, ತಾಲ್ಲೂಕು ಕೃಷಿಕ ಸಮಾಜ. ಇವುಗಳಲ್ಲಿ ನಿದರ್ೇಶಕರಾಗಿ ಸೇವೆ ಸಲ್ಲಿಸದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದರಲ್ಲದೆ, ಪುರಸಭೆಯ ನಾಮಿನಿ ಸದಸ್ಯರಾಗಿದ್ದರು. ಇವರು ದಿ|| ಮಾಜಿ ಶಾಸಕರಾದ ಸಿ.ಕೆ. ರಾಜಯ್ಯ ಶೆಟ್ಟಿ, ದಿ|| ಮಾಜಿ ಸಚಿವ ಎನ್ ಬಸವಯ್ಯ, ಮಾಜಿ ಶಾಸಕ ಬಿ ಲಕ್ಕಪ್ಪ ಇವರ ನಿಕಟವತರ್ಿಯಾಗಿದ್ದರು ಮೃತರು ಪತ್ನಿ ರಾಧಾಲಕ್ಷ್ಮಿ, 4ಜನ ಮಕ್ಕಳಾದ ರಾಜೇಂದ್ರ, ಚಿದಾನಂದ, ಭಾಸ್ಕರ, ರಾಜೀವಲೋಚನ, 4 ಸಹೋದರರು, 3ಸಹೋದರಿಯರು, 8 ಮೊಮ್ಮಕ್ಕಳು ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ.
ತಾಲ್ಲೂಕ ಆಡಳಿತ ವತಿಯಿಂದ ಕಂದಾಯ ನಿರೀಕ್ಷಕ ಚಿಂತಾಮಣಿ ಗೌರವ ವಂದನೆ ಸಲ್ಲಿಸಿದರು. ಮೃತರ ಅಂತಿಮ ದರ್ಶನವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಿ.ಲಕ್ಕಪ್ಪ, ತಾಲೂಕು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸ್ವತಂತ್ರ ಹೋರಾಟಗಾರ ಕಲ್ಲೇನಹಳ್ಳಿ ಶಿವಣ್ಣ, ಪುರಸಭಾ ಅಧ್ಯಕ್ಷ ರಾಜಣ್ಣ, ಸಿ. ಎಸ್. ರಮೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಬಸವರಾಜು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕ್ಯಾಪ್ಟನ್ ಸೋಮಶೇಖರ್, ಎಸ್.ಆರ್.ಎಸ್ ಸಹಕಾರ ಸಂಘದ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್, ಕೃಷಿಕ ಸಮಾಜದ ಕಾರ್ಯದಶರ್ಿ ರಂಗನಕೆರೆ ಮಹೇಶ್ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಸಂತಾಪ ಸೂಚಿಸಿತು ಹಾಗೂ ತಾಲ್ಲುಕಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇವರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯನ್ನು ಪಟ್ಟಣದ ಹೊರವಲಯದ ಬ್ರಾಹ್ಮಣ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ರಕ್ಷಣಾ ವೇದಿಕೆ
ಚಿಕ್ಕನಾಯಕನಹಳ್ಳಿ, ಫೆ.6: ನಾಡಿನಲ್ಲಿ ಕನ್ನಡದ ಜಾತ್ರೆ ನಡೆಯುವ ಸಂದರ್ಭದಲ್ಲಿ ತೆಲಗು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಚಿತ್ರ ಮಂದಿರದ ಬಳಿ ಪ್ರತಿಭಟಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕನ್ನಡ ಚಿತ್ರ ಪ್ರದರ್ಶನಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾಡಿನಲ್ಲಿ ಕನ್ನಡ ಜಾತ್ರೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಮಂದಿರವೊಂದು ಶನಿವಾರ ರಾತ್ರಿ ಎರಡನೇ ಪ್ರದರ್ಶನಕ್ಕೆ ತೆಲಗು ಚಿತ್ರ ಪ್ರದಶರ್ಿಸಲು ಮುಂದಾಗಿರುವುದನ್ನು ಮನಗಂಡ ಕನ್ನಡ ಪರ ಸಂಘಟನೆಗಳು ಚಿತ್ರ ಮಂದಿರದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಚಿತ್ರ ಮಂದಿರವನ್ನು ಗುತ್ತಿಗೆ ಪಡೆದಿದ್ದವರು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರಾದರೂ, ಅಂತಿಮವಾಗಿ ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿ ಕನ್ನಡ ಚಿತ್ರವಾದ ಮೈಲಾರಿಯನ್ನು ಪ್ರದಶರ್ಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಸಿ.ಟಿ.ಗುರುಮೂತರ್ಿ, ನಿಂಗರಾಜು ಎಸ್.ಎಂ., ವಾಸು, ಸಿ.ಡಿ.ಸುರೇಶ್, ಸಿ.ಎನ್.ಮೋಹನ್ ಶಾಸ್ತ್ರಿ, ಪುರುಷೋತ್ತಮ್ ಭಾಗವಹಿಸಿದ್ದರು.
ಚಿ.ಮೂ. ಗೌರವ ಡಾಕ್ಟರೇಟ್ಗೆ ಅರ್ಹ ವಿದ್ವಾಂಸ: ಎಂ.ವಿ.ಎನ್. ಚಿಕ್ಕನಾಯಕನಹಳ್ಳಿ,ಫೆ.6: ಹಿರಿಯ ಸಂಶೋಧಕ, ಕನ್ನಡ ಸರಸ್ವತಾ ಲೋಕದ ಗಣ್ಯ ಎಂ.ಚಿದಾನಂದ ಮೂತರ್ಿಯವರಿಗೆ ಗೌರವ ಡಾಕ್ಟರೇಟ್ ನಿಡಲು ಅಡ್ಡಿಪಡಿಸಿದ ರಾಜ್ಯಪಾಲರ ಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಡಿನ ಹೆಸರಾಂತ ವಿದ್ವಾಂಸ ಹಾಗೂ ಹಿರಿಯ ಸಂಶೋಧಕ ಎಂ.ಚಿದಾನಂದ ಮೂತರ್ಿಯವರಿಗೆ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸಭೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ನಿರ್ಣಯವೊಂದನ್ನು ಕೈಗೊಂಡು ಅದನ್ನು ರಾಜ್ಯಪಾಲರ ಅನುಮೋದನೆ ಕಳುಹಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಕಛೇರಿ ಅವರಿಗೆ ಡಾಕ್ಟರೇಟ್ ಗೌರವವನ್ನು ನೀಡಲು ಅನುಮತಿಸದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಭಾಷೆಗೆ ನೀಡಿದ ಸೇವೆ ಮುಖ್ಯವೇ ಹೊರತು, ಅವರ ವೈಚಾರಿಕ ವಿಚಾರ ಪ್ರಧಾನವಲ್ಲ, ಸಾಹಿತ್ಯ ಲೋಕದಲ್ಲಿ ವೈಚಾರಿಕ ಬಿನ್ನಭಿಪ್ರಾಯಗಳು ಸಹಜ ಅದನ್ನೇ ಮುಂದಿಟ್ಟುಕೊಂಡು ಈ ರೀತಿಯ ತೀಮರ್ಾನವನ್ನು ರಾಜ್ಯಪಾಲರ ಕಛೇರಿ ಕೈಗೊಂಡಿದ್ದರೆ ಅದು ಸರ್ವತ ಅಕ್ಷಮ್ಯವೆಂದಿದ್ದಾರೆ.