Saturday, December 17, 2011



ಜನರ ಬಳಿ ಹೋಗಿ ಸಮಸ್ಯೆ ಅರಿಯಲು ಚಿಂತನ-ಮಂಥನ ಕಾರ್ಯಕ್ರಮ: ಷಫಿ ಅಹಮದ್
ಚಿಕ್ಕನಾಯಕನಹಳ್ಳಿ,ಡಿ.17 : ಕಳೆದುಕೊಂಡಿರುವ ಕಾಂಗ್ರೆಸ್ ಭದ್ರಕೋಟೆಯನ್ನು ಮತ್ತೆ ಕ್ಷೇತ್ರದಲ್ಲಿ ಕಟ್ಟಲು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಇರುವ ಸಮಸ್ಯೆಗಳ ಬಗ್ಗೆ ತಿಳಿಯಲು 'ಚಿಂತನ ಮಂಥನ' ಎಂಬ ಕಾರ್ಯಕ್ರಮದ ಮೂಲಕ ಸಕರ್ಾರದ ಗಮನ ಸೆಳಯುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಪಕ್ಷ ಸಂಘಟನೆ ಮಾಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಕಟ್ಟುವುದು ಅದಕ್ಕಾಗಿ ಎಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿ ಹೋಬಳಿ, ಗ್ರಾಮಗಳಲ್ಲಿ ಸಂಘಟನೆ ಮಾಡಲು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರ ನಿದರ್ೇಶನದ ಮೇರೆಗೆ   ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳಲ್ಲಾಗಿದೆ ಎಂದ ಅವರು,  ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಚಿಂತನ ಮಂಥನ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚಿಂತಿಸಿ ಪರಿಹರಿಸುವುದಾಗಿ ತಿಳಿಸಿದರು. 
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಿಂದುಳಿದ ಹಾಗೂ ಬರಪೀಡಿತ  ಕ್ಷೇತ್ರವಾಗಿದ್ದು ಇಲ್ಲಿನ ಅನೇಕ ಸಮಸ್ಯೆಗಳನ್ನು ಶಾಸಕರು ಬಗೆಹರಿಸುತ್ತಿಲ್ಲ, ಆದ್ದರಿಂದ ಪಕ್ಷವೇ ಮುಂದಾಗಿ ಸಮಸ್ಯೆಗಳನ್ನು ಎತ್ತಿಹಿಡಿಯಲು ಹಾಗೂ ಕೇಂದ್ರ ಸಕರ್ಾರದಿಂದ ಬದಂತಹ ಹಲವು ಯೋಜನೆಗಳನ್ನು ಸರಿಯಾಗಿ ಸಮರ್ಪಕ ಅನುಷ್ಠಾನಗೊಳಿಸಲು  ಪಕ್ಷ ಮುಂದಾಗುತ್ತದೆ ಎಂದರು. 
ಗೋಷ್ಠಿಯಲ್ಲಿ ಮುಖಂಡರಾದ ಮಾಜಿ ಶಾಸಕ ಆರ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಕೆ.ಪಿ.ಸಿ.ಸಿ.ಸದಸ್ಯ ಸೀಮೆಎಣ್ಣೆಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಬಾಬುಸಾಹೇಬ್, ರೇಣುಕಾಗುರುಮೂತರ್ಿ ಮುಖಂಡರುಗಳಾದ ಎಚ್.ಬಿ.ಎಸ್.ನಾರಾಯಣಗೌಡ, , ಕ್ಯಾಪ್ಟನ್ ಸೋಮಶೇಖರ್ ವಿಶ್ವನಾಥ್,  ಕೆ.ಜಿ.ಕೃಷ್ಣೆಗೌಡ, ತೀರ್ಥಪುರದ ವಾಸು ಮುಂತಾದವರಿದ್ದರು.