Thursday, December 24, 2015


ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರಿಕರಣಕ್ಕೆ ಬದ್ಧವಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ



ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವೀಕೇಂದ್ರಿಕರಣಕ್ಕೆ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪಕ್ಷದ ಕಾಂಗ್ರೆಸ್ ಅಭ್ಯಥರ್ಿ ಆರ್.ರಾಜೇಂದ್ರ ಪರವಾಗಿ ಚುನಾವಣಾ ಪ್ರಚಾರದ ಸಮಾವೇಶವನ್ನು ಉದ್ಘಾಟಸಿ ಮಾತನಾಡಿ, ಬಿ.ಜೆ.ಪಿ, ಜೆ.ಡಿ.ಎಸ್ ಪಕ್ಷಗಳು ಬಂದು ದಿನವಾದರೂ ಸಾಮಾಜಿಕ ನ್ಯಾಯ ಅಧಿಕಾರ ವೀಕೇಂದ್ರಿಕರಣದ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು ದಿ.ರಾಜೀವ್ಗಾಂಧಿಯವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳನ್ನು ತರುವ ಮೂಲಕ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿಯನ್ನು ತಂದು ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರ ಸಿಗಲು ಕಾರಣವಾದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮಾಜೋಯಿಸ್ರವರು ಮೀಸಲಾತಿ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋಟರ್್ಗೆ ರಿಟ್ ಅಜರ್ಿ ಸಲ್ಲಿಸಿದರು ಇದರಿಂದ ಅಲ್ಪಸಂಖ್ಯಾಂತರು. ಮಹಿಳೆಯರು, ದಲಿತರು ಹಿಂದುಳಿದ ವರ್ಗಗಳು. ಸಾಮಾಜಿಕ ನ್ಯಾಯದಲ್ಲಿ ಸಮಾನತೆ ಮೂಲಕ ಪರಿವರ್ತನೆ ಆಗಬಾರದು ಎಂಬ ಉದ್ದೇಶವಿತ್ತು ಆ ಸಂದರ್ಭದಲ್ಲಿ ಈ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು, ಜಗದೀಶಶೆಟ್ಟರು ಇದರ ಬಗ್ಗೆ ಚಕಾರವೆತ್ತಲಿಲ್ಲ, ಅದೃಷ್ಠವಶಾತ್ ಅಜರ್ಿ ತಿರಸ್ಕೃತಗೊಂಡ ಪರಿಣಾಮ ಮೀಸಲಾತಿ ಉಳಿಯಿತು. 
ಬಿ.ಜೆ.ಪಿ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ, ಜೆ.ಡಿ.ಎಸ್. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ, ದೇವೇಗೌಡರು ಹೋರಾಟಗಾರರು ಆದರೆ ಆ ಹೋರಾಟವೆಲ್ಲಾ ಅವರ ಕುಟುಂಬಕ್ಕೆ ರಾಜಕೀಯ ಅಧಿಕಾರ ಕೊಡಿಸುವುದಕ್ಕೆ ಸೀಮಿತವಾಗಿದೆ ಎಂಬುದರಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ ಎಂದ ಅವರು, ಹಣವಿಲ್ಲದೆ ರಾಜಕಾರಣ ಮಾಡುವುದಿಲ್ಲ, ಹಣದಿಂದಲೇ ಎಲ್ಲವನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಜೊತೆಗೆ ಈ ಎರಡು ಪಕ್ಷಗಳೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿವೆ, ಈ ಪಕ್ಷಗಳು ಪಂಚಾಯಿತಿ ವ್ಯವಸ್ಥೆ ಅಡಿಯಲ್ಲಿ ಮತ ಕೇಳಲು ನೈತಿಕತೆ ಇಲ್ಲ ಅದು ಕಾಂಗ್ರೇಸ್ಗೆ ಮಾತ್ರ ಇದೆ ಎಂದರು.
ಡಾ||ಎಂ.ಆರ್ ಹುಲಿನಾಯ್ಕರ್ ನಮ್ಮ ಜೊತೆಯಲ್ಲಿದ್ದು, ನಂತರ ಜೆ.ಡಿ.ಎಸ್. ಸೇರಿ ವಿಧಾನ ಪರಿಷತ್ ಸದಸ್ಯರಾದರು, ನಂತರ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಬಿ.ಜೆ.ಪಿ ಸೇರಿದ್ದಾರೆ ಎಂದರು. ಕಾಂಗ್ರೇಸ್ ಸಕರ್ಾರ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ವಿಧಾನ ಸಭೆಯಲ್ಲಿ ಬಹುಮತಬೇಕಾಗಿದೆ,  25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ನಡೆಯುವ 20 ಸ್ಥಾನಗಳಿಗೆ ಸ್ಪಧರ್ಿಸಿದ್ದೇವೆ 20ಸ್ಥಾನಗಳಲ್ಲೂ ಕಾಂಗ್ರೇಸ್ ಅಭ್ಯಥರ್ಿಗಳು ಗೆಲ್ಲಲಿದ್ದಾರೆ ಎಂಬ ಭರವಸೆ ಇದೆ. ಬಿ.ಜೆ.ಪಿಯ ವಿರೋದ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹರಕು ನಾಲಿಗೆಯ ನಾಯಕ. ಇವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೆ ಇಲ್ಲ ನಾನು ಏನು ಮಾತಾನಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹೇಳುವ ಅವರು, ತಪ್ಪೊಪು ಕೊಳ್ಳವಲ್ಲಿಯೂ ನಿಸ್ಸೀಮರು, ಅವರೊಬ್ಬ ಮೂರ್ಖ, ಅವಿವೇಕಿ ಎಂದು ಜರಿದರು,  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಬಿ.ಜೆ.ಪಿಗಿಂತ ಹೆಚ್ಚು ಸ್ಥಾನ ಪಡೆದು ನೂರಕ್ಕೆ ನೂರು ರಾಜಕೀಯ ಸನ್ಯಾಸತ್ವ ಪಡೆಯುವುದು ಗ್ಯಾರಂಟಿ ಎಂದರು.
10 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಪಂಚಾಯಿತಿಗಳಿಗೆ 6 ಲಕ್ಷ ಅನುದಾನವನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ದೇಶದಲ್ಲಿ ಶೇ.50% ರಷ್ಟು ಮೀಸಲಾತಿಯನ್ನು  ಹೆಚ್ಚಿಸಲು ಸೋನಿಯಾ ಗಾಂಧಿ ಕಾಂಗ್ರೇಸ್ ಕಾರಣ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ನಿಯಮಗಳನ್ನು  ಮಾಡುವ ಅಧಿಕಾರ ನೀಡಿದೆ ರಾಜ್ಯದಲ್ಲಿ ಕಾಂಗ್ರೇಸ್ ಜನತೆಗೆ ಅಧೀಕಾರ ನೀಡಿದರೆ 165 ಭರವಸೆಗಳನ್ನು ನೀಡಿತ್ತು ಇದರಲ್ಲಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಾಂಗ್ರೇಸ್ ಸಕರ್ಾರ ಬಂದ ಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯದ ಮೂಲಕ 1 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ಹಾಲು ನೀಡುತ್ತಿದ್ದೇವೆ. ರೈತರಿಗೆ ಸಾಲ ಮನ್ನಾ ರೈತರಿಗೆ 3 ಲಕ್ಷದವರಿಗೆ ಬಡ್ಡಿ ರಹಿತ ಸಾಲ,  ಮೈತ್ರಿ,  ಮನಸ್ವಿನಿ ಕಾರ್ಯಕ್ರಮವನ್ನು ಎಲ್ಲ ವರ್ಗದವರಿಗೂ ನೀಡಿದ್ದೇವೆ. ಕಾಂಗ್ರೇಸ್ ಸಕರ್ಾರ ನೀರಾವರಿ  ಹಾಗೂ ರಸ್ತೆ ನಿಮರ್ಾಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬೇಕು ಆದ್ದರಿಂದ ಜಿ.ಪಂ ಗ್ರಾ.ಪಂ ತಾ.ಪಂ, ಸದಸ್ಯರು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಿಗೆ ಮತ ಚಲಾಯಿಸಿ ಅವರನ್ನು ಗೆಲ್ಲಿಸಿ ವಿಧಾನ ಪರಿಷತ್ಗೆ  ಕಳಿಸಿ ಎಂದರು.
ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಮಾತನಾಡಿ,  ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ  ಸಕರ್ಾರ ಬಿಡಿಕಾಸನ್ನು  ಬಿಡುಗಡೆ ಮಾಡಿಲ್ಲ ಇದರ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು,  ಕೇಂದ್ರ ಸಕರ್ಾರ ಬರಗಾಲ ಪರಿಹಾರಕ್ಕೆ 1500 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ, ಆದರೂ ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಂದುವರೆಸಲು 10 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ದೇಶದಲ್ಲಿನ ರೈತರ ಸಾಲ 72 ಸಾವಿರ ಕೋಟಿಗಳನ್ನು ಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿಧಾನ ಸಭೆಯ ಜೊತೆಯಲ್ಲಿ ವಿಧಾನ ಪರಿಷತ್ನಲ್ಲೂ ಸಂಖ್ಯಾಬಲ ಅಗತ್ಯ ಆದ್ದರಿಂದ ಯುವಕರಾದ ಆರ್,ರಾಜೇಂದ್ರರವರಿಗೆ ಮತ ನೀಡಿಗೆಲುವಿಗೆ ಶ್ರಮಿಸಿ ಎಂದು ಹೇಳಿದರು.
ಜಿಲ್ಲಾ ಉಸುವಾರಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ,  ರಾಜ್ಯದಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯಲು ನೀರಿಲ್ಲ ಸಮಸ್ಯೆ ಜಾಸ್ತಿಯಾಗಿದೆ ಆದರಿಂದ ಹುಳಿಯಾರು ಭಾಗಕ್ಕೆ ಬೋರನ ಕಣಿವೆ ಜಲಾಶಯದಿಂದ  4 ಕೋಟಿ ವೆಚ್ಚದಲ್ಲಿ ಹುಳಿಯಾರಿಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಆದರೆ ಅಧಿಕಾರಿಗಳೂ ಅಥವಾ ಗ್ರಾಮ ಪಂಚಾಯಿತಿ ನೀರನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ. ಹಸಿದ ಹೊಟ್ಟೆಗೆ ಅನ್ನ ಬರಡು ಭೂಮಿಗೆ  ನೀರುಬೇಕಾಗಿದೆ ಆದ್ದರಿಂದ ಭದ್ರಮೆಲ್ದಂಡೆ ಯೋಜನೆಗೆ ಒತ್ತು ನೀಡಿದ್ದೇವೆ ಎಂದರಲ್ಲದೆ,  ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸ್ ಚಾಲನೆ ನೀಡಿದರು 12360ಕೋಟಿ ರೂ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಕರ್ಾರ ಹಣ ಬಿಡುಗಡೆ ಮಾಡಿದೆ ಎಂದರು, ಕಾಂಗ್ರೆಸ್ ನಡಿಗೆ, ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆಯಲ್ಲಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಪ್ರತಿ ವರ್ಷ ನೀರಿಗಾಗಿ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗುತ್ತಿದೆ ಎಂದರು.
ಇಂದನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ,  ಕಾಂಗ್ರೇಸ್ ಪಕ್ಷ ಜಾತ್ಯಾತೀತ ಪಕ್ಷ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬಂದ ಹಾಗೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ ಜಿಲ್ಲಾ ಪಂಚಾಯಿತ್ ತಾಲ್ಲೂಕು ಪಂಚಾಯಿತ್ಗಳಿಗೆ  ಅಧಿಕಾರ ನೀಡಿದ್ದೇವೆ. ಜೆ.ಡಿ.ಎಸ್, ಬಿ.ಜೆ.ಪಿ ಸಕರ್ಾರಗಳು  ಗ್ರಾಮ ಪಂಚಾಯಿತ್ಗಳಿಗೆ ಅಧಿಕಾರ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಚಿಕ್ಕನಾಯಕನಹಳ್ಳಿ ಕ್ಷೇತ್ರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತದಾರರಿವವ ಕ್ಷೇತ್ರ, ಇಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಅವಕಾಶವಿದೆ, ಮೊದಲು ನಾವು ಇಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಇಲ್ಲಿನ ಮೊದಲ ಸಮಸ್ಯೆ ತಾಲೂಕಿಗೆ ಹೇಮಾವತಿ ಕುಡಿಯುವ ನೀರು ಯೋಜನೆಗೆ ಪುನರ್ ಚಾಲನೆ ನೀಡುವುದು, ರಸ್ತೆಗಳ ಅಭಿವೃದ್ದಿ, ಹುಳಿಯಾರನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜರ್ೆಗೇರಿಸುವುದು, ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ದಿಗೆ ಒತ್ತು ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೀರಿಸಿದರೆ ಹಾಗೂ  ಜಿಲ್ಲಾ ಸಚಿವರು ನಮಗೆ ಹೆಚ್ಚು ಒತ್ತು ನೀಡಿವುದು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಜೆ.ಡಿ.ಎಸ್.ಪಕ್ಷ ಬೆಳೆಸುವುದನ್ನು ಬಿಟ್ಟರೆ ನಾವು ಇಲ್ಲಿ ಜೆ.ಡಿ.ಎಸ್.ಗೆ ಬಾವುಟ ಕಟ್ಟಲು ಜನವಿಲ್ಲದಂತೆ ಮಾಡಬಹುದು ಎಂದರು.
ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಬಿ.ಜೆ.ಪಿ. ಮುಖಂಡರಾದ ಸುಬ್ರಮಣ್ಯ ಸ್ವಾಮಿಯವರನ್ನು ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯ ಮೇಲೆ ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿಯವರ ಮೇಲೆ ಸುಳ್ಳು ಮೊಖದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ದ ದೇಶಾದ್ಯಾಂತ ಮುಷ್ಕರ ನಡೆಸಿದ್ದೇವೆ ತಾಲ್ಲೂಕಿನ ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ತೊಲಗಿಸಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಮಾಡಿದರು,
 ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಚಂದ್ರಪ್ಪ ವಿಧಾನ ಸಭಾ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಕೆ.ಷಡಾಕ್ಷರಿ, ರಫೀಕ್ ಅಹಮದ್, ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಎಮ್ ಡಿ. ಲಕ್ಷ್ಮೀನಾರಾಯಣ್, ಮಾಜಿ ಶಾಸಕರಾದ ಹೆಚ್ ಲಿಂಗಪ್ಪ, ಕಾಂಗ್ರೇಸ್ ಮುಂಖಡ ಸಾಸಲು ಸತೀಶ್, ಬಿ.ಲಕ್ಕಪ್ಪ, ಅಭ್ಯಾಥರ್ಿ ಆರ್.ರಾಜೇಂದ್ರ, ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಿಜ್ವಾನ್ಹರ್ಷದ್ ಕಾಂಗ್ರೆಸ್ ಮುಖಂಡರುಗಳಾದ ಜಿ.ರಘುನಾಥ್ .ಸಿ. ಬಸವರಾಜು, ವೈ.ಸಿ ಸಿದ್ದರಾಮಯ್ಯ. ಅಶೋಕ, ಮತ್ತಿತ್ತರರು ಉಪಸ್ಥಿತರಿದ್ದರು.